ಅಫ್ಘಾನಿಸ್ತಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯೦ ನೇ ಸಾಲು:
==೨೦೨೦ರ ಶಾಂತಿ ಒಪ್ಪಂದ==
*ಯು.ಎಸ್. ([[ಅಮೇರಿಕ]]) ಸೈನ್ಯವನ್ನು ಹಿಂತೆಗೆದುಕೊಳ್ಳಲು ಕಾರಣವಾಗುವ 2020 ರ ಫೆಬ್ರವರಿ 29 ರಂದು ದೋಹಾದಲ್ಲಿ ಸಹಿ ಮಾಡಿದ ಒಪ್ಪಂದವು ಐತಿಹಾಸಿಕವಾದುದು ಮತ್ತು ಹಿಂಸಾಚಾರವನ್ನು ಕಡಿಮೆ ಮಾಡಲು ತಾಲಿಬಾನ್ ಮಾಡಿದ ವಿವರವಾದ ಬದ್ಧತೆಗಳನ್ನು ಒಳಗೊಂಡಿದೆ ಎಂದು ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದರು. ಅಫ್ಘಾನಿಸ್ತಾನ ಸರ್ಕಾರ ಮತ್ತು ತಾಲಿಬಾನ್ ನಡುವೆ ಮುಂದಿನ ದಿನಗಳಲ್ಲಿ ಮಾತುಕತೆ ಪ್ರಾರಂಭವಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು, ಡೊನಾಲ್ಡ್ ಟ್ರಂಪ್ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.<ref>[https://www.theguardian.com/us-news/2020/mar/01/mike-pompeo-us-taliban-deal-afghan-rejection-clause Pompeo dismisses Afghan rejection of key clause in US-Taliban deal Sun 1 Mar 2020]</ref>
===ಒಪ್ಪಂದದ ನಿಯಮಗಳು==
;ಶಾಂತಿ ಒಪ್ಪಂದದ ಮುಖ್ಯಾಂಶಗಳು:-
* ಅಫ್ಗಾನಿಸ್ತಾನದಿಂದ ಅಮೆರಿಕದ ಸೇನೆ ಮತ್ತು ನ್ಯಾಟೊ ಪಡೆಗಳ ವಾಪಸಾತಿ.
* ಒಪ್ಪಂದಕ್ಕೆ ಸಹಿ ಹಾಕಿದ 135 ದಿನಗಳ ಒಳಗೆ ಅಫ್ಗಾನಿಸ್ತಾನದಲ್ಲಿರುವ ಅಮೆರಿಕದ ಸೈನಿಕರ ಸಂಖ್ಯೆಯನ್ನು 8,600ಕ್ಕೆ ಇಳಿಸುವುದು;
* ಒಪ್ಪಂದಕ್ಕೆ ಸಹಿ ಹಾಕಿದ 14 ತಿಂಗಳ ಒಳಗೆ ಅಫ್ಗಾನಿಸ್ತಾನದಲ್ಲಿರುವ ಅಮೆರಿಕದ ಎಲ್ಲಾ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವುದು;
* ಅಫ್ಗಾನಿಸ್ತಾನದ ವಿವಿಧ ಜೈಲುಗಳಲ್ಲಿ ಬಂಧನದಲ್ಲಿರುವ ತಾಲಿಬಾನ್‌ನ 5,000 ಉಗ್ರರನ್ನು ಬಿಡುಗಡೆ ಮಾಡುವುದು;
* ತಾಲಿಬಾನ್‌ನ ಬಂಧನದಲ್ಲಿರುವ 1,000 ಮಂದಿ ಅಫ್ಗಾನಿಸ್ತಾನ ಸೈನಿಕರನ್ನು ಮಾರ್ಚ್‌ 10ರ ಒಳಗೆ ಬಿಡುಗಡೆ ಮಾಡಬೇಕು;
* ಅಲ್‌ ಕೈದಾ ಉಗ್ರ ಸಂಘಟನೆ ಮತ್ತು ಇತರ ಉಗ್ರ ಸಂಘಟನೆಗಳು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ವಿರುದ್ಧ ಭಯೋತ್ಪಾದನಾ ಚಟುವಟಿಕೆಗಳಿಗೆ ಅಫ್ಗಾನಿಸ್ತಾನದ ನೆಲವನ್ನು ಬಳಸಿಕೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿ ತಾಲಿಬಾನ್‌ ವಹಿಸತಕ್ಕದ್ದು;
* ತಾಲಿಬಾನ್ ಉಗ್ರರ ಮೇಲೆ ವಿಶ್ವಸಂಸ್ಥೆ ವಿಧಿಸಿರುವ ನಿರ್ಬಂಧಗಳನ್ನು ತೆರವು ಮಾಡಿಸುವ ಜವಾಬ್ದಾರಿ ಅಮೆರಿಕದ್ದು;
* ತಾಲಿಬಾನ್‌–ಅಫ್ಗಾನಿಸ್ತಾನದ ಚುನಾಯಿತ ಸರ್ಕಾರದ ಮಧ್ಯೆ ಮಾತುಕತೆ ನಡೆಯಬೇಕು. ಅಧಿಕಾರ ಹಂಚಿಕೆ ಸಂಬಂಧ ಒಮ್ಮತಕ್ಕೆ ಬರಬೇಕು;
* ಅಫ್ಗಾನಿಸ್ತಾನದ ಎಲ್ಲೆಡೆ ಸಂಘರ್ಷಕ್ಕೆ ಅಂತ್ಯ ಹಾಕಬೇಕು. ಕದನ ವಿರಾಮ ಜಾರಿಯಲ್ಲಿರಬೇಕು;
* ಈ ಎಲ್ಲಾ ಷರತ್ತುಗಳನ್ನು ಪೂರೈಸಿದರೆ ಮಾತ್ರ, ಅಮೆರಿಕವು ತನ್ನ ಎಲ್ಲಾ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವುದು.
<ref>[https://www.prajavani.net/explainer/all-about-america-taliban-peace-deal-afghanistan-709252.html
ಅನಿಶ್ಚಿತ ಅಫ್ಗಾನಿಸ್ತಾನ;ಪ್ರಜಾವಾಣಿ ವೆಬ್‌ ಡೆಸ್ಕ್;d: 02 ಮಾರ್ಚ್ 2020,]
</ref>
 
==ಉಲ್ಲೇಖ==
"https://kn.wikipedia.org/wiki/ಅಫ್ಘಾನಿಸ್ತಾನ" ಇಂದ ಪಡೆಯಲ್ಪಟ್ಟಿದೆ