ಕೊಡೆಕಲ್ಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಕೊಡೆಕಲ್ಲು''' ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿದೆ. ಇದು ಪ...
 
೧೩ ನೇ ಸಾಲು:
ಇದು ಕೊಡೆಕಲ್ಲಿನಿಂದ ಐದು ಆರು ಗುಡ್ಡಗಳನ್ನು ದಾಟಿದರೆ ಈ ಹಳ್ಳಿ ಸಿಗುತ್ತದೆ. ಇಲ್ಲಿ 36 ಮನೆಗಳಿದ್ದು ಗೌಡ ಹಾಗೂ ಮಲೆಕುಡಿಯ ಎಂಬ ಎರಡು ಜನಾಂಗದವರು ವಾಸಿಸುತ್ತಿದ್ದಾರೆ. ಇಲ್ಲಿ ಭತ್ತ, ಏಲಕ್ಕಿ, ಕಾಫಿ, ಬೆಳೆಗಳನ್ನು ಬೆಳೆಯುತ್ತಾರೆ. ಈ ಹಳ್ಳಿಯಲ್ಲೂ ಕಾಡು ಪದಾರ್ಥಗಳು ಬಹಳಷ್ಟು ಮಹತ್ವದ ಪಾತ್ರವನ್ನು ವಹಿಸಿಕೊಂಡಿದೆ. ಹಳ್ಳಿಯಲ್ಲಿ ದಕ್ಷಿಣ ಕನ್ನಡದಲ್ಲಿ ಕಾಣಬಹುದಾದ ಅನೇಕ ಸಂಸ್ಕೃತಿಗಳು ಆಚರಣೆಗಳನ್ನು ಇಲ್ಲಿ ಪಾಲಿಸುತ್ತಾರೆ. ಹಿಂದೆ ಈ ಹಳ್ಳಿಯ ಮುಖಾಂತರ ಟಿಪ್ಪುಸುಲ್ತಾನ್ ಬಲ್ಲಾಳ ರಾಯನ ದುರ್ಗಕ್ಕೆ ತೆರಳುತ್ತಿದ್ದನಂತೆ. ಇಂದಿಗೂ ಅಲ್ಲಿ ಕುದುರೆಯ ದಾರಿಯನ್ನು ಕಾಣಬಹುದಾಗಿದೆ.
==ಮಾರ್ಗಸೂಚಿ==
ಕೊಡೆಕಲ್ಲು ಚಿಕ್ಕಮಂಗಳೂರಿನಿಂದ 60 ಕಿಲೋಮೀಟರ್ ದೂರದಲ್ಲಿದೆ. ಚಿಕ್ಕಮಂಗಳೂರಿನಿಂದ ಕೊಟ್ಟಿಗೆಹಾರಕ್ಕೆ ಬಂದು ಚಾರ್ಮಾಡಿ ಘಾಟಿಯ ಮುಖಾಂತರ ಬಿದಿರು ತಳ ರಸ್ತೆಯ ಮುಖಾಂತರ ತೆರಳಬಹುದು. ಮಂಗಳೂರಿನಿಂದ ಉಜಿರೆ, ಕಕ್ಕಿಂಜೆ ಮಾರ್ಗವಾಗಿ ಚಾರ್ಮಾಡಿ ಘಾಟಿಯ ಮುಖಾಂತರ ಬಿದಿರು ತಳ ರಸ್ತೆಯಿಂದ ಕೋಡೆಕಲ್ಲಿಗೆಕೊಡೆಕಲ್ಲಿಗೆ ತೆರಳಬಹುದು. ಹಾಗೂ ಹೊರನಾಡಿನಿಂದ ಕೊಟ್ಟಿಗೆಹಾರಕ್ಕೆ ಬಂದು ಚಾರ್ಮಾಡಿ ಘಾಟ್ ಮುಖಾಂತರ ಕೋಡೆಕಲ್ಲಿಗೆ ತೆರಳಬಹುದು.
 
==ಸ್ವಚ್ಛತೆ==
ಪ್ರವಾಸಿಗರು, ಚಾರಣಿಗರು ಸ್ಥಳಕ್ಕೆ ಹೆಚ್ಚು ಭೇಟಿ ಕೊಡುತ್ತಾರೆ. ಅಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಬಹಳ ಮುಖ್ಯವಾಗಿದೆ. ಈ ಸ್ಥಳಕ್ಕೆ ಭೇಟಿ ನೀಡಿದಾಗ ಪ್ಲಾಸ್ಟಿಕ್ ವಸ್ತುಗಳನ್ನು ಆದಷ್ಟು ಕಡಿಮೆ ಮಾಡಿ ಏಕೆಂದರೆ ಇಲ್ಲಿ ಅನೇಕ ವನ್ಯ ಜೀವಿಗಳು ಇರುವುದರಿಂದ ಪ್ಲಾಸ್ಟಿಕ್ ತಿಂದು ಅದರ ಪ್ರಾಣಕ್ಕೆ ಹಾನಿ ಆಗುತ್ತದೆ. ಈ ಕುರಿತು ಅರಣ್ಯ ಇಲಾಖೆಯವರು ಅನೇಕ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ.
"https://kn.wikipedia.org/wiki/ಕೊಡೆಕಲ್ಲು" ಇಂದ ಪಡೆಯಲ್ಪಟ್ಟಿದೆ