ಕುಡುಬಿ ಜನಾಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಕುಡುಬಿಯರು'''ಕುಡುಬಿ'''ಯರು ಗೋವಾ ಪ್ರದೇಶದ ಮೂಲ ನಿವಾಸಿಗಳು. ಸುಮಾರು ೧೫, ೧೬ ನೇ ಶತಮಾನದಲ್ಲಿ ಅವರು ಪೋರ್ಚ್ಗೀಸರ ದಬ್ಬಾಳಿಕೆಯಿಂದ ಬಡತನದಿಂದ ಅವರು ಕರ್ನಾಟಕದ ಕರಾವಳಿ ಪ್ರದೇಶಕ್ಕೆ ವಲಸೆ ಬಂದರು. ಕೆಲವು ಕುಡುಬಿ ಪಂಗಡಗಳು ಕೇರಳ ಪ್ರದೇಶಕ್ಕೆ ವಲಸೆ ಹೋದರು. ಕುಡುಬಿ ಜನಾಂಗವು ತನ್ನದೇ ಆದ ಭಾಷಾ ಪ್ರೌಡಿಮೆಯಿಂದ ಕರಾವಳಿಯಲ್ಲಿ ವಿಭಿನ್ನ ಛಾಪನ್ನು ಬಿತ್ತರಿಸಿದೆ. ಕೊಂಕಣಿ ಭಾಷೆಯನ್ನು ಮಾತನಾಡುವ ಇವರು ಜಾನಪದ ಸೊಗಡಿಗೆ ಹೆಸರಾಗಿರುವ ಕುಡುಬಿ ಸಮುದಾಯವೂ ಅವರದ್ದೇ ಆದ ವಿಧಿ ವಿಧಾನಗಳನ್ನು ಅನುಸರಿಸುವ ನಿಟ್ಟಿನಲ್ಲಿ ಸಾಂಪ್ರದಾಯಕತೆಗೆ ಹೆಸರುವಾಸಿಯಾಗಿದೆ.
===ಪೀಠಿಕೆ===
===ಕುಡುಬಿ ಪದದ ಉಗಮ===
ಕುಡುಬಿಯರು ಗೋವಾ ಪ್ರದೇಶದ ಮೂಲ ನಿವಾಸಿಗಳು. ಸುಮಾರು ೧೫, ೧೬ ನೇ ಶತಮಾನದಲ್ಲಿ ಅವರು ಪೋರ್ಚ್ಗೀಸರ ದಬ್ಬಾಳಿಕೆಯಿಂದ ಬಡತನದಿಂದ ಅವರು ಕರ್ನಾಟಕದ ಕರಾವಳಿ ಪ್ರದೇಶಕ್ಕೆ ವಲಸೆ ಬಂದರು. ಕೆಲವು ಕುಡುಬಿ ಪಂಗಡಗಳು ಕೇರಳ ಪ್ರದೇಶಕ್ಕೆ ವಲಸೆ ಹೋದರು. ಕುಡುಬಿ ಜನಾಂಗವು ತನ್ನದೇ ಆದ ಭಾಷಾ ಪ್ರೌಡಿಮೆಯಿಂದ ಕರಾವಳಿಯಲ್ಲಿ ವಿಭಿನ್ನ ಛಾಪನ್ನು ಬಿತ್ತರಿಸಿದೆ. ಕೊಂಕಣಿ ಭಾಷೆಯನ್ನು ಮಾತನಾಡುವ ಇವರು ಜಾನಪದ ಸೊಗಡಿಗೆ ಹೆಸರಾಗಿರುವ ಕುಡುಬಿ ಸಮುದಾಯವೂ ಅವರದ್ದೇ ಆದ ವಿಧಿ ವಿಧಾನಗಳನ್ನು ಅನುಸರಿಸುವ ನಿಟ್ಟಿನಲ್ಲಿ ಸಾಂಪ್ರದಾಯಕತೆಗೆ ಹೆಸರುವಾಸಿಯಾಗಿದೆ.
===ಕುಡುಬಿ ಪದದ ಉಗಮ===
ಕುಡುಬಿ ಪದವು ಕುಡುಬಿಯರ ಮೂಲ ಜನಾಂಗದ ಪದವಲ್ಲ. ಗೋವಾದಲ್ಲಿ ಕುಲುಮಿ ಎಂದು ಕರೆಯುತ್ತಿದ್ದ ಈ ಪಂಗಡವನ್ನು ಕರ್ನಾಟಕಕ್ಕೆ ವಲಸೆ ಬಂದ ನಂತರ ಇತರರು, ಬರಹಗಾರರು, ಆಡಳಿತಗಾರರು, ಸರ್ಕಾರ ಬಳಸಿದ ಪದ ಕುಡುಬಿ. ಕುಡುಬಿ ಮೂಲ ಕೃಷಿಗೆ ಸಂಬAಧಿಸಿದ ಪದ. ಗೋವಾದಿಂದ ವಲಸೆ ಬರುವಾಗ ಕೃಷಿಗೆ ಸಂಬಂಧಿಸಿದ ಎಲ್ಲಾ ಪರಿಕರಗಳನ್ನು ಹೊತ್ತುಕೊಂಡು ಬಂದ ಕುಡುಬಿಗಳು ಈಗಲೂ ಕೃಷಿಯನ್ನೇ ತಮ್ಮ ವೃತ್ತಿಯನ್ನಾಗಿ ಅವಲಂಸಿದ್ದಾರೆ.
===ಧಾರ್ಮಿಕ ಆಚಾರ ವಿಚಾರಗಳ ಇತಿಹಾಸ===
ಕುಡುಬಿ ಸಮಾಜದ ಧಾರ್ಮಿಕತೆಯನ್ನು ಬಿಂಬಿಸುವ ಹಬ್ಬ ಹೋಳಿ. ಕುಡುಬಿಗಳು ಶಿವನ ಆರಾಧಕರಾಗಿರುವುದರಿಂದ ಹೋಳಿ ಹಬ್ಬಕ್ಕೂ ಕೂಡ ತನ್ನದೇ ಆದ ಹಿನ್ನೆಲೆಯಿದೆ. ಈಶ್ವರನು ಧ್ಯಾನಾಸಕ್ತನಾಗಿರುವಾಗ ಕಾಮದೇವರು ಅಥವಾ ಮನ್ಮಥನು ಅವರ ವೃತವನ್ನು ಭಂಗ ಮಾಡಲು ಬಾಣವನ್ನು ಬಿಡುತ್ತಾನೆ. ಬಾಣ ತಾಗಿದ ಈಶ್ವರನು ಕೋಪದಿಂದ ಕಣ್ಣು ತೆರೆಯುತ್ತಾನೆ. ಅವನ ಕೋಪವನ್ನು ಯಾರಿಂದಲೂ ತಣಿಸಲು ಸಾಧ್ಯವಾಗುದಿಲ್ಲ. ಆಗ ಬೆಟ್ಟ ಗುಡ್ಡಗಳಲ್ಲಿ ವಾಸವಾಗಿದ್ದ ಕುಡುಬಿ ಸಮುದಾಯದವರು ತಮ್ಮದೇ ಸಂಪ್ರದಾಯದ ಗುಮ್ಮಟೇ , ಕೋಲಾಟ ಇವುಗಳನ್ನು ಬಡಿಯುತ್ತಾ ಹಾಡಿ, ಕುಣಿದು ಕುಪ್ಪಳಿಸುತ್ತಾರೆ. ತಮ್ಮ ಬೆವರನ್ನು ಸುರಿಸಿ ಆರಾಧನೆಯನ್ನು ಮಾಡುವುದನ್ನು ಕಂಡ ಶಿವನು ತನ್ನ ಕೋಪವನ್ನು ತಣಿಸಿಕೊಳ್ಳುತ್ತಾನೆ. ಇದರ ತರುವಾಯ ಪ್ರತೀ ವರ್ಷ ಈಶ್ವರನ ಕೋಪವನ್ನು ತಣಿಸುವುದಕ್ಕಾಗಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ. ಇವರ ಮನೆದೇವರು ಮಲ್ಲಿಕಾರ್ಜುನ.
===ಜೀವನ ಶೈಲಿ===
ಸಾಮಾನ್ಯರ ಉಡುಗೆ ತೊಡುಗೆಗಳಿಗಿಂತ ಇವರ ಉಡುಗೆಗಳು ವಿಭಿನ್ನವಾಗಿರುತ್ತದೆ. ಹಳೆಯ ಕಾಲದ ಮಹಿಳೆಯರು ಇನ್ನೂ ಕೂಡ ಅವರ ಪ್ರಾಚೀನ ಶೈಲಿಯಲ್ಲಿ ಸೀರೆಯನ್ನು ಹಾಕಿಕೊಳ್ಳುವುದನ್ನು ಕಾಣಬಹುದು. ಇವರ ಸೀರೆ ತೊಡುವ ಶೈಲಿಯನ್ನು ಗೇಂಟೆ ಎಂದು ಕರೆಯುತ್ತಾರೆ. ಆದರೆ ಆಧುನಿಕ ಮಹಿಳೆಯರು ಭಾರತೀಯ ಇತರ ಮಹಿಳೆಯೆರಂತೆ ತಮ್ಮ ಉಡುಗೆಗಳನ್ನು ತೊಡುತ್ತಾರೆ. ಇನ್ನು ಇವರ ಊಟೋಪಚಾರದ ಬಗ್ಗೆ ಹೇಳುವುದಾದರೆ ಸಾಕಿದ ಪ್ರಾಣಿಗಳನ್ನು ಸೇವಿಸುವುದಿಲ್ಲ. ಕಾಡಿನಿಂದ ಬೇಟೆಯಾಡಿದ ಪ್ರಾಣಿಯನ್ನು ಮಾತ್ರ ಸೇವಿಸುವುದು ಇವರ ಸಂಸ್ಕೃತಿ. ಆದರೆ ಇತ್ತೀಚೆಗೆ ಕೆಲವರು ಸಾಕು ಪ್ರಾಣಿಗಳನ್ನು ಸೇವಿಸುತ್ತಾರೆ. ಕೃಷಿಯೇ ಇವರ ಮೂಲ ಕಸುಬು ಆಗಿರುವುದರಿಂದ ತಮಗೆ ಬೇಕಾಗಿರುವ ತರಕಾರಿಗಳನ್ನು ಮನೆಯಲ್ಲೇ ಬೆಳೆಸುತ್ತಾರೆ.
===ಕುಡುಬಿ ಸಮುದಾಯದ ಮದುವೆ ಸಂಪ್ರದಾಯ===
ಸಾಂಪ್ರದಾಯಕವನ್ನು ಪೂಜಿಸುವ ಕುಡುಬಿ ಜನಾಂಗವು ಮದುವೆ ಇನ್ನಿತರ ಸಮಾರಂಭಗಳಲ್ಲೂ ತನ್ನದೇ ಆದ ಸಂಸ್ಕೃತಿಯನ್ನು ಪಾಲಿಸುತ್ತದೆ. ಕುಡುಬಿ ಜನಾಂಗದಲ್ಲಿ ಪುರುಷ ಪ್ರಧಾನ ವ್ಯವಸ್ಥೆಯಿದ್ದು , ಸ್ತಿ ವಧುವಿನ ಸೋದರ ಮಾವನಿಗೆ ವಿವಾಹ ಸಂದರ್ಭಧಲ್ಲಿ ವಿಶೇಷ ಸ್ಥಾನಮಾನವನ್ನು ನೀಡಲಾಗುತ್ತದೆ. ಮದುವೆ ಪೂರ್ವ ವಧುವಿನ ನಿವಾಸದಲ್ಲಿ ನಿಶ್ಚಿತಾರ್ಥ ಕರ‍್ಯಕ್ರಮವನ್ನು ನಡೆಸಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಪೋಷಕರು ಸಂಪ್ರದಾಯಕವಾಗಿ ಬೊಮ್ಮರಸು ಮತ್ತು ಸಮುದಾಯದ ಸದಸ್ಯರ ವಿಭಾಗಗಳ ಸಮ್ಮುಖ ನಡೆಸಲಾಗುತ್ತದೆ. ಬೊಮ್ಮರಸು ಎಂದರೆ ವಾಳ್ಯದ ಗುರಿಕಾರ. ಗುರಿಕಾರ ಆದವನು ವಾಳ್ಯದಲ್ಲಿ ಮುಖ್ಯ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾನೆ. ವಾಳ್ಯದಲ್ಲಿ ಯಾವುದೇ ರೀತಿಯ ಸಮಾರಂಭಗಳು ನಡೆದರು ಅಲ್ಲಿ ವಾಳ್ಯದ ಗುರಿಕಾರನಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಬೇಕು. ವಧುವಿನ ಕಡೆಯಲಿ ವಧುವಿನ ಮಾವನಿಗೆ ಹೆಚ್ಚಿನ ಗೌರವವನ್ನು ನೀಡಲಾಗುತ್ತದೆ. ಮಾವನ ಒಪ್ಪಿಗೆಯ ನಂತರ ಬೊಮ್ಮರಸುನ ಮನೆಯಲ್ಲಿ ನಿಶಿತಾರ್ಥವನ್ನು ನಡೆಸಲಾಗುತ್ತದೆ. ಕುಡುಬಿ ಸಮುದಾಯದಲ್ಲಿ ನಿಶ್ಚಿತಾಥವನ್ನು ಸಕ್ಶಿಡೊ ಎಂದು ಕರೆಯಲಾಗುತ್ತದೆ. ವರನ ಕಡೆಯಲ್ಲಿ ಹುಡುಗನ ಚಿಕ್ಕಪ್ಪನಿಗೆ ಗೌರವವನ್ನು ನೀಡಲಾಗುತ್ತದೆ. ಸಕ್ಶಿಡೊ ಮುಂಚೆ ಸಜ್ಜರಿ ಅಥವಾ ಚೌ-ಗುಲೆ ಎಂಬ ಕರ‍್ಯಕ್ರಮವನ್ನು ನಡೆಸುತ್ತಾರೆ. ಈ ಸಮಯದಲ್ಲಿ ಹುಡುಗಿಯ ಕಡೆಯಿಂದ ಐದು ಪುರುಷರು ಭಾಗವಹಿಸುವುದು ಕಡ್ಡಾಯವಾಗಿರುತ್ತದೆ. ನಿಶ್ಚಿತಾರ್ಥ ಆದ ನಂತರ ಮದುವೆ ಅಧಿಕೃತವಾಗಿ ನಡೆದಿದೆ ಎಂದರ್ಥ. ಮದುವೆ ಸಂದರ್ಭದಲ್ಲಿ ಅರಳಿ ಮರದ ತಾಳಿಯನ್ನು ಮಾಡಿ ಎರಡು ಕಪ್ಪು ಮಣಿಗಳ ನಡುವೆ ಮಹಾಲಕ್ಷಿ ದೇವಿಯ ಭಾವಚಿತ್ರವಿರುವ ತಾಳಿಯನ್ನು ಧರಿಸುತ್ತಾರೆ. ನಂತರ ಸಪ್ತಪದಿ ತುಳಿದು ಹತ್ತಿರದ ದೇವಾಸ್ಥನಗಳಲ್ಲಿ ಪೂಜೆಯನ್ನು ಸಲ್ಲಿಸಲಾಗುತ್ತದೆ. ಇತ್ತಿಚಿನ ದಿನಗಳಲ್ಲಿ ಅರಳಿ ಮರದ ತಾಳಿಯನ್ನು ಉಪಯೋಗಿಸದೆ ಚಿನ್ನದ ಮಹಾಲಕ್ಷಿ ದೇವಿಯ ಭಾವಚಿತ್ರವಿರುವ ತಾಳಿಯನ್ನು ಉಪಯೋಗಿಸಲಾಗುತ್ತದೆ.
===ಉಲ್ಲೇಖಗಳು===
#ಎಂ ಗೋಪಾಲ ಗೌಡ ಮಿಜಾರು, ಸಂಶೋಧನಾ ಸ್ವ ಪ್ರಬಂಧ ಕುಡುಬಿ ಸಂಸ್ಕ್ರತಿ, ಕುಡುಬಿ ವಾಹಿನಿ ಪತ್ರಿಕಾ ಬಳಗ, ದಕ್ಷಿಣ ಕನ್ನಡ, ೨೦೧೬.
"https://kn.wikipedia.org/wiki/ಕುಡುಬಿ_ಜನಾಂಗ" ಇಂದ ಪಡೆಯಲ್ಪಟ್ಟಿದೆ