"ಧರ್ಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ಧರ್ಮ)
ಟ್ಯಾಗ್: Removed redirect
No edit summary
[[File:Religionsmajoritaries.png|thumb|380px|]]
[[File:Religious syms.svg|thumb|]]
ಮಾನವ ಯಾವುದನ್ನು ಪವಿತ್ರ ಭಾವನೆಯಿಂದ ನೋಡುವನೋ ಅದರೊಡನೆ ಇರಿಸಿಕೊಳ್ಳುವ ಸಂಬಂಧವೇ '''ಧರ್ಮ'''ವೆಂಬ (ರಿಲಿಜನ್) ಶಬ್ದದ ವಿಶಾಲಾರ್ಥ. ಪವಿತ್ರವೆನಿಸತಕ್ಕುದು ಅತಿಮಾನುಷವೇ ಇರಬೇಕೆಂಬ ನಿಯಮವಿಲ್ಲ; ಮಾನವಾಕೃತಿಯಲ್ಲಿಯೇ ಇರಬೇಕೆಂದೂ ಇಲ್ಲ; ವೈಯಕ್ತಿಕ ಭಾವನೆ ಮಾತ್ರವೆಂದೂ ಅದರರ್ಥವಲ್ಲ. ದೇವರು ಎಂಬ ಶಬ್ದವನ್ನು ವೈಯಕ್ತಿಕ ಇಲ್ಲವೆ ಅತಿಮಾನುಷವೆಂಬ ಅಭಿಪ್ರಾಯದಲ್ಲಿ ಬಳಸುವುದಾದರೆ, ಅಂಥ ದೇವತಾಸ್ವರೂಪಗಳೊಡನೆ ಮಾನವನ ಸಂಬಂಧ ಧರ್ಮವೆನಿಸುವಂತೆ, ಅಂಥವುಗಳಲ್ಲದ ಪವಿತ್ರ ವಸ್ತುಗಳೊಂದಿಗೆ ಅವನ ಸಂಬಂಧಕ್ಕೂ ಅನ್ವಯಿಸುವಷ್ಟು ಅದು ವಿಶಾಲವಾಗಿದೆ. ಹಾಗೆಯೇ ಪವಿತ್ರವಾದುದರೊಂದಿಗೆ ಸಂಬಂಧವೆಂಬುದು ಕೂಡ ನಾನಾ ಪ್ರಕಾರಗಳಲ್ಲಿರಬಹುದು. ಅವುಗಳಲ್ಲಿ ಅತಿ ಮುಖ್ಯವಾದುದು ಪೂಜೆ. ಆದರೆ ನೀತಿನಿಷ್ಠೆ, ಸದಾಚಾರ, ಸಮ್ಯಗ್ಭಾವನೆ ಅಥವಾ ಸದ್ಭಕ್ತಿ, ಧಾರ್ಮಿಕ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಪಾತ್ರ ವಹಿಸುವಿಕೆ, ಧರ್ಮ ಪ್ರವಾದಿಗಳ ಬೋಧೆಯಲ್ಲಿ ಧರ್ಮಗ್ರಂಥಗಳಲ್ಲಿ ಶ್ರದ್ಧೆ - ಇವನ್ನೆಲ್ಲ ಧಾರ್ಮಿಕ ಮನೋವೃತ್ತಿಯು ಒಳಗೊಳ್ಳುತ್ತದೆ.
 
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/975689" ಇಂದ ಪಡೆಯಲ್ಪಟ್ಟಿದೆ