ಶಿವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೪ ನೇ ಸಾಲು:
==ಮೊಟ್ಟಮೊದಲ ಯೋಗಿ==
ಶಿವ ಎಂದರೆ ಆದಿಯೋಗಿ, ಅರ್ಥಾತ್‌, ಎಲ್ಲ ಯೋಗಿಗಳಿಗೂ ಮೊದಲು ಬಂದವನು, ಯೋಗ ವಿದ್ಯೆಯ ಮೂಲಗುರು. ಇಂದು ಯೋಗವಿದ್ಯೆ ಎಂದು ನಾವು ಯಾವುದಕ್ಕೆ ಹೇಳುತ್ತೇವೋ ಆ ವಿದ್ಯೆಯನ್ನು ಮನುಕುಲಕ್ಕೆ ಪರಿಚಯ ಮಾಡಿಕೊಟ್ಟವನು. ಯೋಗ ಎಂದರೆ ತಲೆಕೆಳಗಾಗಿ ನಿಲ್ಲುವುದಲ್ಲ, ಅಥವಾ ಉಸಿರನ್ನು ಹಿಡಿಯುವುದಲ್ಲ. ಯಾವ ವಿಜ್ಞಾನ, ತಂತ್ರಜ್ಞಾನಗಳ ಮೂಲಕ ಮನುಷ್ಯಜೀವದ ಉಗಮವನ್ನು ತಿಳಿಯಬಹುದೋ, ಮನುಷ್ಯನು ಪರಮ ಚರಮ ಗುರಿಯನ್ನು ಸಾಧಿಸಬಹುದೋ, ಅದೇ ಯೋಗ.
[[File:IMG j257.jpg|thumb|IMG j257- ಆದಿಯೋಗಿ ಇಶಾ ಯೋಗ ಕೇಂದ್ರದಲ್ಲಿದೆ, ಇದು ಧ್ಯಾನಲಿಂಗವನ್ನು ಹೊಂದಿದ ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಪಶ್ಚಿಮ ಘಟ್ಟದ ಒಂದು ಶ್ರೇಣಿಯ ವೆಲ್ಲಿಯಂಗಿರಿ ಪರ್ವತಗಳ ತಪ್ಪಲಿನಲ್ಲಿ ಹೊಂದಿದೆ. ಪ್ರತಿಮೆಯ ಎತ್ತರ, 112 ಅಡಿ (ಶೂನ್ಯವಾದಿ- ಜಗ್ಗಿ ವಾಸುದೇವ್ ಸ್ಥಾಪಿಸಿದ್ದಾರೆ)]]
ಕೇದಾರನಾಥದಿಂದ ಸ್ವಲ್ಪ ದೂರದಲ್ಲಿ ಕಾಂತಿ ಸರೋವರ ಎಂಬ ಒಂದು ಹಿಮಗಟ್ಟಿದ ಸರೋವರ ಇದೆ. ಇದರ ದಡದಲ್ಲಿ ಕುಳಿತು ಆದಿಯೋಗಿಯು ಏಳು ಜನ ಶಿಷ್ಯಂದಿರಿಗೆ ಸಾಂಗವಾಗಿ, ಪೂರ್ವೋತ್ತರ ಕ್ರಮದಿಂದ ಯೋಗವಿದ್ಯೆಯ ಉಪದೇಶವನ್ನು ಮಾಡಿದನು. ಈ ಏಳು ಜನರೇ ನಂತರದ ಇತಿಹಾಸದಲ್ಲಿ, ಅಂದಿನಿಂದ ಇಂದಿನವರೆಗೆ ಸಪ್ತರ್ಷಿಗಳು ಎಂದು ಪ್ರಸಿದ್ಧರಾಗಿದ್ದಾರೆ. ಆ ಸಮಯದಲ್ಲಿ ಯಾವೊಂದು ಧಾರ್ಮಿಕ ಮತವು ಕೂಡ ಪ್ರಾರಂಭವಾಗಿರಲಿಲ್ಲ. ಮನುಕುಲವನ್ನು ಧಾರ್ಮಿಕ ಪಂಥಗಳ ಹೆಸರಿನಲ್ಲಿ ಸರಿಪಡಿಸಲು ಬಾರದೇನೋ ಅನ್ನಿಸುವಂತಹ ಕೇಡನ್ನು ಮಾಡಿದ ಧಾರ್ಮಿಕ ಪಂಥಗಳು ಹುಟ್ಟುವುದಕ್ಕೆ ಅದೆಷ್ಟೋ ಮುಂಚೆಯೇ ಮಾನವ ಪ್ರಜ್ಞೆಯನ್ನು ಉನ್ನತ ಮಟ್ಟಕ್ಕೆ ಏರಿಸುವ ವಿಧಿವಿಧಾನಗಳನ್ನು ತಿಳಿಯುವ, ತಿಳಿಸುವ, ಯೋಗವಿದ್ಯಾ ಪ್ರಸಾರದ ಕಾರ್ಯವು ಈ ಪ್ರಕಾರವಾಗಿ ಪ್ರಾರಂಭವಾಯಿತು.(ಜಗ್ಗಿ ವಾಸುದೇವ್‌ ಅವರ ಲೇಖನ;ಇದಕ್ಕೆ ಯಾವುದೇ ಪುರಾಣದ ಆಧಾರ ಸಿಕ್ಕಿಲ್ಲ. ಶಿವ ಎಂದರೆ ಶೂನ್ಯವೆಂದು ಹೇಳಿ ಅವನು ಸಪ್ತ ಋಷಿಗಳಿಗೆ ಯೋಗ ಭೋಧಿಸಿದನೆಂದು ಹೇಳಿರುವುದು ವಿಚಿತ್ರವಾಗಿದೆ.)
===ಶಿವ ಪದದ ಅರ್ಥ: ಜಗ್ಗಿ ವಾಸುದೇವ್===
"https://kn.wikipedia.org/wiki/ಶಿವ" ಇಂದ ಪಡೆಯಲ್ಪಟ್ಟಿದೆ