ಪ್ಲೇಟೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by Sagar gaddi (talk) to last revision by Bschandrasgr
೪೧ ನೇ ಸಾಲು:
* ನೀತಿಮೀಮಾಂಸೆ : ನೀತಿ ಮತ್ತು ನಡತೆಯನ್ನು ನಿಯಮಿಸುವ ತತ್ತ್ವಗಳು ಯಾವುವೆಂಬುದರ ಕೂಲಂಕಷ ವಿಮರ್ಶೆಯನ್ನು ನೀತಿಶಾಸ್ತ್ರ. ರಾಜಶಾಸ್ತ್ರಗಳೆರಡಕ್ಕೂ ಅನ್ವಯಿಸುವಂತೆ ಮೊಟ್ಟಮೊದಲು ಮಾಡಿದ ಯಶಸ್ಸು ಪ್ಲೇಟೋಗೆ ಸೇರುತ್ತದೆ. ಸರಿ-ತಪ್ಪು ಸುಗುಣ ದುರ್ಗುಣ ಇವನ್ನು ಕುರಿತ ಅಶಾಸ್ತ್ರೀಯ ಹಾಗೂ ಅವ್ಯವಸ್ಥಿತ ಚಿಂತನೆಯನ್ನು ಮಾಡುತ್ತ ತನಗೆ ಸಿಕ್ಕವರೊಂದಿಗೆ ಚರ್ಚಿಸುತ್ತ ಸಾಕ್ರ್‍ಟೀಸ್ ಸಾಗಿದ್ದುದು ನಿಜ. ಈ ವಿಚಾರವಾಗಿ ಸಾಮಾನ್ಯ ಜನರಲ್ಲಿ ಪ್ರಚಲಿತವಾಗಿದ್ದ ಅಭಿಪ್ರಾಯಗಳು ಎಷ್ಟೊಂದು ವಿರೋಧಾಭಾಸಗಳನ್ನೂ ಅಸಾಂಗತ್ಯಗಳನ್ನೂ ಒಳಗೊಂಡಿವೆಯೆಂಬುದನ್ನೂ ಎತ್ತಿತೋರಿಸುತ್ತ ತನ್ನ ಪರಿಹಾರಗಳತ್ತ ಸಾಗುತ್ತಿದ್ದ. ಇವನ ತೀರ್ಮಾನಗಳಲ್ಲಿ ತುಂಬ ಗಮನಾರ್ಹವಾದುದೆಂದರೆ ಸದ್ಗುಣವೂ ಜ್ಞಾನವೇ ಎಂಬುದು. ಸದಾಚಾರವೆಲ್ಲ ಬುದ್ಧಿಮೂಲವೆನ್ನುವ ಈ ಸರಣಿ ಗ್ರೀಕ್ ನೀತಿಶಾಸ್ತ್ರವನ್ನೇ
===ರಿಪಬ್ಲಿಕ್ ಗ್ರಂಥ===
*ಕಲುಷಿತಗೊಳಿಸಿದೆಯೆಂಬುದು ಕ್ರಿಶ್ಚನ್ ಧಾರ್ಮಿಕರ ಆರೋಪ. ಆದರೆ ಈತ ಹೇಳುವ ನೀತಿ ಈ ಆರೋಪಕ್ಕೆ ಒಳಗಾಗಲಾರದು. ಏಕೆಂದರೆ ಇವನ ಪ್ರಕಾರ ಅದು ಕೇವಲ ಅಮೂರ್ತವಾದ ಬೌದ್ಧಿಕ ಪ್ರಚೋದನೆಯಲ್ಲ. ಈತ ಹೇಳುವ ನ್ಯಾಯ ಒಳ್ಳೆಯ ಪ್ರಜೆಯ ಸದ್ವರ್ತನೆ. ಅವನ ಸುನೀತಿಯ ಅಥವಾ ಧರ್ಮದ (ಗುಡ್) ಆದರ್ಶ, ಪ್ರಜಾರಾಜ್ಯದಲ್ಲಿ ಸಾಧಿಸಬೇಕಾದ ಮೌಲ್ಯ. ತನ್ನ ರಿರಿಪಬ್ಲಿಕ್ ಗ್ರಂಥದಲ್ಲಿ ಈತ ಒಂದು ಸುಸಂಘಟಿತವಾದ ರಾಜ್ಯವ್ಯವಸ್ಥೆಯಲ್ಲಿಯ ಸಾಮಾಜಿಕ ವರ್ತನೆಯ ಆಧಾರದ ಮೇಲಿಂದ ಮಾತ್ರ ವ್ಯಕ್ತಿಯ ನೈತಿಕತೆಯನ್ನು ನಿರೂಪಿಸುತ್ತಾನೆ. ವಿಶ್ವದ ದುರ್ಭೇದ್ಯರಹಸ್ಯವನ್ನು ಈ ಸುನೀತಿಯ ಕಲ್ಪನೆಯಿಂದ ಒಡೆಯುತ್ತಾನೆ. ಏಕೆಂದರೆ ಸುನೀತಿ ಬರಿಯ ಅಮೂರ್ತ ಆದರ್ಶ ಕಲ್ಪನೆಯಷ್ಟೇ ಅಲ್ಲ: ಅದು ಇಹದಲ್ಲಿ ಸಾಕ್ಷಾತ್ಕøತವಾದ ಸಿದ್ಧಿಯೂ ಅಹುದು. ಮತ ಧರ್ಮಗಳಲ್ಲಿ ದೇವರ ಕಲ್ಪನೆಗೆ ಯಾವ ಸ್ಥಾನವೋ ಸುನೀತಿಗೂ ಅದೇ ಮಹತ್ತ್ವದ ಸ್ಥಾನವಿದೆ. ಅದೇ ಜೀವನಕೆಲ್ಲ ಅಂತಿಮ ಗಂತವ್ಯವೆನಿಸುವ ಮೌಲ್ಯವೂ ಎಲ್ಲ ಜೀವದ ಮೂಲಾಧಾರವೂ ಹೌದು.
 
 
 
ಬ್ಲಿಕ್ ಗ್ರಂಥದಲ್ಲಿ ಈತ ಒಂದು ಸುಸಂಘಟಿತವಾದ ರಾಜ್ಯವ್ಯವಸ್ಥೆಯಲ್ಲಿಯ ಸಾಮಾಜಿಕ ವರ್ತನೆಯ ಆಧಾರದ ಮೇಲಿಂದ ಮಾತ್ರ ವ್ಯಕ್ತಿಯ ನೈತಿಕತೆಯನ್ನು ನಿರೂಪಿಸುತ್ತಾನೆ. ವಿಶ್ವದ ದುರ್ಭೇದ್ಯರಹಸ್ಯವನ್ನು ಈ ಸುನೀತಿಯ ಕಲ್ಪನೆಯಿಂದ ಒಡೆಯುತ್ತಾನೆ. ಏಕೆಂದರೆ ಸುನೀತಿ ಬರಿಯ ಅಮೂರ್ತ ಆದರ್ಶ ಕಲ್ಪನೆಯಷ್ಟೇ ಅಲ್ಲ: ಅದು ಇಹದಲ್ಲಿ ಸಾಕ್ಷಾತ್ಕøತವಾದ ಸಿದ್ಧಿಯೂ ಅಹುದು. ಮತ ಧರ್ಮಗಳಲ್ಲಿ ದೇವರ ಕಲ್ಪನೆಗೆ ಯಾವ ಸ್ಥಾನವೋ ಸುನೀತಿಗೂ ಅದೇ ಮಹತ್ತ್ವದ ಸ್ಥಾನವಿದೆ. ಅದೇ ಜೀವನಕೆಲ್ಲ ಅಂತಿಮ ಗಂತವ್ಯವೆನಿಸುವ ಮೌಲ್ಯವೂ ಎಲ್ಲ ಜೀವದ ಮೂಲಾಧಾರವೂ ಹೌದು.
* ಪ್ಲೇಟೋ ಪ್ರಭಾವ ಅಸಂಖ್ಯ ತತ್ತ್ವಚಿಂತಕರ ಮೇಲೇ ಹೇಗೋ ಹಾಗೆ ಅಗಣಿತ ಕವಿಗಳ ಮೇಲೂ ಅನೇಕ ಶತಮಾನಗಳವರೆಗೆ ಅಗಾಧವಾಗಿದ್ದುದು ಎದ್ದು ಕಾಣುತ್ತದೆ. ಇವನಿಂದ ಸ್ಫೂರ್ತಿ ಪಡೆಯದ ತತ್ತ್ವಜ್ಞಾನಿಗಳೆ ಯೂರೋಪಿನಲ್ಲಿ ಇಲ್ಲವೆನ್ನಬಹುದು. ಇವನ ಶಿಷ್ಯರು ಇವನ ತತ್ತ್ವಗಳ ಪ್ರಸಾರಕ್ಕೆ ಮುಂದಾದರೂ, ಯಾರೂ ಅರಿಸ್ಪಾಟಲನಷ್ಟು ಯಶಸ್ವಿಗಳಾಲಿಲ್ಲ. ಪ್ಲೇಟೋ ತತ್ತ್ವಗಳಿಗೆ ಶಾಸ್ತ್ರೀಯ ಸ್ವರೂಪವನ್ನು ಒದಗಿಸಿ ವಿಚಾರವನ್ನು ಮುಂದುವರಿಸಿದ ಕೀರ್ತಿ ಅರಿಸ್ಟಾಟಲನಿಗೇ ಸಲ್ಲಬೇಕು.
* ಗ್ರಂಥಗಳು: ಪ್ಲೇಟೋ ಗ್ರಂಥಗಳೆಲ್ಲ ಉಪಲಬ್ಭವಾಗಿವೆ. ಅವುಗಳ ಪ್ರಮಾಣ ಎಂಟು ಆಧುನಿಕ ಸಂಪುಟಗಳಷ್ಟಿದೆ. ವಿಶ್ವದ ತಾತ್ತ್ವಿಕವಿವೇಚನೆಯ ಉತ್ತುಂಗ ಶಿಖರವನ್ನು ನಾವು ಅಲ್ಲಿ ಸಂದರ್ಶಿಸುವಂತೆ ಉನ್ನತ ಮಟ್ಟದ ವಾಗ್ವಿಲಾಸವನ್ನೂ ಕಾಣುತ್ತೇವೆ. ಆದ್ದರಿಂದ ಅವು ತಾತ್ತ್ವಿಕ ದೃಷ್ಟಿಯಂತೆ ಸಾಹಿತ್ಯದೃಷ್ಟಿಯಿಂದಲೂ ಮಹನೀಯವೆನಿಸಿವೆ. ತತ್ತ್ವಶಾಸ್ತ್ರವೇನೆಂದು ಯಾರಾದರೂ ಕೇಳಿದರೆ ಪ್ಲೇಟೋವನ್ನು ಓದಿ ತಿಳಿ ಎಂದು ಉತ್ತರಿಸುವಂತಿದೆ. ತತ್ತ್ವಶಾಸ್ತ್ರವೆಂಬ ಪದವನ್ನು ಮೊದಲು ಬಳಸಿದವನೇ ಪ್ಲೇಟೋ, ಅದನ್ನು ಸರ್ವಾಂಗೀಣವಾಗಿ ವಿವೇಚಿಸಿದವನೂ ಆತನೇ, ಇಲ್ಲಿ ನಾವು ಮೊದಲು ಬಾರಿಗೆ ಕಾಣುವ ವ್ಯವಸ್ಥಿತ ತತ್ತ್ವಚಿಂತನೆ ಸಾಕ್ರಟೀಸ್ ಮತ್ತು ಅವನ ಪೂರ್ವಿಕರಾರಲ್ಲಿಯೂ ಕಾಣಸಿಗದು.
"https://kn.wikipedia.org/wiki/ಪ್ಲೇಟೊ" ಇಂದ ಪಡೆಯಲ್ಪಟ್ಟಿದೆ