ರಾಸಾಯನಿಕ ಸಂಯುಕ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
==ಅಯಾನಿಕ್ ಸಂಯುಕ್ತ==
[[File: Water-3D-balls.png|thumb||ನೀರು ಒಂದು ಸಂಯುಕ್ತ. ಅದರ ಅಣು ಸೂತ್ರ H<sub>2</sub>O; ಮೇಲಿನ ಕೆಂಪು ಬಣ್ನದ್ದು ಆಮ್ಲಜನಕದ ಆಥವಾ ಆಕ್ಸಿಜನ್ ಒಂದು ಪರಮಾಣು; ಕೆಳಗಿನವು ಜಲಜನಕದ (ಹೈಡ್ರೋಜನ್‌ನ) ಎರಡು ಪರಮಾಣುಗಳು]]
*ಎರಡು ಅಥವಾ ಹೆಚ್ಚು [[ಮೂಲಧಾತು|ಮೂಲಧಾತುಗಳ]] ನಿರ್ದಿಷ್ಟ ಅನುಪಾತಗಳಲ್ಲಿ, ರಾಸಾಯನಿಕ ಬಂಧನದಿಂದ ಉಂಟಾದ ಪದಾರ್ಥ ಮತ್ತು ಸಾಮಾನ್ಯವಾಗಿ ಇದನ್ನು ರಾಸಾಯನಿಕವಾಗಿ ವಿಭಜಿಸ ಬಹುದು. ಇದರ ಗುಣಗಳು ಇದು ಒಳಗೊಂಡ ಮೂಲಧಾತುಗಳ ಗುಣಗಳಿಗಿಂತ ಭಿನ್ನವಾಗಿರುತ್ತದೆ.<ref>[http://study.com/academy/lesson/what-is-a-chemical-compound-definition-examples-quiz.html "What is a Chemical Compound"], Study.com, access date 2016-10-05</ref>
ಧಾತುಗಳು, ಮಿಶ್ರಣಗಳು ಮತ್ತು ರಾಸಾಯನಿಕ ಸಂಯುಕ್ತಗಳ ನಡುವೆ ವ್ಯತ್ಯಾಸವನ್ನು ಗುರುತಿಸುವುದು ಅಗತ್ಯ. ಒಂದೇ ರೀತಿಯ ಪರಮಾಣುಗಳನ್ನು ಒಳಗೊಂಡ ಪದಾರ್ಥಕ್ಕೆ ''ಧಾತು''ಗಳೆಂದು (ಮೂಲಧಾತುಗಳು) ಕರೆಯಲಾಗುತ್ತದೆ ಮತ್ತು [[ಪರಮಾಣು|ಪರಮಾಣುಗಳನ್ನು]] ರಾಸಾಯನಿಕವಾಗಿ ವಿಭಜಿಸಲು ಸಾಧ್ಯವಾಗುವುದಿಲ್ಲವಾದ್ದರಿಂದ ಈ ಪದಾರ್ಥವನ್ನು ಇನ್ನೂ ಹೆಚ್ಚು ಸರಳ ಘಟಕಗಳಾಗಿ ವಿಭಜಿಸಲು ಬರುವುದಿಲ್ಲ.<ref>[http://chemed.chem.purdue.edu/genchem/topicreview/bp/ch2/mixframe.html "Elements, Compounds and Mixtures"], access date 2016-10-05</ref> ''ಮಿಶ್ರಣ''ವು ಒಂದು ಅಥವಾ ಹೆಚ್ಚು ಧಾತುಗಳು ಅಥವಾ/ಮತ್ತು ರಾಸಾಯನಿಕ ಸಂಯುಕ್ತಗಳನ್ನು ಒಳಗೊಂಡ ಭೌತಿಕ ಬೆರಕೆ ಮತ್ತು ಸಾಮಾನ್ಯವಾಗಿ ಅದರ ಘಟಕಗಳ ರಾಸಾಯನಿಕ ಗುಣಗಳು ಮೂಲ ಪದಾರ್ಥದ ರಾಸಾಯನಿಕ ಗುಣಗಳಿಗಿಂತ ಭಿನ್ನವಾಗಿರುವುದಿಲ್ಲ.<ref>[http://www.ivyroses.com/Chemistry/GCSE/Elements-Mixtures-Compounds.php "Elements and Mixtures and Compounds"] access date 2016-10-05</ref> ಕೈಯಿಂದ ಆರಿಸುವುದು, ಸೋಸುವುದು, ಭಟ್ಟಿ ಇಳಿಸುವುದು ಮುಂತಾದ ಭೌತಿಕ ಪದ್ಧತಿಗಳ ಮೂಲಕ ಮಿಶ್ರಣದಲ್ಲಿನ ಘಟಕಗಳನ್ನು ಬೇರ್ಪಡಿಸ ಬಹುದು. ಸಾರಜನಕದ ಎರಡು ಪರಮಾಣುಗಳು (H-2) ಮತ್ತು ಆಮ್ಲಜನಕದ ಒಂದು ಪರಮಾಣು (Ox O-1)ಗಳ ಸಂಯುಕ್ತ [[ನೀರು]] (H<sub>2</sub>O) ಮತ್ತು [[ಉಪ್ಪು|ಅಡುಗೆಯ ಉಪ್ಪು]] (NaCl-ಸೋಡಿಯಮ್ ಕ್ಲೋರೈಡ್;ಸೋಡಿಯಮ ಮತ್ತು ಕ್ಲೋರೀನ್‍ನ ತಲಾ ಒಂದೊಂದು ಪರಮಾಣುಗಳ ಸಂಯುಕ್ತ) ರಾಸಾಯನಿಕ ಸಂಯುಕ್ತಕ್ಕೆ ಕೆಲವು ಉದಾಹರಣೆಗಳು.
"https://kn.wikipedia.org/wiki/ರಾಸಾಯನಿಕ_ಸಂಯುಕ್ತ" ಇಂದ ಪಡೆಯಲ್ಪಟ್ಟಿದೆ