ರಾಸಾಯನಿಕ ಸಂಯುಕ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೨ ನೇ ಸಾಲು:
[[File: Water-3D-balls.png|thumb||ನೀರು ಒಂದು ಸಂಯುಕ್ತ. ಅದರ ಅಣು ಸೂತ್ರ H<sub>2</sub>O]]
*ಎರಡು ಅಥವಾ ಹೆಚ್ಚು [[ಮೂಲಧಾತು|ಮೂಲಧಾತುಗಳ]] ನಿರ್ದಿಷ್ಟ ಅನುಪಾತಗಳಲ್ಲಿ, ರಾಸಾಯನಿಕ ಬಂಧನದಿಂದ ಉಂಟಾದ ಪದಾರ್ಥ ಮತ್ತು ಸಾಮಾನ್ಯವಾಗಿ ಇದನ್ನು ರಾಸಾಯನಿಕವಾಗಿ ವಿಭಜಿಸ ಬಹುದು. ಇದರ ಗುಣಗಳು ಇದು ಒಳಗೊಂಡ ಮೂಲಧಾತುಗಳ ಗುಣಗಳಿಗಿಂತ ಭಿನ್ನವಾಗಿರುತ್ತದೆ.<ref>[http://study.com/academy/lesson/what-is-a-chemical-compound-definition-examples-quiz.html "What is a Chemical Compound"], Study.com, access date 2016-10-05</ref>
ಧಾತುಗಳು, ಮಿಶ್ರಣಗಳು ಮತ್ತು ರಾಸಾಯನಿಕ ಸಂಯುಕ್ತಗಳ ನಡುವೆ ವ್ಯತ್ಯಾಸವನ್ನು ಗುರುತಿಸುವುದು ಅಗತ್ಯ. ಒಂದೇ ರೀತಿಯ ಪರಮಾಣುಗಳನ್ನು ಒಳಗೊಂಡ ಪದಾರ್ಥಕ್ಕೆ ''ಧಾತು''ಗಳೆಂದು (ಮೂಲಧಾತುಗಳು) ಕರೆಯಲಾಗುತ್ತದೆ ಮತ್ತು [[ಪರಮಾಣು|ಪರಮಾಣುಗಳನ್ನು]] ರಾಸಾಯನಿಕವಾಗಿ ವಿಭಜಿಸಲು ಸಾಧ್ಯವಾಗುವುದಿಲ್ಲವಾದ್ದರಿಂದ ಈ ಪದಾರ್ಥವನ್ನು ಇನ್ನೂ ಹೆಚ್ಚು ಸರಳ ಘಟಕಗಳಾಗಿ ವಿಭಜಿಸಲು ಬರುವುದಿಲ್ಲ.<ref>[http://chemed.chem.purdue.edu/genchem/topicreview/bp/ch2/mixframe.html "Elements, Compounds and Mixtures"], access date 2016-10-05</ref> ''ಮಿಶ್ರಣ''ವು ಒಂದು ಅಥವಾ ಹೆಚ್ಚು ಧಾತುಗಳು ಅಥವಾ/ಮತ್ತು ರಾಸಾಯನಿಕ ಸಂಯುಕ್ತಗಳನ್ನು ಒಳಗೊಂಡ ಭೌತಿಕ ಬೆರಕೆ ಮತ್ತು ಸಾಮಾನ್ಯವಾಗಿ ಅದರ ಘಟಕಗಳ ರಾಸಾಯನಿಕ ಗುಣಗಳು ಮೂಲ ಪದಾರ್ಥದ ರಾಸಾಯನಿಕ ಗುಣಗಳಿಗಿಂತ ಭಿನ್ನವಾಗಿರುವುದಿಲ್ಲ.<ref>[http://www.ivyroses.com/Chemistry/GCSE/Elements-Mixtures-Compounds.php "Elements and Mixtures and Compounds"] access date 2016-10-05</ref> ಕೈಯಿಂದ ಆರಿಸುವುದು, ಸೋಸುವುದು, ಭಟ್ಟಿ ಇಳಿಸುವುದು ಮುಂತಾದ ಭೌತಿಕ ಪದ್ಧತಿಗಳ ಮೂಲಕ ಮಿಶ್ರಣದಲ್ಲಿನ ಘಟಕಗಳನ್ನು ಬೇರ್ಪಡಿಸ ಬಹುದು. ಸಾರಜನಕದ ಎರಡು ಪರಮಾಣುಗಳು (H-2) ಮತ್ತು ಆಮ್ಲಜನಕದ ಒಂದು ಪರಮಾಣು (Ox O-1)ಗಳ ಸಂಯುಕ್ತ [[ನೀರು]] (H<sub>2</sub>O) ಮತ್ತು [[ಉಪ್ಪು|ಉಪ್ಪುಗಳು]] (NaCl-ಸೋಡಿಯಮ್ ಕ್ಲೋರೈಡ್; ತಲಾ ಒಂದೊಂದು ಪರಂಣುಗಳ ಸಂಯುಕ್ತ) ರಾಸಾಯನಿಕ ಸಂಯುಕ್ತಕ್ಕೆ ಕೆಲವು ಉದಾಹರಣೆಗಳು.
 
==ಇತಿಹಾಸ==
*ಕ್ರಿಶ 1800ರಕ್ಕೂ ಮುಂಚೆ ರಸಾಯನಿಕ ಸಂಯುಕ್ತಕ್ಕೆ ಖಚಿತ ವ್ಯಾಖ್ಯಾನವೊಂದು ಇರಲಿಲ್ಲ. ಅದನ್ನು ಬಳಸಿದಾಗ ಅದು ನಿರ್ದಿಷ್ಟವಾಗಿ ಇಂದು ಯಾವುದನ್ನು ವಿಜ್ಞಾನಿಗಳು ಮಿಶ್ರಣ ಎನ್ನುತ್ತಾರೆ ಅದರಿಂದ ಭಿನ್ನವಾಗಿ ಸಂಯುಕ್ತವನ್ನು ಗುರುತಿಸಲಾಗುತ್ತಿರಲಿಲ್ಲ. ಇದರೊಂದಿಗೆ ಮಿಳಿತವಾದ ಇನ್ನೊಂದು ಪ್ರಶ್ನೆ ಸಂಯುಕ್ತವು ಯಾವಾಗಲೂ ಒಂದೇ ಘಟಕಗಳನ್ನು ಒಳಗೊಂಡಿರುತ್ತದೆಯೇ ಮತ್ತು ಹೀಗೆ ಒಳಗೊಂಡ ಘಟಕಗಳು ಯಾವಾಗಲೂ ಒಂದೇ ಅನುಪಾತದಲ್ಲಿರುತ್ತವಯೆ ಎಂಬುದಾಗಿತ್ತು. ಪ್ರೆಂಚ್ ರಸಾಯನಶಾಸ್ತ್ರಜ್ಞ ಕ್ಲಾಡ್ ಲೂಯಿಸ್ ಬರ್ತೊಲೆಟ್ ಹಲವು ಸಂಯುಕ್ತಗಳು ಬೇರೆ ಬೇರೆ ಅನುಪಾತದ ಪದಾರ್ಥಗಳನ್ನು ಒಳಗೊಂಡಿರುವ ಪುರಾವೆಗಳನ್ನು ನೀಡಿದ. ಇದಕ್ಕೆ ವಿರುದ್ಧ ನಿಲುವು ತಾಳಿದುದು ಪ್ರೆಂಚ್ ರಸಾಯನಶಾಸ್ತ್ರಜ್ಞ ಜೋಸೆಫ್ ಲೂಯಿಸ್ ಪ್ರೌಸ್ಟ್. ಇವನು ತಾಮ್ರವು ಆಕ್ಸಿಡೈಸ್ ಆಗಿ ಹಲವು ರೀತಿಯ ಸಂಯುಕ್ತಗಳು ಉಂಟಾಗುತ್ತವೆ ಎಂದು ಸಿದ್ಧಮಾಡಿ ತೋರಿಸಿದ. ಆದರೆ ಅಂದು ರಾಸಾಯನಿಕ ಪದ್ಧತಿಗಳು ಬೆಳದಿರಲಿಲ್ಲ. ಹೀಗಾಗಿ ಬರ್ತೊಲೆಟ್ ಸೂಚಿಸಿದ ಅಲಾಯ್ (ಮಿಶ್ರ ಲೋಹ) ಮತ್ತು ಪಾದರಸ ಹಾಗೂ ಲೋಹಗಳ ಮಿಶ್ರಣಗಳು ಸಂಯುಕ್ತಗಳಲ್ಲ ಎಂದು ತೋರಿಸುವುದು ಪ್ರೌಸ್ಟ್‌ಗೆ ಕಠಿಣವಾಗಿತ್ತು. ಈ ಸಮಸ್ಯೆಗಳ ನಡುವೆಯೂ ಪ್ರೌಸ್ಟ್‌ನ ಚಿಂತನೆ ಕೊನೆಯಲ್ಲಿ ಗೆದ್ದಿತು. ಈ ಗೆಲುವಿನಲ್ಲಿ ಸಂಯುಕ್ತಗಳಲ್ಲಿನ ಘಟಕಗಳು ಒಂದೇ ಅನುಪಾತದಲ್ಲಿರುತ್ತವೆ ಎನ್ನುವ ಡಾಲ್ಟನ್‌ನ ಅಣು ಸಿದ್ಧಾಂತದ ಪಾತ್ರವೂ ಇದೆ. ಈ ನಿಯಮವು ರಸಾಯಶಾಸ್ತ್ರದ ಬೆಳವಣೆಗೆಯಲ್ಲಿ ಪ್ರಮುಖ ಪಾತ್ರವಹಿಸಿತು.<ref>[http://science.jrank.org/pages/1681/Compound-Chemical-History.html "Chemical Compound – History"] access date 2016-10-05</ref>
"https://kn.wikipedia.org/wiki/ರಾಸಾಯನಿಕ_ಸಂಯುಕ್ತ" ಇಂದ ಪಡೆಯಲ್ಪಟ್ಟಿದೆ