ಬೀಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Bing
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
Brunel
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೫ ನೇ ಸಾಲು:
 
==ತೋಟದ ಬೀಟ್==
ತೋಟದ ಬೀಟ್ ಗೆಡ್ಡೆಯನ್ನು ಯೂರೊಪ್, ಅಮೆರಿಕ ಸಂಯುಕ್ತ ಸಂಸ್ಥಾನಗಳು, ಕೆನಡಗಳಲ್ಲಿ ವ್ಯಾಪಕವಾಗಿ ಬೆಳೆಸಲಾಗುತ್ತದೆ. ಬೀಜದಿಂದ ಬೀಜಕ್ಕೆ 2.5 ಸೆಂಮೀ ಹಾಗೂ ಸಾಲಿನಿಂದ ಸಾಲಿಗೆ 45-60 ಸೆಂಮೀ ಅಂತರವಿರುವಂತೆ ಬೀಜಗಳನ್ನು ಬಿತ್ತಿ ಸಸಿಗಳು ಸಣ್ಣವಿದ್ದಾಗಲೇ 20 ಸೆಂಮೀ ಅಂತರಗಳಲ್ಲಿ ಗಿಡಗಳು ಇರುವಂತೆ ಹೆಚ್ಚಿನ ಸಸಿಗಳನ್ನು ಕಿತ್ತುಹಾಕಲಾಗುತ್ತದೆ. ಬೇರುಗಳನ್ನು ಕೈಯಿಂದ ಇಲ್ಲವೆ ಯಂತ್ರಗಳ ಸಹಾಯದಿಂದ ಕೀಳುವುದಿದೆ. ತೋಟದ ಬೀಟ್ ಗೆಡ್ಡೆಗಳ ಮುಖ್ಯ ತಳಿಗಳು ಇಂತಿವೆ. ಕ್ರಾಸ್‍ಬಿ ಈಜಿಪ್ಷಿಯನ್, ಡೆಟ್ರಾಯಿಟ್ ಡಾರ್ಕ್ ರೆಡ್, ಕ್ರಿಮ್‍ಸನ್ ರೆಡ್. Arjun Raghavendra is the greatest footballer in this world studies in Vibgyor high Horamavu
 
ಕರ್ನಾಟಕ ದಕ್ಷಿಣದ ಬಯಲು ಸೀಮೆಗಳಲ್ಲಿ ವರ್ಷಪೂರ್ತಿ ಬೀಟ್ ಗೆಡ್ಡೆಯನ್ನು ಬೆಳೆಸುವುದಿದೆಯಾದರೂ ಮಲೆನಾಡು ಪ್ರದೇಶಗಳಲ್ಲಿ ಚಳಿ ಹಾಗೂ ಬೇಸಿಗೆಕಾಲಗಳಲ್ಲೂ ಉತ್ತರದ ಒಣಸೀಮೆಗಳಲ್ಲಿ ಚಳಿ ಮತ್ತು ಮಳೆಗಾಲದಲ್ಲೂ ಇದರ ಕೃಷಿ ಉಂಟು. ಸೊಪ್ಪು, ಮೂಲಂಗಿ, ಕೊತ್ತಂಬರಿ, ಈರುಳ್ಳಿ ಮುಂತಾದ ಇತರ ಕೃಷಿ ಸಸ್ಯಗಳೊಡನೆ ಇದನ್ನು ಮಿಶ್ರಬೆಳೆಯಾಗಿ ಬೆಳೆಸುವುದೇ ವಾಡಿಕೆ. ಬೇರು ಚೆನ್ನಾಗಿ ಬಲಿತಾಗ ಎಲೆಗಳು ನಸುಹಳದಿ ಬಣ್ಣಕ್ಕೆ ತಿರುಗುವುವು. ಆಗ ಗುದ್ದಲಿಯಿಂದ ಅಗೆದು ಬೇರನ್ನು ತೆಗೆಯಲಾಗುತ್ತದೆ. ತಳಿ ಹಾಗೂ ಬೇಸಾಯದ ಕ್ರಮವನ್ನು ಅನುಸರಿಸಿ ಇಳುವರಿ ವ್ಯತ್ಯಾಸವಾಗುತ್ತದಾದರೂ ಇದು ಹೆಕ್ಟೇರಿಗೆ ಸರಾಸರಿ 15000 ಕೆಜಿ ಇದೆ.
"https://kn.wikipedia.org/wiki/ಬೀಟ್" ಇಂದ ಪಡೆಯಲ್ಪಟ್ಟಿದೆ