ಗಂಗಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೨ ನೇ ಸಾಲು:
==ಗಂಗಾನದಿಯ ಮಾಲಿನ್ಯತೆ==
*‘ಗಂಗಾ ನದಿ ಉದ್ದಕ್ಕೂ ಹೋಗುವ 39 ಸ್ಥಳಗಳಲ್ಲಿ, ಕೇವಲ ಒಂದು ಸ್ಥಳದಲ್ಲಿ ಮಾತ್ರ ನದಿಯ ನೀರು ಶುದ್ಧವಾಗಿದೆ. ಉಳಿದ ಕಡೆಗಳಲ್ಲಿ ನೀರು ಮಲಿನಗೊಂಡಿದೆ’ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ಮಂಡಳಿಯು ಮುಂಗಾರಿಗೂ ಮುನ್ನ ಮತ್ತು ಮುಂಗಾರಿನ ನಂತರ 39 ಸ್ಥಳಗಳಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿತು; ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಈ ಅಧ್ಯಯನ ಅವುಗಳನ್ನು ಪರಿಶೀಲನೆ ನಡೆಸಲಾಗಿತ್ತು. ಈಗ ಅಧ್ಯಯನದ ವರದಿಯನ್ನು ಮಂಡಳಿಯು ಬಿಡುಗಡೆ ಮಾಡಿದೆ.‘ಮುಂಗಾರಿಗೂ ಮೊದಲು 41 ಸ್ಥಳಗಳಲ್ಲಿ ಮಂಡಳಿ ಅಧ್ಯಯನ ಮಾಡಿತ್ತು. ಅವುಗಳಲ್ಲಿ 37 ಸ್ಥಳಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ನೀರು ಮಲಿನಗೊಂಡಿರುವುದು ಕಂಡುಬಂದಿತ್ತು. ಒಂದು ಸ್ಥಳದಲ್ಲಿ ಮಾತ್ರ ನೀರು ಶುದ್ಧವಾಗಿತ್ತು. ಉಳಿದ ಮೂರು ಸ್ಥಳಗಳಲ್ಲಿ ನೀರು ಸ್ವಲ್ಪ ಮಲಿನಗೊಂಡಿತ್ತು’ ಎಂದು ವರದಿಯಲ್ಲಿ ವಿವರಿಸಲಾಗಿದೆ.<ref>[https://www.prajavani.net/stories/national/ganga-clean-just-one-out-39-596495.html ಗಂಗಾ ಒಂದು ಸ್ಥಳದಲ್ಲಿ ಮಾತ್ರ ನೀರು ಶುದ್ಧ೨೨-೮-೨೦೧೮]</ref>
==ಹರಿವು ಕಡಿತ==
*ನದಿಯ ನೀರು ಶುದ್ಧವಾಗಿರಲು ಮತ್ತು ಮಾಲಿನ್ಯಮುಕ್ತವಾಗಿರಲು ನದಿಯು ಹರಿಯುತ್ತಲೇ ಇರಬೇಕು. 2,525 ಕಿ.ಮೀ. ಉದ್ದ ಹರಿಯುವ ಗಂಗಾ ನದಿಗೆ ಆರು ಬೃಹತ್ ಅಣೆಕಟ್ಟು ಮತ್ತು ನಾಲ್ಕು ಜಲಾಶಯಗಳನ್ನು ನಿರ್ಮಿಸಲಾಗಿದೆ. ಅಣೆಕಟ್ಟು ಒಡೆತನದ ಅಲಕ್‌ನಂದಾ ಕಂಪನಿಯು ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಿಗೆ 330 ಮೆ.ವಾ. ಶಕ್ತಿಯನ್ನು ರಾಯಧನದ ರೂಪದಲ್ಲಿ ಉಚಿತವಾಗಿ ಕೊಡುತ್ತಿದೆ. ರಾಜ್ಯ ಸರ್ಕಾರಿ ಅಧೀನದ ಮನೇರಿಭಾಲಿ ಎರಡನೇ ಹಂತದ ಡ್ಯಾಂಗಳ ಆಡಳಿತ ಮಂಡಳಿಗಳು ತಮ್ಮ ವರಮಾನವನ್ನೇ ಮುಂದು ಮಾಡಿ, ಕೇಂದ್ರೀಯ ಜಲ ಆಯೋಗ ಆದೇಶಿಸಿದಷ್ಟು ನೀರನ್ನು ಅಣೆಕಟ್ಟೆಯಿಂದ ಹೊರಬಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯದ ಮೆಟ್ಟಿಲೇರಿವೆ. ಆಯೋಗದ ನಿಬಂಧನೆ ಅವೈಜ್ಞಾನಿಕ ಮತ್ತು ತಾನು ಈಗಾಗಲೇ ಉತ್ತರಾಖಂಡ ಹೈಕೋರ್ಟ್‌ನ ಆದೇಶದಂತೆ ಶೇ 15 ರಷ್ಟು ಹೊರಹರಿವನ್ನು ಕಾಪಾಡಿಕೊಂಡಿರುವುದರಿಂದ ಆಯೋಗದ ಶಿಫಾರಸನ್ನು ಪಾಲಿಸಲು ಸಾಧ್ಯವೇ ಇಲ್ಲ ಎಂದು ಹಟ ಹಿಡಿದಿದೆ. ಉತ್ತರ ಭಾರತದ ಜೀವನದಿ ಗಂಗೆ, ಖಾಸಗಿ ಒಡೆತನದ ಅಣೆಕಟ್ಟುಗಳ ಮಾಲೀಕರ ಹಟಮಾರಿ ಧೋರಣೆಯಿಂದ ತನ್ನ ಸ್ವಾಭಾವಿಕ ಹರಿವನ್ನು ಕಳೆದುಕೊಂಡು, ಅಣೆಕಟ್ಟಿನ ಕೆಳಪಾತಳಿಯಲ್ಲಿ ಜೀವಿಸುವ ಅಪರೂಪದ ಜೀವಿಪ್ರಭೇದಗಳನ್ನು ಸಂಕಷ್ಟಕ್ಕೆ ಸಿಲುಕಿಸಲಿದೆ. ವ್ಯವಸಾಯ, ಉದ್ಯಮ, ವಿದ್ಯುತ್ ಉತ್ಪಾದನೆಗೆ ನೀರು ಕೊಡುವುದರ ಜೊತೆಗೆ 2020ರ ಅಂತ್ಯಕ್ಕೆ ಗಂಗಾ ನದಿಯ ಪುನಶ್ಚೇತನ ಮುಗಿಯಬೇಕಿದೆ. ಕಂಪನಿಗಳಿಗಾಗುವ ಆರ್ಥಿಕ ನಷ್ಟವನ್ನು ತುಂಬಿಕೊಡಬಹುದು. ಆದರೆ ನದಿಯಲ್ಲಿನ ಅಪರೂಪದ ಜೀವಿಪ್ರಭೇದ ಶಾಶ್ವತವಾಗಿ ಕಣ್ಮರೆ ಯಾದರೆ ಅದನ್ನೆಲ್ಲಿಂದ ತರುವುದು ಎಂದು ಪ್ರಶ್ನಿಸಿರುವ ಪರಿಸರವಾದಿಗಳು, ಹೊರಹರಿವಿನ ಪ್ರಮಾಣ ಏರಿಸಿ ನದಿಯನ್ನು ಕಾಪಾಡಿ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.<ref>[https://www.prajavani.net/op-ed/opinion/ganga-river-pollution-700898.html ಗಂಗೆ: ಸಾಧ್ಯವೇ ಸ್ವಾಭಾವಿಕ ಹರಿವು? ಗುರುರಾಜ್ ಎಸ್. ದಾವಣಗೆರೆ; d: 27 ಜನವರಿ 2020]</ref>
 
==ಆಕರ ಗ್ರಂಥ==
"https://kn.wikipedia.org/wiki/ಗಂಗಾ" ಇಂದ ಪಡೆಯಲ್ಪಟ್ಟಿದೆ