"ಆಗುಂಬೆ ಘಾಟಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
{{under construction}}
===ಪೀಠಿಕೆ===
ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಪ್ರಸಿದ್ಧವಾಗಿರುವ ಆಗುಂಬೆ ಹಲವು ಅದ್ಭುತಗಳ ಆಗರ. ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯನ್ನು ಬೆಸೆಯುವ ಆಗುಂಬೆ ಘಾಟಿಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಅತ್ಯಂತ ಕಡಿದಾದ ಹಾಗೂ ಕಿರುದಾದ ತಿರುವುಗಳನ್ನು ಒಳಗೊಂಡ ಆಗುಂಬೆ ಘಾಟಿಯಲ್ಲಿ ಒಟ್ಟು ಹದಿನಾಲ್ಕು ತಿರುವುಗಳಿದ್ದು, ಮೇಲ್ಭಾಗದ ಏಳು ಸುತ್ತುಗಳು ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ, ಕೆಳಗಿನ ಏಳು ಸುತ್ತುಗಳು ಉಡುಪಿ ಜಿಲ್ಲಾ ವ್ಯಾಪ್ತಿಗೆ ಸೇರುತ್ತವೆ. ಆಗುಂಬೆ ಘಾಟಿಯು ಅಪರೂಪದ ವನ್ಯಸಂಪತ್ತಿನ ತಾಣವಾಗಿದೆ. ಇಲ್ಲಿ ಹಲವು ಬಗೆಯ ಅಪರೂಪದ ಹಾಗೂ ಔಷಧೀಯ ಗುಣವುಳ್ಳ ಸಸ್ಯಗಳನ್ನು ಕಾಣಬಹುದು. ಸಿಂಗಳೀಕ, ಸಿಂಹ ಬಾಲದ ಕೋತಿ, ಕೆಂಜಳಿಲು ಸೇರಿದಂತೆ ಅಳಿವಿನಂಚಿನಲ್ಲಿರುವ ಕೆಲ ಜೀವ ಪ್ರಬೇಧಗಳೂ ಇಲ್ಲಿ ನೆಲೆಸಿವೆ. ಆಗುಂಬೆ ಘಾಟಿಯಲ್ಲಿ ನಿಂತರೆ ಹಸಿರು ಹೊದ್ದ ಪರ್ವತ ಶ್ರೇಣಿಯಿಂದ ಹಿಡಿದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರದೇಶಗಳ ಪಕ್ಷಿನೋಟವನ್ನು ಕಾಣಬಹುದು.
೬೯೮

edits

"https://kn.wikipedia.org/wiki/ವಿಶೇಷ:MobileDiff/971411" ಇಂದ ಪಡೆಯಲ್ಪಟ್ಟಿದೆ