ಆಂಟನ್ ಲೂವೆನ್ ಹೊಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯ ನೇ ಸಾಲು:
 
=== ಸಂಶೋಧನೆಯ ಯಶಸ್ಸು===
ಡಾ.ಗ್ರಾಫ್ ಎಂಬ ಬುದ್ಧಿಜೀವಿಯೊಬ್ಬ ಆ ಊರಿನಲ್ಲಿದ್ದ . ಲಂಡನ್ನಿನ ಪ್ರತಿಷ್ಠಿತ ವಿದ್ವಾಂಸರ ಕೂಟ- ರಾಯಲ್ ಸೊಸೈಟಿಯ ಪ್ರತಿನಿಧಿಯೂ ಆಗಿದ್ದ. ಲೂವೆನ್ ಹೊಕ್ ರ ಹುಚ್ಚುತನದ ವೀಕ್ಷಣೆ ಏನಿರಬಹುದೆಂದು ಡಾ. ಗ್ರಾಫ್ ತಿಳಿಯಲು ಒಂದು ದಿನ ಅವರ ಮನೆಗೆ ಭೇಟಿ ಕೊಟ್ಟರು.ಲೂವೆನ್ ಹೊಕ್ ಒಂದು ಹನಿ ನೀರಿನಲ್ಲಿ ಲಕ್ಷಾಂತರ ಸೂಕ್ಷ್ಮಜೀವಿಗಳ ಗಳಿರುವುದನ್ನು ಅವರಿಗೂ ಪ್ರದರ್ಶಿಸಿದರು. ಡಾ.ಗ್ರಾಫ್ ಅಂದು ನೋಡಿದ ದೃಶ್ಯ ಅವರ ಬುದ್ಧಿಗೂ ನಿಲೂಕಲಾರದ ಸಂಗತಿಯೆನಿಸಿತು. ಲೂವೆಲ್ ಹೊಕ್ ಅವರೆಲ್ಲಾ ತಿಳಿದುಕೊಂಡ ಹಾಗೆ ಮಂದಬುದ್ಧಿ ವರೆಲ್ಲ ಎಂಬುದು ಅವರಿಗೆ ಅರಿವಾಯಿತು.ಈ ಸಂಶೋಧನೆಯ ಫಲಿತಾಂಶಗಳನ್ನು ರಾಯಲ್ ಸೊಸೈಟಿಯವರ ಗಮನಕ್ಕೆ ತರುವುದು ಸೂಕ್ತವೆಂಬುದು ಡಾ. ಗ್ರಾಫ್‌ನ ಅಭಿಪ್ರಾಯ. ಆ ಬಗೆಗೆ ಒಂದು ವರದಿಯನ್ನು ತಯಾರು ಮಾಡಿ ಲಂಡನ್ ಗೆ ಕಳುಹಿಸಲು ಲೂವರ್ ಹೊಕ್‌ರನ್ನು ಅಂದೇ ಪುಸಲಾಯಿಸಲು. ಅಷ್ಟೊಂದು ಅನುಭವಸ್ಥರಲ್ಲದ ಲೂವೆನ್ ಹೊಕ್ ಮೊದಲ ಅಂಜಿದರೂ, ಮುಂದೆ ವರದಿಯನ್ನು ತನ್ನದೇ ಆದ ವರಟು ಭಾಷೆಯಲ್ಲಿ ತಯಾರಿಸಿದರು.ಲೂವೆಲ್ ಹೊಕ್ ರ ವರದಿಯನ್ನು ಪರಿಶೀಲಿಸಿದ ರಾಯಲ್ ಸೊಸೈಟಿಯವರು ಹಾಲೆಂಡಿನ ಯ:ಕ್ಷಿತ್ ದಿನಸಿ ಅಂಗಡಿ ಸಹಾಯಕ ಬರಹವನ್ನು ಮೊದಲು ನಂಬದಾದರು. ಒಂದು ತೊಟ್ಟು ನೀರಿನಲ್ಲಿ ಲಕ್ಷಾಂತರ ಜೀವಿಗಳ ಇರುವುದೆಂದರೆ ಏನು? ಹಳ್ಳಿಯ ಒಬ್ಬ ವರದಿ ಮಾಡಿದ ಈ ಸಂಶೋಧನೆ ನಂಬಲರ್ಹವೇ ಎಂದು ತರ್ಕಿಸಿದರು. ಆದರೂ ಬಗೆಗೆ ಹೆಚ್ಚಿನ ವಿವರಗಳನ್ನು ತಿಳಿಯಲು ಅವರು ತಯಾರಿಸಿದ ಒಂದು ಸೂಕ್ಷ್ಮದರ್ಶಕವನ್ನು ತಮಗೆ ಕಳುಹಿಸಿಕೊಡಲು ಲೂವೆನ್ ಹೊಕ್ ರನ್ನು ಕೇಳಿಕೊಂಡರು.ತನ್ನಲ್ಲಿ ಹಲವಾರು ಸೂಕ್ಷ್ಮ ದರ್ಶಕಗಳಿದ್ದರೂ ಸ್ವಭಾವದ ಲೊವೆನ್ ಹೊಕ್ ಅದೇಕೋ ಕಳುಹಿಸಲು ನಿರಾಕರಿಸಿದರು. ಅನುಮಾನವಿದ್ದರೆ, ಅವರೇ ಯಾರಾದರೂ ನಮ್ಮ ಊರಿಗೆ ಬಂದು ನೋಡಬಹುದೆಂದು ಪಟ್ಟುಹಿಡಿದರು. ಅವಕ್ಕಾದ ರಾಯಲ್ ಸೊಸೈಟಿಯವರು ತಂತ್ರಜ್ಞರ ನೆರವಿನಿಂದ ಸೂಕ್ಷ್ಮದರ್ಶಕವನ್ನು ತಯಾರಿಸಿಕೊಂಡು ಲೂವೆನ್ ಹೊಕ್ ವಿವರಿಸಿದಂತೆ ಒಂದು ತೊಟ್ಟು ನೀರನ್ನೂ ಅದರ ಮೂಲಕ ವೀಕ್ಷಿಸಿದರು.ಹಳಸಿದ ಬೆಣ್ನೆಯಲ್ಲಾಗುತ್ತಿದಬೆಣ್ಣೆಯಲ್ಲಿ ಆಗುತ್ತಿದ್ದ ಚಿಕ್ಕ ಕ್ರಿಮಿಯೇ ದೈವ ಸೃಷ್ಟಿಯ ಅತಿ ಚಿಕ್ಕ ಪ್ರಾಣಿಗಳೆಂದು ಆತನಕ ನಂಬಿಕೊಂಡಿದ್ದ ಆ ಪಂಡಿತೋತ್ತಮರು ಚಕಿತಗೊಳ್ಳುವ ದೃಶ್ಯ ಅಂದು ಅವರಿಗೆ ಎದುರಾಯಿತು. ದಿನಸಿ ಅಂಗಡಿಯ ಸಹಾಯಕ ತಮಗಿಂತಲೂ ಬುದ್ಧಿವಂತ ನಿರಬೇಕೆಂಬ ಸಂಶಯ ಅವರದಾಯಿತು. ಅವರ ಸಂಶೋಧನಾ ಸಾಮರ್ಥ್ಯಕ್ಕೆ ತಲೆದೂಗಿ ಸೊಸೈಟಿಯ ಗೌರವ ಸದಸ್ಯತ್ವದ ಸನ್ನದನ್ನು ಮರುದಿನವೇ ಆಂಟನ್ ಲೂವೆನ್ ಹೊಕ್ ಗೆ ಕಳುಹಿಸಿಕೊಟ್ಟರು.ಆಕಸ್ಮಿಕವಾಗಿ ದೊರೆತ ಗೌರವ ಲೂವೆನ್ ಹೊಕ್ರನ್ನು ಸಂತೋಷದ ಕಡಲಿನಲ್ಲಿ ಈಜಾಡುಂತೆ ಮಾಡಿತು. ಊರಿನವರು ಸಹ ಹೆಮ್ಮೆಯಿಂದ ಬೀಗಿದರು. ಮುಂದೆ ತನ್ನ ಜೀವನ ಮಾನವನ್ನೆಲ್ಲ ಲೂವೆನ್ ಹೊಕ್. ಹಲವು ತೆರನ ಗಿಡ ,ಮರ, ಬಳ್ಳಿ ,ಎಲೆ, ತೊಗಟೆ, ಪ್ರಾಣಿ-ಪಕ್ಷಿ ಮೀನುಗಳು ಅವಯವಗಳ ತುಣುಕುಗಳನ್ನು ಪರೀಕ್ಷಿಸಿ ಅಲ್ಲಿಯೂ ಅನಿಷ್ಟ ಪಶು ಗಳಿರುವುದನ್ನು ಗುರುತಿಸಿದರು. ಆದರೆ ಅಂತಹ ಸೂಕ್ಷ್ಮಜೀವಿಗಳ ಸೋಂಕುರೋಗಗಳು ಕಾರಣವಾಗಬಹುದೆಂದು ಅವರು ಊಹೆಗೆ ನಿಲುಕಲಾರದಾಯಿತು. ಅದನ್ನು ದೃಢಪಡಿಸಲು ಮುಂದೆ ಎರಡು ಶತಮಾನಗಳೇ ಉರುಳಿದವು.ಅನಾದಿಯಿಂದಲೂ ಮನುಕುಲಕ್ಕೆ ಕಂಟಕಕಾರಿಗಳಾದ ಅಗೋಚರ ಶತ್ರುಗಳ ಪಾಳಯಕ್ಕೆ ಯಶಸ್ವಿ ಲಗ್ಗೆ ಹಾಕಲು ಸಾಧ್ಯವಾಯಿತು.
 
===ನಿಧನ===
೯೧ ವರ್ಷಗಳ ತುಂಬು ಜೀವನ ನಡೆಸಿದ ಆಂಟನ್ ಲೂವೆನ್ ಹೊಕ್ ೧೭೨೩ ರಲ್ಲಿ ನಿಧನರಾದರು. ಅವರ ಸರಳ ಸಂಶೋಧನೆ ಈ ಜಗತ್ತಿನ ಅಳಿವು ಉಳಿವು ಗಳ ಪ್ರತೀಕಾರವಾಗಿ ಉಳಿದುಕೊಂಡಿದೆ.
"https://kn.wikipedia.org/wiki/ಆಂಟನ್_ಲೂವೆನ್_ಹೊಕ್" ಇಂದ ಪಡೆಯಲ್ಪಟ್ಟಿದೆ