ಚೈ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೪ ನೇ ಸಾಲು:
ಈರುಳ್ಳಿ ಚೈನಲ್ಲಿ ಈರುಳ್ಳಿಯನ್ನು ಬಳಸಲಾಗುತ್ತದೆ. ಆದರೆ ಈರುಳ್ಳಿ ಬಳಸುವುದರಿಂದ ಔಷಧಿ ಬೇಗ ಹಾಳಾಗುವ ಸಾಧ್ಯತೆಗಳಿರುವುದರಿಂದ ಕಡಿಮೆ ಜನರು ಈರುಳ್ಳಿಯನ್ನು ಬಳಸುತ್ತಾರೆ.
===ಉಪಯುಕ್ತತೆ===
ಈ ಸಂದರ್ಭದಲ್ಲಿ ಬಾಣಂತಿಯರು ಅತ್ಯಂತ ಸೂಕ್ಷ್ಮ ಕಾಯದವರಾಗಿರುವುದರಿಂದ ತಮ್ಮ ಬಾಣಂತನದ ಕಾಲದಲ್ಲಿ ಶೀತ, ಜ್ವರ ಹಾಗೂ ಇನ್ನಿತರ ಕಾಯಿಲೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಹಿಂದಿನ ಕಾಲದಲ್ಲಿ ಹಿರಿಯರು ಈ ಔಷಧಿಯನ್ನು ಎಲ್ಲ ಬಾಣಂತಿಯರಿಗೂ ನಾಲ್ಕರಿಂದ ಐದು ಚಮಚ ಪ್ರತಿದಿನ ನೀಡುವ ಪದ್ಧತಿಯನ್ನು ರೂಢಿಸಿಕೊಂಡಿದ್ದರು. ಆದರೆ ಆಧುನಿಕ ಕಾಲದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಹಾಗಾಗಿ ಮಾತ್ರೆ ಔಷಧಿಗಳನ್ನು ನೀಡಲಾಗುತ್ತದೆ. ಆದರೆ ಹಲವಾರು ಜನರು ಮಾತ್ರೆಗಳನ್ನು ನೀಡಿಯೂ ಸ್ವಲ್ಪ ಪ್ರಮಾಣದಲ್ಲಿ ಈ ವಿಧವಾದ ಔಷಧಿಯನ್ನು ಬಳಸುತ್ತಿದ್ದಾರೆ. ಯಾವುದೇ ವಿಧವಾದ ಅಡ್ಡಪರಿಣಾಮಗಳಿಲ್ಲದೆ ನೈಸರ್ಗಿಕ ಹಾಗೂ ಅತ್ಯಂತ ಸುಲಭವಾಗಿ ತಯಾರಿಸಬಹುದಾದ ಔಷಧಿ ಇದಾದ್ದರಿಂದ ಇದನ್ನು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಮಾಡಲಾಗುತ್ತದೆ. ಕೆಲವು ಬಾಣಂತಿಯರು ಹೆರಿಗೆಯ ಬಳಿಕ ಎದುರಿಸುವ ಕಾಯಿಲೆಗಳಷ್ಟೇ ಅಲ್ಲದೆ ಅವರು ಎದುರಿಸುವ ಎದೆಹಾಲಿನ ಸಮಸ್ಯೆಯ ಪರಿಹಾರಕ್ಕೂ ಕೂಡ ಇದು ಪರಿಹಾರವಾಗಿದೆ. ಇದರ ಸೇವನೆಯಿಂದ ತಾಯಿಯಲ್ಲಿ ಎದೆ ಹಾಲಿನ ಪ್ರಮಾಣ ವೃದ್ಧಿಯಾಗಿ ಆ ಮೂಲಕ ಮಗುವಿನ ಆರೋಗ್ಯದ ಬೆಳವಣಿಗೆ ಹಾಗೂ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಹಾಲು ಸಿಕ್ಕಿ ಮಕ್ಕಳು ಅಪೌಷ್ಟಿಕತೆಯ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವಲ್ಲಿ ಔಷಧಿಯು ಸಹಾಯವಾಗುತ್ತದೆ. ಇಂದಿಗೂ ಕೂಡ ಹಲವಾರು ಹಳ್ಳಿಗಳಲ್ಲಿ ಈ ವಿಧವಾದ ವಿಭಿನ್ನ ಔಷಧಿಯ ಕ್ರಮವನ್ನು ಅತಿ ಹೆಚ್ಚು ಬಳಸುವುದನ್ನು ಕಾಣಬಹುದಾಗಿದೆ.
ಇದು ಬಾಣಂತಿಯರಿಗೆಂದು ಮಾಡುವ ಔಷಧಿ ಎನಿಸಿಕೊಂಡಿದ್ದರೂ ಅವರಿಗೆ ಮಾತ್ರ ಇದು ಸೀಮಿತವಾದ ಔಷಧಿ ಅಲ್ಲ. ಬದಲಾಗಿ ಯಾರು ಬೇಕಾದರೂ ಯಾವುದೇ ವಯೋಮಿತಿಯವರು ಬೇಕಾದರೂ ಇದನ್ನು ಸೇವಿಸಬಹುದಾಗಿದೆ. ಇದು ಮಳೆಗಾಲದ ಸಂದರ್ಭದಲ್ಲಿ ಎದುರಾಗುವ ಶೀತ, ಕೆಮ್ಮು, ಜ್ವರ ಸೇರಿದಂತೆ ಹಲವಾರು ಕಾಯಿಲೆಗಳ ಪರಿಹಾರಕ್ಕೆ ಸಿದ್ಧ ಔಷಧಿಯಾಗಿದೆ. ನಿಗದಿತ ಪ್ರಮಾಣದಲ್ಲಿ ನೈಸರ್ಗಿಕ ಔಷಧೀಯ ವಸ್ತುಗಳಿಂದ ತಯಾರಿಸಲಾಗುವ ಈ ಔಷಧಿಯನ್ನು ನಿಗದಿತ ಪ್ರಮಾಣದಲ್ಲಿ ತಿನ್ನಬಹುದು ಅತಿಯಾಗಿ ತಿಂದರೆ ತೀವ್ರತರವಾದ ಯಾವುದೇ ಸಮಸ್ಯೆಗಳು ಬಾಧಿಸುವುದಿಲ್ಲ. ಆದರೆ ಒಂದಷ್ಟು ಖಾರದ ಅಂಶ ಇರುವುದರಿಂದ ಹೊಟ್ಟೆ ಉರಿಯಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ನಿಗದಿತ ಪ್ರಮಾಣದಲ್ಲಿ ತಿನ್ನುವುದರಿಂದ ಆರೋಗ್ಯಪೂರ್ಣವಾದ ಶರೀರವನ್ನು ಹೊಂದಲು ಈ ಔಷಧಿಯು ಬಹಳಷ್ಟು ಉಪಕಾರಿಯಾಗಿ ಇರುತ್ತದೆ.
===ಉಲ್ಲೇಖಗಳು===
"https://kn.wikipedia.org/wiki/ಚೈ" ಇಂದ ಪಡೆಯಲ್ಪಟ್ಟಿದೆ