ಸದಸ್ಯ:Skanda K N/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಸಾಧನೆ
No edit summary
೪ ನೇ ಸಾಲು:
ಮನೋವಿಜ್ಞಾನದ ಪ್ರಾಧ್ಯಾಪಕರಾಗಿ, ಮಹಾರಾಜ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಗೋಪಾಲಸ್ವಾಮಿಯವರು ಶಿಕ್ಷಣ ಕ್ಷೇತ್ರದಲ್ಲೂ ವಿಶಿಷ್ಟ ಛಾಪು ಮೂಡಿಸಿದ ವ್ಯಕ್ತಿ. ಡಾ.ಎಂ.ವಿ.ಗೋಪಾಲಸ್ವಾಮಿಯವರು ತಮ್ಮ ಮೊದಲ ಶಿಕ್ಷಣವನ್ನು ಮದ್ರಾಸಿನಲ್ಲಿ ಮುಗಿಸಿ, ಲಂಡನ್ನಿನಲ್ಲಿ ಪ್ರಖ್ಯಾತ ಮನಶಾಸ್ತ್ರಜ್ಞ  ಡಾ. ಸ್ಪಿಯರ್‌ಮನ್ ಅವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪಡೆದರು. ದೇಶಪ್ರೇಮ ಮತ್ತು ಮಾತೃಭೂಮಿಯೆಡೆಗಿನ ಆಕರ್ಷಣೆ ಅವರನ್ನು ಮೈಸೂರು ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ವಿಭಾಗದ ಪ್ರೊಫೆಸರ್ ಹುದ್ದೆಗೆ ಬರುವಂತೆ ಮಾಡಿತು. ಅನಂತರ ಅವರು ಪ್ರಾಯೋಗಿಕ ಮನಶಾಸ್ತ್ರ ವಿಭಾಗನ್ನು ಆರಂಭಿಸಿ, ಇದು ದೇಶಾದ್ಯಂತ ಹೆಸರುವಾಸಿಯಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿ ಅದರ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಅವರ ಕ್ರಿಯಾಶೀಲತೆಯು ವಿಶ್ವವಿದ್ಯಾನಿಲಯ ಪರಿಸರದ ಹೊರಗೂ ವಿವಿಧ ಕ್ಷೇತ್ರಗಳಲ್ಲಿ ಅಭಿವ್ಯಕ್ತಿ ಪಡೆಯಿತು. ಡಾ.ಎಂ.ವಿ.ಗೊಪಾಲಸ್ವಾಮಿಯವರ ಆದರ್ಶಗಳು ಮಹೋನ್ನತವಾಗಿದ್ದವು. ಶಿಶುಗಳಾಗಿರುವಾಗಲೇ ಶಿಕ್ಷಣ ನೀಡಿ ಸತ್ಪ್ರಜೆಗಳನ್ನಾಗಿಸಬಹುದೆಂಬ ತಮ್ಮ ಕನಸನ್ನು ನನಸಾಗಿಸಲು ಶಿಶುವಿಹಾರವನ್ನು ಪ್ರಾರಂಭಿಸಿದರು. ಶಿಶುವಿಹಾರದಲ್ಲಿ ಡಾ. ಎಂ.ವಿ.ಗೋಪಾಲಸ್ವಾಮಿಯವರು ಹಚ್ಚಿದ ಜ್ಞಾನದೀಪ ಇನ್ನೂ ಬೆಳಗುತ್ತಿದೆ. ಡಾ.ಎಂ.ವಿ.ಗೋಪಾಲಸ್ವಾಮಿಯವರ ಎಂಬತ್ತನೆಯ ವರ್ಷದ ಸಂದರ್ಭದಲ್ಲಿ ಅವರ ಹೆಸರಿನಲ್ಲೇ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳನ್ನು ಆರಂಭಿಸಲಾಗಿದೆ. ಸ್ವಾತಂತ್ರ‍್ಯ ಪೂರ್ವದ ದಶಕಗಳಲ್ಲಿ ಶಿಕ್ಷಣ ಹಾಗೂ ಜನಸೇವೆಯಲ್ಲಿ ಹೆಸರಾದ ಡಾ.ಎಂ.ವಿ. ಗೋಪಾಲಸ್ವಾಮಿಯವರಿಗೆ ಸ್ಮಾರಕಪ್ರಾಯವಾಗಿ ಗೋಪಾಲಸ್ವಾಮಿ ಶಿಶು ವಿಹಾರ ಶಿಕ್ಷಣ ಸಂಸ್ಥೆಗಳು ನಡೆಯುತ್ತಿವೆ.
 
<nowiki>=== ಸಾಧನೆ ===</nowiki>
 
೧. ಆಕಾಶವಾಣಿ : ತಮ್ಮ ಮನೆಯಲ್ಲಿ ೧೯೫೨ರಲ್ಲಿ ಆಕಾಶವಾಣಿಯನ್ನು ಪ್ರಾರಂಭಿಸಿದರು. ೨. ಶಿಶುವಿಹಾರ : ೧೯೨೮ರಲ್ಲಿ ಹೊಸ ಮಾದರಿಯ ಶಿಕ್ಷಣ ನೀಡುವ ಉದ್ದೇಶದೊಂದಿಗೆ ನೂತನ ಪರಿಕಲ್ಪನೆಯೊಂದಿಗೆ ಶಿಶುವಿಹಾರವನ್ನು ಆರಂಭಿಸಿದರು. ೩. ಬಹು ಆಯ್ಕೆಯ ಪ್ರಶ್ನೆಗಳು : ಪರೀಕ್ಷಾ ವ್ಯವಸ್ಥೆಯಲ್ಲಿ ನವೀನ ಮಾದರಿ ಪ್ರಶ್ನೆಗಳನ್ನು ಸೇರಿಸುವ ಸಲುವಾಗಿ ಬಹು ಆಯ್ಕೆ ಪ್ರಶ್ನೆಗಳನ್ನು ಪರಿಚಯಿಸಿದರು. ೪. ನಿಮ್ಹಾನ್ಸ್ : ಮೈಸೂರು ವಿಶ್ವವಿದ್ಯಾನಿಲಯದಿಂದ ನಿವೃತ್ತರಾದ ಬಳಿಕ ಬೆಂಗಳೂರು ಹುಚ್ಚಾಸ್ಪತ್ರೆಯಲ್ಲಿ ಮನಶಾಸ್ತ್ರ, ಸಂಶೋಧನಾ ವಿಭಾಗ ಆರಂಭಿಸಿ ಅದು ಸುಪ್ರಸಿದ್ದ ಚಿಕಿತ್ಸಾ ಸಂಶೋಧನಾ ಸಂಸ್ಥೆಯಾಗಿ ಹೆಸರು ಮಾಡುವಂತೆ ಬೆಳೆಸಿದರು.