ಕೊಲ್ಕತ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಕೊಲ್ಕತ್ತಕೊಲ್ಕಾತಾ''' [[ಪಶ್ಚಿಮ ಬಂಗಾಳ]] ರಾಜ್ಯದ ರಾಜಧಾನಿ , ಭಾರತದ ಪ್ರಧಾನ ನಗರ, ಮಹಾವಾಣಿಜ್ಯಕೇಂದ್ರ, ಸಂಸ್ಕೃತಿ ರಂಗ. . [[೧೯೧೧|೧೯೧೧ಕ್ಕೆ]] ಮೊದಲು ಬ್ರಿಟಿಷರ ಆಳ್ವಿಕೆಯಲ್ಲಿ 1773ರಿಂದ 1912ರ ವರೆಗೆ-ಭಾರತಕ್ಕೂ 1947ರ ವರೆಗೆ ಬಂಗಾಳಕ್ಕೂ ರಾಜಧಾನಿಯಾಗಿತ್ತು. ಕಲ್ಕತ್ತ ಇದರ ಹಿಂದಿನ ಹೆಸರು
 
 
 
{{Infobox ಭಾರತದ ಭೂಪಟ
|native_name = ಕೊಲ್ಕತ್ತಕೊಲ್ಕಾತಾ <br/> কলকাতা<br/>कोलकाता
|type = metropolitan city
|type_2 = capital
೪೫ ನೇ ಸಾಲು:
ಕಲ್ಕತ್ತದ ಅತ್ಯಂತ ಪ್ರಸಿದ್ಧ ಸ್ಥಳವೆಂದರೆ ವೈದಾನ. ಇದರ ವಿಸ್ತೀರ್ಣ 1,238 ಎಕರೆ. ಫೋರ್ಟ್ ಮಿಲಿಯಂ (ಕೋಟೆ) ಇದರ ಪಶ್ಚಿಮಕ್ಕೆ ಹೂಗ್ಲಿಗೆದುರಾಗಿ ನಿಂತಿದೆ. ಸುಮಾರು 10,000 ಸೈನಿಕರು ಇರಬಹುದಾದ ಈ ಕೋಟೆ ಸ್ಥೂಲವಾಗಿ ಅಷ್ಟ ಕೋನಾಕೃತಿಯಲ್ಲಿದೆ. ಇದು ಕಲ್ಕತ್ತ ನಗರದ ಕೇಂದ್ರಸ್ಥಳವೆನ್ನಬಹುದು. ವಿಕ್ಟೋರಿಯ ಸ್ಮಾರಕಭವನ ಕಲ್ಕತ್ತದ ಅತ್ಯಂತ ಸುಂದರವಾದ ಕಟ್ಟಡ. ಇದು ಕುದುರೆ ಪಂದ್ಯ ಸ್ಥಳಕ್ಕೆ ಕೂಡಿದಂತಿರುವ ಮೈದಾನದ ಆಗ್ನೇಯಕ್ಕಿದೆ. ಇಲ್ಲೊಂದು ಚಿತ್ರಾಲಯವೂ ವಸ್ತುಸಂಗ್ರಹಾಲಯವೂ ಇವೆ. ಸೇಂಟ್ ಪಾಲನ ಕೆಥೆಡ್ರಲ್ ಇಂಡೊ-ಗಾಥಿಕ್ ಶೈಲಿಯ ಕಟ್ಟಡ. ಇದನ್ನು 1839-41ರಲ್ಲಿ ನಿರ್ಮಿಸಲಾಯಿತು. ಈಡನ್ ತೋಟ ಕಲ್ಕತ್ತದ ಇನ್ನೊಂದು ಚೆಲುವುದಾಣ. ಆಕಾಶವಾಣಿ ಕಟ್ಟಡವೂ ರಣಜಿ ಕ್ರೀಡಾಂಗಣವೂ ಇಲ್ಲಿವೆ. ರಾಜಭವನ, ವಿಧಾನ ಸಭಾಭವನ, ಉಚ್ಚ ನ್ಯಾಯಾಲಯ, ಪುರಭವನ ಇವು ಇತರ ಮುಖ್ಯ ಕಟ್ಟಡಗಳು. ಪುರಭವನವನ್ನು ಕಟ್ಟಲಾದದ್ದು 1813ರಲ್ಲಿ. ಅರಮನೆಗಳಂಥ ಸೌಧಗಳಿರುವಂಥ ಚೌರಿಂಘಿ ಒಮ್ಮೆ ಶ್ರೀಮಂತರ ವಾಸಸ್ಥಳವಾಗಿತ್ತು. ಈಗ ಅಲ್ಲಿ ಹೋಟಲುಗಳೂ ಅಂಗಡಿಗಳೂ ಕಚೇರಿಗಳೂ ವಸ್ತುಸಂಗ್ರಹಾಲಯಗಳೂ ಇವೆ. ಸುಪ್ರಸಿದ್ಧವಾದ ಭಾರತೀಯ ವಸ್ತುಸಂಗ್ರಹಾಲಯ (ಇಂಡಿಯನ್ ಮ್ಯೂಸಿಯಂ) ಇರುವುದು ಅಲ್ಲಿ.
 
ಇತರ ಮುಖ್ಯ ಸ್ಥಳಗಳೆಂದರೆ ಹೌರಾ ಸೇತುವೆ - ಹೌರಾ ರೈಲುನಿಲ್ದಾಣದಿಂದ ಹೊರಬಂದು ಅಲ್ಲಿಂದ ಕಣ್ಣು ಹಾಯಿಸಿದರೆ ಎಡಗಡೆ ಕಣ್ಣಳತೆಯ ದೂರದಲ್ಲೇ ಹೌರಾ ಸೇತುವೆ ಕಂಡುಬರುತ್ತದೆ; [[ವಿವೇಕಾನಂದ|ವಿವೇಕಾನಂದರ]] ದೀಕ್ಷಾಸ್ಥಳ ಹಾಗೂ ನಿವಾಸವಿರುವ ಬೇಲೂರುಮಠ, [[ರಾಮಕೃಷ್ಣ ಪರಮಹಂಸ|ರಾಮಕೃಷ್ಣ ಪರಮಹಂಸರ]] ಕ್ಷೇತ್ರವಾದ ದಕ್ಷಿಣೇಶ್ವರ, ರವೀಂದ್ರಸೇತು ಎಂಬ ಕೇಬಲ್ ಸೇತುವೆ, ಅಮೆರಿಕಾದ ವೈಟ್ ಹೌಸ್ ಪ್ರತಿರೂಪವಾದ [[ವಿಕ್ಟೋರಿಯಾ ಹಾಲ್]], [[ಈಜಿಪ್ಟ್]] ಮಮ್ಮಿಯನ್ನು ಇಟ್ಟಿರುವ ಇಂಡಿಯಾ ಮ್ಯೂಸಿಯಂ, ಪುರಾತನ ಸಂತ ಪೌಲನ ಚರ್ಚ್, ಕೊಲ್ಕತ್ತಕೊಲ್ಕಾತಾ ಎಂಬ ಹೆಸರು ಬರಲು ಕಾರಣವಾದ ಕಾಳಿಘಾಟ್ ಬಳಿಯ ಕಾಳಿಗುಡಿ, ಪುಟ್ಟ ಪುಟ್ಟ ಕನ್ನಡಿಗಳಿಂದ ಕಟ್ಟಲಾದ ಜೈನಗುಡಿ, ಇಂಡಿಯಾದ ಪ್ರಪ್ರಥಮ ತ್ವರಿತಸಾರಿಗೆ ವ್ಯವಸ್ಥೆಯಾದ ಮೆಟ್ರೋ ಸುರಂಗರೈಲು, ರಸ್ತೆ ಮೇಲಿನ ರೈಲು ಹಳಿಯ ಟ್ರ್ಯಾಮ್‌ಕಾರ್, ಕೂಲಿಗಳು ಎಳೆದುಕೊಂಡು ಓಡುತ್ತಾ ಸಾಗುವ ಕೈ ರಿಕ್ಷಾ, ಧರ್ಮತಲ (ಈಗಿನ ಎಸ್ಪ್ಲಾನೆಡ್ ), ಸೈನ್ಸ್ ಮ್ಯೂಸಿಯಂ, ಮೃಗಾಲಯ ಇತ್ಯಾದಿಗಳು.
 
ಕಲ್ಕತ್ತದ ಹೃದಯ ಸ್ಥಾನ ವಾಣಿಜ್ಯ ಪ್ರಧಾನವಾದದ್ದು . ನಗರದ ವಾಣಿಜ್ಯ ಸಂಸ್ಥೆಗಳೂ ಆಡಳಿತ ಕಚೇರಿಗಳೂ ರಾಜಭವನದ ಉತ್ತರಕ್ಕೆ ಡಾಲ್ ಹೌಸಿ ಚೌಕದ ಸುತ್ತ ಗೊಂಚಲುಗೊಂಚಲಾಗಿವೆ. ಪಶ್ಚಿಮ ಬರಾಳಗಾ ಸರ್ಕಾರದ ಆಡಳಿತ ಕಚೇರಿ ಇಲ್ಲಿದೆ. ನೇತಾಜಿ ಸುಭಾಷ್ ರಸ್ತೆಯ ಉದ್ದಕೂ ಕಲ್ಕತ್ತದ ಅನೇಕ ಮುಖ್ಯವಾಣಿಜ್ಯ ಸಂಸ್ಥೆಗಳಿವೆ. ನಖುದಾ ಮಸೀದಿ, ಮಹಾಜಾತಿ ಸದನ, ಅಮೃತಶಿಲೆಯ ಅರಮನೆ ಇವು ಮಧ್ಯ ಕಲ್ಕತ್ತದ ಮುಖ್ಯ ಕಟ್ಟಡಗಳು. ಶಿಕ್ಷಣ ಸಂಸ್ಥೆಗಳಿರುವುದು ಉತ್ತರ ಕಲ್ಕತ್ತದಲ್ಲಿ. ಕಲ್ಕತ್ತ ವಿಶ್ವವಿದ್ಯಾಲಯ ಅಲ್ಲಿದೆ. ಉತ್ತರದ ಉಪನಗರಗಳಾದ ಕಾಸಿಪುರ ಚಿತ್ಪುರಗಳಲ್ಲಿ ಸಣಬು ಒತ್ತುವ, ಹತ್ತಿ ಹಿಂಜುವ ಕಾರ್ಖಾನೆಗಳಿವೆ. ಪೂರ್ವದ ಉಪನಗರವಾದ ಮಣಿಕ್ ತಲದ ಬಳಿಯ ಜೈನಮಂದಿರ ಅತ್ಯಂತ ಪ್ರಸಿದ್ಧವಾದದ್ದು. ಈ ಕಡೆಯಲ್ಲಿ ಅನೇಕ ಕಾರ್ಖಾನೆಗಳೂ ಗಿರಣಿಗಳೂ ಇವೆ. ಪ್ರಾಣಿವನವೂ ಸಸ್ಯಶಾಸ್ತ್ರೀಯ ಉದ್ಯಾನವೂ ಇರುವುದು ಆಲಿಪುರದಲ್ಲಿ. ರಾಷ್ಟೀಯ ಗ್ರಂಥಾಲಯವೂ ಅಲ್ಲೇ ಇದೆ. ಭವಾನಿಪುರ ದಕ್ಷಿಣದ ಅತ್ಯಂತ ಜನನಿಬಿಡ ಪ್ರದೇಶ.
೫೨ ನೇ ಸಾಲು:
 
==ಇಲ್ಲಿನ ದುರ್ಗಾಪೂಜೆ==
ದಸರೆಯನ್ನು ಇಲ್ಲಿ ದುರ್ಗಾ ಪೂಜೆ ಎಂದು ವೈಭದಿದಂದ ಆಚರಿಸುತ್ತಾರೆ . ಈ ವೇಳೆಯಲ್ಲಂತೂ ಕೊಲ್ಕತ್ತಕೊಲ್ಕಾತಾ ನೋಡಲು ತುಂಬಾ ಚೆನ್ನಾಗಿರುತ್ತದೆ. ಆ ದಿನಗಳಲ್ಲಿ ಈ ನಗರವು ಮಲಗುವುದೇ ಇಲ್ಲ. ನಗರದ ತುಂಬಾ ಜನವೋ ಜನ. ಎಲ್ಲಿ ನೋಡಿದರಲ್ಲಿ ಬಣ್ಣಬಣ್ಣದ ದೀಪಾಲಂಕಾರ, ಸುಂದರವಾದ ಮಂಟಪಗಳಲ್ಲಿ ಮನೋಹರವಾದ ದುರ್ಗೆಯ ಮೂರ್ತಿಗಳು, ತಳಿರುತೋರಣ, ಸಂತಸದ ಕಳೆಯಿಂದ ನಗುನಗುತ್ತಾ ವ್ಯವಹರಿಸುವ ಜನಜಂಗುಳಿ, ಸರ್ವವಸ್ತುಗಳಿಂದ ತುಂಬಿದ ವ್ಯಾಪಾರಮಳಿಗೆಗಳು ನೋಡುಗರ ಕಣ್ಮನ ತುಂಬುತ್ತವೆ.
 
== ಕೈಗಾರಿಕೆಗಳು ==
"https://kn.wikipedia.org/wiki/ಕೊಲ್ಕತ್ತ" ಇಂದ ಪಡೆಯಲ್ಪಟ್ಟಿದೆ