"ಆಲ್ಕಲಾಯ್ಡ್‌ಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Bot: Migrating 1 langlinks, now provided by Wikidata on d:q70702; 1 langlinks remaining
ಚು (Bot: Migrating 1 langlinks, now provided by Wikidata on d:q70702; 1 langlinks remaining)
 
==ಗುಣಲಕ್ಷಣ==
1804ರಲ್ಲಿ ಸಸ್ಯವೊಂದರಿಂದ ಮಾರ್ಫಿನ್ ಸಂಯುಕ್ತವನ್ನು ಬೇರ್ಪಡಿಸಿದ ದಿನ ಆಲ್ಕಲಾಯ್ಡ್ ಯುಗದ ಆರಂಭವಾಯಿತು ಎನ್ನಬಹುದು. ದೈಹಿಕ ಕ್ರಿಯೆಗಳ ಮೇಲೆ ಪರಿಣಾಮಗಳನ್ನು ಉಂಟುಮಾಡಬಲ್ಲ ಸಸ್ಯ ಜನ್ಯ ಪ್ರತ್ಯಾಮ್ಲೀಯ (ಬೇಸಿಕ್) ನೈಟ್ರೊಜನ್‍ಸಂಯುಕ್ತಗಳನ್ನು ಆಲ್ಕಲಾಯ್ಡ್‍ಗಳೆಂದು ಕರೆಯಲು 1818ರಲ್ಲಿ ತೀರ್ಮಾನಿಸಲಾಯಿತು. ಅಮೈನೋ ಆಮ್ಲಗಳು ಮತ್ತು ಪ್ರೋಟೀನ್‍ಗಳು ಸಸ್ಯಗಳಲ್ಲಿದ್ದರೂ ಅವು ಆಲ್ಕಲಾಯ್ಡ್‍ಗಳನ್ನು ಸಮೂಹಕ್ಕೆ ಸೇರುವುದಿಲ್ಲ. ಮಾರ್ಫೀನಿನ ಮೊದಲ ತಯಾರಿಕೆಯ ದಿನದಿಂದ ಇಂದಿನವರೆಗೆ ನೂರಕ್ಕೆ ಮೇಲ್ಪಟ್ಟ ಸಸ್ಯವರ್ಗಗಳಿಂದ ಸಾವಿರಾರು ಆಲ್ಕಲಾಯ್ಡ್‍ಗಳನ್ನು ಬೇರ್ಪಡಿಸಲಾಗಿದೆ. ಈ ಸಂಯುಕ್ತಗಳು ಜೈವಿಕ ಕ್ರಿಯೆಗಳ (ಬಯಲಾಜಿಕಲ್ ರಿಯಾಕ್ಷನ್ಸ್) ಮೇಲೆ ಪರಿಣಾಮ ಬೀರಬಲ್ಲವು. ಆದ್ದರಿಂದ ಅವುಗಳ ಪ್ರಾಮುಖ್ಯ ಹೆಚ್ಚು. ಬಲು ಪುರಾತನ ಕಾಲದಿಂದಲೂ ಜನರು ಸಸ್ಯಗಳ ಎಲೆ, ಬೇರು, ತೊಗಟೆ, ಬೀಜ ಮೊದಲಾದುವುಗಳ ಕಷಾಯ ಮತ್ತು ಪುಡಿಗಳನ್ನು ಔಷಧ ಅಥವಾ ವಿಷವಸ್ತುಗಳಾಗಿ ಉಪಯೋಗಿಸುತ್ತಲೇ ಇದ್ದಾರೆ. ಬಲುಮಟ್ಟಿಗೆ ಈ ಔಷಧೀಯ ಮತ್ತು ವಿಷ ಗುಣಗಳಿಗೆ ಸಸ್ಯಗಳಲ್ಲಿರುವ ಆಲ್ಕಲಾಯ್ಡ್‍ಗಳೇ ಕಾರಣವೆಂದು ಇಂದು ನಮಗೆ ತಿಳಿದಿದೆ.<ref>https://books.google.com/books?id=MtOiLVWBn8cC&pg=PA20</ref>
[[en:Alkaloid]]
ಸಾಮಾನ್ಯವಾಗಿ ದ್ವಿದಳ ಬೀಜಗಳನ್ನು ನೀಡುವ ಉಚ್ಚ ದರ್ಜೆಯ ಗಿಡಮರಗಳಲ್ಲಿ ಆಲ್ಕಲಾಯ್ಡ್‍ಗಳು ಹೆಚ್ಚಿನ ಪರಿಣಾಮದಲ್ಲಿರುವುದು ಕಂಡುಬಂದಿದೆ. ಹೂ, ಬೀಜ ಬಿಡದ ಕೀಳ್ಮಟ್ಟದ ಸಸ್ಯಗಳಲ್ಲಿ ಆಲ್ಕಲಾಯ್ಡ್‍ಗಳನ್ನು ಗುರುತಿಸಿಲ್ಲ. ಎರ್ಗಾಟ್ ಗುಂಪಿನ ಆಲ್ಕಲಾಯ್ಡ್‍ಗಳು ಈ ಸಾಮಾನ್ಯ ನಿಯಮಗಳಿಗೆ ಒಂದು ಮುಖ್ಯ ಅಪವಾದ. ಅವು ಚಿಟ್ಟಗೋದಿ (ರೈ) ಮೇಲೆ ಬೆಳೆಯುವ ಕೀಳ್ತರಗತಿಯ ಸಸ್ಯವಾದ ಬೊಸ್ಟಿನಲ್ಲಿ ದೊರೆಯುತ್ತವೆ. ಪರಸ್ಪರ ಸಂಬಂಧಿಸಿದ ಸಸ್ಯವರ್ಗಗಳಿಂದ ದೊರೆಯುವ ಆಲ್ಕಲಾಯ್ಡ್‍ಗಳಲ್ಲಿ ರಚನಾಸಾಮ್ಯತೆ (ಸ್ಟ್ರಕ್ಚರಲ್ ಸಿಮಿಲಾರಿಟಿ) ಮತ್ತು ಸಂಬಂಧ ಇವೆ.
==ಸಸ್ಯಗಳಲ್ಲಿನ ಪ್ರಮಾಣ==
೫೩೬

edits

"https://kn.wikipedia.org/wiki/ವಿಶೇಷ:MobileDiff/969411" ಇಂದ ಪಡೆಯಲ್ಪಟ್ಟಿದೆ