ಕ್ಲಾಡಿಯಸ್ ಟಾಲೆಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
from english Ptolemy wikipedia part transalation
೨ ನೇ ಸಾಲು:
 
ಅವನು ಹಲವು ವೈಜ್ಞಾನಿಕ ಗ್ರಂಥಗಳನ್ನು ಬರೆದನು. ಅವುಗಳಲ್ಲಿ ಪ್ರಸಿದ್ಧವಾದದ್ದು [[ಆಲ್ಮಜೆಸ್ಟ್]]. ಅಲ್ಲದೆ ಅವನು ಬರೆದ ಇನ್ನಿತರ ಗ್ರಂಥಗಳಲ್ಲಿ ಮುಖ್ಯವಾದವು ಭೂಗೋಳಶಾಸ್ತ್ರ ಮತ್ತು ಜ್ಯೋತಿಷ್ಯ ಗ್ರಂಥ. ಭೂಗೋಳಶಾಸ್ತ್ರದಲ್ಲಿ ಅವನು ಗ್ರೀಕೋ-ರೋಮನ್ ಪ್ರಪಂಚದ ಅಂದಿನ ಭೂಗೋಳದ ಜ್ಞಾನವನ್ನು ಸಮಗ್ರ ಚರ್ಚಿಸಿದ್ದಾನೆ. ಜ್ಯೋತಿಷ್ಯ ಗ್ರಂಥದಲ್ಲಿ ಅವನು ಜಾತಕ ಜ್ಯೋತಿಷ್ಯವನ್ನು ತನ್ನ ದಿನದ ಅರಿಸ್ಟಾಟಲ್ ನೈಸರ್ಗಿಕ ತತ್ತ್ವಶಾಸ್ತ್ರಕ್ಕೆ ಹೊಂದಿಸಲು ಪ್ರಯತ್ನಿಸಿದನು.
 
==ಖಗೋಳವಿಜ್ಞಾನ ==
[[File:Ptolemy 1476 with armillary sphere model.jpg|thumb|ಆರ್ಮಿಲರಿ ಗೋಳದ ಮಾದರಿಯೊಂದಿಗೆ ಟಾಲೆಮಿ, ಜೂಸ್ ವ್ಯಾನ್ ಘೆಂಟ್ ಮತ್ತು ಪೆಡ್ರೊ ಬೆರುಗುಯೆಟ್‌ರ ಚಿತ್ರ , 1476, ಲೌವ್ರೆ , ಪ್ಯಾರಿಸ್]]
ಟಾಲೆಮಿಯ [[ಆಲ್ಮಜೆಸ್ಟ್]] ಖಗೋಳಶಾಸ್ತ್ರದ ಬಗ್ಗೆ ಉಳಿದಿರುವ ಏಕೈಕ ಪ್ರಾಚೀನ ಗ್ರಂಥವಾಗಿದೆ. ಬ್ಯಾಬಿಲೋನಿಯನ್ ಖಗೋಳಶಾಸ್ತ್ರಜ್ಞರು ಖಗೋಳ ವಿದ್ಯಮಾನಗಳನ್ನು ಲೆಕ್ಕಾಚಾರ ಮಾಡಲು ಅಂಕಗಣಿತದ ತಂತ್ರಗಳನ್ನು ಅಭಿವೃದ್ಧಿಪಡಿಸಿದ್ದರು; ಹಿಪ್ಪಾರ್ಕಸ್‌ನಂತಹ ಗ್ರೀಕ್ ಖಗೋಳಶಾಸ್ತ್ರಜ್ಞರು ಆಕಾಶ ಚಲನೆಯನ್ನು ಲೆಕ್ಕಾಚಾರ ಮಾಡಲು ಜ್ಯಾಮಿತೀಯ ಮಾದರಿಗಳನ್ನು ತಯಾರಿಸಿದ್ದರು. ಆದಾಗ್ಯೂ, ಟಾಲೆಮಿ ತನ್ನ ಜ್ಯಾಮಿತೀಯ ಮಾದರಿಗಳನ್ನು ತನ್ನ ಪೂರ್ವಸೂರಿಗಳು 800 ವರ್ಷಗಳಿಗಿಂತ ಹಿಂದಿನ ಆಯ್ದ ಖಗೋಳ ವೀಕ್ಷಣೆಗಳಿಂದ ಪಡೆದಿದ್ದೇನೆಂದು ಹೇಳಿಕೊಂಡಿದ್ದಾನೆ. ಆದರೆ ಖಗೋಳವೇತ್ತರು ಅವನು ಸಿದ್ಧಪಡಿಸಿದ ಮಾದರಿಯು ಅವಲೋಕನಗಳಿಂದ ಸ್ವತಂತ್ರವಾಗಿತ್ತು ಎಂದು ಹಲವು ಶತಮಾನಗಳ ಹಿಂದಿನಿಂದಿಲೂ ಶಂಕಿಸಿದ್ದಾರೆ. <ref>{{cite web|url=http://www.dioi.org/cot.htm#mjpg|title=Dennis Rawlins|publisher=The International Journal of Scientific History|accessdate=2009-10-07}}</ref> ಟಾಲೆಮಿ ತನ್ನ ಖಗೋಳ ಮಾದರಿಗಳನ್ನು ಕೋಷ್ಟಕಗಳಲ್ಲಿ ಪ್ರಸ್ತುತಪಡಿಸಿದನು. ಈ ಕೋಷ್ಟಕಗಳನ್ನು ಬಳಸಿ ಭವಿಷ್ಯದ ಅಥವಾ ಹಿಂದಿನ ಕಾಲದಲ್ಲಿ ಗ್ರಹಗಳ ಸ್ಥಾನವನ್ನು ಲೆಕ್ಕಾಚಾರ ಮಾಡಲು ಬಳಸಬಹುದು. <ref>{{cite journal |first=Bernard R. |last=Goldstein |title=Saving the Phenomena: The Background to Ptolemy's Planetary Theory |journal=Journal for the History of Astronomy |volume=28 |issue=1 |year=1997 |pages=1–12 |doi=10.1177/002182869702800101 |bibcode=1997JHA....28....1G }}</ref> ಆಲ್ಮಜೆಸ್ಟ್ ''ನಕ್ಷತ್ರಗಳ ಪಟ್ಟಿ'' ಅಥವಾ ಕ್ಯಾಟಲಾಗ್ ಅನ್ನು ಸಹ ಹೊಂದಿದೆ. ಇದು ಹಿಪ್ಪಾರ್ಕಸ್ ರಚಿಸಿದ ಕ್ಯಾಟಲಾಗ್‌ನ ಆವೃತ್ತಿಯಾಗಿದ್ದು, ಇದು ನಲವತ್ತೆಂಟು ನಕ್ಷತ್ರಪುಂಜಗಳನ್ನು ಒಳಗೊಂಡಿದೆ. ಇದು ಆಧುನಿಕ ನಕ್ಷತ್ರಪುಂಜಗಳ ಪಟ್ಟಿಗೆ ಪೂರ್ವಸೂರಿ. ಆದರೆ ಆಧುನಿಕ ವ್ಯವಸ್ಥೆಯಂತೆ ಇದು ಇಡೀ ಆಕಾಶವನ್ನು ಆವರಿಸಿರಲಿಲ್ಲ. ಬದಲಾಗಿ ಹಿಪ್ಪಾರ್ಕಸ್ ನೋಡಬಹುದಾದ ಆಕಾಶದ ನಕ್ಷತ್ರ ಪುಂಜಗಳನ್ನಷ್ಟೇ ಇದು ಒಳಗೊಂಡಿತ್ತು. ಮಧ್ಯಕಾಲೀನ ಅವಧಿಯಲ್ಲಿ ಯುರೋಪ್, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದಾದ್ಯಂತ, ಇದು ಖಗೋಳವಿಜ್ಞಾನದ ಅಧಿಕೃತ ಪಠ್ಯವಾಗಿತ್ತು. ಅದರ ಲೇಖಕ ಟಾಲೆಮಿ ಬಹುತೇಕ ಪೌರಾಣಿಕ ವ್ಯಕ್ತಿಯಾಗಿ ಬಿಟ್ಟಿದ್ದ ಮತ್ತು ಅವನನ್ನು ಟಾಲೆಮಿ, ಅಲೆಕ್ಸಾಂಡ್ರಿಯಾದ ರಾಜ ಎಂದು ಕರೆಯಲಾಗುತ್ತಿತ್ತು. <ref>S. C. McCluskey, ''Astronomies and Cultures in Early Medieval Europe'', Cambridge: Cambridge Univ. Pr. 1998, pp. 20–21.</ref> ಅಲ್ಮಾಜೆಸ್ಟ್ ಅನ್ನು ಅರೇಬಿಕ್ ಹಸ್ತಪ್ರತಿಗಳಲ್ಲಿ (ಆದ್ದರಿಂದ ಅದರ ಪರಿಚಿತ ಹೆಸರು- ಆಲ್ಮಜೆಸ್ಟ್ ಬಂದಿದೆ) ಅಸ್ತಿತ್ವದಲ್ಲಿರುವ ಕ್ಲಾಸಿಕಲ್ ಗ್ರೀಕ್ ವಿಜ್ಞಾನದಂತೆಯೇ ಸಂರಕ್ಷಿಸಲಾಗಿದೆ. ಅದರ ಖ್ಯಾತಿಯ ಕಾರಣ, ಇದನ್ನು ವ್ಯಾಪಕವಾಗಿ ಹುಡುಕಲಾಯಿತು ಮತ್ತು 12 ನೇ ಶತಮಾನದಲ್ಲಿ ಎರಡು ಬಾರಿ ಲ್ಯಾಟಿನ್ ಭಾಷೆಗೆ ಅನುವಾದಿಸಲಾಯಿತು , ಒಮ್ಮೆ ಸಿಸಿಲಿ ಭಾಷೆ ಮತ್ತು ಮತ್ತೆ ಸ್ಪೇನ್‌ಗೆ ಸಹ. <ref>Charles Homer Haskins, ''Studies in the History of Mediaeval Science'', New York: Frederick Ungar Publishing, 1967, reprint of the Cambridge, Mass., 1927 edition</ref> ಟಾಲೆಮಿಯ ಮಾದರಿಯು ಅವನ ಪೂರ್ವವರ್ತಿಗಳಂತೆಯೇ ಭೂಕೇಂದ್ರೀಯವಾಗಿತ್ತು ಮತ್ತು ವೈಜ್ಞಾನಿಕ ಕ್ರಾಂತಿಯ ಸಮಯದಲ್ಲಿ ಸರಳವಾದ ಸೂರ್ಯಕೇಂದ್ರೀಯ ಮಾದರಿಗಳು ಕಾಣಿಸಿಕೊಳ್ಳುವವರೆಗೂ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟಿತು.
 
ಅವನ ಗ್ರಹಗಳ ಪ್ರಮೇಯವು ಆಲ್ಮಜೆಸ್ಟ್ ಗಣಿತೀಯ ಮಾದರಿಯ ಆಚೆ ಹೋಗಿ, ವೃತ್ತಗಳಲ್ಲಿನ ವೃತ್ತಗಳ ಮಾದರಿ ವಿಶ್ವದ ಚಿತ್ರಣ ನೀಡುತ್ತದೆ. <ref>Dennis Duke, [http://people.scs.fsu.edu/~dduke/ptolemy.html Ptolemy's Cosmology]</ref> ಇಲ್ಲಿ ಟಾಲೆಮಿ ಎಪಿಸೈಕಲ್‌ಗಳು ಅಥವಾ ಅಧಿವೃತ್ತಗಳನ್ನು ಒಳಗೊಂಡ ಗ್ರಹಗಳ ಮಾದರಿಯನ್ನು ಬಳಸಿ ಬ್ರಹ್ಮಾಂಡದ ಆಯಾಮಗಳನ್ನು ಲೆಕ್ಕಾಚಾರ ಮಾಡಿದ. ಅವನ ಲೆಕ್ಕದಲ್ಲಿ ಸೂರ್ಯನ ಮತ್ತು ಭೂಮಿ ನಡುವಿನ ದೂರ ಸರಾಸರಿ ಭೂಮಿಯ ತ್ರಿಜ್ಯದ 1,210 ರಷ್ಟಾಗಿತ್ತು. ಹಾಗೆಯೆ ಸ್ಥಿರ ನಕ್ಷತ್ರಗಳ ಗೋಳದ ತ್ರಿಜ್ಯವು ಭೂಮಿಯ ತ್ರಿಜ್ಯಕ್ಕಿಂತ 20,000 ಪಟ್ಟು ಹೆಚ್ಚಾಗಿದೆ ಎಂದು ಅವನು ಅಂದಾಜಿಸಿದ. <ref>Bernard R. Goldstein, ed., ''The Arabic Version of Ptolemy's'' Planetary Hypotheses, ''Transactions of the American Philosophical Society'' 57, no. 4 (1967), pp. 9–12. Note that the Sun is actually on average at a distance of over 46,000 Earth radii from the Earth, so Ptolemy's estimate of 1210 was off by a factor of almost 40.</ref>
 
ಟಾಲೆಮಿ ಸೂರ್ಯ, ಚಂದ್ರ ಮತ್ತು ಗ್ರಹಗಳ ಸ್ಥಾನಗಳು, ನಕ್ಷತ್ರಗಳ ಉದಯ ಮತ್ತು ಅಸ್ತಮ ಮತ್ತು ಸೂರ್ಯ ಮತ್ತು ಚಂದ್ರನ ಗ್ರಹಣಗಳ ಲೆಕ್ಕಾಚಾರ ಮಾಡಲು ಅನುಕೂಲವಾಗುವ ಒಂದು ಪರಿಕರವಾಗಿ ಅನೂಕಲಕರ ಟೇಬಲ್‌ಗಳನ್ನು (ಹ್ಯಾಡಿ ಟೇಬಲ್ಸ್) ಸಿದ್ಧ ಪಡಿಸಿದ. ಈ ಟೇಬಲ್‌ಗಳು ನಂತರದ ಖಗೋಳ ಟೇಬಲ್‌ಗಳಿಗೆ ಮಾದರಿಯಾದವು. <ref>{{Cite book |url=https://books.google.com/books?id=if9ZDwAAQBAJ&pg=PA286|title=Geminos's Introduction to the Phenomena: A Translation and Study of a Hellenistic Survey of Astronomy |last=Evans |first=James |last2=Berggren |first2=J. Lennart |date=2018-06-05 |publisher=Princeton University Press |isbn=978-0-691-18715-0|language=en}}</ref>
 
 
==ಉಲ್ಲೇಖಗಳು==
"https://kn.wikipedia.org/wiki/ಕ್ಲಾಡಿಯಸ್_ಟಾಲೆಮಿ" ಇಂದ ಪಡೆಯಲ್ಪಟ್ಟಿದೆ