ಸೊಂಪು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೬ ನೇ ಸಾಲು:
ಎರಡನೆಯ ಮಹಾಯುದ್ಧದ ಸಮಯದಲ್ಲಿ ಅನೀತೋಲ್ ತಯಾರಿಕೆಗೆ ಅನಿಸೇ ತೈಲದ ಬದಲು ಸೋಂಪು ತೈಲವನ್ನು ಉಪಯೋಗಿಸಲಾಯಿತು. ಇದು ಸುವಾಸನಾಯುತವಾಗಿ ಸ್ವಲ್ಪ ವಾತಹರ ಗುಣ ಹೊಂದಿರುತ್ತದೆ. ಇದನ್ನು ಚಿಕ್ಕ ಮಕ್ಕಳ ಹೊಟ್ಟೆ ಶೂಲೆ, ವಾತದ ನಿವಾರಣೆಗಾಗಿ ಉಪಯೋಗಿಸಲಾಗುತ್ತದೆ. ವಿರೇಚಕ ಔಷಧಗಳ ನೋವು ಉಂಟು ಮಾಡುವುದನ್ನು ಇದು ತಡೆಯುತ್ತದೆ. ೬೦ ಮಿನಿಮ್ ಪ್ರಮಾಣದಲ್ಲಿ ಇದನ್ನು ಕಕ್ಕೆಹುಳ ನಿವಾರಣೆಗಾಗಿ ಬಳಸಬಹುದು. ಹಿತವಲ್ಲದ ರುಚಿವಾಸನೆಗಳಿರುವ ಔಷಧಗಳಲ್ಲಿ ಇದನ್ನು ಹಾಕಿ ಸರಿಪಡಿಸುವರು. ಕೆಲವು ಮದ್ದುಗಳ ವಾಹಕವಾಗಿ ಬಳಸುವ ‘ಸೋಂಪು ನೀರು’ ಸಂಯೋಜನೆಯಲ್ಲಿ ಇದು ಸೇರುತ್ತದೆ. ಒಂದೊಂದು ಸಲ ಈ ತೈಲವನ್ನು ಸಾಬೂನಿನ ಪರಿಮಳದಲ್ಲಿ ಉಪಯೋಗಿಸಿದರೂ ಇದಕ್ಕೆ ಸುಗಂಧಗಳಲ್ಲಿ ಹೆಚ್ಚು ಉಪಯೋಗವಿಲ್ಲ. ತೈಲ ತೆಗೆದುಬಿಟ್ಟ ಬೀಜಗಳನ್ನು ದನಗಳ ಮೇವಾಗಿ ಉಪಯೋಗಿಸುತ್ತಾರೆ. ಇದರಲ್ಲಿ ೧೪-೨೨% ಸಸಾರಜನಕ ಪದಾರ್ಥ ಮತ್ತು ೧೨-೧೮.೫% ಜಿಡ್ಡು ಇರುತ್ತದೆ.
 
===ಉಲ್ಲೇಖಗಳು===
[[ವರ್ಗ:ಸಸ್ಯಗಳು]]
"https://kn.wikipedia.org/wiki/ಸೊಂಪು" ಇಂದ ಪಡೆಯಲ್ಪಟ್ಟಿದೆ