ಸೊಂಪು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೩ ನೇ ಸಾಲು:
'''ಸೊಂಪು''' ('''''ಫ಼ೆನಿಕ್ಯೂಲಮ್ ವಲ್ಗೇರಿ''''') '''''ಫ಼ೆನಿಕ್ಯೂಲಮ್''''' [[ಜಾತಿ]]ಯಲ್ಲಿನ ಒಂದು [[ಸಸ್ಯ]] [[ಪ್ರಜಾತಿ]] (ಬಹುತೇಕ [[ಸಸ್ಯಶಾಸ್ತ್ರ]]ಜ್ಞರಿಂದ ಈ ಜಾತಿಯಲ್ಲಿನ [[ಮಾನಟಿಪಿಕ್|ಏಕೈಕ ಪ್ರಜಾತಿಯೆಂದು]] ಪರಿಗಣಿಸಲಾಗುತ್ತದೆ). ಅದು [[ಏಪಿಯೇಸಿಯಿ]] [[ಕುಟುಂಬ]]ದ ಸದಸ್ಯವಾಗಿದೆ. ಅದು ಹಳದಿ [[ಹೂವು]]ಗಳು ಮತ್ತು ಗರಿಯಂತಿರುವ [[ಎಲೆ]]ಗಳನ್ನು ಹೊಂದಿರುವ, ಬಯಲಿನಲ್ಲಿ ಬೆಳೆಯಬಲ್ಲ, [[ಬಹುವಾರ್ಷಿಕ ಸಸ್ಯ|ಬಹುವಾರ್ಷಿಕ]], ಪುಷ್ಪ ಛತ್ರಗಳನ್ನು ಬಿಡುವ ಸಸ್ಯಮೂಲಿಕೆ.
===ವಿವರಣೆ ಮತ್ತು ವ್ಯಾಪ್ತಿ===
ವಾಣಿಜ್ಯ ಶ್ರೇಣಿಯ ಸೋಂಪು ಒಂದು ದ್ಯೈ ವಾರ್ಷಿಕ ಅಥವಾ ಸಾರ್ವಕಾಲಿಕ, ಪರ್ಣಸ್ವರೂಪಿ ಗಿಡದ ಒಣಗಿಸಿದ ಬಲಿತ ಹಣ್ಣು (ಬೀಜ). ಗಿಡವು ೧.೫-೧.೮ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಇದನ್ನು ಮೆಡಿಟರೇನಿಯನ್ ದೇಶಗಳು, ರುಮೇನಿಯಾ ಮತ್ತು ಭಾರತದಲ್ಲಿ ಬೆಳೆಯುತ್ತಾರೆ. ಬೀಜವು ಚಿಕ್ಕದಾಗಿ ಆಯತವಾಗಿ, ಅಂಡಾಕಾರವಾಗಿ ಅಥವಾ ಕೊಳವೆಯಾಕಾರವಾಗಿ ೬-೭ಮಿಲಿಮೀಟರ್೭ಮಿಲಿ.ಮೀಟರ್ ಉದ್ದ, ನೆಟ್ಟಗೆ ಅಥವಾ ಸ್ವಲ್ಪ ಡೊಂಕಾಗಿ ಮತ್ತು ಹಸಿರು- ಹಳದಿ ಅಥವಾ ಹಳದಿ- ಕಂದು ಬಣ್ಣದ್ದಾಗಿರುತ್ತವೆ. ಹೊರ ಮೈಯಲ್ಲಿ ೫ ಏಣುಗಳಿರುತ್ತವೆ. ಇದಕ್ಕೆ ಹಿತವಾದ, ಅನೀಸೀಡ್‌ಅನ್ನು ಹೋಲುವ ಮಧುರ ವಾಸನೆ ಇರುತ್ತದೆ.
ಸೋಂಪನ್ನು ತೋಟದ ಅಥವಾ ಮನೆಯ ಹಿತ್ತಲ ಬೆಳೆಯಾಗಿ ೧.೮೨೫ ಮೀಟರ್ ಎತ್ತರದ ಪ್ರದೇಶಗಳವರೆಗೆ ಭಾರತದಲ್ಲಿ ಎಲ್ಲಾ ಕಡೆ ಬೆಳೆಯುತ್ತಾರೆ. ಇದಕ್ಕೆ ತಂಪಾದ ಹವಾಮಾನವಿರಬೇಕು. ಉತ್ತರ ಭಾರತದಲ್ಲಿ ಇದನ್ನು ಚಳಿಗಾಲದ ಬೆಳೆಯಾಗಿ ಬೆಳೆಯುತ್ತಾರೆ. ದಕ್ಷಿಣ ಭಾರತದಲ್ಲಿ ಇದು ಕೇವಲ ಎತ್ತರ ಪ್ರದೇಶಗಳಲ್ಲಿ ಮಾತ್ರ ಬೆಳೆಯಬಲ್ಲದು. ಇತರ ಕಡೆ ಬರುವುದಿಲ್ಲ. ಇದನ್ನು ಮಹಾರಾಷ್ಟಮಹಾರಾಷ್ಟ್ರ,್ರ ಗುಜರಾತ್ ಮತ್ತು ಕರ್ನಾಟಕ, ಬೆಳಗಾಂ, ಧಾರವಾಡ ಜಿಲ್ಲೆಗಳಲ್ಲೂ ಕೆಲಮಟ್ಟಿಗೆ ಉತ್ತರ ಪ್ರದೇಶದ ಪಶ್ಚಿಮ ಜಿಲ್ಲೆಗಳಲ್ಲೂ, ಪಂಜಾಬಿನ ಜಲಂಧರ್, ಅಮೃತಸರ್, ಗುರುದಾಸ್ ಪುರ್, ಲೂಧಿಯಾನ, ಫಿರೋಜ್‌ಪುರ್ ಮತ್ತು ಕರ್ನಾಲ್ ಜಿಲ್ಲೆಗಳ ನೀರಾವರಿ ಪ್ರದೇಶಗಳಲ್ಲಿ ತುಂಡು ನೆಲೆಗಳಲ್ಲೂ ಬೆಳೆಸುತ್ತಾರೆ.
==ಜಾತಿಗಳು==
ಜಾತಿಗಳು: ಕಾಡು ಮತ್ತು ಸಾಗುವಳಿಯಲ್ಲಿರುವ ಸೋಂಪುಗಳಲ್ಲಿ ಬೀಜದ ಗಾತ್ರ, ವಾಸನೆ ಮತ್ತು ರುಚಿಯಲ್ಲಿ ವ್ಯತ್ಯಾಸವಿರುವ ಹಲವು ಜಾತಿಗಳಿವೆ. ಇವೆಲ್ಲವನ್ನೂ ಫೆನಿಕ್ಯುಲಮ್ ವಲ್ಗೇರ್ ಗಿಡದ ವಿವಿಧ ಜಾತಿ ಅಥವಾ ಉಪಜಾತಿ ಎಂದು ತಿಳಿಯಲಾಗಿದೆ. ವ್ಯಾಪಾರದಲ್ಲಿ ಮುಖ್ಯವಾದ ತೈಲಗಳನ್ನು ಕೊಡುವ ಬಗೆಗಳನ್ನು ಕೆಪಿಲೇಸಿಯಮ್ ಉಪಜಾತಿಗೆ ಸೇರಿಸುತ್ತಾರೆ. ಇದರಲ್ಲಿ ಎರಡು ಭಿನ್ನವಾದ ಬಗೆಗಳು ಗುರುತಿಸಲ್ಪಟ್ಟಿವೆ. ೧)ವಾರ್ ವಲ್ಲೇರ್(ಮಿಲ್)ತೆಲ್ಲೂಂಗ್ ಮತ್ತು ೨) ವಾರ್ ಡಲ್ಸೆ(ಮಿಲ್)ತೆಲ್ಲೂಂಗ್ ವಾರ್ ವಲ್ಗೇರ್ ಎನ್ನುಎನ್ನುವ ಮುಖ್ಯವಾಗಿ ರಷ್ಯಾ, ಹಂಗೆರಿ, ಜರ್ಮನಿ, ಫ್ರಾನ್ಸ್, ಇಟಲಿ, ಭಾರತ, ಜಪಾನ್, ಅರ್ಜೆಂಟಿನ ಮತ್ತು ಅಮೆರಿಕಾದಲ್ಲಿ ಬೆಳೆಯುತ್ತಾರೆ. ವಾರ್ ಡೆಲ್ಸೆಯನ್ನು ಫ್ರಾನ್ಸ್, ಇಟಲಿ ಮತ್ತು ದಕ್ಷಿಣ ಯುರೋಪಿನ ಮೆಸೆಡೋನಿಯಾದಲ್ಲಿ ಮಾತ್ರ ಬೆಳೆಯುತ್ತಾರೆ. ಭಾರತೀಯ ಸೋಂಪನ್ನು ಕೆಲವು ವೇಳೆ ವಾರ್ ಪ್ಯಾನ್ ಮೋರಿಯಮ್ ಎಂಬ ಬೇರೆ ಬಗೆಯೆಂದು ತಿಳಿಯುತ್ತಾರೆ.
ನವದೆಹಲಿಯ ಐ.ಎ.ಆರ್.ಐ ನಲ್ಲಿ ಹೆಚ್ಚು ಬೀಜ ಕೊಡುವ ಮತ್ತು ಹೆಚ್ಚು ತೈಲ ಕೊಡುವ ತಳಿಗಳನ್ನು ಆರಿಸುವ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆದಿವೆ. ಈಚೆಗೆ ಗುಜರಾತಿನ ಅಹಮದಾಬಾದ್‌ನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಉತ್ತಮ ತಳಿಯೊಂದನ್ನು ತಯಾರಿಸಲಾಗಿದೆ. ಇದು ೨,೦೦೦ ಕಿಲೋ ಹೆಕ್ಟರಿಗೆ ಸೋಂಪು ಬೀಜದ ಇಳುವರಿಯನ್ನು ಕೊಡುವುದೆಂದು ಹೇಳುತ್ತಾರೆ. ಈಗಿನ ಇಳುವರಿಗೆ ಇದು ೧೫-೨೨% ಹೆಚ್ಚಾಗಿದೆ. ಬೆಳೆಗಾರರು ಇಂತಹ ತಳಿಗಳನ್ನು ಉಪಯೋಗಿಸಿ ನೋಡಬೇಕು.
ವಾಣಿಜ್ಯ ಶ್ರೇಣಿಯಲ್ಲಿ ಸೋಂಪು ಕಾಯಿಗಳನ್ನು (ಬೀಜಗಳೆಂದು ಕರೆಯುವುದು) ಅದನ್ನು ಬೆಳೆದ ಸ್ಥಳದ ಮೇಲೆ ವರ್ಗೀಕರಿಸುತ್ತಾರೆ. ಭಾರತದಲ್ಲಿ ಚೆನ್ನಾಗಿ ತಿಳಿದಿರುವ ಬಗೆಗಳು ಬೊಂಬಾಯಿ, ಬಿಹಾರ ಮತ್ತು ಉತ್ತರ ಪ್ರದೇಶದ ಸೋಂಪುಗಳು;ಲಕ್‌ನೋದಲ್ಲಿ ಬೆಳೆದ ಸೋಂಪು ಬಹಳ ಶ್ರೇಷ್ಟವೆಂದು ನಂಬಿಕೆ. ಇದರ ಬೆಲೆಯೂ ಬೇರೆಯದಕ್ಕಿಂತ ಹೆಚ್ಚು, ವಾಣಿಜ್ಯ ಶ್ರೇಣಿಯ ಸೋಂಪು ಅದರ ಬಗೆ ಮತ್ತು ಅದನ್ನು ಕೊಯ್ಲು ಮಾಡಿ, ಒಣಗಿಸಿ ದಾಸ್ತಾನು ಮಾಡುವಾಗ ತೆಗೆದುಕೊಂಡ ಶ್ರದ್ಧೆ, ಇವುಗಳನ್ನನುಸರಿಸಿಇವುಗಳನ್ನು ಅನುಸರಿಸಿದ ಗುಣದಲ್ಲಿ ವ್ಯತ್ಯಾಸ ಹೊಂದುತ್ತದೆ. ಅವುಗಳಲ್ಲಿ ಮರಳು, ತೊಟ್ಟುಗಳು ಮತ್ತು ಇತರ ಛತ್ರಮಂಜರಿ ಜಾತಿಯ ಬೀಜಗಳು ಆಗಾಗ ಕಂಡು ಬರುತ್ತದೆ. ಕೆಲವೊಮ್ಮೆ ಅದಕ್ಕೆ ತೆಗೆದ ಅಥವಾ ಸ್ವಲ್ಪ ತೈಲ ತೆಗೆದ ಬೀಜಗಳು, ಎಳೆಯ ಬೀಜಗಳು ಮತ್ತು ಬೂಸ್ಟು ಹಿಡಿದ ಬೀಜಗಳನ್ನು ಕಲಬೆರಕೆ ಮಾಡುತ್ತಾರೆ. ಫೆನೆಲ್ ಅಥವಾ ಸೋಂಪು ಬೀಜಕ್ಕೂ, ಅನಿಸೆ ಬೀಜಕ್ಕೂ ಕೆಲವೊಮ್ಮೆ ಗೊಂದಲವಾಗುತ್ತದೆ. ಆದರೆ ವಾಸ್ತವವಾಗಿ ಇವುಗಳ ಮಾದರಿ ಬೀಜಗಳು ಲಕ್ಷಣಗಳು ಮತ್ತು ರುಚಿವಾಸನೆಗಳಲ್ಲಿ ಬಹಳ ಭಿನ್ನವಾಗಿರುತ್ತವೆ.
ಕಾಡು ಗಿಡವಾಗಿ ಬೆಳೆದುಕೊಂಡ ಕಹಿ ಸೋಂಪಿನ ಮೇಲ್ಭಾಗಳನ್ನು ಭಟ್ಟಿಗೆ ಹಾಕಿದಾಗ ದೊರೆಯುವ ತೈಲದ ಲಕ್ಷಣಗಳು ಹೀಗಿವೆ- ಸಾಪೇಕ್ಷಸಾಂದ್ರತೆ (೧೫) ೦.೮೭೩-೦.೯೨೫; ದೃಕ್ ಪರ್ಯಾಯ:+೪೦; ವಕ್ರೀಕರಣ ಸೂಚ್ಯಂಕ(೨೦) ೧.೪೮೪-೧೫೦೮; ಒಂದು ಭಾಗ ತೈಲವು೦.೫-೧ ಅಳತೆಯ ೯೦% ಮದ್ಯಸಾರದಲ್ಲಿ ವಿಲೀನಗೊಳ್ಳುತ್ತದೆ. ಇದರಲ್ಲಿ ಅನೀತೋಲ್ ಬಹುಸ್ವಲ್ಪ ಮಾತ್ರ ಇರುತ್ತದೆ. ಮುಖ್ಯ ಪದಾರ್ಥವು ಫಿಲ್ಯಾಂಡ್ರೀನ್.ಈ ತೈಲಕ್ಕೆ ವ್ಯಾಪಾರದಲ್ಲಿ ಉಪಯೋಗವಿಲಉಪಯೋಗವಿಲ್ಲ.್ಲ
==ಉಪಯೋಗಗಳು:==
ಸೋಂಪು ಗಿಡವು ಹಿತವಾದ ಸುವಾಸನೆ ಹೊಂದಿರುತ್ತದೆ. ಇದನ್ನು ಅಡುಗೆ ಸೊಪ್ಪಾಗಿ ಉಪಯೋಗಿಸುತ್ತಾರೆ. ಎಲೆಗಳನ್ನು ಮೀನಿನ ಗೋಜ್ಜಿನಲ್ಲೂ ಮತ್ತು ಅಲಂಕಾರಕ್ಕೂ ಮತ್ತು ಎಲೆದಂಟುಗಳನ್ನು ಕೋಸಂಬರಿಗಳಲ್ಲೂ ಹಾಕುವರು. ಫ್ಲಾರೆನ್ಸ್ ಸೋಂಪಸೋಂಪು ಗಿಡದ ದಪ್ಪವಾದ ಎಲೆದಂಟುಗಳನ್ನು ಕುದಿಯುವ ನೀರಿನಲ್ಲಿ ಅದ್ದಿ ತೆಗೆದು ತರಕಾರಿಯಂತೆ ಉಪಯೋಗಿಸುವರು. ಎಲೆಗಳಿಗೆ ಮೂತ್ರವರ್ಧಕ ಗುಣವಿದೆಯೆಂದು ವರದಿಯಾಗಿದೆ. ಸುವಾಸನೆಯ ಬೇರುಗಳಿಗೆ ವೀರೇಚಕ ಗುಣವಿದೆಯೆಂದು ನಂಬಿಕೆ.
ಒಣಗಿಸಿದ ಸೋಂಪು ಬೀಜಗಳಿಗೆ ಸುವಾಸನೆಯೂ ಹಿತವಾದ ರುಚಿಯೂ ಇರುತ್ತದೆ. ಭಾರತ ಮತ್ತು ನೆರೆಯ ದೇಶಗಳಲ್ಲಿ ಬೀಜಗಳನ್ನು ಹಾಗೆಯೇ ಅಥವಾ ಎಲೆ ಅಡಿಕೆಯೊಂದಿಗೆ ಅಗೆಯಲು ಬಳಸುತ್ತಾರೆ. ಇದನ್ನು ಸೂಪುಗಳು, ಮಾಂಸಭಕ್ಷö್ಯಗಳುಮಾಂಸಭಕ್ಷಗಳು, ಗೊಜ್ಜುಗಳು, ರೊಟ್ಟಿಗಳು, ಮಿಠಾಯಿಗಳು, ಮದ್ಯಗಳು ಮತ್ತು ಉಪ್ಪಿನಕಾಯಿಗಳಲ್ಲಿ ರುಚಿಕರಕವಾಗಿ ಉಪಯೋಗಿಸುತ್ತಾರೆ.
ಬೀಜಗಳಿಗೆ ಉತ್ತೇಜಕ ಮತ್ತು ವಾತಹರ ಗುಣಗಳಿವೆ. ಅವನ್ನು ಎಲ್ಲಾ ದೇಶಗಳ ಫಾರ್ಮಕೋಪಿಯಾಗಳಲ್ಲಿ ನಮೂದಿಸಲಾಗಿದೆ ಮತ್ತು ಎದೆ, ಗುಲ್ಮ ಮತ್ತು ಮೂತ್ರಪಿಂಡಗಳ ರೋಗದ ಚಿಕಿತ್ಸೆಯಲ್ಲಿ ಉಪಯೋಗಕಾರಿಯೆಂದು ತಿಳಿಯಲಾಗಿದೆ. ಅದನ್ನು ಸೆನ್ನಾ ಮತ್ತು ರುಬಾರ್ಬ್ಗಳಂತಹ ಅಹಿತ ಔಷಧಗಳ ರುಚಿವಾಸನೆಗಳನ್ನು ಮರೆ ಮಾಡಲು ಬಳಸುತ್ತಾರೆ. ಸೋಂಪನ್ನು ಲಿಕೊರಿಸ್ ಪುಡಿಯೊಂದಿಗೆ ಮತ್ತು ಹೊಟ್ಟೆನೋವು ನಿವಾರಿಸುವ ಔಷಧಿಗಳೊಂದಿಗೆ ಬೆರೆಸುತ್ತಾರೆ. ೮-೧೨ಗ್ರಾಂ ಬೀಜಗಳನ್ನು ೫೦೦ಸಿ.ಸಿ. ಕುದಿಯುವ ನೀರಿನಿಂದ ಕಷಾಯ ತೆಗೆದು ಚಿಕ್ಕ ಮಕ್ಕಳ ಜಠರವಾಯುಜಠರ ವಾಯು ನಿವಾರಿಸಲು ಎನೀಮಾ ಕೊಡುತ್ತಾರೆ. ಬೀಜಗಳ ಬಿಸಿ ಸಾರವನ್ನು ದೇಶೀಯ ವೈದ್ಯದಲ್ಲಿ ಸ್ತನ್ಯ ಸಂಚಾರ ಹೆಚ್ಚಿಸುವುದಕ್ಕೂ ಮತ್ತು ಬೆವರುವುದನ್ನು ಉತ್ತೇಜಿಸುವುದಕ್ಕೂ ಬಳಸುತ್ತಾರೆ.
ಎರಡನೆಯ ಮಹಾಯುದ್ಧದ ಸಮಯದಲ್ಲಿ ಅನೀತೋಲ್ ತಯಾರಿಕೆಗೆ ಅನಿಸೇ ತೈಲದ ಬದಲು ಸೋಂಪು ತೈಲವನ್ನು ಉಪಯೋಗಿಸಲಾಯಿತು. ಇದು ಸುವಾಸನಾಯುತವಾಗಿ ಸ್ವಲ್ಪ ವಾತಹರ ಗುಣ ಹೊಂದಿರುತ್ತದೆ. ಇದನ್ನು ಚಿಕ್ಕ ಮಕ್ಕಳ ಹೊಟ್ಟೆಶೂಲೆಹೊಟ್ಟೆ ಶೂಲೆ, ವಾತದ ನಿವಾರಣೆಗಾಗಿ ಉಪಯೋಗಿಸಲಾಗುತ್ತದೆ. ವಿರೇಚಕ ಔಷಧಗಳ ನೋವು ಉಂಟು ಮಾಡುವುದನ್ನು ಇದು ತಡೆಯುತ್ತದೆ. ೬೦ ಮಿನಿಮ್ ಪ್ರಮಾಣದಲ್ಲಿ ಇದನ್ನು ಕಕ್ಕೆಹುಳ ನಿವಾರಣೆಗಾಗಿ ಬಳಸಬಹುದು. ಹಿತವಲ್ಲದ ರುಚಿವಾಸನೆಗಳಿರುವ ಔಷಧಗಳಲ್ಲಿ ಇದನ್ನು ಹಾಕಿ ಸರಿಪಡಿಸುವರು. ಕೆಲವು ಮದ್ದುಗಳ ವಾಹಕವಾಗಿ ಬಳಸುವ ‘ಸೋಂಪು ನೀರು’ ಸಂಯೋಜನೆಯಲ್ಲಿ ಇದು ಸೇರುತ್ತದೆ. ಒಂದೊAದುಒಂದೊಂದು ಸಲ ಈ ತೈಲವನ್ನು ಸಾಬೂನಿನ ಪರಿಮಳದಲ್ಲಿ ಉಪಯೋಗಿಸಿದರೂ ಇದಕ್ಕೆ ಸುಗಂಧಗಳಲ್ಲಿ ಹೆಚ್ಚು ಉಪಯೋಗವಿಲ್ಲ. ತೈಲ ತೆಗೆದುಬಿಟ್ಟ ಬೀಜಗಳನ್ನು ದನಗಳ ಮೇವಾಗಿ ಉಪಯೋಗಿಸುತ್ತಾರೆ. ಇದರಲ್ಲಿ ೧೪-೨೨% ಸಸಾರಜನಕ ಪದಾರ್ಥ ಮತ್ತು ೧೨-೧೮.೫% ಜಿಡ್ಡು ಇರುತ್ತದೆ.
 
[[ವರ್ಗ:ಸಸ್ಯಗಳು]]
"https://kn.wikipedia.org/wiki/ಸೊಂಪು" ಇಂದ ಪಡೆಯಲ್ಪಟ್ಟಿದೆ