ಶಿಕ್ಷಣ ಮಾಧ್ಯಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಶಿಕ್ಷಣ ಮಾಧ್ಯಮ
 
Fixed typo
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೫ ನೇ ಸಾಲು:
ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಪರಿಸ್ಥಿತಿ ಇಂತಿದೆ: ಸರ್ಕಾರಿ ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಗಳಲ್ಲಿ ಪ್ರಾದೇಶಿಕ (ರೀಜನಲ್) ಭಾಷೆ ಬೋಧನಮಾಧ್ಯಮವಾಗಿದೆ. ಉನ್ನತ ಶಿಕ್ಷಣ ಹಂತದಲ್ಲಿ ಪ್ರಾದೇಶಿಕ ಭಾಷೆಯನ್ನು ಬೋಧನಮಾಧ್ಯಮವಾಗಿ ಅಳವಡಿಸುವ ಪ್ರಯತ್ನ ನಡೆದಿದೆ. ಪ್ರಾದೇಶಿಕ ಭಾಷೆಯಲ್ಲದ ಭಾಷಾಮಾಧ್ಯಮದಲ್ಲಿ ಕಲಿಯುವ ಅವಕಾಶದ ದೃಷ್ಟಿಯಿಂದ ರಾಜ್ಯಗಳ ನಡುವೆ ವಿಭಿನ್ನತೆ ಇದೆ. ಖಾಸಗಿ ಸಂಸ್ಥೆಗಳಲ್ಲಿ ಬೋಧನಮಾಧ್ಯಮವಾಗಿ ಇಂಗ್ಲಿಷ್ ಪ್ರಾಬಲ್ಯ ಹೆಚ್ಚು. ಭಾಷಾ ಕಲಿಕೆಯ ದೃಷ್ಟಿಯಿಂದ ಸೆಕೆಂಡರಿ ಶಾಲೆಗಳಲ್ಲಿ ತ್ರಿಭಾಷಾ ಸೂತ್ರದ (ಹಿಂದಿಭಾಷಾ ರಾಜ್ಯಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‍ನೊಂದಿಗೆ ಒಂದು ಆಧುನಿಕ ಭಾರತೀಯ ಭಾಷೆ - ದಕ್ಷಿಣ ಭಾರತದ ಭಾಷೆಗಳಿಗೆ ಆದ್ಯತೆ; ಹಿಂದಿಯೇತರ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆ ಮತ್ತು ಇಂಗ್ಲಿಷ್‍ನೊಂದಿಗೆ ಹಿಂದಿ. ವಿಶ್ವವಿದ್ಯಾಲಯ ಗಳಲ್ಲಿ ಮತ್ತು ಕಾಲೇಜುಗಳಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಅಧ್ಯಯನಾವಕಾಶ) ಅಳವಡಿಕೆಗೆ ತೀವ್ರ ಒತ್ತು ಕೊಡಲಾಗಿದೆ.
 
ಪ್ರಾದೇಶೀಕಪ್ರದೇಶಿಕ ಭಾಷೆಯಿಂದ ಭಿನ್ನವಾದ ಮಾತೃಭಾಷೆಯ ಸ್ಥಾನಮಾನದ ಅಸ್ಪಷ್ಟತೆ, ಅಧ್ಯಯಿಸಬೇಕಾದ ಭಾಷೆಯ ಅಥವಾ ಬೋಧನಮಾಧ್ಯಮದ ಆಯ್ಕೆಗೆ ಮತ್ತು ಅಭಿಜಾತ ಭಾಷೆಗಳ ಅಧ್ಯಯನಕ್ಕೆ ಅವಕಾಶರಾಹಿತ್ಯ, ಆಧುನಿಕ ಭಾರತೀಯ ಭಾಷೆಯ ಪರಿಕಲ್ಪನೆಯ ಅಸ್ಪಷ್ಟತೆ ತ್ರಿಭಾಷಾಸೂತ್ರದ ದೋಷಗಳು ಎನ್ನಲಾಗಿದೆ. ಈ ಕಾರಣಗಳಿಂದಾಗಿ ಪ್ರಾದೇಶಿಕ ಭಾಷೆಯನ್ನು ಪ್ರಾಥಮಿಕ ಹಂತದ ಶಿಕ್ಷಣಮಾಧ್ಯಮವಾಗಿ ಕಡ್ಡಾಯಗೊಳಿಸುವ ಕೆಲವು ಪ್ರಯತ್ನಗಳನ್ನು ನ್ಯಾಯಾಲಯಗಳು ಅಸಿಂಧುಗೊಳಿಸಿವೆ.
 
ರಾಜ್ಯದ ಅಧಿಕೃತ ಆಡಳಿತ ಭಾಷೆ, ಕೇಂದ್ರ ಸರ್ಕಾರದ ಅಧಿಕೃತ ಆಡಳಿತ ಭಾಷೆಗಳ ಪೈಕಿ ಒಂದು, ಇವೆರಡರಿಂದ ಭಿನ್ನವಾದ ಆಧುನಿಕ ಭಾರತೀಯ ಭಾಷೆ ಎಂಬುದಾಗಿ ತ್ರಿಭಾಷಾ ಸೂತ್ರವನ್ನು ವ್ಯಾಖ್ಯಾನಿಸಬೇಕೆಂಬ ಅಭಿಪ್ರಾಯವೂ ಇದೆ. ರಾಜ್ಯದ ಅಧಿಕೃತ ಆಡಳಿತ ಭಾಷೆ ಮಾತೃಭಾಷೆಯಿಂದ ಭಿನ್ನವಾಗಿರುವ ಸಮುದಾಯಗಳ ಮಕ್ಕಳು ಪ್ರಾಥಮಿಕ ಹಂತಕ್ಕೆ ಪ್ರವೇಶಿಸುವಾಗ ಮಾತೃಭಾಷಾಮಾಧ್ಯಮದಲ್ಲಿ ಶಿಕ್ಷಣ ಆರಂಭಿಸಬೇಕು, ಸೆಕೆಂಡರಿ ಹಂತ ತಲಪುವುದರ ಒಳಗೆ ಅವರನ್ನು ರಾಜ್ಯಭಾಷಾಮಾಧ್ಯಮದಲ್ಲಿ ಶಿಕ್ಷಣ ಪಡೆಯಲು ಸಮರ್ಥರನ್ನಾಗಿಸಬೇಕು ಎಂಬ ಸಲಹೆಯೂ ಇದೆ. ಸಂಸ್ಕøತ ಅಥವಾ ಇತರ ಅಭಿಜಾತ ಭಾಷೆಗಳನ್ನು ಕಲಿಯ ಬಯಸುವವರಿಗೆ ಐಚ್ಛಿಕ ವಿಷಯವಾಗಿ ಕಲಿಯಲು ಅವಕಾಶ ಒದಗಿಸುವ ಬಗ್ಗೆ ಚಿಂತನೆ ಮಾಡಬೇಕೆಂಬ ಸಲಹೆಯೂ ಇದೆ.
"https://kn.wikipedia.org/wiki/ಶಿಕ್ಷಣ_ಮಾಧ್ಯಮ" ಇಂದ ಪಡೆಯಲ್ಪಟ್ಟಿದೆ