ಜಲ್ಲಿಕಟ್ಟು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
 
[[file:Bullriding-India-PONGAL_festival-Tamiword25.jpg|thumb|500px|right|ಜಲ್ಲಿಕಟ್ಟು ಕ್ರೀಡೆಯಲ್ಲಿ ಗೂಳಿಯ ಭುಜ ಹಿಡಿದು ನಿಯಂತ್ರಿಸುತ್ತಿರುವ ಯುವಕ ]]
[[ಕನ್ನಡ]]ದಲಲ್ಲಿದಲ್ಲಿ ಗೂಳಿ ಕಾಳಗ ಎಂದು ಕರೆಸಿಕೊಳ್ಳುವ ಈ ಕ್ರೀಡೆ [[ತಮಿಳುನಾಡು|ತಮಿಳುನಾಡಿನ]] ಬಹುಮುಖ್ಯ ಗ್ರಾಮೀಣ ಕ್ರೀಡೆ ಬರೀ ಕ್ರೀಡೆಯಷ್ಟೇ ಅಲ್ಲದೆ ತಮಿಳುನಾಡಿನ [[ಸಂಕ್ರಾಂತಿ]] ಹಬ್ಬದ ಒಂದು ಸಾಂಸ್ಕೃತಿಕ ಆಚರಣೆಯೂ ಕೂಡ. ಚೆನ್ನಾಗಿ ಕೊಬ್ಬಿದ ಹೋರಿಯೊಂದನ್ನು ಮೊದಲೇ ತಯಾರಾಗಿ ನಿಂತ ಜನಗಳ ಗುಂಪಿಗೆ ಹಗ್ಗವಿಲ್ಲದೆ ಬಿಡಲಾಗುತ್ತದೆ. ಗೂಳಿಯನ್ನು ಹಗ್ಗ ಬಿಚ್ಚಿ ಬಿಟ್ಟ ತಕ್ಷಣ ನೆರೆದಿರುವ ಜನರ ಹರ್ಷೋದ್ಗಾರ, ಕೇಕೆ ಮುಗಿಲು ಮುಟ್ಟುತ್ತದೆ. ಇದನ್ನು ಕಂಡ ಹೋರಿ ನಿಗದಿತ ಬಯಲಿನಲ್ಲಿ ಓಡಾಲಾರಂಭಿಸುತ್ತದೆ. ಅದರ ಮೇಲೆ ಎರಗುವ ಉತ್ಸಸಾಹಿ ತರುಣರು, ಯುವಕರು ಹೋರಿಯ ಭುಜ ಹಿಡಿದುಕೊಂಡು ಹೋರಿಯನ್ನು ಒಂದು ಕಡೆ ನಿಲ್ಲಿಸಬೇಕು. ಹಾಗೆ ನಿಲ್ಲಿಸುವಲ್ಲಿ ಯಾರು ಸಫಲರಾಗುತ್ತಾರೋ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಅವರಿಗೆ ಇನ್ನಿಲ್ಲದ ಮನ್ನಣೆ, ಗೌರವ ಸಿಗುತ್ತದೆ.ಕ್ರೀಡೆಯಲ್ಲಿ ಯಶಸ್ವಿಯಾಗಿ ಹೋರಿಯನ್ನು ನಿಯಂತ್ರಿಸಿದವರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತದೆ. ಹೋರಿಯ ಭುಜ ಹಿಡಿದ ತಕ್ಷಣ ಹೋರಿ ನಿಲ್ಲುವುದಿಲ್ಲ. ಭುಜವನ್ನು ಬಿಗಿಯಾಗಿ ಹಿಡಿದಾಗ್ಯೂ ಹೋರಿ ಮನುಷ್ಯರನ್ನೇ ಹೊತ್ತುಕೊಂಡು ತಾನು ದಿಕ್ಕಾಪಾಲಾಗಿ ಓಡುತ್ತಿರುತ್ತದೆ. ಬಿಗಿಯಾದ ಹಿಡಿತದಿಂದ ಹೋರಿಯನ್ನು ನಿಯಂತ್ರಣಕ್ಕೆ ತರುವುದು ಸುಲಭ ಸಾಧ್ಯವಲ್ಲ.
 
ಎಲ್ಲಾ ಕಡೆಯೂ ಜಲ್ಲಿ ಕಟ್ಟು ಕ್ರೀಡೆ ಹೀಗೇ ನಡೆಯುವುದಿಲ್ಲ. ಹೋರಿಯನ್ನು ನಿಯಂತ್ರಿಸುವ ಬಗೆ ಕೆಲವು ಕಡೆ ಆಚರಣೆಯಲ್ಲಿದ್ದರೆ ಮತ್ತೆ ಕೆಲವು ಕಡೆ ಗೂಳಿಯ ಎರಡು ಕೊಂಬುಗಳಿಗೆ ಬಾವುಟಗಳನ್ನ ಕಟ್ಟಲಾಗುತ್ತದೆ. ಗೂಳಿಯನ್ನು ನಿಯಂತ್ರಿಸಲಾಗದಿದ್ದರೂ ಆ ಬಾವುಟಗಳನ್ನು ಕೊಂಬುಗಳಿಂದ ಕಳಚಿಕೊಂಡರೆ ಆಟ ಮುಗಿದಂತೆ. ಇನ್ನೂ ಕೆಲವು ಕಡೆ ಗೂಳಿಯ ಕೊರಳಿಗೆ ಬಟ್ಟೆಯೊಂದನ್ನು ಕಟ್ಟಲಾಗುತ್ತದೆ, ಉಪಾಯದಿಂದ ಅದನ್ನು ಬಿಡಿಸಿಕೊಳ್ಳುವಲ್ಲಿ ಯುವಕರ ಚಾಣಾಕ್ಷತನ, ಧೈರ್ಯ ಪ್ರದರ್ಶನವಾಗುತ್ತದೆ.
 
ತಮಿಳುನಾಡಿನ ಗ್ರಾಮಗಳಲ್ಲಿ ಜಲ್ಲಿಕಟ್ಟು ಕ್ರೀಡೆಗಾಗಿಯೇ ಗೂಳಿಗಳನ್ನು ಸಾಕಿ ಪಳಗಿಸಲಾಗುತ್ತದೆ. ವರ್ಷವಿಡೀ ಗೂಳಿಯನ್ನು ಉತ್ತಮವಾಗಿ ಆರೈಕೆ ಮಾಡಿ ದಷ್ಟ ಪುಷ್ಟ ದೇಹ ಹೊಂದುವಂತೆ ಸಲಹಲಾಗುತ್ತದೆ.ಬಹುತೇಕ ಗ್ರಾಮಗಳಲ್ಲಿ ದೇವಸ್ಥಾನದ [[ಗೂಳಿ]] ಎಂದೇ ಸಾಕಲಾಗಿರುತ್ತದೆ. ವಿಶೇಷ ವಿಧಿ ವಿಧಾನಗಳೊಂದಿಗೆ ಆ ಗೂಳಿಗಳನ್ನು ದೇವಸ್ಥಾನದ ವತಿಯಿಂದಲೇ ಸಾಕಲಾಗಿರುತ್ತದೆ. ಅದು ದೇವರಿಗೆ ಮುಡಿಪಾಗಿರುವ ಪ್ರಾಣಿಯೆಂದು ಗ್ರಾಮದ ಜನರು ಅದಕ್ಕೆ ವಿಶೇಷ ಗೌರವವನ್ನು ಕೊಡುತ್ತಾರೆ. ಹಬ್ಬ ಹರಿದಿನಗಳ ಸಂಧರ್ಭಗಳಲ್ಲಿ ಆ ಗೂಳಿಗಳಿಗೆ ಪೂಜೆಯನ್ನು ಏರ್ಪಾಟು ಮಾಡುತ್ತಾರೆ. ದೇವಸ್ಥಾನದ ಹಸುವು ಊರಿನ ಎಲ್ಲಾ ಸಾಕುಪ್ರಾಣಿಗಳಿಗೆ ಮುಖ್ಯಸ್ಥನಂತೆ ಗ್ರಾಮದ ಜನರು ಭಾವಿಸುತ್ತಾರೆ, ಇಂತಹ ಪೂಜನೀಯ ಗೂಳಿಗಳು ಜಲ್ಲಿಕಟ್ಟು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಕಳೆ ತರುತ್ತದೆ. [[ಕಂಗಾಯಂ (ಗೋವಿನ ತಳಿ)|ಕಂಗಾಯಂ ತಳಿಯ]] ಗೂಳಿಗಳು ಇದರಲ್ಲಿ ಬಳಕೆಯಾಗುತ್ತವೆ.
 
[[file:Jallikattu_-_Kadaladi_Village_606_908.jpg|thumb|400px|right|ಜಲ್ಲಿಕಟ್ಟು ಕ್ರೀಡೆಗೆ ಕೊಂಬುಗಳಿಗೆ ಬಾವುಟಗಳನ್ನು ಕಟ್ಟಿ ತಯಾರು ಮಾಡಿರುವ ಗೂಳಿ ]]
"https://kn.wikipedia.org/wiki/ಜಲ್ಲಿಕಟ್ಟು" ಇಂದ ಪಡೆಯಲ್ಪಟ್ಟಿದೆ