ಚೀನೀತತ್ತ್ವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು added Category:ತತ್ತ್ವಶಾಸ್ತ್ರ using HotCat |
No edit summary |
||
೧ ನೇ ಸಾಲು:
'''ಚೀನೀತತ್ತ್ವ''' ಭಾರತದ ತತ್ತ್ವದಂತೆಯೇ ತುಂಬ ಪ್ರಾಚೀನವಾದ್ದು.<ref>{{cite news |title=Ancient Chinese Philosophy |url=https://www.ancient.eu/Chinese_Philosophy/ |accessdate=11 January 2020 |work=Ancient History Encyclopedia}}</ref> ಬೌದ್ಧ ತತ್ತ್ವ ಚೀನಕ್ಕೆ ಹರಡಿ ಅಲ್ಲಿನ ತತ್ತ್ವಗಳಲ್ಲಿ ಒಂದು ಮುಖ್ಯ ತತ್ತ್ವವಾಗಿ, ಭಾರತದಲ್ಲಿ ಕ್ಷೀಣಗೊಂಡ ಮೇಲೂ ಅಲ್ಲಿ ಅದು ಸ್ಥಿರವಾಗಿ ನೆಲೆಸಿತು. ಕ್ರಿ.ಶ. ಆರನೆಯ ಶತಮಾನದಲ್ಲಿ ಬೌದ್ಧನಾದ ಪರಮಾರ್ಥ ಭಾರತೀಯ ನ್ಯಾಯ ಗ್ರಂಥಗಳನ್ನು ಚೀನೀಭಾಷೆಗೆ ಪರಿವರ್ತಿಸಿದ. ಕ್ರಿ.ಶ. ಏಳನೆಯ ಶತಮಾನದಲ್ಲಿ [[ಹ್ಯುಯೆನ್ ತ್ಸಾಂಗ್]] ತರ್ಕಗ್ರಂಥಗಳನ್ನು ಚೀನೀಭಾಷೆಗೆ ಭಾಷಾಂತರಿಸಿ [[ಚೀನ]]ಕ್ಕೆ ತೆಗೆದುಕೊಂಡು ಹೋದ. ಹ್ಯುಯೆನ್ತ್ಸಾಂಗನ ಶಿಷ್ಯ ಕ್ವ್ಯೆ-ಚಿ ಶಂಕರಸ್ವಾಮಿ 'ನ್ಯಾಯಪ್ರವೇಶದ ಮೇಲೆ ಆರು ಸಂಪುಟಗಳ ಮಹಾವ್ಯಾಖ್ಯಾನವನ್ನು ಬರೆದ. ಇದು ಚೀನೀಯರಲ್ಲಿ ತರ್ಕವಿಚಾರವಾಗಿ ತುಂಬ ಆಸಕ್ತಿ ಹುಟ್ಟಿಸಿತು. ಚೀನೀ ತತ್ತ್ವವೆಂದರೆ ನಾವು ತಿಳಿದಿರುವುದು ಕೂಂಗ್ ಫೂಟ್ಸೆ ಮತ್ತು ಲಾವೋಟ್ಸು ತತ್ತ್ವವೆಂದೇ. ಅವೆರೆಡು ಅದರ ಪ್ರಧಾನ ತತ್ತ್ವಗಳಾದರೂ ಅವು ಬಹು ರೂಪಾಂತರ ಪಡೆದಿವೆ. ನವೀನ ಕೂಂಗ್ ಫೂಟ್ಸೆ ತತ್ತ್ವವೆಂದು ಕ್ರಿ.ಶ. ಹನ್ನೆರಡನೆಯ ಶತಮಾನದ ಚು ಷೀ ಪ್ರತಿಪಾದಿಸಿದ ತತ್ತ್ವವನ್ನು ಕೂಂಗ್ ಫೂಟ್ಸೆ [[ಪುನರ್ಜನ್ಮ]] ತಾಳಿ ನೋಡಿದ್ದರೆ ಬಹುಶಃ ಅದು ತನ್ನದೆಂದು ಗುರುತು ಹಿಡಿಯಲಾಗುತ್ತಿರಲಿಲ್ಲ. ಹಾಗೆಯೇ ನೂತನ ಲಾವೋ ಟ್ಸು ತತ್ತ್ವವೂ ಹಿಂದಿನ ಲಾವೋ ಟ್ಸು ತತ್ತ್ವದಿಂದ ಬಹುದೂರ ಸಾಗಿದೆ.<ref>{{cite news |last1=Perkins |first1=Franklin |title=Metaphysics in Chinese Philosophy |url=https://plato.stanford.edu/entries/chinese-metaphysics/ |accessdate=11 January 2020 |work=The Stanford Encyclopedia of Philosophy |publisher=Metaphysics Research Lab, Stanford University |date=2019}}</ref><ref>{{cite news |title=Chinese Philosophy - General - The Basics of Philosophy |url=https://www.philosophybasics.com/general_eastern_chinese.html |accessdate=11 January 2020 |work=www.philosophybasics.com}}</ref>
==ಪೂಂಗ್ ಯು-ಲಾನ್ ಗ್ರಂಥ==
ಚೀನೀತತ್ತ್ವದ ಮನೋಭಾವವನ್ನು ಕುರಿತು
==ತಾವೋ ತತ್ತ್ವ==
ಚೀನೀತತ್ತ್ವ ಭಾರತೀಯ ದರ್ಶನಗಳಂತೆ, ಪ್ರಮಾಣ, ಪ್ರಮೇಯ, ಪ್ರಮಿತಿ, ಪ್ರಾಮಾಣ್ಯಗಳೆಂಬ ಚತುರಂಗಸಮೇತವಾಗಿ ತರ್ಕಬದ್ಧವಾಗಿ ನಿರೂಪಣೆಯಾದ ವ್ಯವಸ್ಥಿತ ತತ್ತ್ವವಲ್ಲ. ಚೀನೀ ತಾತ್ತ್ವಿಕರ ಬರೆವಣಿಗೆಯಲ್ಲಿ ಬಿಡಿಬಿಡಿ ಉಕ್ತಿಗಳು, ಉದಾಹರಣೆಗೆ, ಉಪಮಾನಗಳು ಕತೆಗಳು ಸೇರಿವೆ. ಕೆಲವು ವೇಳೆ ಆ ಉಕ್ತಿಗಳು ಪರಸ್ಪರ ವಿರೋಧಿಗಳಂತೆ ತೋರುತ್ತವೆ. ಅವುಗಳ ವಾಚ್ಯಾರ್ಥ ಅಪೂರ್ಣವಾದರೂ ಸೂಚ್ಯಾರ್ಥ ಅಪಾರವಾದದ್ದು, ಚೀನೀ ಕಲೆಯಲ್ಲಿ ವಾಚ್ಯಾರ್ಥಕ್ಕಿಂತಲೂ ಧ್ವನ್ಯರ್ಥಕ್ಕೆ ಹೆಚ್ಚು ಬೆಲೆ. ಹಾಗೆಯೇ ಅವರ ತತ್ತ್ವದ ಉಕ್ತಿಗಳಲ್ಲೂ ಸೂಚ್ಯಾರ್ಥಕ್ಕೆ ಪ್ರಾಧಾನ್ಯ. ಮಾತು ಮುಖ್ಯವಲ್ಲ. ಅದರ ಇಂಗಿತ ಮುಖ್ಯ. ಅದು ತಿಳಿದಾಗ ಅರ್ಥ ಮುಂದಾಗುತ್ತದೆ, ಮಾತು ಹಿಂದಕ್ಕೆ ಸರಿಯುತ್ತದೆ. ಕೆಲವು ವೇಳೆ ಚೀನೀ ತಾತ್ತ್ವಿಕರು ಕೇವಲ ಮೌನದಿಂದಲೇ ತಮ್ಮ ತತ್ತ್ವವನ್ನು ಧ್ವನಿಸುತ್ತಿದ್ದುದುಂಟು. ತಾಓ ತತ್ತ್ವದಲ್ಲಂತೂ ಈ ಸೂಚ್ಯಾರ್ಥಕ್ಕೆ ಹೆಚ್ಚು ಬೆಲೆ. ತಾಓ ಮಾತಿನಿಂದ ವರ್ಣಿಸಲಾಗದ್ದು. ಮೌನದಿಂದಲೇ ಅದನ್ನು ಧ್ವನಿಸಬೇಕು. ತಾವೋ ತತ್ತ್ವವನ್ನು ಕುರಿತು ಸಾವಿರ ಪುಟಗಳ ವಿವರಣ ಗ್ರಂಥವನ್ನು ರಚಿಸಬಹುದು. ಆದರೂ ಅದು ಲಾವೋಟ್ಸುವಿನ ಕಾರಿಕೆಗಳ ಸೂಚ್ಯಾರ್ಥವನ್ನು ಪೂರ್ಣವಾಗಿ ತಿಳಿಸಲಾರದು.<ref>{{cite news |title=Chinese Philosophy {{!}} Encyclopedia.com |url=https://www.encyclopedia.com/environment/encyclopedias-almanacs-transcripts-and-maps/chinese-philosophy |accessdate=11 January 2020 |work=www.encyclopedia.com}}</ref><ref>{{cite news |title=Philosophy of Taoism |url=https://gohighbrow.com/philosophy-of-taoism/ |accessdate=11 January 2020 |work=Highbrow |date=2 May 2015}}</ref>
|