"ಅನುಭೋಗ" ಆವೃತ್ತಿಗಳ ಮಧ್ಯದ ಬದಲಾವಣೆಗಳು

 
 
ಅಭಿವೃದ್ಧಿ ಪಥದಲ್ಲಿರುವ ರಾಷ್ಟ್ರಗಳ ಸಮಸ್ಯೆ ಅನುಭೋಗಪ್ರವೃತ್ತಿಯನ್ನು ತಡೆಹಿಡಿಯುವುದಾದರೆ, ಮುಂದುವರಿದಿರುವ ರಾಷ್ಟ್ರಗಳಲ್ಲಿ ಅನುಭೋಗಕ್ಕೆ ಮತ್ತಷ್ಟು ಉತ್ತೇಜನ ನೀಡಬೇಕಾದ ಸಂದರ್ಭವೇ ಹೆಚ್ಚು. ಉತ್ಪನ್ನ ಮತ್ತು ಉದ್ಯೋಗಮಟ್ಟಗಳು ಸಾಕಷ್ಟು ಉನ್ನತಮಟ್ಟದಲ್ಲಿರಬೇಕಾದರೆ ಅನುಭೋಗಿಗಳ ಬೇಡಿಕೆ ಅವುಗಳಿಗೆ ಅನುಗುಣವಾದ ಪ್ರಮಾಣದಲ್ಲಿರಬೇಕಾದುದು ಅವಶ್ಯಕ. ಈ ಪರಿಣಾಮಕಾರಿ ಬೇಡಿಕೆ ಇಳಿವರಿಯಾದಾಗ ಅನುಭೋಗಪ್ರವೃತ್ತಿಯನ್ನು ಉತ್ತೇಜಿಸುವ ಸಮಸ್ಯೆ ಏಳುತ್ತದೆ. ಹೀಗೆ ಅನುಭೋಗಪ್ರವೃತ್ತಿ ಆರ್ಥಿಕಾಭಿವೃದ್ಧಿಯಲ್ಲೂ ಆರ್ಥಿಕ ಸ್ಥಿಮಿತೆಯಲ್ಲೂ ಪರಿಗಣಿಸಬೇಕಾದ ಒಂದು ಮುಖ್ಯ ಅಂಶವಾಗಿದೆ.
==ಉತ್ಪಾದನಾವಿಧಾನ ಮತ್ತು ಅನುಭೋಗ==
====
ಅರ್ಥಶಾಸ್ತ್ರದಲ್ಲಿ ಅನುಭೋಗದ ಪ್ರಾಮುಖ್ಯವನ್ನು ಇನ್ನೊಂದು ದೃಷ್ಟಿಯಿಂದ ವಿವರಿಸಬಹುದು. ಉತ್ಪಾದನಾವಿಧಾನ ಸುಗಮವಾಗಿ ಏರುಪೇರುಗಳಿಲ್ಲದೆ ಮುಂದುವರಿಯಬೇಕಾದರೆ ಉತ್ಪಾದನೆಯಾಗುವ ಸರಕುಗಳು ಅವುಗಳ ಅನುಭೂೀಗದ ಕಾಲಕ್ರಮಕ್ಕೆ ಸರಿಯಾಗಿ ಹೊಂದಿಕೊಳ್ಳಬೇಕು. ಸರಕುಗಳ ಅನುಭೋಗದ ಕಾಲಕ್ರಮ ಮತ್ತು ಕಾಲಾಂತರಗಳು ಏಕರೀತಿ ಇರುವುದಿಲ್ಲ. ಈ ಬಗ್ಗೆ ತುಂಬ ವ್ಯತ್ಯಾಸಗಳೇ ಎದ್ದು ಕಾಣುವುವು. ಸರಕುಗಳನ್ನು ಅನುಭೋಗಿಯ ಸರಕು ಉತ್ಪಾದಕರ ಸರಕು ಎಂದು ಎರಡು ಭಾಗವಾಗಿ ವಿಂಗಡಿಸಬಹುದು. ಉತ್ಪಾದನಾ ಹಂತಗಳಲ್ಲಿ ಉಪಯೋಗಿಸುವ ಸರಕುಗಳನ್ನು ಉತ್ಪಾದಕರ ಸರಕುಗಳೆಂದೂ ಇತರ ಸರಕುಗಳನ್ನು ಅಂದರೆ ಜನರು ಅವರ ವೈಯಕ್ತಿಕ ಬಯಕೆಗಳ ತೃಪ್ತಿಗಾಗಿ ಉಪಯೋಗಿಸುವ ಸರಕುಗಳೆಲ್ಲವನ್ನೂ ಅನುಭೋಗಿಯ ಸರಕುಗಳೆಂದೂ ಹೇಳಬಹುದು. ಅನುಭೋಗಿಯ ಸರಕುಗಳು ಎರಡು ವಿಧ
<br>
೪೨೨

edits

"https://kn.wikipedia.org/wiki/ವಿಶೇಷ:MobileDiff/966886" ಇಂದ ಪಡೆಯಲ್ಪಟ್ಟಿದೆ