ಪದಬಂಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪದಬಂಧ ಪತ್ರಿಕೆಗಳ ಬಹುಪಾಲು ಓದುಗರ ನೆಚ್ಚಿನ ಅಂಕಣ `ಪದಬಂಧ`. ಒಂದೆಡೆ ಭಾಷಾ ಪ್ರೌಢಮೆಗಳಿಸಲು ನೆರವಾಗುವ, ಮತ್ತೊಂದೆಡೆ ಮನೋವಿಕಾಸ ಮತ್ತು ಮನೋಲ್ಲಾಸಕ್ಕೆ ಪೂರಕವಾಗುವ ಪದಬಂಧಗಳ ಇತಿಹಾಸ ಇಂದು ನಿನ್ನೆಯದಲ್ಲ. ಇಂಗ್ಲೆಂಡಿನ ರಾಜನೊಬ್ಬ ಕಾಲಹರಣಕ್ಕಾಗಿ ಎಡದಿಂದ ಬಲಕ್ಕೆ ಮತ್ತು ಮೇಲಿಂದ ಕೆಳಕ್ಕೆ ಅಕ್ಷರಗಳ ಜೋಡಿಸಿ, ಪದರಚನೆ ಮಾಡಿದನೆಂದೂ ಹಾಗೂ ನಂತರ ಇದು ಪದಬಂಧ ಆಟ ತಾಳಲು ಕಾರಣವಾಯಿತೆಂದೂ ಹೇಳಲಾಗುತ್ತದೆ. ಆದರೆ, ಪತ್ರಿಕೆಯಲ್ಲಿ ಪದಬಂಧ ಮೊದಲು ಮೂಡಿದ್ದು 1913ರ ಡಿಸೆಂಬರ್ 23ರ ಸಂಚಿಕೆಯಲ್ಲಿ. ಕ್ರಿಸ್ಮಸ್ ವಿಶೇóಷಾಂಕದಲ್ಲಿ ಏನಾದರೊಂದು ವಿಶೇಷ ಆಳವಡಿಸಬೇಕೆಂದು ನಿರ್ಧರಿಸಿದ `ದಿ ನ್ಯೂಯರ್ಕ್ ಟೈಂಸ್` ಪತ್ರಿಕೆಯ ಸಂಪ
೭ ನೇ ಸಾಲು:
 
'''ಪದಬಂಧ'''ಗಳು ಮನೋರಂಜನೆಗಾಗಿ ರಚಿಸಲ್ಪಡುವ ಒಂದು ಬಗೆಯ [[ಪದ]] ಸಮಸ್ಯೆಗಳು. ಒಂದು ದೊಡ್ಡ [[ಚೌಕ]]ದಲ್ಲಿ ಅನೇಕ ಚಿಕ್ಕ ಕಪ್ಪು ಮತ್ತು ಬಿಳಿಯ ಚೌಕಗಳಿದ್ದು, ಬಿಳಿ ಚೌಕಗಳಲ್ಲಿ ಅಕ್ಷರಗಳನ್ನು ತುಂಬುವಂತೆ ಸುಳುಹುಗಳನ್ನು ನೀಡಲಾಗುತ್ತದೆ.
 
ಪದಬಂಧ
 
ಪತ್ರಿಕೆಗಳ ಬಹುಪಾಲು ಓದುಗರ ನೆಚ್ಚಿನ ಅಂಕಣ `ಪದಬಂಧ`. ಒಂದೆಡೆ ಭಾಷಾ ಪ್ರೌಢಮೆಗಳಿಸಲು ನೆರವಾಗುವ, ಮತ್ತೊಂದೆಡೆ ಮನೋವಿಕಾಸ ಮತ್ತು ಮನೋಲ್ಲಾಸಕ್ಕೆ ಪೂರಕವಾಗುವ ಪದಬಂಧಗಳ ಇತಿಹಾಸ ಇಂದು ನಿನ್ನೆಯದಲ್ಲ. ಇಂಗ್ಲೆಂಡಿನ ರಾಜನೊಬ್ಬ ಕಾಲಹರಣಕ್ಕಾಗಿ ಎಡದಿಂದ ಬಲಕ್ಕೆ ಮತ್ತು ಮೇಲಿಂದ ಕೆಳಕ್ಕೆ ಅಕ್ಷರಗಳ ಜೋಡಿಸಿ, ಪದರಚನೆ ಮಾಡಿದನೆಂದೂ ಹಾಗೂ ನಂತರ ಇದು ಪದಬಂಧ ಆಟ ತಾಳಲು ಕಾರಣವಾಯಿತೆಂದೂ ಹೇಳಲಾಗುತ್ತದೆ. ಆದರೆ, ಪತ್ರಿಕೆಯಲ್ಲಿ ಪದಬಂಧ ಮೊದಲು ಮೂಡಿದ್ದು 1913ರ ಡಿಸೆಂಬರ್ 23ರ ಸಂಚಿಕೆಯಲ್ಲಿ. ಕ್ರಿಸ್‍ಮಸ್ ವಿಶೇóಷಾಂಕದಲ್ಲಿ ಏನಾದರೊಂದು ವಿಶೇಷ ಆಳವಡಿಸಬೇಕೆಂದು ನಿರ್ಧರಿಸಿದ `ದಿ ನ್ಯೂಯರ್ಕ್ ಟೈಂಸ್` ಪತ್ರಿಕೆಯ ಸಂಪಾದಕ ಆರ್ಥರ್ ವೈನ್ ಪದಗಳ ಆಟದೊಂದಿಗೆ ಓದುಗರ ನೋಟವನ್ನು ಸೆಳೆಯಲು ವರ್ಡ್ ಕ್ರಾಸ್ ಎಂಬ ಅಂಕಣವನ್ನು ಪ್ರಕಟಿಸಿದ. ನಂತರ, ಆ ಆಂಕಣ ಎಷ್ಟು ಜನಪ್ರಿಯತೆ ಗಳಿಸಿತೆಂದರೆ ಇತರೆ ಪತ್ರಿಕೆಗಳೂ ಇಂತಹುದೇ ಅಂಕಣವನ್ನು ತಮ್ಮ ವಾರದ ಪುರವಣಿಗಳಲ್ಲಿ ಪ್ರಕಟಿಸುವುದು ಅನಿವಾರ್ಯವಾಯಿತು.
 
ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಿದ್ದ ಪದಬಂಧಗಳ ಜನಪ್ರಿಯತೆಯ ಗಮನಿಸಿ-ಗ್ರಹಿಸಿದ ಅಮೆರಿಕದ ಸೈಮನ್ ಮತ್ತು ಪುಸ್ಟೆರ್ ಎಂಬ ಯುವಕರು 1924ರಲ್ಲಿ ಪದಬಂಧಗಳ ಸಂಕಲವನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದರು. ಅವರ ಪುಸ್ತಕಕ್ಕೆ ಆರಂಭದಲ್ಲಿ ಬೇಡಿಕೆ ಇಲ್ಲದಂತೆ ಕಂಡರೂ, ಆ ಪದಬಂಧ ಪುಸ್ತಕದಲ್ಲಿನ ಸೃಜನಶೀಲತೆಗೆ ಮನಸೋತ ಜನರು ಅವುಗಳ ಎಲ್ಲಾ ಪ್ರತಿಗಳನ್ನು ಖರೀದಿಸಿದರು. ತಮ್ಮ ಕೃತಿಗೆ ದೊರೆತ ಉತ್ತಮ ಪ್ರತಿಕ್ರಿಯೆಯಿಂದ ಉತ್ತೇಜಿತರಾದ ಸೈಮನ್ ಮತ್ತು ಪುಸ್ಟೆರ್ ಪದಬಂಧಗಳ ಮತ್ತೆರಡು ಪುಸ್ತಕಗಳನ್ನು ಪ್ರಕಟಿಸಿದರು. ಎಂಟು ದಶಕಗಳ ಹಿಂದೆಯೇ, ಆ ಪುಸ್ತಕಗಳ ಮೂರೂವರೆ ಲಕ್ಷ ಪ್ರತಿಗಳು ಮಾರಾಟವಾಗಿ ದಾಖಲೆ ಸ್ಥಾಪಿಸಿದವು ಎಂದರೆ ಪದಬಂಧದ ಪ್ರಭಾವ ಎಷ್ಟಿತ್ತು”ಎಂಬುದಕ್ಕೆ ಇದು ಉತ್ತಮ ಉದಾಹರಣೆ.
 
ಪದಬಂಧಗಳ ಪುಸ್ತಕಗಳಿಂದ ಪ್ರಭಾವಿತರಾದ ಜನರು ಪದಬಂಧಗಳ ಕೂಟ ಮತ್ತು ಒಕ್ಕೂಟಗಳನ್ನು ರಚಿಸಿಕೊಂಡು ಪದಬಂಧಗಳ ಸ್ಪರ್ಧೆಗಳನ್ನು ಏರ್ಪಡಿಸಿದರು. ಆ ಸಂದರ್ಭದಲ್ಲಿ ಅಮೆರಿಕಾದಲ್ಲಿ ಭಾರೀ ಸಂಖ್ಯೆಯಲ್ಲಿ ನಿಘಂಟುಗಳು ಮಾರಾಟವಾಗಿ ರಾಷ್ಟ್ರವಿಡಿ ಚಿಂತನಾ ಕಾರಂಜಿಯನ್ನು ಪುಟಿಸಿತು. ಆಂಗ್ಲ ಪತ್ರಿಕೋದ್ಯಮವನ್ನು ಆವರಿಸಿದ ನಂತರ, ಪದಬಂಧಗಳು ವಿವಿಧ ದೇಶ-ಪ್ರದೇಶಗಳಲ್ಲಿನ ಸ್ಥಳೀಯ ಭಾಷಾ ಪತ್ರಿಕೋದ್ಯಮವನ್ನೂ ಪ್ರವೇಶಿಸಿತು. ಅಂತೆಯೇ, ಕನ್ನಡ ಪತ್ರಿಕೋದ್ಯಮವನ್ನೂ ಪದಾರ್ಪಣೆ ಮಾಡಿದ ಪದಬಂಧಗಳು ಮೊದಲು ಪ್ರಮುಖ ದಿನಪತ್ರಿಕೆಗಳ ವಾರದ ವಿಶೇಷ ಪುರವಣಿಗಳಲ್ಲಿ ವಿಜೃಂಭಿಸತೊಡಗಿದವು. ಕೆಲವು ಪತ್ರಿಕೆಗಳು ಪದಬಂಧಗಳು ನಿಖರವಾಗಿ ಭರ್ತಿಮಾಡಿ ಕಳುಹಿಸಿದ ಓದುಗರಿಗೆ ಬಹುಮಾನಗಳನ್ನು ನೀಡುವುದಾಗಿ ಘೋಷಿಸಿ ತಮ್ಮ ಪ್ರಸಾರ ಸಂಖ್ಯೆ ಹೆಚ್ಚಿಸಿಕೊಳ್ಳುವಲ್ಲಿ ಪದಬಂಧಗಳನ್ನು ಬಳಸಿಕೊಂಡವು. ಇದೀಗ ಪದಬಂಧಗಳು ಪ್ರಮುಖ ದಿನಪತ್ರಿಕೆಗಳಲ್ಲಿ ದಿನ ನಿತ್ಯದ ಅಂಕಣವಾಗಿ ಪ್ರಕಟಗೊಳ್ಳುತ್ತಿವೆ.
 
  ಕನ್ನಡ ಪತ್ರಿಕೊದ್ಯಮದಲ್ಲಿ ಪದಬಂಧಗಳು ರಚಿಸುವಲ್ಲಿ ಅತ್ಯಂತ ಹಿರಿಯರು ಹಾಗೂ ವಿಚಾರ ಪ್ರಚೋದಕರೂ ಆಗಿರುವ ಕೆ.ಎಸ್.ನಾಗಭೂಷಣ `ಪ್ರಜಾವಾಣಿ` ಪತ್ರಿಕೆಯ ವಾರದ ಪುರವಣಿಯಲ್ಲಿ ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಪದಬಂಧ ರಚಿಸಿ ಓದುಗರಿಗೆ ಪರಿಚಿತರಾಗಿದ್ದಾರೆ. ನಂತರ ಮೈಸೂರಿನ ಸತ್ಯನಾರಾಯಣ ಅವರು ಸಂಯುಕ್ತ ಕರ್ನಾಟಕ ಹಾಗೂ `ಮುಂಜಾನೆ` ಪತ್ರಿಕೆಗಳಲ್ಲಿ ಪದಬಂಧ ಬರೆದರು. ಈ ಇಬ್ಬರು ಮಹನೀಯರ ನಂತರ ಕನ್ನಡ ಪದಬಂಧ ಬರೆಯಲಾರಂಭಿಸಿದವರು ಅ.ನಾ.ಪ್ರಹ್ಲಾದರಾವ್.
 
==ಪದಬಂಧಗಳ ಪ್ರಕಟಣೆ==
Line ೧೧೧ ⟶ ೧೨೧:
 
<gallery>
Imageಚಿತ್ರ:CrosswordUK.svg|British/South African-style grid
Imageಚಿತ್ರ:Schwedenrätsel.jpg|Swedish-style grid
</gallery>
 
"https://kn.wikipedia.org/wiki/ಪದಬಂಧ" ಇಂದ ಪಡೆಯಲ್ಪಟ್ಟಿದೆ