ಮರುಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೪ ನೇ ಸಾಲು:
'''ಡೆಸರ್ಟ್ ಮ್ಯಾರಿಗೋಲ್ಡ್'''<ref>https://desertplantsadaptation.wordpress.com/xerophytes/</ref>- ಇವು ''ಆಸ್ಟರ್'' ಕುಟುಂಬಕ್ಕೆ ಸೇರಿಸಲಾಗಿದೆ. ಇದು ಸಾಮಾನ್ಯವಾಗಿ ದಕ್ಷಿಣ ಭಾಗದ ಯು.ಎಸ್.ಎ ಹಾಗೂ ಮೆಕ್ಸಿಕೊ ದೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇವು ವಾರ್ಷಿಕ ಹಾಗೂ ಕಡಿಮೆ ಅವಧಿಯ ಬಹುವಾರ್ಷಿಕ ಸಸ್ಯಗಳಾಗಿದ್ದು ಇವು ಸುಮಾರು ೧೦ ರಿಂದ ೩೦ ಅಂಗುಲ ಎತ್ತರ ಬೆಳೆಯುತ್ತದೆ. ಇದರ ಹೂಗಳು ಹಳದಿ ಬಣ್ಣ ಇರುವುದರಿಂದ ಇವುಗಳನ್ನು ಮ್ಯಾರಿಗೋಲ್ಡ್ ಎನ್ನಲಾಗುತ್ತದೆ. ಈ ಹೂಗಳು ಬಹಳ ವಿಷಕಾರಿಕ. ಈ ಸಸ್ಯಗಳ ಸೇವನೆಯಿಂದಾಗಿ ಬಹಳ ಕುರಿಗಳು ಸಾವನಪ್ಪಿವೆ.
 
'''ಡೆಸರ್ಟ್ ಲಿಲ್ಲಿ'''- ಇದರ ಇನ್ನೊಂದು ಹೆಸರು ಹೆಸ್ಪರೋಕ್ಯಾಲಿಸ್. ಇದನ್ನು ಉತ್ತರ ಅಮೇರಿಕಾ, ಮೆಕ್ಸಿಕೊ, ಕ್ಯಾಲಿಫೋರ್ನಿಯಾ ಹಾಗೂ ಆರಿಜೋನದ ಮರುಭೂಮೆಯಲ್ಲಿ ಕಾಣಬಹುದು. ಇದರ ಎಲೆಗಳು ಸುಮಾರು ಒಂದು ಅಂಗುಲದಷ್ಟು ಅಗಲವಿದ್ದು ಇನ್ನೂ ೮-೨೦ ಅಂಗುಲದಷ್ಟು ಅಗಲ ಬೆಳೆಯಬಹುದು. ಇದಕ್ಕೆ ಒಂದು ಆಳದ ಗಡ್ಡೆ ಇದ್ದು ಆ ಗಡ್ಡೆಯನ್ನು ಆಹಾರವನ್ನಾಗಿ ಅಮೇರಿಕಾದವರು ಬಳಸುತ್ತಾರೆ.<ref>https://calscape.org/Hesperocallis-undulata-()</ref>
 
'''ಡೆಸರ್ಟ್ ವಿಲ್ಲೋ ಮರ'''- ಖಿಲೋಪ್ಸಿಸ್ ಎಂದೂ ಕರೆಯುತ್ತಾರೆ. ಇದು ಮೆಕ್ಸಿಕೊ ಹಾಗೂ ಯು.ಎಸ್.ಎನಲ್ಲಿ ಕಾಣುವ ಸೂಕ್ಷ್ಮ, ಸಣ್ಣದಾದ ಪತನಶೀಲ ಹೊದರು. ಇದು ಮೇ ತಿಂಗಳಲ್ಲಿ ಬೆಳೆದು ಸೆಪ್ಟೆಂಬರ್ ತಿಂಗಳವರೆಗೂ ಇರುತ್ತದೆ. ಈ ಹೂವಿನ ಪರಾಗಸ್ಪರ್ಷವನ್ನು ಜೇನುನೊಣ ಮಾಡುತ್ತದೆ. ಇದು ಶುಷ್ಕ ಸ್ಥಿತಿಯನ್ನು ತಡೆಕೊಳ್ಳುವುದು.<ref>https://www.arborday.org/trees/treeguide/TreeDetail.cfm?ItemID=1077</ref>
 
'''ತಾಳೆ ಜಾತಿಯ ಮರ'''- ಇದು ಉಷ್ಣವಲಯದ, ಉಪೋಷ್ಣವಲಯದ ಬಿಸಿ ಮತ್ತು ಆರ್ದ್ರತೆಯ ಸ್ಥಿತಿಯಲ್ಲಿ ಬೆಳೆಯುವುದು. ಇದು ಅತಿ ಶೀತಲ ಸ್ಥಿತಿಯನ್ನು ತಡೆಯುವುದಿಲ್ಲ. ಇದು ಸುಮಾರು ೨೬೦೦ ತಳಿಗಳನ್ನು ಹೊಂದಿದೆ. ಇದರ ಕಾಂಡವು ಬಹಳ ಉದ್ದವಾಗಿದ್ದು, ಇದರ ಉದ್ದದ ಎಲೆಗಳ ಗೊಂಚಲು ಕಾಂಡದ ತುದಿಯಲ್ಲಿ ಇರುವುದು. ಈ ಮರದಿಂದ ತೆಗೆದ ತೈಲವು ಖಾದ್ಯವಾಗಿದೆ. ಈ ಸಸ್ಯದ ರಸವನ್ನು ಹುದುಗಿಸಿ ಪಾಮ್ ವೈನ್ ತಯಾರಿಸುತ್ತಾರೆ. ಈ ಮರದಿಂದ ಬರುವ ತೆಂಗಿನಗರಿಯಿಂದ ಹಗ್ಗ, ಹಾಸಿಗೆ, ಕುಂಚವನ್ನು ಮಾಡಲಾಗುತ್ತದೆ.
"https://kn.wikipedia.org/wiki/ಮರುಭೂಮಿ" ಇಂದ ಪಡೆಯಲ್ಪಟ್ಟಿದೆ