೪೨೨
edits
(ಹೊಸ ಪುಟ: '''ಇಲ್ಮೆನೈಟ್''' ಒಂದು ಖನಿಜ, ರಾಸಾಯನಿಕ ಸೂತ್ರ FeTiO3. ಇದು ರಾಂಬೊಹೀಡ್ರಲ್ ವರ್ಗಕ...) |
|||
'''ಇಲ್ಮೆನೈಟ್''' ಒಂದು [[ಖನಿಜ]], ರಾಸಾಯನಿಕ ಸೂತ್ರ FeTiO3. ಇದು ರಾಂಬೊಹೀಡ್ರಲ್ ವರ್ಗಕ್ಕೆ ಸೇರಿದ ಹರಳುಗಳಾಗಿ ದೊರೆಯುತ್ತದೆ. ಹರಳುಗಳಿಗೆ ಸಾಮಾನ್ಯವಾಗಿ ಮಂದವಾದ ಫಲಾಕೃತಿ ಇರುವುದು. ಅಲ್ಲದೆ ಅಸ್ಪಷ್ಟ ಮುದ್ದೆ ಅಥವಾ ಸಣ್ಣ ಸಣ್ಣ ಕಣರಚನೆಯೂ ತೋರಿಬರುವುದುಂಟು. ಹಲವು ವೇಳೆ ಮರಳಿನೋಪಾದಿಯಲ್ಲೂ ದೊರೆಯುತ್ತದೆ. ಬಣ್ಣದಲ್ಲಿ ಕಬ್ಬಿಣದ ಕಪ್ಪು; ಒರೆ ಕಪ್ಪು ಅಥವಾ ಕಂದು [[ಕೆಂಪು
==ರಾಸಾಯನಿಕ ಸಂಯೋಜನೆ==
[[ಕಬ್ಬಿಣ]] ಮತ್ತು ಟೈಟೇನಿಯಂ ಆಕ್ಸೈಡು. ಅನೇಕ ವೇಳೆ ನಿರ್ದಿಷ್ಟ ರಾಸಾಯನಿಕ ಸಂಯೋಜನೆಯನ್ನು ತೋರದೆ ಧಾತುಗಳ ಪ್ರಮಾಣದಲ್ಲಿ ಏರುಪೇರುಗಳನ್ನು ತೋರಿಸುವುದು ಉಂಟು. ಹಲವು ಬಾರಿ ಹಿಮಟೈಟ್ ಅಥವಾ ಮ್ಯಾಗ್ನಟೈಟ್ ಪದರುಗಳೊಡನೆ ಒಂದು ರೀತಿಯ ವಿಶಿಷ್ಟ ಹೆಣಿಗೆ ರಚನೆಯನ್ನು ಇಲ್ಮನೈಟ್ ತೋರಿಸುತ್ತದೆ. ಇದು ವಿವಿಧ ಅಗ್ನಿಶಿಲೆಗಳಲ್ಲಿ ಅದರಲ್ಲೂ ಬಹುತೇಕ ಗ್ಯಾಬ್ರೋ ಮತ್ತು ಡಯೋರೈಟ್ ಗುಂಪಿನ ಶಿಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ದೊರೆಯುತ್ತದೆ. ಹಲವು ಸಾರಿ ರೂಪಾಂತರಿತ ಶಿಲೆಗಳಲ್ಲಿ ಕಂಡು ಬರುವುದುಂಟು. ಈ ಖನಿಜದ ಉತ್ತಮ ಬಗೆಯ ಮೆಕ್ಕಲು ನಿಕ್ಷೇಪಗಳನ್ನು ಕಾಣಬಹುದು.<ref>http://rruff.geo.arizona.edu/doclib/hom/ilmenite.pdf</ref>
ಟೈಟೇನಿಯಂ ಮತ್ತು ಟೈಟೇನಿಯಂ ಡೈ ಆಕ್ಸೈಡುಗಳು ಉತ್ಪತ್ತಿಗೆ ಮುಖ್ಯ ಮೂಲ ಖನಿಜ ಇಲ್ಮನೈಟ್. ಈ ಆಕ್ಸೈಡುಗಳನ್ನು ಪಡೆಯಲು ಖನಿಜದ ಅದುರನ್ನು ವಿದ್ಯುತ್ ಕುಲುಮೆಗಳಲ್ಲಿ ಕಾಸಿ ಕರಗಿಸುತ್ತಾರೆ. ಹೀಗೆ ಕರಗಿಸಿದ ವಸ್ತುವನ್ನು ಸಲ್ಫ್ಯೂರಿಕ್ ಆಮ್ಲದೊಡನೆ ಬೆರೆಸಿ ಶುದ್ಧೀಕರಣಕ್ಕೊಳಪಡಿಸಿದಾಗ ಟೈಟೇನಿಯಂ ಆಕ್ಸೈಡುಗಳನ್ನು ಪಡೆಯಬಹುದು. ಈಚಿನ ವರ್ಷಗಳಲ್ಲಿ ಟೈಟೇನಿಯಂ ಡೈ ಆಕ್ಸೈಡನ್ನು ಹೆಚ್ಚಿನ ಪ್ರಮಾಣದಲ್ಲಿ ನಾನಾ ಬಗೆಯ ಕೈಗಾರಿಕೆಗಳಲ್ಲಿ ಬಳಸಲಾಗುತ್ತಿದೆ. ಉದಾಹರಣೆಗೆ, ದ್ರವಬಣ್ಣಗಳ ತಯಾರಿಕೆಗೆ ಅಗತ್ಯವಾದ ಬಿಳಿ ಬಣ್ಣ, ಕಾಗದ, ರಬ್ಬರ್, ಪ್ಲಾಸ್ಟಿಕ್ ಸಾಮಾನು, ಪಿಂಗಾಣಿ ಸಾಮಾನು, ಮುದ್ರಣ ಶಾಯಿ, ಹತ್ತಿ ಬಟ್ಟೆ, ಸಾಬೂನು, ಸುಗಂಧ ದ್ರವ್ಯಗಳು, ಕೃತಕ ದಂತ ನಿರ್ಮಾಣ, ಚರ್ಮ ಹದ ಮಾಡುವಿಕೆ ಹೀಗೆ ನಾನಾ ಬಗೆಯ ಕೈಗಾರಿಕೆಗಳಲ್ಲಿ ಇದೊಂದು ಅಗತ್ಯವಾದ ಮೂಲ ಪದಾರ್ಥವೆನಿಸಿದೆ.
|
edits