"ಆಲಿಗೊಸೀನ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು (Bot: Migrating 1 interwiki links, now provided by Wikidata on d:Q101873)
 
 
==ಆಲಿಗೊಸೀನ್ ಸ್ತೋಮಗಳು ==
ಆಲಿಗೊಸೀನ್ ಸ್ತೋಮಗಳು ಎಂದರೆ ಆ ಕಲ್ಪದಲ್ಲಿ ರೂಪುಗೊಂಡ ಎಲ್ಲ ಶಿಲೆಗಳ ಸಮುದಾಯ ಎಂದು ಸಾಮಾನ್ಯ ಅರ್ಥ; ನಿರ್ದಿಷ್ಟ ಅರ್ಥ ಟರ್ಷಿಯರಿ ಯುಗದ ಆಲಿಗೊಸೀನ್ ಕಲ್ಪದಲ್ಲಿ ಉಂಟಾದ ಅವಸಾದನ ಶಿಲೆಗಳೆಂದಿದೆ. [[ಇಯೊಸೀನ್]] ಕಲ್ಪದ ಅಂತ್ಯದಲ್ಲಿ ಆಂಗ್ಲೊಫ್ರಾಂಕ್‍ಬೆಲ್ಜಿಯನ್ ನಿಕ್ಷೇಪ ಪ್ರದೇಶ ಬಹಳ ಕಿರಿದಾಗಿ ಅಲ್ಲಲ್ಲಿ ಪರಸ್ಪರ ಬೇರ್ಪಟ್ಟ ತಗ್ಗುಪ್ರದೇಶಗಳಲ್ಲಿ ಮಾತ್ರ ಉಳಿಯಿತು. ಆಲಿಗೊಸೀನ್ ಕಾಲದ ಪ್ರಾರಂಭದಲ್ಲಿ ಈ ಪ್ರದೇಶದ ಹೆಚ್ಚು ಭಾಗ ಸಮುದ್ರಾಕ್ರಮಣಕ್ಕೆ ಒಳಗಾಯಿತು; ಇದು ಜರ್ಮನಿಯ ಉತ್ತರ ಭಾಗ ಮತ್ತು ರಷ್ಯಾದ ಪೂರ್ವ ಭಾಗಕ್ಕೆ ವಿಸ್ತರಿಸಿತು. ಆಗ ಬಂದ ಮೃದ್ವಂಗಿಗಳು ಈ ಕಾಲದ ವಿಶಿಷ್ಟ ಜೀವಿಗಳಾಗಿವೆ. ಜರ್ಮನಿಯಲ್ಲಿ ಇಯೊಸೀನ್ ನಿಕ್ಷೇಪಗಳೇ ಇಲ್ಲ. ಆದರೆ ಆಲಿಗೊಸೀನ್ ನಿಕ್ಷೇಪಗಳು ಉತ್ತಮವಾಗಿ ರೂಪುಗೊಂಡಿವೆ. ಇವುಗಳ ಆಧಾರದ ಮೇಲೆಯೇ ಬೆರಿಕ್ ಆಲಿಗೊಸೀನ್‍ಸ್ತೋಮ ಎಂಬ ಹೆಸರನ್ನು ಬಳಸಿದ್ದು, ಈ ಸ್ತೋಮವನ್ನು ಮೂರು ಭಾಗಗಳನ್ನಾಗಿ ವಿಭಜಿಸಲಾಗಿದೆ. 1. ಕೆಳಭಾಗ ಹಸಿರು ಮರಳು ಮತ್ತು ಜೇಡುಗಳಿಂದ ಕೂಡಿ ವಿಶಾಲ ವ್ಯಾಪ್ತಿಯನ್ನು ಹೊಂದಿದೆ ಮತ್ತು ವಿಶಿಷ್ಟ ಜೀವಾವಶೇಷಗಳಿಂದ ಕೂಡಿದೆ. ಇವುಗಳ ಮಧ್ಯೆ ಕಂದು ಬಣ್ಣದ ಕಲ್ಲಿದ್ದಲ ಪದರಗಳಿವೆ. <ref>https://www.dictionary.com/browse/oligocene</ref>ಅವುಗಳಲ್ಲಿ ಕೆಲವು 100' ದಪ್ಪ ಇವೆ. ಈ ಕಲ್ಲಿದ್ದಲು ಕೋನಿಫೆರಸ್ ಗಿಡಗಳಿಂದಾಗಿವೆ. ಅವುಗಳಿಂದ ಜಿನುಗಿದ ಗೋಂದು ಬಾಲ್ಟಿಕ್ ತೀರದ ಸುಪ್ರಸಿದ್ಧ ಅಂಬರ್ ನಿಕ್ಷೇಪವಾಗಿದೆ.
 
==ಜೀವಾವಶೇಷಗಳು==
೪೨೨

edits

"https://kn.wikipedia.org/wiki/ವಿಶೇಷ:MobileDiff/966769" ಇಂದ ಪಡೆಯಲ್ಪಟ್ಟಿದೆ