"ಇನ್ಸ್‌ ಆಫ್ ಕೋರ್ಟ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: '''ಇನ್ಸ್ ಆಫ್ ಕೋರ್ಟ್''', ಇವು ಇಂಗ್ಲೆಂಡಿನಲ್ಲಿ ವಕೀಲ ವೃತ್ತಿ ಅವಲಂಬಿಸಲು ಅನು...)
 
 
'''ಇನ್ಸ್ ಆಫ್ ಕೋರ್ಟ್''', ಇವು ಇಂಗ್ಲೆಂಡಿನಲ್ಲಿ[[ಇಂಗ್ಲೆಂಡ್]] ನಲ್ಲಿ [[ವಕೀಲ]] ವೃತ್ತಿ ಅವಲಂಬಿಸಲು ಅನುಮತಿ ಕೊಡುವ ಸರ್ವಾಧಿಕಾರವುಳ್ಳ ನಾಲ್ಕು ನ್ಯಾಯವಾದಿ ಸಂಸ್ಥೆಗಳು.
 
==ಹಿನ್ನೆಲೆ==
ಲಿಂಕನ್ಸ್ ಇನ್, ಗ್ರೇಸ್ ಇನ್, ದಿ ಇನ್ನರ್ ಟೆಂಪ್ಲ್, ದಿ ಮಿಡ್ಲ್ ಟೆಂಪ್ಲ್ ಎಂಬ ಈ ನಾಲ್ಕು ಸಂಸ್ಥೆಗಳೂ ಲಂಡನ್ನಿನಲ್ಲಿವೆ[[ಲಂಡನ್]] ನಗರದಲ್ಲಿವೆ. ನ್ಯಾಯಶಾಸ್ತ್ರ ವಿಶ್ವವಿದ್ಯಾನಿಲಯದ ಕಾಲೇಜುಗಳೆಂದು ಇವನ್ನು ಕರೆಯುವುದು ರೂಢಿ. ಇವುಗಳ ಸಾಮಾನ್ಯ ರಚನೆ, ಆಡಳಿತ ವ್ಯವಸ್ಥೆ ಹಾಗೂ ಕಾರ್ಯಭಾರದ ದೃಷ್ಟಿಯಿಂದ ಇವನ್ನು ಹೀಗೆನ್ನುವುದು ಉಚಿತವೇ ಆಗಿದೆ. ಕೋಕ್, ಸೆಲ್ಡನ್ ಮುಂತಾದವರು ಆಕ್ಸ್‍ಫರ್ಡ್ ಕೇಂಬ್ರಿಜ್ ವಿಶ್ವವಿದ್ಯಾನಿಲಯಗಳಂತೆಯೇ ಇವನ್ನೂ ಪರಿಗಣಿಸಿದ್ದಾರೆ. ವಿಶ್ವವಿದ್ಯಾನಿಲಯಗಳಂತೆಯೇ ಇವುಗಳೂ ಪದವೀಪ್ರಧಾನಕ್ಕಾಗಿ ವಿದ್ಯಾರ್ಥಿಗಳನ್ನು ತಯಾರಿಸುತ್ತವೆ; ಅವರ ಶಿಸ್ತಿನ ಹೊಣೆ ಹೊರುತ್ತವೆ. ಅಭ್ಯರ್ಥಿಗಳು ನ್ಯಾಯವಾದಿಗಳಾಗಿ ವೃತ್ತಿಯಲ್ಲಿ ತೊಡಗಬಹುದೆಂದು ಅವರಿಗೆ ವಿಧಿವತ್ತಾಗಿ ದೀಕ್ಷೆ ನೀಡುವ ವಿಶಿಷ್ಟಾಧಿಕಾರವುಳ್ಳ ಬೆಂಚುಗಳೆಂಬ ಆಡಳಿತ ಮಂಡಲಿಗಳನ್ನೂ ಇವು ಹೊಂದಿರುತ್ತವೆ.<ref>https://www.britannica.com/topic/Inns-of-Court</ref>
==ವೈಶಿಷ್ಠ್ಯ==
ಈ ಇನ್ನುಗಳು ಸ್ವಯಂಪ್ರವೃತ್ತ (ವಾಲಂಟರಿ) ಸಂಘಗಳು. ಇವುಗಳಿಗೆ ಸನ್ನದುಗಳಿಲ್ಲ. ವಿಶಿಷ್ಟವಾದ ಶಾಸನದಿಂದ ಇವನ್ನು ನಿರ್ಮಿಸಿಲ್ಲ. ಇವಕ್ಕಾಗಿ ಯಾವ ದತ್ತಿ ಅಥವಾ ಉಂಬಳಿಯನ್ನೂ ಯಾರೂ ಬಿಟ್ಟಿಲ್ಲ. ಆದ್ದರಿಂದ ಇವುಗಳ ಪೂರ್ವೇತಿಹಾಸವನ್ನರಿಯುವುದು ಕಠಿಣ. ಇವಕ್ಕೆ ತಮ್ಮದೆಂಬ ನೆಲವಿಲ್ಲ; ಗುತ್ತಿಗೆಯ ನೆಲದ ಮೇಲೆ ಇವುಗಳ ನಿವಾಸ. ಈ ಕರಾರುಗಳ ದಾಖಲೆಗಳ ಮೂಲ ಹುಡುಕುವುದೂ ಅಸಾಧ್ಯ. ಆದ್ದರಿಂದ ಇವುಗಳ ಜನ್ಮದಿನಗಳನ್ನರಿಯುವುದು ಶಕ್ಯವಿಲ್ಲ.<ref>https://www.merriam-webster.com/dictionary/Inns%20of%20Court</ref>
೪೨೨

edits

"https://kn.wikipedia.org/wiki/ವಿಶೇಷ:MobileDiff/966760" ಇಂದ ಪಡೆಯಲ್ಪಟ್ಟಿದೆ