ಅದುಮಿದ ಗಾಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Bot: Migrating 1 interwiki links, now provided by Wikidata on d:Q143746
೨ ನೇ ಸಾಲು:
 
==ಪ್ರಕ್ರಿಯೆ==
ಸಾಮಾನ್ಯವಾಗಿ ಬಯಲಿನಲ್ಲಿ ಬೀಸುವ ಗಾಳಿ ಚ.ಅಂ.ಕ್ಕೆ 15 ಪೌಂಡ್ ಒತ್ತಡವನ್ನು ಉಂಟುಮಾಡುತ್ತದೆ. ಗಾಳಿಯನ್ನು ವಿಶೇಷ ರೀತಿಯ ಯಂತ್ರಸಾಧನಗಳಿಂದ ಅದುಮಿದಾಗ ಅದರ ಗಾತ್ರ ಕಡಿಮೆಯಾಗಿ, ಅದು ಉಂಟು ಮಾಡುವ ಒತ್ತಡ ಹೆಚ್ಚುತ್ತದೆ. ಅದುಮಿದ ಗಾಳಿಯನ್ನುಪಯೋಗಿಸಿಕೊಂಡು ಸುಮಾರು 200 ಬೇರೆ ಬೇರೆ ರೀತಿಯ ಯಂತ್ರಗಳನ್ನು ನಡೆಸುತ್ತಾರೆ. ರೈಲು ನಿಲ್ದಾಣದಲ್ಲಿನ ಪಾಯಿಂಟುಗಳನ್ನೂ ಸಂಕೇತಸೂಚಿಗಳನ್ನೂ (ಸಿಗ್ನಲ್ಸ್) ತಿರುಗಿಸಲು ಒತ್ತಡಕ್ಕೊಳಪಡಿಸಿದ ಗಾಳಿಯನ್ನು ಬಳಸುತ್ತಾರೆ. ವೆಸ್ಟಿಂಗ್‍ಹೌಸ್ ಎಂಬುವನು ಈ ಕೆಲಸಕ್ಕೆ ಮೊಟ್ಟಮೊದಲು (1867) ಅದುಮಿದ ಗಾಳಿಯನ್ನು ಬಳಸಿದ.<ref>https://en.wikipedia.org/wiki/Special:BookSources/1134650205</ref> ಸ್ಪೋಟಕ ವಸ್ತುಗಳನ್ನು ಕೊಂಡೊಯ್ಯುವ ರೈಲುಗಾಡಿಗಳನ್ನು ನಡೆಸಲು ಅದುಮಿದ ಗಾಳಿಯನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ದೊಡ್ಡ ದೊಡ್ಡ ಸೌಧಗಳಲ್ಲಿ ಕೆಳಗಿಂದ ಮಹಡಿಗಳಿಗೆ ಹೋಗಲು ಬಳಸುವ ಎತ್ತುಯಂತ್ರಗಳಲ್ಲಿ (ಲಿಫ್ಟ್); ಕಲ್ಲುಗಣಿಯ ಕೆಲಸ, ಸುರಂಗ ತೋಡುವುದರಲ್ಲಿ ಬಂಡೆಯನ್ನು ಸಿಡಿಸಬೇಕಾದಾಗ ಡೈನಾಮೈಟನ್ನಿಡಲು ಅದರಲ್ಲಿ ಕುಳಿಗಳನ್ನು ಮಾಡಲು-ಅದುಮಿದ ಗಾಳಿಯ ಅವಶ್ಯಕತೆ ಹೆಚ್ಚು. ಇದಲ್ಲದೆ ಹಿಂದೆ ಯುದ್ಧಕಾಲದಲ್ಲಿ ನೌಕಾಸ್ಫೋಟಕಗಳನ್ನು (ಟಾರ್ಪೆಡೋ) ಸಮುದ್ರದ ಕೆಳಭಾಗದಲ್ಲಿ ನಡೆಸಲೂ ಕಟ್ಟಡ, ಸೇತುವೆ ಮುಂತಾದುವುಗಳ ನಿರ್ಮಾಣ ಕಾರ್ಯದಲ್ಲಿ ಉಕ್ಕಿನ ಭಾಗಗಳನ್ನು ಒಂದಕ್ಕೊಂದು ಜೋಡಿಸಲು ಗುಬ್ಬಿಮೊಳೆಗಳನ್ನು ಅವುಗಳ ಮೇಲೆ ಬಡಿಯಲೂ ಅದುಮಿದ ಗಾಳಿಯನ್ನು ಬಳಸಲಾಗುತ್ತಿತ್ತು. ಈಗ ಈ ಪದ್ಧತಿ ಕೈಬಿಟ್ಟು ಹೋಗಿ ಬೆಸುಗೆ ವಿಧಾನ (ವೆಲ್ಡಿಂಗ್) ಜಾರಿಯಲ್ಲಿದೆ. ಇದರ ಜೊತೆಗೆ ಕಲ್ಲಿದ್ದಲ ಗಣಿಗಳಲ್ಲಿ, ನಾಲೆಗಡ್ಡಲಾಗಿರುವ ತಡೆಬಾಗಿಲುಗಳನ್ನು (ಲಾಕ್‍ಗೇಟ್ಸ್) ತೆಗೆದು ಮುಚ್ಚಲು; ಟ್ರಾಮ್, ಮೋಟಾರು ವಾಹನಗಳನ್ನು ನಿಶ್ಯಬ್ದವಾಗಿ ನಡೆಸಲು; ಕುರಿಯ ಮೈಮೇಲಿನ ತುಪ್ಪಟವನ್ನು ಕತ್ತರಿಸಲು, ಆಯುಷ್ಕರ್ಮ ಶಾಲೆಗಳಲ್ಲಿ, ಗಾಜಿನ ಉಪಕರಣಗಳ ತಯಾರಿಕೆಯಲ್ಲಿ, ಮೋಟಾರು ವಾಹನಗಳಿಗೆ ತುಂತುರು ಬಣ್ಣ ಹಾಕಲು, ಕಾರ್ಖಾನೆಗಳಲ್ಲಿ ಯಂತ್ರಭಾಗಗಳ ನಡುವೆ ಸೇರಿರುವ ಕಸವನ್ನು ಹೊರತೆಗೆಯಲು- ಹೀಗೆ ಈ ಮುಂತಾದ ಕೆಲಸಗಳಿಗೆ ಅದುಮಿದ ಗಾಳಿ ಉಪಯೋಗಕ್ಕೆ ಬರುತ್ತದೆ.[[en:Compressed_air]]<ref>https://web.archive.org/web/20111224105715/http://isi.fraunhofer.de/isi-de/publ/download/isi04p20/compressed-air-benchmarking.pdf</ref>
 
==ವಾಯು ಸಂಕೋಚಕ==
"https://kn.wikipedia.org/wiki/ಅದುಮಿದ_ಗಾಳಿ" ಇಂದ ಪಡೆಯಲ್ಪಟ್ಟಿದೆ