ಅಧಿಕಸಂಮರ್ದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:Q5757669
೧ ನೇ ಸಾಲು:
'''ಅಧಿಕಸಂಮರ್ದ''' ಇದು
ಒಂದು ವಸ್ತು ಇನ್ನೊಂದರೊಡನೆ ಸಂಪರ್ಕದಲ್ಲಿರುವಾಗ ಒಂದರ ಮೇಲೆ ಇನ್ನೊಂದು ವಸ್ತು ಉಂಟುಮಾಡುವ ಬಲದ ಹೆಸರು ಸಂಮರ್ದ (ಪ್ರೆಷರ್). ಒಂದು ಬಿಂದುವಿನ ಸುತ್ತಲೂ ಒಂದು ಚ.ಸೆಂ.ಮೀ. ಅಥವಾ ಒಂದು ಚ.ಅಂ. ವಿಸ್ತೀರ್ಣದ ಮೇಲೆ ಉಂಟಾಗುವ ಬಲ ಆ ಬಿಂದುವಿನಲ್ಲಿನ ಸಂಮರ್ದವನ್ನು ತಿಳಿಸುತ್ತದೆ. [[ಯಂತ್ರಶಿಲ್ಪಶಾಸ್ತ್ರ]]ದ (ಇಂಜಿನಿಯರಿಂಗ್) ವ್ಯಾಸಂಗಗಳಲ್ಲಿ ಸಂಮರ್ದವನ್ನು ಪೌಂಡ್/ಚ.ಅಂ. ಮಾನದಲ್ಲಿಯೂ [[ಭೌತಶಾಸ್ತ್ರ]]ದಲ್ಲಿ ಡೈನ್/ಚ.ಸೆಂ.ಮೀ. ಮಾನದಲ್ಲಿಯೂ ಅಳೆಯುವುದು ವಾಡಿಕೆ.[[en:High_pressure]]
==ಹಿನ್ನೆಲೆ==
ಎರಡು ಘನವಸ್ತುಗಳು ಒಂದರಮೇಲೊಂದು ಇರುವಾಗ ಒಂದರ ಭಾರದಿಂದ ಇನ್ನೊಂದರ ಮೇಲೆ ಉಂಟಾಗುವ ಸಂಮರ್ದವನ್ನು ಸುಲಭವಾಗಿ ತಿಳಿಯಬಹುದು. ಒಂದು ದ್ರವದ ಮೇಲೆ ಮತ್ತೊಂದು ದ್ರವ ನಿಂತಿರುವಾಗ ಆಗಲಿ ಅಥವಾ ಒಂದು ಘನ ವಸ್ತುವಿನೊಡನೆ ಒಂದು ದ್ರವವಸ್ತು ಕೂಡಿಕೊಂಡಿರುವಾಗ ಆಗಲಿ, ಅವುಗಳ ನಡುವೆ ಉಂಟಾಗುವ ಸಂಮರ್ದವನ್ನೂ ತಿಳಿಯಬಹುದು. ಆದರೆ ಒಂದು ಅನಿಲದಿಂದ ಉಂಟಾಗುವ ಸಂಮರ್ದವನ್ನು ತಿಳಿಯುವುದು ಸುಲಭವಲ್ಲ. ಅನಿಲ ಬಲು ಸೂಕ್ಷ್ಮವಾದ ಅಣುಗಳಿಂದ ಕೂಡಿದ್ದಾಗಿದೆ. ಈ ಅಣುಗಳು ಗೊತ್ತುಗುರಿಯಿಲ್ಲದೆ ಬೇರೆ ಬೇರೆ ದಿಕ್ಕಿನಲ್ಲಿ ಚಲಿಸುತ್ತವೆ. ಕಣಗಳ ಚಲನೆ ಅನಿಲದ ಉಷ್ಣತೆಯನ್ನು ಅವಲಂಬಿಸಿದೆ. ಅನಿಲದ ಸ್ವರೂಪವನ್ನು ಗಮನಿಸಿದರೆ, ಅನಿಲದಿಂದ ಉಂಟಾಗುವ ಸಂಮರ್ದವನ್ನು ಗ್ರಹಿಸಲು ಸಾಧ್ಯವಾಗುವುದು. ಅನಿಲವನ್ನು ಒಂದು ಪಾತ್ರೆಯಲ್ಲಿ (ಕಂಟೈನರ್) ಇಟ್ಟರೆ, ಅನಿಲದ ಅಣುಗಳು ಪಾತ್ರೆಯ ಆವರಣದ ಗೋಡೆಗಳ ಮೇಲೆ ಸಂತತವಾಗಿ ಡಿಕ್ಕಿ ಹೊಡೆಯುವುದರ ಮೂಲಕ ಗೋಡೆಗಳ ಮೇಲೆ ಬಲವನ್ನು ಬೀರುತ್ತವೆ. ಪಾತ್ರೆಯ ಗೋಡೆಗಳ ಮೇಲೆ ಉಂಟಾಗುವ ಒಟ್ಟು ಬಲವನ್ನು ಆವರಣದ ಗೋಡೆಗಳ ವಿಸ್ತೀರ್ಣದಿಂದ ಭಾಗಿಸಿದರೆ ಅನಿಲದಿಂದ ಏರ್ಪಡುವ ಸಂಮರ್ದ ಗೊತ್ತಾಗುವುದು. ನಮ್ಮ ಸುತ್ತಲೂ ಇರುವ ವಾಯುಮಂಡಲದ ಸಂಮರ್ದ (ಅಟ್ಮಾಸ್ಫಿಯರಿಕ್ ಪ್ರೆಷರ್). ಇದು ಭೂಮಿಯ ಮೇಲೆ ಎಲ್ಲೆಡೆಯಲ್ಲಿಯೂ ಒಂದೇ ಆಗಿರುವುದಿಲ್ಲ. ಸಮುದ್ರಮಟ್ಟದಲ್ಲಿ ಇದರ ಬೆಲೆ 760 ಮಿಮೀ ಪಾದರಸ ಅಥವಾ ಚಸೆಂಮೀಗೆ 1,013,249 ಡೈನ್‍ಗಳು [[ವಾಯುಮಂಡಲ]]ದ ಸಂಮರ್ದಕ್ಕಿಂತ ಗಮನಾರ್ಹವಾಗಿ ಕಡಿಮೆಯಿರುವ ಸಂಮರ್ದವನ್ನು ಅಲ್ಪಸಂಮರ್ದ (ಲೋ ಪ್ರೆಷರ್) ಎಂದೂ ವಾಯುಮಂಡಲದ ಸಂಮರ್ದಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿರುವ ಸಂಮರ್ದವನ್ನು ಅಧಿಕಸಂಮರ್ದ (ಹೈ ಪ್ರೆಷರ್) ಎಂದೂ ಕರೆಯುವುದುಂಟು. ಅಧಿಕ ಸಂಮರ್ದವನ್ನು ಅಳೆಯಲು ವಾಯುಮಂಡಲದ ಸಂಮರ್ದವನ್ನು ಏಕಮಾನವಾಗಿ ಉಪಯೋಗಿಸುತ್ತೇವೆ. ಈ ಮಾನವನ್ನು ವಾಯುಮಾನವೆಂದು (ಅಟ್ಮಾಸ್ಫಿಯರ್) ಕರೆಯಬಹುದು.<ref>https://doi.org/10.1002%2Fanie.200602485</ref>
"https://kn.wikipedia.org/wiki/ಅಧಿಕಸಂಮರ್ದ" ಇಂದ ಪಡೆಯಲ್ಪಟ್ಟಿದೆ