ಕೇರಳದ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೫ ನೇ ಸಾಲು:
==ಮಧ್ಯಯುಗ ಕೊನೆಗೊಂಡದ್ದು==
೧೭೬೧ರಲ್ಲಿ ಹೈದರ್ ಆಲಿ ಮೈಸೂರಿನ ನವಾಬನಾದ. ಇವನಿಗೆ ಕೇರಳವನ್ನು ಆಕ್ರಮಿಸಿಕೊಳ್ಳಬೇಕೆಂಬ ಅಭಿಲಾಷೆಯಿತ್ತು. ೧೭೭೬ರಲ್ಲಿ ಮಲಬಾರ್ ದಂಡಯಾತ್ರೆಯನ್ನು ಕೈಗೊಂಡು, ಜಾಮೊರಿನನನ್ನು ಸೋಲಿಸಿ, ಕೋಳಿಕ್ಕೋಡನ್ನು ಆಕ್ರಮಿಸಿಕೊಂಡ. ಅನಂತರ ಕೊಚ್ಚಿಯ ರಾಜನ ಶರಣಾಗತಿಯನ್ನು ಒಪ್ಪಿ, ಪಾಲಕ್ಕಾಡಿನಲ್ಲಿ ಕೋಠಿ ಕಟ್ಟಿದ. ೧೭೭೩ಲ್ಲಿ ಹೈದರ್ ಪುನ: ಮಲಬಾರಿಗೆ ಬಂದ. ಜಾಮೊರಿನ್ ಫ್ರೆಂಚರ ಸಹಾಯವನ್ನು ಕೇಳಿದರೂ ಪ್ರಯೋಜನವಾಗಲಿಲ್ಲ. ೧೭೭೬ರಲ್ಲಿ ಹೈದರನ ದಳಪತಿ ಸಾದರ್‍ಖಾನ್, ತ್ರಿಚೂರ್ ಮತ್ತು ಚಟ್‍ವೇಗಳನ್ನು ಆಕ್ರಮಿಸಿಕೊಂಡ. ೧೭೭೯ರಲ್ಲಿ ಇಂಗ್ಲಿಷರು ಕೋಳಿಕ್ಕೋಡನ್ನು ಆಕ್ರಮಿಸಿಕೊಂಡರು. ೧೭೮೨ರಲ್ಲಿ ಹೈದರನ ಮರಣಾನಂತರ ಇಂಗ್ಲಿಷರು ಪಾಲಕ್ಕಾಡನ್ನು ಆಕ್ರಮಿಸಿಕೊಂಡರು. ೧೭೮೪ರಲ್ಲಿ ಆದ ಮಂಗಳೂರು ಒಪ್ಪಂದದ ಪ್ರಕಾರ ಇಂಗ್ಲಿಷರು ಮಲಬಾರನ್ನು ಟಿಪ್ಪು ಸುಲ್ತಾನನಿಗೆ ಬಿಟ್ಟುಕೊಟ್ಟರು. ೧೭೮೯ರಲ್ಲಿ ಟಿಪ್ಪು ತಿರುವಾಂಕೂರು ದಂಡಯಾತ್ರೆಯನ್ನು ಕೈಗೊಂಡು ಕೊಡಂಗಲ್ಲೂರು, ಕುರಿಯಪ್ಪಳ್ಳಿ ಮುಂತಾದ ಪ್ರದೇಶಗಳನ್ನು ಆಕ್ರಮಿಸಿಕೊಂಡ. ಇಂಗ್ಲಿಷರು ಟಿಪ್ಪುವಿನ ವಿರುದ್ಧ ಒಕ್ಕೂಟವನ್ನು ಸಾಧಿಸಿ, ಅವನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದ ಕಡೆಗೆ ನುಗ್ಗಿದರು. ಇಂಗ್ಲಿಷರೊಡನೆ ಉತ್ತರ ಮಲಬಾರಿನ ರಾಜರು ಮತ್ತು ಜಾಮೊರಿನ್ ಒಪ್ಪಂದ ಮಾಡಿಕೊಂಡು, ತಮ್ಮ ನಾಡನ್ನು ತಮಗೆ ಹಿಂದಿರುಗಿಸಿದರೆ ಇಂಗ್ಲಿಷರಿಗೆ ಕಪ್ಪ ಕೊಡಲು ಒಪ್ಪಿದರು. ಕೊಚ್ಚಿಯ ರಾಜ ಟಿಪ್ಪುವಿಗೆ ತನ್ನ ನಿಷ್ಠೆಯನ್ನು ತ್ಯಜಿಸಿ ಇಂಗ್ಲಿಷರೊಡನೆ ಒಪ್ಪಂದ ಮಾಡಿಕೊಂಡು ಅವರಿಗೆ ಪೊಗದಿ ಕೊಡಲು ಒಪ್ಪಿದ. ಈ ಒಕ್ಕೂಟದಿಂದ ಟಿಪ್ಪುವಿಗೆ ಸೋಲಾಯಿತು. ಇಂಗ್ಲಿಷರು ಬೆಂಗಳೂರನ್ನು ಆಕ್ರಮಿಸಿಕೊಂಡು ಶ್ರೀರಂಗಪಟ್ಟಣದ ಕಡೆಗೆ ನುಗ್ಗಿದರು. ತನ್ನ ರಾಜಧಾನಿಯನ್ನು ಉಳಿಸಿಕೊಳ್ಳಲು ಟಿಪ್ಪು ೧೭೯೨ರಲ್ಲಿ ಇಂಗ್ಲಿಷರಿಗೆ ಮಲಬಾರ್, ಕೊಚ್ಚಿ ಮತ್ತು ಕೊಡಗನ್ನು ಬಿಟ್ಟು ಕೊಡಬೇಕಾಯಿತು. ೧೭೯೯ರಲ್ಲಿ ಇಂಗ್ಲಿಷರ ವಿರುದ್ದ ನಡೆದ ಯುದ್ಧದಲ್ಲಿ ಟಿಪ್ಪು ಮಡಿದಾಗ ಇಂಗ್ಲಿಷರು ಮೈಸೂರು ರಾಜ್ಯವನ್ನು ಒಡೆಯರ್ ರಾಜವಂಶದವರಿಗೆ ಹಿಂದಿರುಗಿಕೊಟ್ಟರು. ಮೈಸೂರು ರಾಜರು ಇಂಗ್ಲಿಷರಿಗೆ ವೈನಾಡ್ ಮತ್ತು ಕನ್ನಡ ಜಿಲ್ಲೆಗಳನ್ನು ಬಿಟ್ಟುಕೊಟ್ಟರು. ಕೊಚ್ಚಿಯ ರಾಜ ಇಂಗ್ಲಿಷರ ಮಿತ್ರನಾದ. ೧೮೦೫ರಲ್ಲಿ ಬ್ರಿಟಿಷರು ಮತ್ತು ತಿರುವಾಂಕೂರು ರಾಜರಿಗೆ ಒಪ್ಪಂದವಾಗಿ ತಿರುವಾಂಕೂರಿನಲ್ಲಿ ಬ್ರಿಟಿಷರ ಸಾರ್ವಭೌಮತ್ವ ಸ್ಥಾಪಿತವಾಯಿತು. ಕೇರಳದ ಚರಿತ್ರೆಯಲ್ಲಿ ಮಧ್ಯಯುಗ ಇಲ್ಲಿಗೆ ಕೊನೆಗೊಂಡಿತು.
<ref>{{cite web |last1=Educational |first1=Educational Britannica |title=The Geography of India: Sacred and Historic Places |url=https://books.google.co.in/books?id=xPUvqtdfjyAC&pg=PA311&redir_esc=y |publisher=Rosen Publishing Group |accessdate=11 January 2020 |language=en |date=April 2010}}</ref>
 
==ಚೋಳರ ಆಕ್ರಮಣದಿಂದಾದ ತೊಂದರೆ==
ಚೋಳರ ಆಕ್ರಮಣದಿಂದ ೧೧ನೆಯ ಶತಮಾನದಲ್ಲಿ ಕೇರಳ ೧೮ ನಾಡುಗಳಾಗಿ ಒಡೆದು ಹೋಗಿದ್ದುದು ೧೯ನೆಯ ಶತಮಾನದಲ್ಲಿ ಮೂರು ರಾಜಕೀಯ ವಿಭಾಗಗಳಾಗಿ ಒಂದುಗೂಡಿತು. ಇವು ೭೬೨೫ ಚ.ಮೈ. ವಿಸ್ತಾರದ ತಿರುವಾಂಕೂರು, ೧೪೧೭ ಚ.ಮೈ. ವಿಸ್ತಾರದ ಕೊಚ್ಚಿ ಮತ್ತು ೫೭೪೭ಚ.ಮೈ. ವಿಸ್ತಾರದ ಬ್ರಿಟಿಷ್ ಮಲಬಾರ್. ೧೭೫೮ರಿಂದ ೧೭೯೮ರವರೆಗೆ ಆಳಿದ ಕಾರ್ತಿಕ ತಿರುನಾಳ್ ರಾಮವರ್ಮ ದೊರೆ ತಿರುವಾಂಕೂರಿನ ರಾಜಧಾನಿಯನ್ನು ಕಲ್‍ಕುಲಂ ಅಥವಾ ಪದ್ಮನಾಭಪುರದಿಂದ ತಿರುವನಂತಪುರಕ್ಕೆ ಬದಲಿಸಿದ. ಈತ ವ್ಯವಸಾಯಕ್ಕೆ ಉತ್ತೇಜನ ಕೊಟ್ಟನಲ್ಲದೆ ಹೊಸ ನಾಣ್ಯಗಳನ್ನೂ ಮುದ್ರಿಸಿದ. ಬಾಲರಾಮವರ್ಮನ (ಆಳ್ವಿಕೆ : ೧೭೯೮-೧೮೧೦) ದಿವಾನ್ ವೇಲುತಂಪಿ ಅನೇಕ ಸುಧಾರಣೆಗಳನ್ನು ಆಚರಣೆಗೆ ತಂದ. ೧೮೧೦ ರಿಂದ ೧೮೧೪ ವರೆಗೆ ಗೌರಿ ಲಕ್ಷ್ಮೀಬಾಯಿ ತಿರುವಾಂಕೂರಿನ ಪ್ರಥಮ ರಾಣಿಯಾಗಿ ಆಳಿದಳು. ೧೮೬೦ರಿಂದ ೧೮೮೦ರ ವರೆಗೆ ಆಳಿದ ರಾಮವರ್ಮನ ಕಾಲದಲ್ಲಿ ತಿರುವಾಂಕೂರು ಮಾದರಿ ಸಂಸ್ಥಾನವಾಗಿತ್ತು. ಅನಂತರ ಬಂದ ರಾಜರು ಸಂಸ್ಥಾನದ ಈ ಕೀರ್ತಿಯನ್ನು ಉಳಿಸಿಕೊಂಡು ಬಂದರು.
"https://kn.wikipedia.org/wiki/ಕೇರಳದ_ಇತಿಹಾಸ" ಇಂದ ಪಡೆಯಲ್ಪಟ್ಟಿದೆ