ಕೇರಳದ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೧ ನೇ ಸಾಲು:
ವೈನಾಡ್ ನಾಯಕರು ತಿರುವಿತಂ ಕೊಡೆಯಲ್ಲಿ ವಾಸಿಸುತ್ತಿದ್ದರು. ೧೬ನೆಯ ಶತಮಾನದಲ್ಲಿ ಬಂದ ಐರೋಪ್ಯರು ವೈನಾಡನ್ನು ಟ್ರಾವಂಕೂರ್ ಎಂದು ಕರೆದರು. ಮಾರ್ತಾಂಡವರ್ಮ ರಾಜನನ್ನು (೧೭೨೯-೧೭೫೮) ಆಧುನಿಕ ತಿರುವಾಂಕೂರಿನ ಸ್ಥಾಪಕನೆಂದು ತಿರುವಾಂಕೂರಿನ ಚರಿತ್ರೆಯಲ್ಲಿ ಕರೆಯಲಾಗಿದೆ. ಈತ ಡಚ್ಚರೊಡನೆ ಸ್ನೇಹ ಬೆಳೆಸಿ ಒಪ್ಪಂದ ಮಾಡಿಕೊಂಡ. ಈತ ತನ್ನ ಅಧಿಕಾರವನ್ನು ಪದ್ಮನಾಭ ದೇವರಿಗೆ ಎರೆದುಕೊಟ್ಟು ಆತನ ದಾಸನಾಗಿ ರಾಜ್ಯಭಾರ ಮಾಡಿದ; ಜನ ದಂಗೆ ಎದ್ದರೆ ಅದು ದೇವರ ವಿರುದ್ಧ ದಂಗೆಯಾಗುತ್ತಿತ್ತು. ೧೭೫೪ರಲ್ಲಿ ಕೊಚ್ಚಿಯ ರಾಜ ಇವನಿಗೆ ಅಧೀನನಾದ. ಈತ ರಾಜ್ಯದ ಆಡಳಿತವನ್ನು ಉತ್ತಮಪಡಿಸಿ ಶಕ್ತಿಯುತವಾದ ಕೇಂದ್ರ ಸರ್ಕಾರವನ್ನು ಸ್ಥಾಪಿಸಿದ್ದಲ್ಲದೆ ಇಂಗ್ಲಿಷರೊಡನೆ ಮೈತ್ರಿ ಗಳಿಸಿದ್ದ. ಇವನು ರಾಜಕಾರಣ ನಿಪುಣನೂ, ದೈವಭಕ್ತನೂ ಉತ್ತಮ ಸೈನಿಕನೂ ಕಲಾಪೋಷಕನೂ ಆಗಿದ್ದ. ಡಚ್ಚರು ಈತನ ಶತ್ರುಗಳೊಡನೆ ಮೈತ್ರಿ ಬೆಳೆಸಿದರು. ೧೭೪೮ರಲ್ಲಿ ಈತ ಡಚ್ಚರನ್ನು ಸೋಲಿಸಿದ. ೧೭೬೬ರಲ್ಲಿ ಹೈದರ್ ಆಲಿ ಕೋಳಿಕ್ಕೋಡನ್ನು ಆಕ್ರಮಿಸಿಕೊಂಡ. ತಿರುವಾಂಕೂರಿನ ಮೇಲೆ ಹೈದರನ ದಾಳಿ ಆರಂಭವಾಗುವುದಕ್ಕೆ ಮುಂಚೆ ೧೭೮೯ರಲ್ಲಿ ಡಚ್ಚರು ಕೊಡಂಗಲ್ಲೂರನ್ನು ತಿರುವಾಂಕೂರಿನ ರಾಜನಿಗೆ ಮಾರಿದರು. ೧೭೯೫ರಲ್ಲಿ ಇಂಗ್ಲಿಷರು ಕೊಚ್ಚಿ ಮತ್ತು ಥಂಕಚೇರಿ ಕೋಟೆಗಳನ್ನು ವಶಪಡಿಸಿಕೊಂಡ ಫಲವಾಗಿ ಡಚ್ಚರು ಕೇರಳವನ್ನು ಬಿಡಬೇಕಾಯಿತು. ಮಾರ್ತಾಂಡವರ್ಮನ ಆಳ್ವಿಕೆಯಲ್ಲಿ ತಂಪುರನ್ನರ ಪ್ರಾಬಲ್ಯ ಕೊನೆಗೊಂಡಿತು. ಹೈದರ್ ಮತ್ತು ಟಿಪ್ಪೂಗಳ ದಾಳಿಯಿಂದ ಮಲಬಾರಿನಲ್ಲಿ ತಂಪುರನ್ನರ ಅವನತಿ ಪ್ರಾರಂಭವಾಯಿತು. ಅಂತಿಮವಾಗಿ ಇಂಗ್ಲಿಷರು ಕೊಚ್ಚಿ ಮತ್ತು ತಿರುವಾಂಕೂರಿನಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸಿದರು.
 
ಇಂಗ್ಲಿಷರು ೧೬೧೫ರಲ್ಲಿ ಕೋಳಿಕ್ಕೋಡಿನಲ್ಲಿ ಒಂದು ವ್ಯಾಪಾರ ಕೋಠಿಯನ್ನು ಸ್ಥಾಪಿಸಿದರು. ಆದರೆ ಅದು ಬಹುಕಾಲ ಉಳಿಯಲಿಲ್ಲ. ೧೬೩೫ರಲ್ಲಿ ಅವರು ಕೊಚ್ಚಿಯಲ್ಲಿ ಮತ್ತೊಂದು ವ್ಯಾಪಾರ ಕೋಠಿಯನ್ನು ಸ್ಥಾಪಿಸಿದರು. ೧೬೬೩ರಲ್ಲಿ ಡಚ್ಚರು ಇಂಗ್ಲಿಷರನ್ನು ಕೊಚ್ಚಿಯಿಂದ ಹೊರದೂಡಿದರು. ಆದರೆ ಜಾಮೊರಿನ್ ಇಂಗ್ಲಿಷರಿಗೆ ವ್ಯಾಪಾರ ಸೌಲಭ್ಯಗಳನ್ನು ಒದಗಿಸಿಕೊಟ್ಟ. ೧೭೦೦ರ ವೇಳೆಗೆ ಇಂಗ್ಲಿಷರು ತಲಚ್ಚೇರಿಯಲ್ಲಿ ಸ್ಥಾಪಿತರಾಗಿದ್ದರು.<ref>{{cite web |last1=Menon |first1=A. Sreedhara |title=A Survey of Kerala History |url=https://books.google.co.in/books?id=FVsw35oEBv4C&pg=PA166&redir_esc=y |publisher=D C Books |accessdate=11 January 2020 |language=en |date=2007}}</ref>
 
==ಮಧ್ಯಯುಗ ಕೊನೆಗೊಂಡದ್ದು==
೧೭೬೧ರಲ್ಲಿ ಹೈದರ್ ಆಲಿ ಮೈಸೂರಿನ ನವಾಬನಾದ. ಇವನಿಗೆ ಕೇರಳವನ್ನು ಆಕ್ರಮಿಸಿಕೊಳ್ಳಬೇಕೆಂಬ ಅಭಿಲಾಷೆಯಿತ್ತು. ೧೭೭೬ರಲ್ಲಿ ಮಲಬಾರ್ ದಂಡಯಾತ್ರೆಯನ್ನು ಕೈಗೊಂಡು, ಜಾಮೊರಿನನನ್ನು ಸೋಲಿಸಿ, ಕೋಳಿಕ್ಕೋಡನ್ನು ಆಕ್ರಮಿಸಿಕೊಂಡ. ಅನಂತರ ಕೊಚ್ಚಿಯ ರಾಜನ ಶರಣಾಗತಿಯನ್ನು ಒಪ್ಪಿ, ಪಾಲಕ್ಕಾಡಿನಲ್ಲಿ ಕೋಠಿ ಕಟ್ಟಿದ. ೧೭೭೩ಲ್ಲಿ ಹೈದರ್ ಪುನ: ಮಲಬಾರಿಗೆ ಬಂದ. ಜಾಮೊರಿನ್ ಫ್ರೆಂಚರ ಸಹಾಯವನ್ನು ಕೇಳಿದರೂ ಪ್ರಯೋಜನವಾಗಲಿಲ್ಲ. ೧೭೭೬ರಲ್ಲಿ ಹೈದರನ ದಳಪತಿ ಸಾದರ್‍ಖಾನ್, ತ್ರಿಚೂರ್ ಮತ್ತು ಚಟ್‍ವೇಗಳನ್ನು ಆಕ್ರಮಿಸಿಕೊಂಡ. ೧೭೭೯ರಲ್ಲಿ ಇಂಗ್ಲಿಷರು ಕೋಳಿಕ್ಕೋಡನ್ನು ಆಕ್ರಮಿಸಿಕೊಂಡರು. ೧೭೮೨ರಲ್ಲಿ ಹೈದರನ ಮರಣಾನಂತರ ಇಂಗ್ಲಿಷರು ಪಾಲಕ್ಕಾಡನ್ನು ಆಕ್ರಮಿಸಿಕೊಂಡರು. ೧೭೮೪ರಲ್ಲಿ ಆದ ಮಂಗಳೂರು ಒಪ್ಪಂದದ ಪ್ರಕಾರ ಇಂಗ್ಲಿಷರು ಮಲಬಾರನ್ನು ಟಿಪ್ಪು ಸುಲ್ತಾನನಿಗೆ ಬಿಟ್ಟುಕೊಟ್ಟರು. ೧೭೮೯ರಲ್ಲಿ ಟಿಪ್ಪು ತಿರುವಾಂಕೂರು ದಂಡಯಾತ್ರೆಯನ್ನು ಕೈಗೊಂಡು ಕೊಡಂಗಲ್ಲೂರು, ಕುರಿಯಪ್ಪಳ್ಳಿ ಮುಂತಾದ ಪ್ರದೇಶಗಳನ್ನು ಆಕ್ರಮಿಸಿಕೊಂಡ. ಇಂಗ್ಲಿಷರು ಟಿಪ್ಪುವಿನ ವಿರುದ್ಧ ಒಕ್ಕೂಟವನ್ನು ಸಾಧಿಸಿ, ಅವನ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದ ಕಡೆಗೆ ನುಗ್ಗಿದರು. ಇಂಗ್ಲಿಷರೊಡನೆ ಉತ್ತರ ಮಲಬಾರಿನ ರಾಜರು ಮತ್ತು ಜಾಮೊರಿನ್ ಒಪ್ಪಂದ ಮಾಡಿಕೊಂಡು, ತಮ್ಮ ನಾಡನ್ನು ತಮಗೆ ಹಿಂದಿರುಗಿಸಿದರೆ ಇಂಗ್ಲಿಷರಿಗೆ ಕಪ್ಪ ಕೊಡಲು ಒಪ್ಪಿದರು. ಕೊಚ್ಚಿಯ ರಾಜ ಟಿಪ್ಪುವಿಗೆ ತನ್ನ ನಿಷ್ಠೆಯನ್ನು ತ್ಯಜಿಸಿ ಇಂಗ್ಲಿಷರೊಡನೆ ಒಪ್ಪಂದ ಮಾಡಿಕೊಂಡು ಅವರಿಗೆ ಪೊಗದಿ ಕೊಡಲು ಒಪ್ಪಿದ. ಈ ಒಕ್ಕೂಟದಿಂದ ಟಿಪ್ಪುವಿಗೆ ಸೋಲಾಯಿತು. ಇಂಗ್ಲಿಷರು ಬೆಂಗಳೂರನ್ನು ಆಕ್ರಮಿಸಿಕೊಂಡು ಶ್ರೀರಂಗಪಟ್ಟಣದ ಕಡೆಗೆ ನುಗ್ಗಿದರು. ತನ್ನ ರಾಜಧಾನಿಯನ್ನು ಉಳಿಸಿಕೊಳ್ಳಲು ಟಿಪ್ಪು ೧೭೯೨ರಲ್ಲಿ ಇಂಗ್ಲಿಷರಿಗೆ ಮಲಬಾರ್, ಕೊಚ್ಚಿ ಮತ್ತು ಕೊಡಗನ್ನು ಬಿಟ್ಟು ಕೊಡಬೇಕಾಯಿತು. ೧೭೯೯ರಲ್ಲಿ ಇಂಗ್ಲಿಷರ ವಿರುದ್ದ ನಡೆದ ಯುದ್ಧದಲ್ಲಿ ಟಿಪ್ಪು ಮಡಿದಾಗ ಇಂಗ್ಲಿಷರು ಮೈಸೂರು ರಾಜ್ಯವನ್ನು ಒಡೆಯರ್ ರಾಜವಂಶದವರಿಗೆ ಹಿಂದಿರುಗಿಕೊಟ್ಟರು. ಮೈಸೂರು ರಾಜರು ಇಂಗ್ಲಿಷರಿಗೆ ವೈನಾಡ್ ಮತ್ತು ಕನ್ನಡ ಜಿಲ್ಲೆಗಳನ್ನು ಬಿಟ್ಟುಕೊಟ್ಟರು. ಕೊಚ್ಚಿಯ ರಾಜ ಇಂಗ್ಲಿಷರ ಮಿತ್ರನಾದ. ೧೮೦೫ರಲ್ಲಿ ಬ್ರಿಟಿಷರು ಮತ್ತು ತಿರುವಾಂಕೂರು ರಾಜರಿಗೆ ಒಪ್ಪಂದವಾಗಿ ತಿರುವಾಂಕೂರಿನಲ್ಲಿ ಬ್ರಿಟಿಷರ ಸಾರ್ವಭೌಮತ್ವ ಸ್ಥಾಪಿತವಾಯಿತು. ಕೇರಳದ ಚರಿತ್ರೆಯಲ್ಲಿ ಮಧ್ಯಯುಗ ಇಲ್ಲಿಗೆ ಕೊನೆಗೊಂಡಿತು.
"https://kn.wikipedia.org/wiki/ಕೇರಳದ_ಇತಿಹಾಸ" ಇಂದ ಪಡೆಯಲ್ಪಟ್ಟಿದೆ