ಕೇರಳದ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೨ ನೇ ಸಾಲು:
 
==ಚೋಳರ ಕಾಲ==
ಕೇರಳ ಕ್ರಿಸ್ತಶಕದ ಪ್ರಾರಂಭದಲ್ಲಿ ಚೇಳರ ಅಧೀನದಲ್ಲಿ ಒಂದು ಚಿಕ್ಕ [[ರಾಜ್ಯ]]ವಾಗಿತ್ತು. ಕೊಡುಗಲ್ಲೂರು ಅದರ ರಾಜಧಾನಿ. ಕ್ರಮೇಣ ಚೇಳ ದೊರೆಗಳು ಕೊಂಗಲನಾಡು, ಪುನ್ನಾಡು, ಕೊಲತುನಾಡು ಮತ್ತು ಕುಟ್ಟನಾಡನ್ನು ಆಕ್ರಮಿಸಿಕೊಂಡರು. ಚೇಳರ ಅವನತಿಗೆ ಆ ರಾಜರ ಸೋಮಾರಿತನ ಮತ್ತು ಅಸಮರ್ಥತೆ ಕಾರಣ. ರೋಮನ್ ಚಕ್ರಾಧಿಪತ್ಯದ ಆಮದು ಮಾಡಿಕೊಂಡ ಭೋಗ ಸಾಮಗ್ರಿಗಳೂ ಇವರ ಅವನತಿಗೆ ಕಾರಣವಾದುವು. ನಾಯರರು ಕೇರಳಕ್ಕೆ ಬಂದು ಈ ದೊರೆಗಳ ಅಧಿಕಾರವನ್ನೂ ನಾಶ ಮಾಡಿದರು. ೬ನೆಯ ಶತಮಾನದಲ್ಲಿ ಪಲ್ಲವರು ಮತ್ತು ಪಾಂಡ್ಯರು ತಮ್ಮ ರಾಜ್ಯವನ್ನು ವಿಸ್ತರಿಸಿದರು. ೬೪೫ರಿಂದ ೬೭೦ರವರೆಗೆ ಆಳಿದ ಪಾಂಡ್ಯರಾಜ ಜಯಂತವರ್ಮ ಕೇರಳದ ಮೇಲೆ ದಂಡೆತ್ತಿ ಬಂದಾಗ ಕೇರಳದ ರಾಜರು ಪಾಂಡ್ಯರ ಶತ್ರುಗಳಾದ ಪಲ್ಲವರೊಡನೆ ಸೇರಿದರು. ಪಲ್ಲವರು ಜಯಶೀಲರಾದರು. ಆದರೆ ಚೇರಮನ್ ಪೆರುಮಾಳ್ ರಾಜನಾದ ಮೇಲೆ, ಪಾಂಡ್ಯರ ಮುನ್ನಡೆಯನ್ನು ತಡೆಗಟ್ಟಿದ. 844ರಲ್ಲಿ ಸ್ಥಾಣುರವಿ ಕೇರಳದ ರಾಜನಾದ. ಕೇರಳ ರಾಜನ ಸಹಾಯದಿಂದ ಚೋಳರು ಪ್ರವರ್ಧಮಾನರಾದರು. ಸ್ಥಾಣುರವಿ ಚೋಳರಾಜ ೧ನೆಯ ಆದಿತ್ಯನ ಸಹಾಯಕ್ಕೆ ಹೋಗಿ ಪಲ್ಲವರನ್ನು ಸೋಲಿಸಿದ. ಆದರೆ ಚೋಳರು ಪಾಂಡ್ಯ ರಾಜ್ಯವನ್ನು ಆಕ್ರಮಿಸಿ ಕೇರಳದ ಕಡೆ ಗಮನಹರಿಸಿದರು. ೧ನೆಯ ರಾಜರಾಜನ (೯೮೫-೧೦೧೪) ಕಾಲದಲ್ಲಿ ಚೋಳರು ಕೇರಳದ ಮೇಲೆ ಯುದ್ಧ ಪ್ರಾರಂಭಿಸಿದರು. ಇದು ೧ನೆಯ ಚೋಲ-ಚೇರ ಯುದ್ಧ, ಇದರಲ್ಲಿ ರಾಜರಾಜ ಸುಚೀಂದ್ರಂ ಕೊಟ್ಟರ್, ನಾಗರ್‍ಕೋಯಿಲ್ ಮತ್ತು ಕುಮಾರಿ ಪ್ರದೇಶಗಳನ್ನು ಆಕ್ರಮಿಸಿ ಅವನ್ನು ರಾಜರಾಜ ತೆನ್ನಾಡು ಎಂಬ ಪ್ರಾಂತ್ಯವನ್ನಾಗಿ ಮಾಡಿದ. ಅನಂತರ ಕೊಡಂಗಲ್ಲೂರಿನಲ್ಲಿ ಚೇರ ರಾಜ ಭಾಸ್ಕರ ರವಿವರ್ಮ ಚೋಳರಾಜ ಚೋಳರಾಜನಿಗೆ ಶರಣಾಗತನಾದ. ರಾಜರಾಜನ ಮರಣಾನಂತರ ಭಾಸ್ಕರ ರವಿವರ್ಮ ಚೋಳರಾಜ ೧ನೆಯ ರಾಜೇಂದ್ರನ ಸಾರ್ವಭೌಮತ್ವವನ್ನು ಅಂಗೀಕರಿಸಲಿಲ್ಲ. ಇದರಿಂದ ೧೦೧೮ರಲ್ಲಿ ರಾಜೇಂದ್ರ ದಂಡಯಾತ್ರೆ ಕೈಗೊಂಡು ಕೊಡಂಗಲ್ಲೂರನ್ನು ಆಕ್ರಮಿಸಿಕೊಂಡ. ಭಾಸ್ಕರವರ್ಮ ಯುದ್ಧದಲ್ಲಿ ಮರಣ ಹೊಂದಿದ. ಇದು ೨ನೆಯ ಚೋಳ-ಚೇರ [[ಯುದ್ಧ]] ೩ನೆಯ ಯುದ್ಧ ೧೦೩೪ರಲ್ಲಿ ಪ್ರಾರಂಭವಾಯಿತು. ೧ನೆಯ ರಾಜಾಧಿರಾಜ ಚೋಳನಿಗೆ ಕೇರಳರು ಶರಣಾಗಲಿಲ್ಲ. ೪ನೆಯ ಚೋಳ-ಚೇರ ಯುದ್ಧ ೧೦೭೦ರಲ್ಲಿ ಚೋಳದೊರೆ ೧ನೆಯ ಕುಲೋತ್ತುಂಗನ ಕಾಲದಲ್ಲಿ ನಡೆಯಿತು. ಆದರೆ ೧೧೦೨ರ ವರೆಗೆ ಕೇರಳದ ದೊರೆ ರಾಮನ್ ತಿರುವಡಿ ರಾಜಧಾನಿ ಕೊಡಂಗಲ್ಲೂರನ್ನು ವಶಪಡಿಸಿಕೊಂಡು ಕ್ರಮೇಣ ಚೋಳರನ್ನು ಹಿಮ್ಮೆಟ್ಟಿಸಿದ. ಚೋಳರು ಹಿಂದಿರುಗಿದ ಮೇಲೆ ತಂಪುರನ್ನರ ಕಾಲ ಪ್ರಾರಂಭವಾಯಿತು.<ref>https://books.google.co.in/books?id=ZFROamyZS7IC&pg=PA122&redir_esc=y#v=onepage&q&f=false</ref>
 
==ಕೇರಳದ ಚರಿತ್ರೆಯ ಸ್ವರೂಪವನ್ನು ಬದಲಾಯಿಸಿದ್ದು==
ಚೇರ-ಚೋಳ ಘರ್ಷಣೆಯಿಂದ ಕೇರಳದಲ್ಲಿ ೧೮ [[ನಾಯಕ]]ರು ತಲೆ ಎತ್ತಿದರು. ಇವರಿಗೆ ಒಬ್ಬ ಸಾಮಾನ್ಯ ಪ್ರಭು ಇಲ್ಲದಿದ್ದುದರಿಂದ ಪರಸ್ಪರ ಕಾದಾಡುತ್ತಿದ್ದರು. ಇವರಲ್ಲಿ ಎರ್ನಾಡ್ ನಾಯಕ ಒಬ್ಬ ಇವನನ್ನು ಸ್ವಾಮಿ ತಿರುಮುಲ್‍ಪಡ್ (ಗೌರವಯುತ ರಾಜ) ಎಂದು ಕರೆಯುತ್ತಿದ್ದರು. ಅನಂತರ ಇವನು ಸಾಮುರಿ ಎಂದು ಹೆಸರು ಪಡೆದ. ಪೋರ್ಚುಗೀಸರ ಬಾಯಲ್ಲಿ ಈ ಹೆಸರು ಜಾಮುರಿನ್ (ಜಾಮೊರಿನ್) ಎಂದಾಯಿತು. ಜಾಮೊರಿನ್ ಪೊಲನಾಡನ್ನು ಆಕ್ರಮಿಸಿಕೊಂಡು ಕೋಳಿಕ್ಕೋಡ್ ಪಟ್ಟಣವನ್ನು ನಿರ್ಮಿಸಿದ. ಇದನ್ನು ಐರೋಪ್ಯರು ಕ್ಯಾಲಿಕಟ್ ಎಂದರು. ಪಶ್ಚಿಮ ತೀರದಲ್ಲಿ ಇದು ಬಹು ಮುಖ್ಯ ರೇವಾಗಿದ್ದು ಇದರ ಹೆಸರು ಯೂರೋಪಿಗೂ ಹರಡಿತು. ೧೫ನೆಯ ಶತಮಾನದ ಕೊನೆಗೆ ಜಾಮೊರಿನ್ ಕೇರಳದ ಸುಮಾರು ಅರ್ಧ ಭಾಗವನ್ನು ಆಳುತ್ತಿದ್ದ. ಅವನ ಬಳಿ ೬೦೦೦೦ ಸಂಖ್ಯೆಯ ನಾಯರ್ ಸೈನ್ಯವಿತ್ತು. ೧೪೯೮ರ ಮೇ ೨೦ರಂದು ಕೋಳಿಕ್ಕೋಡಿಗೆ ಅನಿರೀಕ್ಷಿತವಾಗಿ ಬಂದ ನಾಲ್ಕು ಪೋರ್ಚುಗೀಸ್ ಹಡಗುಗಳು ಕೇರಳದ ಚರಿತ್ರೆಯ ಸ್ವರೂಪವನ್ನೇ ಬದಲಾಯಿಸಿದುವು. [ಕೇರಳ]] ಸುಮಾರು ಎರಡೂವರೆ ಶತಮಾನಗಳವರೆಗೆ ಐರೋಪ್ಯ ಸಾಮ್ರಾಜ್ಯಶಾಹಿಯೊಡನೆ ಹೋರಾಟ ನಡೆಸಿತು.
"https://kn.wikipedia.org/wiki/ಕೇರಳದ_ಇತಿಹಾಸ" ಇಂದ ಪಡೆಯಲ್ಪಟ್ಟಿದೆ