ಕೇರಳದ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೩ ನೇ ಸಾಲು:
 
==ಭಾರತದೊಂದಿಗಿನ ಸಂಬಂಧ==
ಕೇರಳ ರಾಜ್ಯಕ್ಕೆ [[ಭಾರತ]]ದ ಚರಿತ್ರೆಯಲ್ಲಿ ಒಂದು ಪ್ರಮುಖ ಸ್ಥಾನವಿದೆ. ಭಾರತ ಮತ್ತು ಪಾಶ್ಚಾತ್ಯ ದೇಶಗಳ ನೇರ ಸಂಪರ್ಕ [[ಕೇರಳ]] ಪ್ರದೇಶದಲ್ಲಿ ಸಮುದ್ರದ ಮೂಲಕ ಕ್ರಿ.ಪೂ. ೧ನೆಯ ಸಹಸ್ರಮಾನದಿಂದ ಪ್ರಾರಂಭವಾಯಿತು. ರೋಮನ್ ನಾವಿಕ ಹಿಪ್ಪಾಲಸ್ ಕ್ರಿ.ಶ. ೧ನೆಯ ಶತಮಾನದಲ್ಲಿ ವಾಣಿಜ್ಯ ಮಾರುತಗಳ ಸಹಾಯದಿಂದ ಕಂಡುಹಿಡಿದ ಸಮುದ್ರಮಾರ್ಗದ ಮೂಲಕ ಕೊಡಂಗಲ್ಲೂರಿಗೆ ಬಂದ. ಆಗ ಕೇರಳವನ್ನಾಳುತ್ತಿದ್ದ ಚೇರಮನ್ ದೊರೆಗಳು ಲಕ್ಷದ್ವೀಪ [[ದ್ವೀಪ]]ಗಳನ್ನು ಆಕ್ರಮಿಸಿಕೊಂಡಿದ್ದರು. ರೋಮನ್ ಸಾಮ್ರಾಜ್ಯದೊಡನೆ ನಡೆಯುತ್ತಿದ್ದ ಲಾಭದಾಯಕ ವ್ಯಾಪಾರದ ಹತೋಟಿ ಪಡೆದಿದ್ದರು.<ref></ref>
 
==ಕೇರಳದ ಲಕ್ಷ್ಮಣಗಳು==
೧೧ನೆಯ ಶತಮಾನದ ಪ್ರಾರಂಭದವರೆಗೆ ಕೇರಳರು ಮತ್ತು ಅವರಿಗೆ ಪೂರ್ವದಲ್ಲಿ ನೆರೆಯವರಾಗಿದ್ದ ಚೋಳರು ಮತ್ತು ಪಾಂಡ್ಯರು ಒಂದೇ ರೀತಿಯ ಭಾಷೆ ಮತ್ತು ಸಂಸ್ಕೃತಿಗಳನ್ನು ಹೊಂದಿದ್ದರು. ಕ್ರಿಸ್ತಶಕದ ಮೊದಲ ಮೂರು ಶತಮಾನಗಳ ಸಂಘಸಾಹಿತ್ಯದ ಪ್ರಕಾರ ಕೊಡಂಗಲ್ಲೂರಿನ ಚೇರಮನ್ ರಾಜರು ಉತ್ತರದಲ್ಲಿ ಕಾಸರಗೋಡಿನವರೆಗೂ ಪೂರ್ವಕ್ಕೆ ಕರೂರು ಮತ್ತು ಕೊಲ್ಲಿಮಲೈವರೆಗೂ [[ದಕ್ಷಿಣ]]ದಲ್ಲಿ [[ಕನ್ಯಾಕುಮಾರಿ]] ಭೂಶಿರದವರೆಗೂ ಪಶ್ಚಿಮದಲ್ಲಿ ಲಕ್ಷದ್ವೀಪ ದ್ವೀಪಗಳವರೆಗೂ ಅಧಿಕಾರ ಹೊಂದಿದ್ದರು. ರೋಮನ್ ಸಾಮ್ರಾಜ್ಯ ಮತ್ತು ಚೀನ ದೇಶಗಳೊಡನೆ ವ್ಯಾಪಾರ ಲಾಭದಾಯಕವಾಗಿತ್ತು. ಕೇರಳರು ಉಚ್ಚ್ರಾಯಸ್ಥಿತಿಯಲ್ಲಿದ್ದರು. ಆದರೆ ಕ್ರಿ.ಶ. ೪ನೆಯ ಶತಮಾನದಲ್ಲಿ ರೋಮನ್ ಚಕ್ರಾಧಿಪತ್ಯದ ಅವನತಿಯಿಂದಲೂ ನಾಯರರು ಮತ್ತು ಇತರರ ಆಕ್ರಮಣದಿಂದಲೂ ಈ ವ್ಯಾಪರಕ್ಕೆ ಧಕ್ಕೆ ಉಂಟಾಯಿತು.
"https://kn.wikipedia.org/wiki/ಕೇರಳದ_ಇತಿಹಾಸ" ಇಂದ ಪಡೆಯಲ್ಪಟ್ಟಿದೆ