ಅಭಿಧಮ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
ಅಭಿಧಮ್ಮ ಬೌದ್ಧಧರ್ಮದ[[ಬೌದ್ಧ ಧರ್ಮ]]ದ ಪ್ರಕ್ರಿಯೆಯಲ್ಲಿ ಜಿಜ್ಞಾಸೆಯ ಆಳವಾದ ಪ್ರಕಾರಕ್ಕೆ ಈ ಹೆಸರಿದೆ (ಅಭಿಧರ್ಮ). ತ್ರಿಪಿಟಕಗಳಲ್ಲಿ ಇದೂ ಒಂದು (ವಿನಯ, ಸುತ್ತ, ಅಭಿಧಮ್ಮ).
 
==ಧರ್ಮಸ್ಕಂಧ==
ಪಿಟಕಗಳಲ್ಲಿ ಮೊದಲನೆಯದು ಭಿಕ್ಷುಗಳ ನಡೆವಳಿಕೆಗೆ ಸಂಬಂಧಿಸಿದುದೆಂದೂ ಎರಡನೆಯದು ಎಲ್ಲರಿಗೂ ಅಗತ್ಯವಾದ ಸಾಮಾನ್ಯ ಧರ್ಮವೆಂದೂ[[ಧರ್ಮ]]ವೆಂದೂ ಮೂರನೆಯದು ಕುತೂಹಲಿಗಳಿಗೆ ಮಾತ್ರ ಉಪಯುಕ್ತವಾದ ಹೆಚ್ಚಿನ ತತ್ತ್ವಗಳೆಂದೂ ಸ್ಥೂಲವಾಗಿ ನಿರ್ದೇಶಿಸಬಹುದು. ಬೌದ್ಧರಲ್ಲಿ ಧರ್ಮವೆಂಬ ಪದಕ್ಕೆ ಹಲವಾರು ಅರ್ಥಗಳು ಪ್ರಚಲಿತವಾಗಿವೆ. ಸಾಮಾನ್ಯವಾದ ಆಗುಹೋಗುಗಳಿಗೆ ಧರ್ಮವೆಂದು ಹೆಸರು (ಯೇ ಧರ್ಮಾ ಹೇತು ಪ್ರಭವಾ..... ಇತ್ಯಾದಿ). ಯೋಗ್ಯವಾದ ನಡೆವಳಿಕೆಯೂ ಧರ್ಮವೇ (ಏನ ಧಮ್ಮೋ ಸನಂತನೋ). ಜಗತ್ತಿನ ವ್ಯಾಪಾರಕ್ಕೆ ಮೂಲಭೂತವಾದ ಸೂಕ್ಷ್ಮಪ್ರವೃತ್ತಿಗಳು ಧರ್ಮ (ಧರ್ಮಸಮುದಾಯ). [[ಬುದ್ಧ]] ಮಾಡಿದ ಉಪದೇಶವೂ ಧರ್ಮವೆನಿಸಿಕೊಳ್ಳುತ್ತದೆ (ಬುದ್ಧ ಧರ್ಮ). ಈ ಉಪದೇಶಗಳ ಸಮಷ್ಟಿಯೂ ಧರ್ಮ (ಧರ್ಮಸ್ಕಂಧ). ಸಾಮಾನ್ಯವಾಗಿ ಬುದ್ಧನ ದೇಶನವನ್ನು ಧರ್ಮವೆಂದು ಹೇಳುತ್ತಾರೆ. ಅಭಿ ಎಂಬ ಪದಕ್ಕೆ ಹೆಚ್ಚಿನದು, ಮೀರಿದುದು. ವಿಶಿಷ್ಟವಾದುದು ಎಂಬ ಅರ್ಥವಿದೆ. ಧರ್ಮಕ್ಕೆ ಸಂಬಂಧಿಸಿದುದು ಅಭಿಧರ್ಮ ಎಂಬುದೂ ಸಮಂಜಸವೇ. ಸುತ್ತಪಿಟಕಕ್ಕೆ ವಸ್ತುವಾದ ಧರ್ಮಗಳಲ್ಲಿ ಮೂಲಭೂತವಾಗಿ ಅಂತರ್ಗತವಾದ ತತ್ತ್ವವಿವೇಚನೆಯೇ ಅಭಿಧರ್ಮವೆಂದು ಸಾಂಪ್ರದಾಯಿಕವಾದ ನಿರೂಪಣೆ.[[en:Abhidhamma_Pitaka]]<ref>https://accesstoinsight.org/tipitaka/abhi/index.html</ref>
==ಬೋಧನೆ==
ಶಾಕ್ಯಮುನಿ ಬುದ್ಧನಾದ ಮೇಲೆ ಸಂಬೋಧಿ ಒದಗಿದ ನಾಲ್ಕನೆಯ ವಾರದಲ್ಲಿ ಅಭಿಧರ್ಮವನ್ನು ಸ್ವೋಪಜ್ಞೆಯಿಂದ ಗ್ರಹಿಸಿದನೆಂದು ಸಂಪ್ರದಾಯ ಹೇಳುತ್ತದೆ. ತಾವತಿಂಸವೆಂಬ ಸ್ವರ್ಗದಲ್ಲಿ ಇದ್ದ ತನ್ನ ತಾಯಿಗೆ ಮೂರು ತಿಂಗಳ ಕಾಲ ಅಭಿಧರ್ಮವನ್ನು ಬೋಧಿಸಿದನೆಂದೂ ಸಂಪ್ರದಾಯದ ನಂಬಿಕೆ. ಆದರೆ ಅಭಿಧರ್ಮ ಬುದ್ಧ ವಚನದಲ್ಲಿಲ್ಲ. ಬುದ್ಧನ ಅನಂತರ ಬಂದ ದಾರ್ಶನಿಕರು ಬುದ್ಧವಚನಗಳಲ್ಲಿ ಅಡಗಿದ್ದ ತತ್ತ್ವಗಳನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ವಿನಯಪಿಟಕ ಸುತ್ತ ಪಿಟಕದಷ್ಟು ಅಭಿಧರ್ಮಪಿಟಕ ಪ್ರಾಚೀನವಲ್ಲವೆಂದು ಶೈಲಿಯಿಂದಲೂ ವಾಙ್ಮಯದಿಂದಲೂ ಸಂದರ್ಭಕಥನದಿಂದಲೂ ಸ್ಪಷ್ಟವಾಗುತ್ತದೆ. ಸಂಪ್ರದಾಯದಲ್ಲೇ ಒಂದು ವಿವರಣೆಯಿದೆ. ಅಭಿಧರ್ಮವನ್ನು ಬುದ್ಧ ತನ್ನ ಪ್ರೌಢಶಿಪ್ಯನಾದ ಶಾರಿಪುತ್ರನಿಗೆ ಮಾತೃಕೆಗಳಲ್ಲಿ ಸೂಕ್ಷ್ಮವಾಗಿ ಬೋಧಿಸಿದನೆಂದೂ ಸಮುದ್ರದ ಅಂಚಿನಲ್ಲಿ ನಿಂತು ಸಮುದ್ರದೆಡೆ ಕೈತೋರಿಸಿದಂತೆ ಶಾರಿಪುತ್ರ ತನ್ನ ಐನೂರು ಶಿಷ್ಯರಿಗೆ ಬೋಧಿಸಿದನೆಂದೂ ಅಟ್ಠಸಾಲಿನಿಯಲ್ಲಿ ಬರುವ ನಿರೂಪಣೆ. ಈ ಕಾರ್ಯದಲ್ಲಿ ಅವನ ಸತೀರ್ಥನಾಗಿದ್ದ ಮಹಾಕೊಟ್ಠಿತ ನೆರವಾದನಂತೆ. ಅಭಿಧಮ್ಮದ ಸಂಗ್ರಹಕಾರ್ಯ ಶಾರಿಪುತ್ರನಿಂದ ಆಯಿತೆಂದು ವ್ಯಾಖ್ಯಾನಕಾರನಾದ ಬುದ್ಧ ಘೋಷಾಚಾರ್ಯ ಒಪ್ಪುತ್ತಾನೆ; ಅಭಿಧರ್ಮಪಿಟಕದ ವಾಙ್ಮಯದಲ್ಲಿ ಏಳು ಪ್ರಕರಣ ಗ್ರಂಥಗಳಿವೆ. ಧರ್ಮಸಂಗಣಿ, ವಿಭಂಗ, ಧಾತುಕಥಾ, ಪುಗ್ಗಲಪಙÐತ್ತಿ, ಕಥಾಮತ್ಥು, ಯಮಕ ಮತ್ತು ಪಟ್ಠಾನ-ಇವೇ ಆ ಏಳು.<ref>https://www.budsas.org/ebud/whatbudbeliev/67.htm</ref>
"https://kn.wikipedia.org/wiki/ಅಭಿಧಮ್ಮ" ಇಂದ ಪಡೆಯಲ್ಪಟ್ಟಿದೆ