ಅಬು ಸಿಂಬೆಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೨ ನೇ ಸಾಲು:
==ಸ್ಥಳಾಂತರ==
[[File:Abusimbel.jpg|thumb|The statue of Ramses the Great at the Great Temple of Abu Simbel is reassembled after having been moved in 1967 to save it from flooding.]]
ಈಜಿಪ್ಟ್ ದೇಶದ ಮಹಾಭಿಧಮನಿ ಎಂದು ಪ್ರಸಿದ್ಧವಾಗಿರುವ [[ನೈಲ್‍]]ನದಿಗೆ ಆಸ್ವಾನ್ ಪ್ರಾಂತದಲ್ಲಿ ಅದೇ ಹೆಸರಿನಿಂದ ಒಂದು ದೊಡ್ಡ ಅಣೆಕಟ್ಟು ಕಟ್ಟಲು ಸರ್ಕಾರ ನಿರ್ಧರಿಸಿತು. ಬೆಂಗಾಡಿನ ದುಃಖಕ್ಕೆ ನೀರು ಸರಬರಾಜು ಮಾಡಿ ಅದರಲ್ಲಿ ಹಸಿರುನಗು ತರಿಸುವ ಉಪಾಯ ಇದೊಂದೇ. ಆದರೆ ಇದರಿಂದ ಶೇಖರಣೆಯಾಗುವ ನೀರಿನ ರಾಶಿ ಅಬು ಸಿಂಬೆಲನ್ನು ಮುಳುಗಿಸುವುದು ಎಂದು ತಿಳಿಯಿತು. 1960ರಲ್ಲಿ ಈಜಿಪ್ಟ್ ಮತ್ತು ಸೂಡಾನ್ ಸರ್ಕಾರಗಳು [[ಯುನೆಸ್ಕೊ]]ಗೆ (ಯುನೈಟೆಡ್ ನೇಷನ್ಸ್ ಎಜ್ಯುಕೇಷನಲ್ ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಸೇûಷನ್) ಅಬು ಸಿಂಬೆಲನ್ನು ಹೇಗಾದರೂ ರಕ್ಷಿಸಬೇಕು ಎಂದು ಪ್ರಾರ್ಥನೆ ಸಲ್ಲಿಸಿದುವು. ಸಮಸ್ಯೆಯ ಗಭೀರತೆಯನ್ನು ಗಮನಿಸಿದ ಯುನೆಸ್ಕೊ ಅದರ ಬಿಡಿಸಿಕೆಗೆ ಜಗತ್ತಿನ ಎಲ್ಲ ರಾಷ್ಟ್ರಗಳಿಗೂ ಕರೆನೀಡಿತು. ಇದರ ಫಲ ಅಬು ಸಿಂಬೆಲ್ ಸ್ಥಳಾಂತರ, ಬೃಹದ್ವಾಸ್ತು ಶಿಲ್ಪ ರಕ್ಷಣೆಯಲ್ಲಿ ನೆರವೇರಿದ ಅದ್ವಿತೀಯ ಸಾಹಸ. ರಕ್ಷಣೆಗೆ ಬಂದ ಸೂಚನೆಗಳು ಹಲವಾರು-ಸುತ್ತಲೂ ದೊಡ್ಡ ಒಡ್ಡುಗಳನ್ನು ಕಟ್ಟಿ ದೇವಾಲಯಗಳಿಗೆ ನೀರು ಬರದಂತೆ ಮಾಡಬೇಕು; ಭಾರೀ ಪಾರದರ್ಶಕ ಕವಚದಿಂದ ದೇವಾಲಯಗಳನ್ನು ಮುಚ್ಚಿ ಒಳಗೆ ವಿದ್ಯುದ್ದೀಪಗಳನ್ನು ಉರಿಸಿ ಜಲಾಂತರ್ಗತ ಅಬು ಸಿಂಬೆಲನ್ನು ಜನರಿಗೆ ತೋರಿಸಬೇಕು; ತಳಹದಿ ಸಮೇತ ದೇವಾಲಯಗಳನ್ನು ಕಿತ್ತು ಸ್ಥಳಾಂತರಿಸಬೇಕು, ಇತ್ಯಾದಿ. ಪ್ರಾಯೋಗಿಕತೆ, ವೆಚ್ಚ, ಕಾಲಾವಕಾಶ ಈ ದೃಷ್ಟಿಯಿಂದ ಪರಿಶೀಲಿಸಿದಾಗ ಈ ಪರಿಹಾರಗಳು ಸ್ವೀಕೃತವಾಗಲಿಲ್ಲ. <ref>http://www.international.icomos.org/monumentum/vol17/vol17_2.pdf</ref>
==ಸ್ವೀಕೃತಯೋಜನೆಯ ವಿವರ==
ಎತ್ತಿ ಸ್ಥಳಾಂತರಿಸಲು ಅನುಕೂಲಿಸುವಂತೆ ಸಮಗ್ರಶಿಲಾರಚನೆಯನ್ನೂ ಹೋಳು ಹೋಳಾಗಿ ವಿಭಾಗಿಸಲು ಬಲುದೊಡ್ಡ ನಕಾಶೆ ಸಿದ್ಧವಾಯಿತು; ಇಲ್ಲಿ ಕೃತಿಗಳಿಗೆ ಇನಿತೂ ಊನ ಬರಬಾರದು; ಇದರ ಪ್ರಕಾರ ಬೆಟ್ಟದ ಮೇಲುಭಾಗದಿಂದ ಗರಗಸ ಕೊಯ್ತದ ಆರಂಭ; ನಕಾಶೆ ವಿಧಿಸಿರುವ ಗೆರೆಗಳ ಮೇಲೆ ನಿಖರವಾಗಿ ಗರಗಸ ಹರಿಯಬೇಕು; ಯಾವ ಕೊಯ್ತದ ಗಾಯವೂ 6 ಮಿ.ಮೀ.ಗಿಂತ ಹೆಚ್ಚು ಅಗಲವಾಗ ಕೂಡದು; ಗರಗಸ ಹರಿಯದಲ್ಲಿ ಬಲುನಿಯಂತ್ರಿತವಾಗಿ ಅಕ್ಕಪಕ್ಕದಲ್ಲಿ ಏನೂ ಅಪಘಾತ ಸಂಭವಿಸದಂತೆ ಡೈನಮೈಟ್ ಪ್ರಯೋಗ; ಕೊಯ್ದ ಶಿಲಾಖಂಡಗಳನ್ನು ಕ್ರೇನ್ ಮುಂತಾದವುಗಳ ಸಹಾಯದಿಂದ ಮಗುವನ್ನು ಎತ್ತಿದಷ್ಟು ಹಗುರವಾಗಿ ಎಚ್ಚರಿಕೆಯಿಂದ ಸಾಗಿಸಬೇಕು; ಹೀಗೆ ಮಾಡುವಾಗ ಒಂದು ವಿಭಾಗದ ಸ್ಥಾನ ನಿರ್ದೇಶಕಗಳನ್ನು ಸೂಚಿಸುವ ಸ್ಪಷ್ಟ ಸಂಕೇತಗಳು ಅದರ ಮೇಲೆ ನಿರೂಪಿತವಾಗಿರಬೇಕು; ಈ ಕೊಯ್ತ. ಸ್ಥಳಾಂತರ ಮುಗಿದ ಮೇಲೆ ಕೆಳಗಿನಿಂದ ಮೇಲಕ್ಕೆ ಶಿಲಾಖಂಡಗಳನ್ನು ಕ್ರಮಬದ್ಧವಾಗಿ ಜೋಡಿಸಿ ಅಬು ಸಿಂಬೆಲ್ ಪುನರ್ರಚನೆಯನ್ನು ಪೂರ್ಣಗೊಳಿಸಬೇಕು. ಈ ಯೋಜನೆಯ ಪ್ರಕಾರ ಎರಡು ದೇವಾಲಯಗಳನ್ನು ಕೊಯ್ದ ಒಟ್ಟಿದ್ದಾಗ ಅವು 950 ವಿಭಿನ್ನ ಶಿಲಾಖಂಡಗಳ ಅಪೂರ್ವ ಮೇಳವಾಗಿದ್ದವು.
 
Line ೨೩ ⟶ ೨೪:
 
ಈ ಸ್ಥಳಾಂತರದಿಂದ ರ್ಯಾಮ್ಸೆಸ್‍ಗೆ ಆಗಿರುವ ಗಾಯಗಳನ್ನು ಗುಣಪಡಿಸಬಹುದೇ ಎಂಬ ಪ್ರಶ್ನೆಗೆ ವಾಸ್ತುಶಿಲ್ಪಜ್ಞನ ಉತ್ತರವಿದು: "ರಾಜನ ಗಾಯಗಳನ್ನು ಗುಣಪಡಿಸುತ್ತೇನೆ. ಜೋಡಣೆಗಾಯಗಳನ್ನು ಮಾಯಿಸುವುದು ಮಾತ್ರವಲ್ಲ ಮಾಯಗೊಳಿಸುವುದೂ ಸಾಧ್ಯವಿದೆ. ಆದರೆ ಇದು ಪ್ರಾಮಾಣಿಕ ಕ್ರಮವೇ?"
ಉದಯರವಿಕಿರಣಗಳಿಂದ ಪುನಃ ನಗು ಬಿಂಬಿಸುತ್ತಿರುವ ರ್ಯಾಮ್ಸೆಸ್ ವಿಗ್ರಹ ನೈಲ್ ಜಲಾಶಯದ ಮಹಾವಿಸ್ತಾರದ ಚಿರಸಂಕೇತವಾಗಲಿದೆ.
 
 
 
==ಉಲ್ಲೇಖಗಳು==
"https://kn.wikipedia.org/wiki/ಅಬು_ಸಿಂಬೆಲ್" ಇಂದ ಪಡೆಯಲ್ಪಟ್ಟಿದೆ