ಅನುಭೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಸರಕು, ಸೇವೆಗಳಲ್ಲಿರುವ ತುಷ್ಟಿಗುಣವನ್ನು ಅನುಭವಿಸುವುದು (ಕನ್ಸಮ್ಷನ್). ಈ ಕ...
 
No edit summary
೩ ನೇ ಸಾಲು:
ಎಲ್ಲರೂ ಅನುಭೋಗಿಗಳಾಗಿರುತ್ತಾರಾದ್ದರಿಂದ ಇವರ ಬಯಕೆಗಳೇನು? ಬಯಕೆ, ಬೇಡಿಕೆ ಮತ್ತು ಬೆಲೆ ಇವುಗಳ ಸಂಬಂಧವೇನು? ಜನರ ಅನುಭೋಗ ಪ್ರವೃತ್ತಿಯ ನಿರ್ಣಯಾಂಶಗಳೇನು? ಆರ್ಥಿಕಾಭಿವೃದ್ಧಿಯಲ್ಲಿಯೂ ಅರ್ಥಮಂಡಲದ ಆರ್ಥಿಕತೆಯ ಯೋಜಿತ ಮುನ್ನಡೆಯಲ್ಲಿಯೂ ಅನುಭೋಗದ ಪಾತ್ರವೆಂಥದು? ಅನುಭೋಗಿಗಳಲ್ಲಿ ಬಹುಭಾಗ ಉತ್ಪಾದಕರೂ ಆಗಿರುವುದರಿಂದ ಈ ಎರಡೂ ಆರ್ಥಿಕಗುಂಪಿನ ಪರಸ್ಪರ ಹಿತಾಸಕ್ತಿಗಳು ಹೇಗೆ ಸಮನ್ವಯಗೊಳ್ಳಬೇಕು? ಅನುಭೋಗಿಗೆ ಪೂರ್ಣಸ್ವಾತಂತ್ರ್ಯ ಇರುವ ಆರ್ಥಿಕಪದ್ಧತಿ ಸರಿಯೇ ಅಥವಾ ಅನುಭೋಗವನ್ನು ಒಂದು ರೀತಿಯ ನಿಯಂತ್ರಣಕ್ಕೆ ಒಳಪಡಿಸುವುದು ಸರಿಯೆ? ಹಾಗಾದರೆ ಅನುಭೋಗಿಗಳಿಗೆ ಅತ್ಯುನ್ನತ ಸಂತುಷ್ಟಿ ದೊರಕಿಸುವ ಆರ್ಥಿಕವ್ಯವಸ್ಥೆಯ ಸ್ವರೂಪವೇನು? ಇವು ಅನುಭೋಗಗಳನ್ನು ಕುರಿತ ಅಧ್ಯಯನದಲ್ಲಿ ಏಳುವ ಮುಖ್ಯ ಪ್ರಶ್ನೆಗಳು.<ref>https://www.eia.gov/consumption/</ref>
==ಅರ್ಥಶಾಸ್ತ್ರದ ಆಧಾರ==
ಅನುಭೋಗಕ್ಕೆ ಸಂಬಂಧಿಸಿದ ಕೆಲವು ಸಿದ್ಧಾಂತಗಳು ಮತ್ತು ಸಮಸ್ಯೆಗಳನ್ನು ವಿಚಾರಿಸುವಾಗ ಬಯಕೆಗಳ ಕೆಲವು ಸಾಮಾನ್ಯ ಲಕ್ಷಣಗಳನ್ನು ಗಮನಿಸಬೇಕು. ಅವೇ ಬಯಕೆಗಳು ಮರಳಿ ಮರಳಿ ಬರುತ್ತಿರುವುವಲ್ಲದೆ ಹೊಸ ಹೊಸ ಬಯಕೆಗಳೂ ಹುಟ್ಟುತ್ತಲೇ ಇರುವುದರಿಂದ ಒಟ್ಟಿನಲ್ಲಿ ಮಾನವನ ಬಯಕೆಗಳು ಅಮಿತ ಹಾಗು ವೈವಿಧ್ಯಪೂರ್ಣವಾದುವೆಂದು ಹೇಳಬಹುದು. ಆದರೆ ಬಯಕೆಗಳ ಪೂರೈಕೆಗೆ ಅವಶ್ಯಕವಾದ ಸಾಧನಗಳ ಅಭಾವ ಕಂಡುಬರುತ್ತಿದೆ. ಇದೇ ಆರ್ಥಿಕ ಸಮಸ್ಯೆಯ ಮೂಲಭೂತ ಅಂಶವಾಗಿದೆ. ಯಾವುದಾದರೂ ಬಯಕೆಯೊಂದನ್ನು ತೃಪ್ತಿಗೊಳಿಸಿದಾಗ ತಾತ್ಕಾಲಿಕವಾಗಿಯಾದರೂ ಅದರ ಆವಶ್ಯಕತೆ ಇಲ್ಲವಾಗುವುದರಿಂದ ಒಂದೊಂದು ಬಯಕೆಗೂ ಒಂದೊಂದು ಮಿತಿಯುಂಟೆಂದು ಹೇಳಬಹುದು. ಅನುಭೋಗಿ ಸರಕೊಂದನ್ನು ಅನುಭೋಗಿಸುವಾಗ ಬರಬರುತ್ತಾ ಅದರ ಬಯಕೆಯ ಆಳ ಕಡಿಮೆಯಾಗುತ್ತ ಬಂದು ತೃಪ್ತಿಯ ಮಟ್ಟ ತಲುಪಿದಾಗ ಆ ಸರಕಿನ ಬಯಕೆ ನಿಲ್ಲುವುದು. ಈ ಅನುಭವದ ಆಧಾರದ ಮೇಲೆ ಇಳಿವರಿ ಅಂಚಿನ ತುಷ್ಟಿಗುಣನಿಯಮವನ್ನು ಅರ್ಥಶಾಸ್ತ್ರಜ್ಞರು ರಚಿಸಿರುತ್ತಾರೆ. ಸಾಮಾನ್ಯವಾಗಿ ಅನೇಕ ಬಯಕೆಗಳು ಏಕಕಾಲದಲ್ಲೇ ತಲೆದೋರಿ, ಅವುಗಳನ್ನು ತೃಪ್ತಿಪಡಿಸುವ ಕಾಲ ಮತ್ತು ಸಾಧನಗಳು ಮಿತಿಯುಳ್ಳವಾದ ಕಾರಣ ಅನುಭೋಗಿಯ ಮನಸ್ಸಿನಲ್ಲಿಯೇ ಈ ಬಯಕೆಗಳು ಪರಸ್ಪರ ಸ್ಪರ್ಧಿಸುವುವು. ಈ ಮಾನಸಿಕ ಸ್ಪರ್ಧೆಯಲ್ಲಿ ವಿವಿಧ ಬಯಕೆಗಳ ಒಂದು ಆದ್ಯತೆ, ತಾರತಮ್ಯ ಅನುಕ್ರಮವಾಗಿ ಏರ್ಪಡುತ್ತ ಬರುವುದು. ಓದಬೇಕೆ, ಆಡಬೇಕೆ, ಕೆಲಸ ಮಾಡಬೇಕೆ, ಇನ್ನೆಲ್ಲಾದರೂ ವಿಹಾರಕ್ಕೆ ಹೊರಡಬೇಕೆ ಎಂಬ ವಿವಿಧಬಯಕೆಗಳೊಳಗೆ ಒಂದು ರೀತಿಯ ದ್ವಂದ್ವ ನಡೆದು ಏಕಕಾಲದಲ್ಲಿ ಎಲ್ಲವನ್ನು ಮಾಡಲಾಗುವುದಿಲ್ಲವಾದ ಕಾರಣ ಒಂದನ್ನು ಮಾತ್ರ ಇಟ್ಟುಕೊಂಡು ಉಳಿದವನ್ನು ತ್ಯಜಿಸುವುದು ನಮ್ಮೆಲ್ಲರ ಸಾಮಾನ್ಯ ಅನುಭವ. ವಿವಿಧ ಬಯಕೆಗಳ ಪೂರೈಕೆಗೆ ಮಿತಿಯುಳ್ಳ ಸಾಧನಗಳನ್ನು ಹಂಚುವಾಗ ಅನುಭೋಗಿ ಒಟ್ಟಿನಲ್ಲಿ ಅತ್ಯುನ್ನತ ತುಷ್ಟಿಗುಣ ಪಡೆಯುವ ಪ್ರಯತ್ನ ಮಾಡುತ್ತಾನೆ. ಈ ಪ್ರಯತ್ನ ಯಾವ ಮಾರ್ಗದಲ್ಲಿ ನಡೆಯುತ್ತದೆ ಎಂಬುದನ್ನು ಅಂಚಿನ ಸಮಾನ ತುಷ್ಟಿಗುಣ ನಿಯಮ (ಲಾ ಆಫ್ ಈಕ್ವಿ ಮಾರ್ಜಿನಲ್ ಯುಟಿಲಿಟಿ) ಸೂಚಿಸುವುದು. ಬಯಕೆಗಳಲ್ಲಿ ಕೆಲವು ವಿಕಲ್ಪವಾಗಿರುವುವು. ಇನ್ನು ಕೆಲವು ಅನುಪೂರಕವಾಗಿರುವುವು. ಇವು ಬಯಕೆಗಳ ಎರಡು ಮುಖ್ಯ ಹಾಗೂ ಸಾಮಾನ್ಯ ಲಕ್ಷಣಗಳಾಗಿವೆ. ಬಾಯಾರಿದಾಗ ನೀರು, ಷರಬತ್ತು, ಚಹ, ಇತ್ಯಾದಿ ಪಾನೀಯಗಳಲ್ಲಿ ಒಂದನ್ನು ಕುಡಿಯಬಹುದು. ಈ ವಿವಿಧಪಾನೀಯಗಳ ಬಯಕೆ ವಿಕಲ್ಪವಾದಂತಾಯಿತು. ಪೆನ್ನುಕೊಳ್ಳುವ ಬಯಕೆ ಉಂಟಾದರೆ ಶಾಯಿಯ ಬಯಕೆ ಪೆನ್ನಿನ ಬಯಕೆಗೆ ಪೂರಕವಾದಂತಾಯಿತು. ಅನೇಕ ಬಯಕೆಗಳ ಬಗ್ಗೆ ಈ ರೀತಿಯ ಲಕ್ಷಣಗಳಿರುವುದನ್ನು ಗಮನಿಸಿದರೆ ಅನುಭೋಗದಲ್ಲಿ ಅಡಗಿರುವ ಆಯ್ಕೆಯ ಸಮಸ್ಯೆಯ ಸ್ವರೂಪ ತಿಳಿಯುವುದು.[[ಅನುಭೋಗಿಯ_ಪ್ರಭುತ್ವ]] ಇದು ಪ್ರಮುಖವಾದ ವಿಷಯ.
==ವರ್ಗೀಕರಣ==
ಅನುಭೋಗವನ್ನು ಕುರಿತು ಆರ್ಥಿಕಾಧ್ಯಯನದಲ್ಲಿ ಬಯಕೆಗಳನ್ನು ಆವಶ್ಯಕತೆಗಳು. ಸೌಕರ್ಯಗಳು, ಭೋಗವಿಲಾಸಗಳು ಎಂಬ ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಆವಶ್ಯಕತೆಗಳನ್ನು
"https://kn.wikipedia.org/wiki/ಅನುಭೋಗ" ಇಂದ ಪಡೆಯಲ್ಪಟ್ಟಿದೆ