ಅನಿಶ್ಚಿತತ್ವನಿಯಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಅನಿಶ್ಚಿತತ್ವನಿಯಮ''' ಶಕಲಬಲವಿಜ್ಞಾನದ (ಕ್ವಾಂಟಮ್ ಮೆಕ್ಯಾನಿಕ್ಸ್) ಸಾರಭೂ...
 
No edit summary
೨ ನೇ ಸಾಲು:
 
==ಉಂಟುಮಾಡಿದ ಕ್ರಾಂತಿ==
ಐನ್‍ಸ್ಟೈನನ ರಿಲೆಟಿವಿಟಿ ತತ್ತ್ವಶಾಸ್ತ್ರದಲ್ಲಿ ಉಂಟುಮಾಡಿದ ಕ್ರಾಂತಿಯಷ್ಟೇ ಪರಿಣಾಮಕಾರಿಯಾದ ಆಂದೋಳನವನ್ನು ಹೈಸನ್‍ಬರ್ಗ್‍ನ ನಿಯಮ ಪ್ರೇರೇಪಿಸಿದೆ. ಕಾರ್ಯಕಾರಣತತ್ತ್ವಕ್ಕೂ (ಪ್ರಿನ್ಸಿಪಲ್ ಆಫ್ ಕಾಸಾಲಿಟಿ) ಸ್ವಾತಂತ್ರ್ಯತತ್ತ್ವಕ್ಕೂ (ಪ್ರಿನ್ಸಿಪಲ್ ಆಫ್ ಪಿó್ರೀವಿಲ್) ನಿಕಟವಾದ ಸಂಬಂಧವಿರುವುದೇ ಇದರ ಪ್ರಾಮುಖ್ಯಕ್ಕೆ ಕಾರಣ. ಭೌತವಿಜ್ಞಾನದ ಅನುಭವದಿಂದಲೂ ಅಲ್ಲಿ ಚರ್ಚಿಸಲಾಗುವ ಸಂದರ್ಭಗಳಿಂದಲೂ ಹೊರಪಟ್ಟು ಈ ತತ್ತ್ವ ಆ ವಿಜ್ಞಾನದ ಮೇರೆಯನ್ನು ಬಿಟ್ಟು ಪ್ರಯೋಗಾರ್ಹವೇ ಅಲ್ಲವೇ ಎಂಬುದನ್ನು ದೃಢಪಡಿಸುವುದು ಕಷ್ಟ. ಆದ್ದರಿಂದ ಈ ವಿಷಯದಲ್ಲಿ ಅಂತಿಮ ನಿರ್ಧಾರ ಸಾಧ್ಯವಾಗಿಲ್ಲ. ಮತಭೇದಗಳು ಬೇಕಾದಷ್ಟಿದೆ. ಪ್ರಮುಖ ಭೌತವಿಜ್ಞಾನಿಗಳಲ್ಲಿಯೇ ಒಮ್ಮತವಿಲ್ಲ. ಪ್ಲಾಂಕ್ ಮತ್ತು [[ಐನ್‍ಸ್ಟೈನ್]] ಒಂದು ಅಭಿಪ್ರಾಯವನ್ನು ಎತ್ತಿ ಹಿಡಿದರೆ, ಬೋರ್ ಮತ್ತು ಅವನ ಅನುಯಾಯಿಗಳು ಇದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಮಂಡಿಸಿದರು. ಅಲ್ಲದೆ ಶಕಲಬಲವಿಜ್ಞಾನದ ನಿಜವಾದ ಅರ್ಥ ಇನ್ನೂ ಅಪೂರ್ಣವಾಗಿರುವುದರಿಂದ ಈ ನಿಯಮದ ವಿವೇಚನೆಗೆ ಅತ್ಯಂತ ಎಚ್ಚರ ಅವಶ್ಯ.
 
 
==ಖಗೋಳವಿಜ್ಞಾನದಲ್ಲಿ ಅನಿಶ್ಚಿತತ್ವನಿಯಮ==
ನ್ಯೂಟನ್ನಿನ ಶೋಧನೆಗಳಿಂದ ಖಗೋಳವಿಜ್ಞಾನದ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿ, ಬಲವಿಜ್ಞಾನದ ತತ್ತ್ವಗಳು ಸರ್ವತೋಮುಖವಾಗಿ ಪ್ರಯೋಗಾರ್ಹಗಳೆಂಬ ಭಾವನೆ ಮೂಡಿತು. ಈ ಭಾವನೆಯನ್ನು ಲಾಪ್ಲಾಸ್ ಎಂಬಾತ ಈ ರೀತಿ ವಿವರಿಸಿದ: ಪ್ರಪಂಚದ ಈಗಿನ ಸ್ಥಿತಿ ಹಿಂದಿನ ಸ್ಥಿತಿಯಿಂದ ಉಂಟಾದುದೆಂದೂ ಮುಂದಿನ ಸ್ಥಿತಿಗೆ ಕಾರಣವೆಂದೂ ತಿಳಿಯಬೇಕು. ಒಂದು ಕಾಲದಲ್ಲಿ ಪ್ರಪಂಚದಲ್ಲಿರುವ ಎಲ್ಲ ಕಣಗಳ ಮೇಲೆ ಪ್ರಯುಕ್ತಗಳಾದ ಬಲಗಳನ್ನೂ ಆ ಕಣಗಳ ಸ್ಥಾನ ಮತ್ತು ಚಲನೆಯನ್ನೂ[[ಚಲನೆ]]ಯನ್ನೂ ಗಮನಕ್ಕೆ ತೆಗೆದುಕೊಂಡು ಬಲವಿಜ್ಞಾನ ನಿಯಮಗಳನ್ನು ಆ ಎಲ್ಲ ಕಣಗಳಿಗೂ ಅನ್ವಯಿಸಿ ಲೆಕ್ಕಮಾಡಬಲ್ಲ ಮಹಚ್ಚೇತನವೊಂದಿದ್ದರೆ ಆ ಚೇತನಕ್ಕೆ ಭೂತಭವಿಷ್ಯದ್ವರ್ತಮಾನಗಳಲ್ಲಿ ಅಜ್ಞಾತವೆನಿಸಿದ ವಿಷಯವೇ ಇರುವುದಿಲ್ಲ. ಈ ಅಭಿಪ್ರಾಯಕ್ಕೆ ನಿಶ್ಚಿತತ್ವ ನಿಯಮವೆಂದು (ಡಿಟರ್‍ಮಿನಿಸಮ್) ಹೆಸರು. <ref>https://socratic.org/questions/how-does-the-uncertainty-principle-discredit-determinism</ref>ಒಂದು ಕ್ಷಣದಲ್ಲಿ ಒಂದು ವ್ಯವಸ್ಥೆಗೆ (ಸಿಸ್ಟಮ್) ಸಂಬಂಧಪಟ್ಟ ಯಾವುದೋ ಒಂದು ಗುಣ ಒಂದು ಸ್ಥಿತಿಯಲ್ಲಿದೆಯೆಂದು ನಮಗೆ ತಿಳಿದಿದ್ದರೆ, ಲೋಕದಲ್ಲಿ ಎಲ್ಲ ಪದಾರ್ಥಗಳ ಸ್ಥಿತಿಗಳೂ ಆ ಕ್ಷಣದಲ್ಲಿದ್ದಂತೆಯೇ ಇದ್ದು, ಆ ಗುಣ ಮಾತ್ರ ಆ ಸ್ಥಿತಿಯಲ್ಲಿಲ್ಲ ಅಥವಾ ಬದಲಾಯಿಸುತ್ತಿದೆ ಎಂದು ಹೇಳುವುದು ಸಾಧ್ಯವಿಲ್ಲ-ಎಂದು ತತ್ತ್ವಶಾಸ್ತ್ರಜ್ಞನೊಬ್ಬ ನಿಶ್ಚಿತತ್ವ ನಿಯಮವನ್ನು ವಿವರಿಸಿದ್ದಾನೆ. ಇದರಲ್ಲಿ ಸ್ಥಿತಿ ಒಂದೇ ಆಗಿದೆ ಎಂಬುದಕ್ಕೆ ಅರ್ಥವೇನೆಂಬುದು ಅಷ್ಟು ಸ್ಪಷ್ಟವಾಗಿಲ್ಲ. ಲಾಪ್ಲಾಸನ ಭಾವನೆಯಲ್ಲಿ ವ್ಯವಸ್ಥೆಗೆ ಸಂಬಂಧಪಟ್ಟ ಎಲ್ಲ ಕಣಗಳ ಸ್ಥಾನ, ವೇಗ ಮತ್ತು ಅವುಗಳ ಮೇಲೆ ಪ್ರಯುಕ್ತವಾದ ಬಲಗಳು ತಿಳಿದಿದ್ದರೆ ಆ ವ್ಯವಸ್ಥೆಯ ಸ್ಥಿತಿ ಗೊತ್ತಿದೆಯೆಂದು ಹೇಳಬಹುದು. ಬಲಗಳು ಗೊತ್ತಿರುವುದರಿಂದ ಚಲನೆಯ ಸಮೀಕರಣಗಳು ಗೊತ್ತಿವೆ. ಒಂದು ಕ್ಷಣದಲ್ಲಿ ಪ್ರತಿಯೊಂದೂ ಕಣದ ಸ್ಥಾನ ಮತ್ತು ವೇಗಗಳು ಗೊತ್ತಿದ್ದರೆ ಈ ಸಮೀಕರಣಗಳ ಸಹಾಯದಿಂದ ಮತ್ತೆ ಯಾವ ಕ್ಷಣದಲ್ಲಿ ಬೇಕಾದರೂ ಆ ಕಣಗಳ ಸ್ಥಾನ ಮತ್ತು ವೇಗಗಳನ್ನು[[ವೇಗ]]ಗಳನ್ನು ಲೆಕ್ಕ ಮಾಡಬಹುದು ಎಂಬುದು ಲಾಪ್ಲಾಸನ ಭಾವನೆ. ಒಂದು ಕ್ಷಣದಲ್ಲಿ ಎಲ್ಲ ಕಣಗಳ ಸ್ಥಾನ ಮತ್ತು ವೇಗಗಳನ್ನು ಕಂಡುಹಿಡಿಯಲು ಸಾಧ್ಯವೋ ಎಂದು ಕೇಳಿದರೆ ತತ್ತ್ವಶಃ ಸಾಧ್ಯವೆಂದು ಭೌತವಿಜ್ಞಾನಜ್ಞರ ಆಗಿನ ನಂಬಿಕೆ. ಪ್ರಯೋಗರೀತ್ಯಾ ಸ್ಥಾನ, ವೇಗಗಳನ್ನು ಕಂಡುಹಿಡಿಯುವಾಗ ಅನಿವಾರ್ಯವಾಗಿ ನ್ಯೂನತೆಗಳುಂಟಾಗುವುವಾದರೂ ತತ್ತ್ವಶಃ ಈ ನ್ಯೂನತೆಗಳನ್ನು ನಮಗೆ ಬೇಕಾದಷ್ಟು ಅಲ್ಪವಾಗುವಂತೆ ಮಾಡಬಹುದು-ಎಂಬ ನಂಬಿಕೆಯೂ ಹರಡಿತ್ತು. ಆದರೆ ಹೈಸನ್‍ಬರ್ಗ್‍ನ ವಾದದಿಂದ ಸ್ಥಾನ ಮತ್ತು ವೇಗಗಳನ್ನು ಏಕಕ್ಷಣದಲ್ಲಿ ಕಂಡುಹಿಡಿಯುವ ಪ್ರಯತ್ನ ಒಂದು ರೀತಿಯಲ್ಲಿ ವಿಫಲವಾಗುವುದೆಂದು ಕಂಡುಬಂದಿತು. ಸ್ಥಾನವನ್ನು ಕಂಡುಹಿಡಿಯಲು ಹೆಚ್ಚು ನಿಷ್ಕøಷ್ಟವಾದ ಮಾರ್ಗವನ್ನು ಅನುಸರಿಸಿದಷ್ಟೂ ಈ ಪ್ರಯತ್ನದ ಫಲವಾಗಿಯೇ ವೇಗದ ಮೌಲ್ಯ ಬದಲಾಯಿಸಿಹೋಗುವುದರಿಂದ ವೇಗವನ್ನು ನಿಷ್ಕøಷ್ಟವಾಗಿ ಕಂಡುಹಿಡಿಯಲಾಗುವುದಿಲ್ಲ ಎಂಬುದೇ ಹೈಸನ್‍ಬರ್ಗ್‍ನ ತತ್ತ್ವ.<ref>https://www.theguardian.com/science/2013/nov/10/what-is-heisenbergs-uncertainty-principle</ref>
 
==ಪರಿಕಲ್ಪನೆ==
ಸ್ಥಾನ, ವೇಗ ಎಂಬವುಗಳಿಗೆ ಬದಲಾಗಿ ಹೆಚ್ಚು ವ್ಯಾಪ್ತಿಯುಳ್ಳ ಮತ್ತೊಂದು ರೀತಿಯಲ್ಲಿ ಈ ತತ್ತ್ವವನ್ನು ಒಕ್ಕಣಿಸಬಹುದು. q ಎಂಬ ಸ್ಥಾನಸೂಚಕ ಚರವೂ ಅದಕ್ಕೆ ಅನುವರ್ತಿಯಾದ (ಕಾಂಜ್ಯುಗೇಟ್) ಠಿ ಎಂಬ ಚಲನಪರಿಮಾಣಸೂಚಕ ಚರವೂ ಏಕಕಾಲದಲ್ಲಿ ತಿಳಿಯಬೇಕಾದರೆ, ಅವುಗಳಲ್ಲಿ q,ಠಿ ಎಂಬ ಅನಿಶ್ಚಿತತ್ವ ಸಹಜವಾಗಿ ಉದ್ಭವಿಸುವುದಲ್ಲದೆ q. ಠಿ ಎಂಬ ಗುಣಲಬ್ಧ ಪ್ಲಾಂಕನ ಭೇದರಹಿತ ಸಂಖ್ಯೆಯಾದ h ಎಂಬುದಕ್ಕಿಂತ ಕಡಿಮೆಯಾಗಿರಲಾರದು ಎಂಬುದೇ ಹೈಸನ್‍ಬರ್ಗ್‍ನ ತತ್ತ್ವ. ಶಕಲಬಲವಿಜ್ಞಾನದ ಪ್ರಕಾರ, ಒಂದು ಕಣದ ಸ್ಥಾನ ತಿಳಿಯಬೇಕಾದರೆ ಅದಕ್ಕೆ ಸಂಬಂಧಪಟ್ಟ ವಸ್ತುತರಂಗದ (ಮ್ಯಾಟರ್‍ವೇವ್) ಪಾರದ ವರ್ಗವನ್ನು ಗುಣಿಸಿದರೆ ಆ ಕಣ ಆ ಸ್ಥಾನದಲ್ಲಿರಬಹುದಾದ ಸಂಭಾವ್ಯತೆ (ಪ್ರಾಬೆಬಿಲಿಟಿ) ಮಾತ್ರ ಗೊತ್ತಾಗುತ್ತದೆ. ಅದರ ಸ್ಥಾನ x=x2-x1 ಎಂಬ ಪರಿಮಿತಿಯೊಳಗೆ ಇರಬೇಕಾದರೆ ವಸ್ತುತರಂಗದ ಪಾರ ಈ ಎಲ್ಲೆಗಳಿಂದಾಚೆ ಸೊನ್ನೆಯಾಗಬೇಕು. ಎರಡು ಸುಲಭ ಸಂಗತ ಚಲನೆಗಳಿಗೆ (ಸಿಂಪಲ್ ಹಾರ್ಮೊನಿಕ್ ಮೋಷನ್ಸ್) ಸಂಬಂಧಿಸಿದ ಆಂದೋಳನ ಸೊನ್ನೆಯಾಗಬೇಕಾದರೆ[[ಸೊನ್ನೆ]]ಯಾಗಬೇಕಾದರೆ ಅವುಗಳ ದಶಾಂತರ (ಫೇಸ್ó ಡಿಫರೆನ್ಸ್) ಅಥವಾ - ಆಗಿರಬೇಕು. P1 ಮತ್ತು P2 ಎಂಬ ಚಲನ ಪರಿಮಾಣಗಳಿಗೆ ಸಂಬಂಧಪಟ್ಟ ತರಂಗಗಳ ದಶಾಂತರ x1 ಎಂಬಲ್ಲಿ
 
ಎಂದೂ x2 ಎಂಬಲ್ಲಿ
"https://kn.wikipedia.org/wiki/ಅನಿಶ್ಚಿತತ್ವನಿಯಮ" ಇಂದ ಪಡೆಯಲ್ಪಟ್ಟಿದೆ