ಅಧಿಶೋಷಣೆ ಮತ್ತು ಅಧಿಶೋಷಕಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಅಧಿಶೋಷಣೆ ಮತ್ತು ಅಧಿಶೋಷಕಗಳು. ಒಂದು ಅನಿಲ ಇಲ್ಲವೆ ದ್ರಾವಣದಲ್ಲಿರುವ ವಸ್ತ...
 
No edit summary
೧ ನೇ ಸಾಲು:
ಅಧಿಶೋಷಣೆ ಮತ್ತು ಅಧಿಶೋಷಕಗಳು. ಒಂದು [[ಅನಿಲ]] ಇಲ್ಲವೆ ದ್ರಾವಣದಲ್ಲಿರುವ[[ದ್ರಾವಣ]]ದಲ್ಲಿರುವ ವಸ್ತು ಸಾಮಾನ್ಯವಾಗಿ ಇನ್ನೊಂದು ಘನವಸ್ತುವಿನ ಮೇಲ್ಮೈಯಲ್ಲಿ ದಟ್ಟತೆಹೊಂದುವ ಈ ಕ್ರಿಯೆಗೆ ಅಧಿಶೋಷಣೆ (ಅಡ್‍ಸಾರ್ಟ್‍ಷನ್) ಎಂದು ಹೆಸರು.
 
==ಹಿನ್ನೆಲೆ==
ಅಮೋನಿಯ ಅನಿಲವಿರುವ ಒಂದು ಪಾತ್ರೆಗೆ ತೆಂಗಿನ ಚಿಪ್ಪನ್ನು ಸುಟ್ಟು ತಯಾರಿಸಿದ ಇದ್ದಲಿನ ಚೂರನ್ನು ಹಾಕಿದರೆ, ಅದು ಪಾತ್ರೆಯಲ್ಲಿರುವ ಬಹುಭಾಗ ಅಮೋನಿಯವನ್ನು[[ಅಮೋನಿಯ]]ವನ್ನು ಹೀರಿಕೊಳ್ಳುತ್ತದೆ. ಹೀಗೆ ಹೀರಿಕೊಂಡ ಅನಿಲ, ಇದ್ದಲಿನ ಮೇಲ್ಮೈಯಲ್ಲಿಯೇ ಉಳಿದುಕೊಂಡಿರುತ್ತದೆಂದು ತೋರಿಸಬಹುದು. <ref>https://www.britannica.com/science/adsorption</ref>ಒಂದು ಚೂರು ಸ್ಪಂಜನ್ನು ನೀರಿನಲ್ಲಿ ಹಾಕಿದಾಗ ಅದು ನೀರನ್ನು ಹೀರಿಕೊಳ್ಳುತ್ತದೆ. ಹೀಗೆ ಹೀರಿಕೊಂಡ ನೀರಿನ ಕಣಗಳು ಸ್ಪಂಜಿನ ಹೊರಮೈಯಲ್ಲೇ ಉಳಿಯದೆ ಅದರ ಎಲ್ಲ ಭಾಗಗಳಲ್ಲೂ ಹರಡಿಕೊಂಡಿರುತ್ತದೆ. ಈ ಕ್ರಿಯೆಗೆ ಅವಶೋಷಣೆ (ಅಬ್ಸಾರ್ಪ್‍ಷನ್) ಎಂದು ಹೆಸರು.<ref>https://www.britannica.com/science/absorption-physics</ref> ಕೆಲವು ಘನವಸ್ತುಗಳು[[ಘನವಸ್ತು]]ಗಳು ಅನಿಲ ಮತ್ತು ಲೀನವಸ್ತುಗಳನ್ನು ಅಧಿಶೋಷಿಸಿಕೊಳ್ಳುತ್ತವೆ. ಇಂಥ ವಸ್ತುಗಳಿಗೆ ಅಧಿಶೋಷಕ (ಅಡ್‍ಸಾರ್‍ಬೆಂಟ್) ಎಂದೂ ಅವುಗಳ ಮೇಲ್ಮೈಯಲ್ಲಿ ದಟ್ಟತೆ ಹೊಂದುವ ವಸ್ತುಗಳಿಗೆ ಅಧಿಶೋಷಿತ ವಸ್ತುಗಳೆಂದೂ ಹೆಸರು.
==ಲೀನವಸ್ತು ಮತ್ತು ಅಧಿಶೋಷಣೆ ==
ಸಾಮಾನ್ಯವಾಗಿ ಅಧಿಶೋಷಿತ ವಸ್ತುವಿನ ಪ್ರಮಾಣ ಅಧಿಶೋಷಕದ ಮೇಲ್ಮೈಕ್ಷೇತ್ರವನ್ನು ಅವಲಂಬಿಸಿರುತ್ತದೆ. ಆದ್ದರಿಂದ ಒಂದು ಘನವಸ್ತುವನ್ನು ಸಣ್ಣ ಸಣ್ಣದಾಗಿ ವಿಭಾಗಮಾಡಿದರೆ ಅದರ ಹೊರಮೈಕ್ಷೇತ್ರ ಹೆಚ್ಚಾಗುವುದರಿಂದ ಅದು ಹೆಚ್ಚಿನ ಪ್ರಮಾಣದಲ್ಲಿ ಅನಿಲ ಅಥವಾ ಲೀನವಸ್ತುಗಳನ್ನು ಅಧಿಶೋಷಿಸಿಕೊಳ್ಳಬಲ್ಲುದು. ಘನವಸ್ತುಗಳ ಮೇಲ್ಮೈ ಕ್ಷೇತ್ರ ಹೆಚ್ಚಾಗಿರುವುದರಿಂದ ಬಹುಮಟ್ಟಿಗೆ ಅಧಿಶೋಷಕಗಳು ಘನವಸ್ತುಗಳಾಗಿರುತ್ತವೆ.
೧೨ ನೇ ಸಾಲು:
ಇದರಲ್ಲಿ ಅಧಿಶೋಷಿತವಸ್ತುಗಳು ಅಧಿಶೋಷಕಕ್ಕೆ ದುರ್ಬಲವಾದ ವ್ಯಾಂಡರ್‍ವಾಲ್‍ಬಲದಿಂದ ಬಂಧಿಸಲ್ಪಟ್ಟಿರುತ್ತವೆ. ಉದಾಹರಣೆಗೆ, ಅಭ್ರಕದಿಂದ ಅಧಿಶೋಷಿಸಲ್ಪಟ್ಟ ಸಾರಜನಕ ಹೀಗಿರುತ್ತದೆ
==ರಾಸಾಯನಿಕ ಅಥವಾ ಸಕ್ರಿಯ ಅಧಿಶೋಷಣೆ (ಕೆಮಿಕಲ್ ಅಥವಾ ಆ್ಯಕ್ಟಿವೇಟೆಡ್‍ಅಬ್‍ಸಾರ್ಪ್‍ಷನ್)==
ಇದರಲ್ಲಿ ಅಧಿಶೋಷಿತ ವಸ್ತುಗಳು ಅಧಿಶೋಷಕದ ಮೇಲ್ಮೈಯಲ್ಲಿರುವ [[ಅಣು]] ಅಥವಾ ಅಯಾನುಗಳೊಡನೆ ರಾಸಾಯನಿಕ ಬಲಗಳಿಂದ ಬಂಧಿಸಲ್ಪಟ್ಟಿರುತ್ತವೆ. ಉದಾಹರಣೆಗೆ, ಆಮ್ಲಜನಕವನ್ನು ಟಂಗ್‍ಸ್ಟನ್ ಅಧಿಶೋಷಿಸಿಕೊಂಡಾಗ ಅದರ ಮೇಲ್ಮೈಯಲ್ಲಿ ಟಂಗ್‍ಸ್ಟನ್ ಆಕ್ಸೈಡ್‍ನ ಒಂದು ಪದರವಿರುತ್ತದೆ.
 
ಮೇಲೆ ತಿಳಿಸಿರುವಂತೆ ಅಧಿಶೋಷಿತ ವಸ್ತುವಿನ ಪ್ರಮಾಣ ಅಧಿಶೋಷಕದ ಮೇಲ್ಮೈಕ್ಷೇತ್ರವನ್ನವಲಂಬಿಸಿರುವುದರಿಂದ ಸಚ್ಫಿದ್ರ ರಚನೆಯುಳ್ಳ ಸಿಲಿಕಾಜೆಲ್, ಮರ, ಮೂಳೆ, ತೆಂಗಿನಚಿಪ್ಪಿನಿಂದ ಪಡೆದ ಇದ್ದಲು ಮತ್ತು ಲಿಗ್ನೈಟ್ ಗಣನೀಯ ಪ್ರಮಾಣದಲ್ಲಿ ವಿವಿಧ ಅನಿಲಗಳನ್ನು ಹೀರಿಕೊಳ್ಳುತ್ತವೆ. ಅಲ್ಲದೆ ಮರದಿಂದ ಪಡೆದ ಇದ್ದಲನ್ನು 3500 ಸೆಂ.ಗ್ರೇ.- 10000 ಸೆಂ.ಗ್ರೇ.ವರೆಗೆ ಶೂನ್ಯ ವಾತಾರವಣದಲ್ಲಾಗಲೀ ಗಾಳಿ, ಜಡಾನಿಲಗಳು, ಹಬೆ, ಕ್ಲೋರಿನ್ ಅಥವಾ ಇಂಗಾಲದ ಡೈ ಆಕ್ಸೈಡ್‍ನ ಆವರಣದಲ್ಲಾಗಲೀ ಕಾಯಿಸುವುದರಿಂದ ಅದು ಪಟುತ್ವ ಪಡೆಯುತ್ತದೆ. ಹೀಗೆ ಪಟುಗೊಳಿಸಿದ ಇದ್ದಲು ಹೆಚ್ಚಿನ ಪ್ರಮಾಣದಲ್ಲಿ ಅನಿಲಗಳನ್ನು ಅಧಿಶೋಷಿಸುತ್ತದೆ.