ಅಧಿಧ್ವನಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ವಾಯುಗತಿ ವಿಜ್ಞಾನದಲ್ಲಿ (ಏರೋಡೈನಾಮಿಕ್ಸ್) ಶಬ್ದವೇಗವನ್ನು ಮೀರಿದ ಚಲನೆಯ ಸ...
 
No edit summary
೧ ನೇ ಸಾಲು:
 
ವಾಯುಗತಿ ವಿಜ್ಞಾನದಲ್ಲಿ (ಏರೋಡೈನಾಮಿಕ್ಸ್) ಶಬ್ದವೇಗವನ್ನು ಮೀರಿದ ಚಲನೆಯ ಸಂಬಂಧವಾಗಿ ಈ ಪದ (ಸೂಪರ್‍ಸಾನಿಕ್) ಬಳಕೆಯಲ್ಲಿದೆ. ಎರಡನೆಯ ಮಹಾಯುದ್ಧದಲ್ಲಿ[[ಎರಡನೆಯ_ಮಹಾಯುದ್ಧ]]ದಲ್ಲಿ ಅತ್ಯಧಿಕ ವೇಗದ ವಿಮಾನಗಳು[[ವಿಮಾನ]]ಗಳು, ರಾಕೆಟ್ಟುಗಳು, ಜೆಟ್ ಚಾಲಿತ ಕ್ಷಿಪಣಿಗಳು[[ಕ್ಷಿಪಣಿ]]ಗಳು--ಇವುಗಳ ಬಳಕೆಯಾದಾಗಿನಿಂದ ಈ ಪದಕ್ಕೆ ಪ್ರಾಮುಖ್ಯ ಬಂದಿದೆ. ಮ್ಯಾಕ್ ಸಂಖ್ಯೆ: ಸಾಮಾನ್ಯ ಸ್ಥಿತಿಯಲ್ಲಿ ಹಾಗೂ ಸಮುದ್ರ ಮಟ್ಟಗಳಲ್ಲಿ ಶಬ್ದದ ವೇಗ ಸೆಕೆಂಡಿಗೆ ಸುಮಾರು 332 ಮೀ ಇದ್ದು ಸಮುದ್ರ ಮಟ್ಟದಿಂದ ಇರುವ ಎತ್ತರ ಹಾಗೂ ಉಷ್ಣತೆಗಳಿಗನುಗುಣವಾಗಿ ಅಲ್ಪಸ್ವಲ್ಪ ಬದಲಾವಣೆಯಾಗುತ್ತದೆ. [[ಸ್ಫೋಟಕ]] ಗುಂಡುಗಳು ಮತ್ತು ಕ್ಷಿಪಣಿಗಳು ಈ ವೇಗವನ್ನು ಮೀರಿರುತ್ತವೆಯಾದರೂ ವಿಮಾನದಲ್ಲಿ ಈ ವೇಗಕ್ಕೆ ಸಂಬಂಧಪಟ್ಟ ಅಂಶ ಹಲವು ಸಮಸ್ಯೆಗಳನ್ನೊಡ್ಡುತ್ತದೆ. ವಾಯುವಿನ (ಅಥವಾ ಯಾವುದೇ ಸ್ನಿಗ್ಧತಾ ಪ್ರವಾಹಿಯ) ಮತ್ತು ಅದರಲ್ಲಿ ಚಲಿಸುವ ಒಂದು ಘನಪದಾರ್ಥದ ಸಾಪೇಕ್ಷ (ಘನವಸ್ತು ಸ್ಥಿರವಾಗಿದ್ದು ಪ್ರವಾಹಿ ಅದರ ಮೇಲೆ ಚಲಿಸುತ್ತಿರಬಹುದು) ವೇಗವನ್ನು ಅಡಿ, ಮೈಲಿ ಅಥವಾ ಮೀಟರುಗಳಲ್ಲಿ ನಮೂದಿಸದೆ, ಆ ಪ್ರವಾಹಿಮಾಧ್ಯಮದಲ್ಲಿ ಶಬ್ದ ಪ್ರವಹಿಸುವ ವೇಗಕ್ಕೆ ಹೋಲಿಸಿ ಒಂದು ಸೂಚ್ಯಂಕವಾಗಿ ನಮೂದಿಸುತ್ತಾರೆ. ಇದಕ್ಕೆ ಮ್ಯಾಕ್ ಸಂಖ್ಯೆ ಎನ್ನುತ್ತಾರೆ. ಇದರ ಬೆಲೆ ಒಂದಕ್ಕಿಂತ ಕಡಿಮೆಯಿದ್ದರೆ ವಸ್ತುವಿನ ವೇಗ ಶಬ್ದವೇಗಕ್ಕಿಂತ ಕಡಿಮೆಯೆಂತಲೂ (ಅವಧ್ವನಿಕ ಅಥವಾ ಸಬ್‍ಸಾನಿಕ್) ಒಂದಾಗಿದ್ದಾಗ ಅದು ಧ್ವನಿಕ (ಸಾನಿಕ್) ಮತ್ತು ಮ್ಯಾಕ್ ಸಂಖ್ಯೆ 5ಕ್ಕೂ ಹೆಚ್ಚಿದ್ದಾಗ ಗಾಳಿಯಲ್ಲಿ[[ಗಾಳಿ]]ಯಲ್ಲಿ ಅತಿಧ್ವನಿಕ (ಹೈಪರ್‍ಸಾನಿಕ್) ಸ್ಥಿತಿ ಉಂಟಾಗುತ್ತದೆ, ಒಂದಕ್ಕಿಂತ ಹೆಚ್ಚಿಗೆ ಇದ್ದರೆ ಅದು ಅಧಿಧ್ವನಿಕ ವಸ್ತುವಿನ ವೇಗ ಆ ಮಾಧ್ಯಮದಲ್ಲಿನ ಶಬ್ದವೇಗಕ್ಕಿಂತ ಅಷ್ಟು ಪಟ್ಟು ಹೆಚ್ಚು ಎಂದೂ ಅರ್ಥವಾಗುತ್ತದೆ. ಆವೇಗದ ಪ್ರಸಾರ : ಒಂದು ಸ್ನಿಗ್ಧತಾ ಪ್ರವಾಹಿಮಾಧ್ಯಮದಲ್ಲಿ ಒಂದು ಒತ್ತಡದ ಅಥವಾ ಕ್ಷೋಭೆಯ (ಪ್ರೆಷರ್ ಇಂಪಲ್ಸ್ ಅಥವಾ ಡಿಸ್ಟರ್‍ಬೆನ್ಸ್) ಆವೇಗದ (ಇಂಪಲ್ಸ್) ಪ್ರಸಾರ ಹೇಗೆ ಆಗುತ್ತದೆ ಎಂಬುದನ್ನು ಮೊದಲು ಪರಿಗಣಿಸಬಹುದು.<ref>https://books.google.com/books?id=PyEDAAAAMBAJ&pg=PA72&dq=motor+gun+boat&hl=en&ei=LxTqTMfGI4-bnwfEyNiWDQ&sa=X&oi=book_result&ct=result&resnum=6&ved=0CEIQ6AEwBQ#v=onepage&q=motor%20gun%20boat&f=true</ref> ಮಾಧ್ಯಮ ನಿಶ್ಚಲವಾಗಿರುವಾಗ, ಕ್ಷೋಭೆ ಶಬ್ದದ ವೇಗದಲ್ಲಿ ಹಾಗೂ ಸಮಪ್ರಮಾಣದಲ್ಲಿ ಸುತ್ತಲಿನ ಎಲ್ಲ ದಿಕ್ಕುಗಳಲ್ಲೂ ಪ್ರಸಾರವಾಗುತ್ತ, ಕ್ಷೋಭೆಯ ಮೂಲವನ್ನೇ ಕೇಂದ್ರವಾಗುಳ್ಳ, ಉಬ್ಬುತ್ತಲೇ ಹೋಗುವ, ಒಂದು ಗೋಳದ ವಲಯಭಾಗದಲ್ಲಿ ಅದರ ಪ್ರಭಾವ ಕಾಣಿಸಿಕೊಳ್ಳುತ್ತಿರುತ್ತದೆ. ಮಾಧ್ಯಮ ಪ್ರವಹಿಸುತ್ತಿದ್ದರೆ ಕ್ಷೋಭೆಯ ಶಬ್ದವೇಗದ ಆವೇಗ ಪ್ರವಾಹದಲ್ಲಿ ಸಾಗಿಸಲ್ಪಡುವುದರಿಂದ, ಫಲಿತಾಂಶದ ಪ್ರಸಾರ ಪ್ರವಾಹದ ದಿಕ್ಕಿನಲ್ಲಿ ಹೆಚ್ಚು ವೇಗವಾಗಿಯೂ ವಿರುದ್ಧ ದಿಕ್ಕಿನಲ್ಲಿ ಕಡಿಮೆಯಾಗಿಯೂ ಇರುತ್ತದೆ. ಪ್ರವಾಹದ ವೇಗ ಶಬ್ದವೇಗಕ್ಕೆ ಸಮನಾದರೆ ಕ್ಷೋಭೆಯ ಪ್ರಭಾವ ಎಲ್ಲ ದಿಕ್ಕುಗಳಲ್ಲಿಯೂ ಪ್ರಸಾರವಾಗುವುದು ಸಾಧ್ಯವಾಗದೆ ಅದು ಹೊರಟ ಮೂಲಸ್ಥಾನದ ವಿರುದ್ಧ ದಿಕ್ಕಿನ ಮಾರ್ಗಮಧ್ಯದಲ್ಲಿದ್ದು ಅದರ ಪ್ರಭಾವ ಶೂನ್ಯವಾಗುತ್ತದೆ.
 
[[en:Supersonic_speed]]
"https://kn.wikipedia.org/wiki/ಅಧಿಧ್ವನಿಕ" ಇಂದ ಪಡೆಯಲ್ಪಟ್ಟಿದೆ