ಅದುರು ಜನನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಅದುರು ಜನನ''' ಎಂದರೆ ನಿಸರ್ಗದಲ್ಲಿ ದೊರೆಯುವ ಉಪಯುಕ್ತ ಖನಿಜಗಳ ಸಂಗ್ರಹಣವೇ...
 
No edit summary
೧ ನೇ ಸಾಲು:
'''ಅದುರು ಜನನ''' ಎಂದರೆ
ನಿಸರ್ಗದಲ್ಲಿ ದೊರೆಯುವ ಉಪಯುಕ್ತ ಖನಿಜಗಳ ಸಂಗ್ರಹಣವೇ ಅದುರುನಿಕ್ಷೇಪಗಳು. ಇವು ಎಲ್ಲ ಕಡೆಯೂ ದೊರೆಯುವುದಿಲ್ಲ.

==ನಿಕ್ಶೇಪಗಳು==
[[ಖನಿಜ]]ಗಳ ಸ್ಥಿರತೆ, ಭೂ ಚಟುವಟಿಕೆ ಮತ್ತು ಸನ್ನಿವೇಶ ಇವುಗಳನ್ನು ಅವಲಂಬಿಸಿ ಇವು ಮೈದೋರುತ್ತವೆ. ದೊರೆಯುವ ರೀತಿಯನ್ನನುಸರಿಸಿ ಅದುರು ನಿಕ್ಷೇಪಗಳನ್ನು ಸಹಜನ್ಯ (ಸಿಂಜೆನಿಟಿಕ್) ಅದುರುಗಳು ಮತ್ತು ಅನುಜನ್ಯ (ಎಪಿಜೆನಿಟಿಕ್) ಅದುರುಗಳು <ref>https://encyclopedia2.thefreedictionary.com/Epigenetic+Deposit</ref>ಎಂದು ವರ್ಗೀಕರಿಸಬಹುದು. ಸಹಜನ್ಯನಿಕ್ಷೇಪಗಳು ಅವು ಹುದುಗಿರುವ ಶಿಲೆಗಳೊಡನೆ ಏಕಕಾಲದಲ್ಲಿ ಹುಟ್ಟಿದವು. ಈ ವರ್ಗದಲ್ಲಿ ಮಾತೃಶಿಲಾದ್ರವದಿಂದಾದ ಶೇಖರಣೆಗಳು. ಪ್ರಸರೀ ನಿಕ್ಷೇಪಗಳು ಇತ್ಯಾದಿ ಭೇದಗಳಿವೆ. ಅನುಜನ್ಯನಿಕ್ಷೇಪಗಳು ಅವು ಹುದುಗಿರುವ ಶಿಲೆಗಳು ಮೈದೋರಿದ ಅನಂತರ ನಾನಾ ಕಾರಣಗಳಿಂದ ಅವುಗಳಲ್ಲಿ ಸೇರಿ ಜನಿಸಿದವು. ಈ ವರ್ಗದಲ್ಲಿ ಕಾವು ನೀರು (ಹೈಡ್ರೊಥರ್‍ಮಲ್) ನಿಕ್ಷೇಪಗಳು, ಸಂಪರ್ಕ ರೂಪಾಂತರ ನಿಕ್ಷೇಪಗಳು ಇತ್ಯಾದಿ ಬಗೆಗಳಿವೆ.<ref>http://earthsci.org/mineral/mindep/class_dep/class_dep.html</ref>
 
ಹಲವು ಅದುರುನಿಕ್ಷೇಪಗಳು ಉಂಟಾಗಲು ಮಾತೃಶಿಲಾದ್ರವಕ್ಕೆ ಸಂಬಂಧಿಸಿದ ಚಟುವಟಿಕೆಗಳು ಕಾರಣವಾಗಿವೆ. ಮಾತೃಶಿಲಾದ್ರವ ಆರಿ ತಣ್ಣಗಾಗುತ್ತಿರುವ ಸಂದರ್ಭದಲ್ಲಿ ಮೂಲ (ಬೇಸಿಸ್) ಶಿಲೆಗಳು ಉದ್ಭವಿಸುವಾಗ ಸಾಮಾನ್ಯವಾಗಿ ಲೋಹಗಳ ಆಕ್ಸೈಡುಗಳು ಮತ್ತು ಸಲ್ಫೈಡುಗಳು ಅದರಿಂದ ಹೊರಬಂದು, ಉಳಿದಿರುವ ಸಿಲಿಕ ದ್ರವಾಂಶದೊಡನೆ ಬೆರೆಯದೆ ನಿಯತ ಪದರಗಳಲ್ಲೊ ಇಲ್ಲವೆ ನಿರಾಕಾರ ಶೇಖರಣೆಗಳಾಗಿಯೊ ಮೈದೋರುತ್ತವೆ. ಇವುಗಳಲ್ಲಿ ಟೈಟೇನಿಯಂನಿಂದ ಕೂಡಿದ ಮ್ಯಾಗ್ನಟೈಟ್, ಕ್ರೋಮೈಟ್, ನಿಕ್ಕಲ್, ಪ್ಲಾಟಿನಂ ಮತ್ತು ವಜ್ರ ನಿಕ್ಷೇಪಗಳು ಮುಖ್ಯವಾದುವು.
 
ಹೀಗೆಯೇ ಹೆಚ್ಚು ಸಿಲಿಕಾಂಶದಿಂದ ಕೂಡಿದ ಕ್ಷಾರೀಯ ಮಾತೃಶಿಲಾದ್ರವಗಳು ಇಂಗಾಲಾಮ್ಲ, ಬೋರಾನ್, ಫ್ಲೂರಿನ್, ಕ್ಲೋರಿನ್, ನೀರು ಮತ್ತು [[ಗಂಧಕ]]- ಈ ಧಾತುಗಳಿಂದ ಕೂಡಿದ್ದು ಕ್ರಮೇಣ ಅನೇಕ ಖನಿಜಗಳ ಉತ್ಪತ್ತಿಗೂ ಕಾರಣವೆನಿಸುತ್ತವೆ. ಕೆಲವು ವೇಳೆ ಈ ಖನಿಜಗಳಿಂದ ಕೂಡಿದ ಪೆಗ್ಮಟೈಟ್ ನಿಕ್ಷೇಪಗಳು ಮೂಲಶಿಲೆಯ ನಾನಾ ಕಡೆ ತೋರಿಬರುತ್ತವೆ. ಇನ್ನು ಕೆಲವು ಸಂದರ್ಭಗಳಲ್ಲಿ ಇವು ಮೂಲಶಿಲೆಗಳಿಂದ ಹೊರಬಂದು ಸುತ್ತಮುತ್ತಲಿರುವ ಇತರ ಶಿಲೆಗಳಲ್ಲಿ ಡೈಕ್ ಅಥವಾ ಸಿಲ್‍ಗಳೋಪಾದಿಯಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ಲಿಥಿಯಂ, ಟ್ಯಾಂಟಲಂ, ಬೆರಿಲಿಯಂ, ಸೀಸಿಯಂ, ಅಭ್ರಕ, ಫೆಲ್ಸ್‍ಪಾರ್ ಟೂರ್ಮಲೀನ್, ಕ್ಯಾಸಿಟರೈಟ್, ಷೀಲೈಟ್ ಇತ್ಯಾದಿ ಅನೇಕ ಖನಿಜಗಳು ಉತ್ಪತ್ತಿಯಾಗುತ್ತವೆ.<ref>https://www.slideshare.net/abdulbariqanit/classification-of-ore-deposits-79858986</ref>
 
==ಅನಿಲದ ಒತ್ತಡ==
ಇದಲ್ಲದೆ ಮಾತೃಶಿಲಾದ್ರವದಿಂದ ಹೊರಬರುವ ಅನಿಲಗಳು ವಿಶೇಷ ಒತ್ತಡ ಹಾಗೂ ಶಾಖದಿಂದ ಅಂತರಾಳದಲ್ಲಿರುವ ಶಿಲೆಗಳಿಗೆ, ಅದರಲ್ಲೂ ಪ್ರಮುಖವಾಗಿ ಸುಣ್ಣಶಿಲೆಗಳಿಗೆ, ನುಗ್ಗಿದಾಗ ರಾಸಾಯನಿಕ ಕ್ರಿಯೆಯುಂಟಾಗಿ ಸಂಪರ್ಕರೂಪಾಂತರವಾಗುತ್ತದೆ. ಇದರಿಂದ ಅನೇಕ ತೆರನಾದ ಹೆಚ್ಚು ಶಾಖದಿಂದಲೇ ಉಂಟಾಗುವ ಮ್ಯಾಗ್ನಟೈಟ್, ಇಲಿಮಿನೈಟ್, ಹಿಮಟೈಟ್, ಕುರಂಗದ ಕಲ್ಲು (ಕೊರಂಡಂ), ಸ್ಪಿಸಲ್, ಗ್ರ್ಯಾಫೈಟ್, ಚಿನ್ನ, ಪ್ಲಾಟಿನಂ, ಷೀಲೈಟ್ ಮತ್ತು ವುಲ್ಪ್ರಮೈಟ್ ಖನಿಜಗಳು ರೂಪಗೊಳ್ಳುತ್ತವೆ.
"https://kn.wikipedia.org/wiki/ಅದುರು_ಜನನ" ಇಂದ ಪಡೆಯಲ್ಪಟ್ಟಿದೆ