ಆರ್ಷೇಯ ಯುಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೧ ನೇ ಸಾಲು:
 
ಮಧ್ಯಪ್ರದೇಶದ ಉತ್ತರ ಮತ್ತು ದಕ್ಷಿಣ ವಿಭಾಗದ ಪದರ ಶಿಲಾಪಟ್ಟೆಗಳು ಪೂರ್ವಾಭಿಮುಖವಾಗಿ ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಮುಂದುವರಿದಿವೆ. ಉತ್ತರ ವಿಭಾಗದ ಪಟ್ಟೆಗೆ ಶೋಣಾನದಿ ಕಣಿವೆಯ ಮತ್ತು ಹಜಾರಿಬಾಗ ಗಯಾಮಾಂಘಿರ್ ಪ್ರದೇಶಗಳ ಬಾಹ್ಯಶಿಲಾಸ್ತರಗಳು ಸೇರಿವೆ. ದಕ್ಷಿಣ ವಿಭಾಗದ ಪಟ್ಟೆಯ ಪೂರ್ವಾಭಿಮುಖ ಮುಂದೆಳೆಯಲ್ಲಿ ಸಿಂಗಭೂಮ್ ಕಿಯೋಂಝಾರ್ ಬೊನಾಯ್ ಮಯೂರ್‍ಬಂಜ್ ಪ್ರದೇಶಗಳ ಆರ್ಷೇಯ ಶಿಲಾಸ್ತೋಮಗಳಿವೆ. ಇವುಗಳನ್ನು ಕೊಲಾನ್‍ಶ್ರೇಣಿ, ಕಬ್ಬಿಣದ ಅದುರು ಶ್ರೇಣಿ ಮತ್ತು ಪ್ರಾಚೀನ ರೂಪಾಂತರ ಶಿಲೆಗಳು ಎಂದು ಮೂರು ವಿಭಾಗಮಾಡಿದೆ. ಇವುಗಳಲ್ಲಿ ಪ್ರಾಚೀನ ರೂಪಾಂತರ ಶಿಲಾಸ್ತೋಮ ಅತ್ಯಂತ ಹಿರಿಯದು. ಈ ಪ್ರದೇಶ ಕಣಶಿಲೆ ಮತ್ತು ಕಣಶಿಲಾರೂಪದ ಶೀಣಿಕಲ್ಲುಗಳು (ಡೋಮ್ ನೈಸ್) ಮತ್ತು ಛೋಟಾನಾಗಪುರ ಕಣಶಿಲಾ ನೈಸ್ ಎಂದು ಎರಡು ವಿಭಾಗಗಳಾಗಿ ಹೆಸರುಗೊಂಡಿವೆ. ಇಲ್ಲಿನ ರಾಂಚಿ ಕಣಶಿಲೆಗಳು ಉತ್ತರ ಮತ್ತು ದಕ್ಷಿಣ ಪದರುಶಿಲಾಪಟ್ಟೆಗಳ ಮಧ್ಯದಲ್ಲಿ ಹೊರಬಂದು ಅವುಗಳನ್ನು ಪ್ರತ್ಯೇಕಿಸಿರುತ್ತವೆ.
[[ಅದುರು_ಜನನ]] ಈ ಕಾಲಘಟ್ಟ ಆದುದು ಎಂದು ಅಂದಾಜು.
 
===ಪೂರ್ವ ಭಾರತ===
ಪೂರ್ವಘಟ್ಟಗಳ ಆರ್ಷೇಯ ಶಿಲಾಸ್ತೋಮಗಳು ಹೆಚ್ಚು ರೂಪಾಂತರಿಸಿದ ಪದರುಶಿಲೆಗಳನ್ನು ಒಳಗೊಂಡಿವೆ. ಈ ಶಿಲಾಸ್ತೋಮದ ಹೆಸರು ಖಾಂಡ್‍ಲೈಟ್ಸ್, ಹೈಪರ್‍ಸ್ತೀನ್ ಗ್ರಾನುಲೈಟ್ ಅಥವಾ ಚಾರ್ನಕೈಟ್ ಎಂಬ ಶಿಲೆಗಳಿಂದಲೂ ಮತ್ತು ಕೆಲವು ಪದರುಶಿಲೆಗಳ (ಕ್ವಾಟ್‍ಸೈಟ್ಸ್) ಗುಂಪಿಗೆ ಸೇರಿ ಸಿಲ್ಲಿನುನೈಟ್, ಗ್ರಾಫೈಟ್ ಗಾರ್ನೆಟ್ಸ್ ಮತ್ತು ಕಲ್ಮಷ ಮರಳು ಕಲ್ಲುಗಳು ಇವನ್ನೂ ಉಷ್ಣ ರೂಪಾಂತರವಾಗುವಾಗ ಉತ್ಪನ್ನವಾಗುವ ಇತರ ಖನಿಜಗಳನ್ನೂ ಒಳಗೊಂಡಿವೆ. ಇವು ಅರಾವಳೀ ಪದರುಶಿಲೆಗಳಂತೆ ಘಟ್ಟಪ್ರದೇಶದ ಪೂರ್ವಭಾಗದಲ್ಲಿ ಈಶಾನ್ಯ ನೈಋತ್ಯಾಭಿಮುಖವಾಗಿವೆ; ಅದಕ್ಕೆ ಪಶ್ಚಿಮಭಾಗದಲ್ಲಿ ವಾಯವ್ಯ-ಆಗ್ನೇಯಾಭಿಮುಖವಾಗಿ ಹರಡಿವೆ. ಇತರ ಆರ್ಷೇಯ ಪ್ರದೇಶಗಳಂತೆ ಇಲ್ಲಿಯ ಪದರುಶಿಲೆಗಳೂ ಕಣಶಿಲೆ ಮತ್ತು ಶೀಣಿಕಲ್ಲುಗಳೊಂದಿಗೆ ಕೂಡಿವೆ.
"https://kn.wikipedia.org/wiki/ಆರ್ಷೇಯ_ಯುಗ" ಇಂದ ಪಡೆಯಲ್ಪಟ್ಟಿದೆ