ಅತಿನೇರಿಳೆ ಕಿರಣಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಅತಿನೇರಿಳೆ ಕಿರಣ''' ಎಂದರೆ ಗೋಚರವಾದ ಬೆಳಕಿನ ಕಿರಣಗಳಿಗಿಂತ ಆದರೆ ಕ್ಷ-ಕಿರಣ...
( ಯಾವುದೇ ವ್ಯತ್ಯಾಸವಿಲ್ಲ )

೨೩:೧೯, ೧೧ ಜನವರಿ ೨೦೨೦ ನಂತೆ ಪರಿಷ್ಕರಣೆ

ಅತಿನೇರಿಳೆ ಕಿರಣ ಎಂದರೆ ಗೋಚರವಾದ ಬೆಳಕಿನ ಕಿರಣಗಳಿಗಿಂತ ಆದರೆ ಕ್ಷ-ಕಿರಣಗಳಿಗಿಂತಲೂ ದೊಡ್ಡ ಅಲೆಯುದ್ದ(Wavelength) ಇರುವ ಕಿರಣಗಳು.

ನೋಟ

ಸೂರ್ಯನ ಬೆಳಕನ್ನು ಅಶ್ರಗವೊಂದರ ಮೂಲಕ ಹಾದುಹೋಗುವಂತೆ ಮಾಡಿದರೆ ಬಿಳಿಯ ಬೆಳಕಿಗೆ ಬದಲಾಗಿ ಕಾಮನ ಬಿಲ್ಲಿನಲ್ಲಿ ಕಾಣುವಂತೆ ನೇರಿಳೆ, ನೀಲಿ, ನೀಲ, ಹಸುರು, ಕಿತ್ತಳೆ, ಹಳದಿ ಮತ್ತು ಕೆಂಪು-ಈ 7 ಬಣ್ಣಗಳು ಕಂಡುಬರುತ್ತವೆ. ಇದಕ್ಕೆ ಗೋಚರರೋಹಿತ (ವಿಸಿಬಲ್ ಸ್ಪೆಕ್ಟ್ರಮ್) ಎಂದು ಹೆಸರು. ಇದರಲ್ಲಿ ಕೆಂಪುರಶ್ಮಿಯ ಅಲೆಯುದ್ದ 8000 ಆಂಗ್‍ಸ್ಟ್ರಾಂಗಳು (ಆ.) [1 ಸೆಂ. ಮೀ. ಉದ್ದವನ್ನು ಒಂದು ದಶಕೋಟಿಯಿಂದ ಭಾಗಿಸಿದಾಗ ಬರುವ ಅತ್ಯಲ್ಪಪ್ರಮಾಣ ಒಂದು ಆಂಗ್‍ಸ್ಟ್ರಾಂ] ಮತ್ತು ನೇರಿಳೆರಶ್ಮಿಯ ಅಲೆಯುದ್ದ ಸುಮಾರು 4000 ಆ.ಗಳು. ಇವೆರಡೂ ಗೋಚರರೋಹಿತದ ಎರಡು ಕೊನೆಗಳು. ಹೀಗೆ ಪಡೆದ ಗೋಚರರೋಹಿತ ಅಖಂಡವ್ಯಾಪ್ತಿಯುಳ್ಳ ವಿದ್ಯುತ್ಕಾಂತರೋಹಿತದಲ್ಲಿ (ಎಲೆಕ್ಟ್ರೋ ಮ್ಯಾಗ್ನೆಟಿಕ್ ಸ್ಪೆಕ್ಟ್ರಮ್), ಅತ್ಯಲ್ಪವ್ಯಾಪ್ತಿಯುಳ್ಳ ಒಂದು ಭಾಗ ಮಾತ್ರ. ವಿದ್ಯುತ್ಕಾಂತರೋಹಿತದಲ್ಲಿ ನೇರಿಳೆಕಿರಣಕ್ಕಿಂತಲೂ ಕಡಿಮೆ ಹಾಗೂ ಕೆಂಪು ರಶ್ಮಿಗಿಂತಲೂ ಹೆಚ್ಚು ತರಂಗದೂರವುಳ್ಳ ಅಧಿಕಪ್ರಮಾಣದ ಕಿರಣಗಳು ಅಡಕವಾಗಿವೆ. ವಿದ್ಯುತ್ಕಾಂತ ವಿಕಿರಣ ಪಸರಿಸಿರುವ ಅಲೆಯುದ್ದಗಳ ವ್ಯಾಪ್ತಿಗೆ ವಿದ್ಯುತ್ಕಾಂತ ರೋಹಿತವೆಂದು ಹೆಸರು. ಅತಿ ದೀರ್ಘ ಅಲೆಯುದ್ದದವು ರೇಡಿಯೊ ತರಂಗಗಳು (ಅಲೆಯುದ್ದ 105-10-3 ಮೀ); ಅತಿ ಕಡಿಮೆ ಅಲೆಯುದ್ದದವು ಗ್ಯಾಮ ಕಿರಣಗಳು (1011-10-14 ಮೀ)

ರಶ್ಮಿಗಳು

ನೇರಿಳೆರಶ್ಮಿಯ ಅಂಚಿನಿಂದ ಇನ್ನೂ ಕಡಿಮೆ ತರಂಗದೂರದ (10-7-10-9 ಮೀ) ಅಂದರೆ ಎಕ್ಸ್-ರಶ್ಮಿಗಳ(ಕ್ಷ-ಕಿರಣ) ಪ್ರಾರಂಭದವರೆಗೂ ವ್ಯಾಪಿಸಿರುವ ವಿದ್ಯುತ್ಕಾಂತೀಯರೋಹಿತದ ಭಾಗಕ್ಕೆ ಅತಿನೇರಿಳೆ ರಶ್ಮಿಗಳು (ಅಲ್ಟ್ರವಯೊಲೆಟ್ ರೇಡಿಯೇಷನ್) ಎಂದು ಹೆಸರು. ಇದು ಕಣ್ಣಿಗೆ ಅಗೋಚರವಾದ ಕಿರಣವಾದರೂ ಇದನ್ನು ಅತಿನೇರಿಳೆ ಬೆಳಕು ಎಂದು ಕರೆಯುವುದು ವಾಡಿಕೆ.

ವರ್ಗೀಕರಣ

ಅತಿನೇರಿಳೆ ಕಿರಣ ಪಟ್ಟಿಯನ್ನು ಹಲವಾರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳಲ್ಲಿ ಮುಖ್ಯವಾದುವು

=ಹತ್ತಿರದ ಅತಿನೇರಿಳೆ

ಹತ್ತಿರದ ಅತಿನೇರಿಳೆ ಅಥವಾ ನಿಯರ್ ಅಲ್ಟ್ರವಯೊಲೆಟ್, ಇದು 4000 ಆ.ಗಳಿಂದ ಸುಮಾರು 3000 ಆ.ವರೆಗೂ ವ್ಯಾಪಿಸಿದೆ. ಸೂರ್ಯನ ಬೆಳಕಿನಲ್ಲೂ ಇದು ಅಡಕವಾಗಿದೆ.

ಮಧ್ಯಾತಿನೇರಿಳೆ

ಮಧ್ಯಾತಿನೇರಿಳೆ, (ಮಿಡ್ಲ್ ಅಲ್ಟ್ರವಯೊಲೆಟ್). ಇದು 3000 ಆ.ಗಳಿಂದ 2000 ಆ.ವರೆಗೂ ವ್ಯಾಪಿಸಿದೆ. ಸೂರ್ಯನ ಬೆಳಕಿನಲ್ಲಿ ಅಡಕವಾಗಿದ್ದರೂ ಇದು ಭೂಮಿಯನ್ನು ತಲಪುವುದಿಲ್ಲ. ಗಾಳಿ ಇದಕ್ಕೆ ಪಾರದರ್ಶಕ.

ದೂರಾತಿನೇರಿಳೆ

ದೂರಾತಿನೇರಿಳೆ, (ಫಾರ್ ಅಲ್ಟ್ರವಯೊಲೆಟ್) ಇದು 2000 ಆ.ಗಳಿಗಿಂತ ಕಡಿಮೆ ತರಂಗದೂರವುಳ್ಳ ಅತಿನೇರಿಳೆಯ ವಿಭಾಗ. ಗಾಳಿ ಇದಕ್ಕೆ ಅಪಾರದರ್ಶಕವಾದ್ದರಿಂದ ಇದನ್ನು ನಿರ್ವಾತಾತಿನೇರಿಳೆ (ವ್ಯಾಕ್ಯೂಮ್ ಅಲ್ಟ್ರವಯೊಲೆಟ್) ಎಂದೂ ಕರೆಯಬಹುದು. ಇದು ಎಕ್ಸ್-ರಶ್ಮಿಯನ್ನೂ ಅತಿನೇರಿಳೆ ಕಿರಣವನ್ನೂ ಕೂಡಿಸುವ ವಿಭಾಗ.

ಶೋಧನೆ

ಸಿಲ್ವರ್ ಕ್ಲೋರೈಡ್ ಎಂಬ ರಾಸಾಯನಿಕ ವಸ್ತುವಿನ ಮೇಲೆ ಅತಿನೇರಿಳೆ ರಶ್ಮಿ ಉಂಟುಮಾಡಿದ ಪರಿಣಾಮದ ಮೂಲಕ ಇದನ್ನು ಸಂಶೋಧಿಸಿದ (1801) ಮೊದಲನೆಯ ವ್ಯಕ್ತಿ ರಿಟ್ಟರ್ ಜಾನ್ ವಿಲ್ಹೆಲ್ಮ್.

ಸೂರ್ಯನೇ ಅಲ್ಲದೆ ಹೆಚ್ಚುಕಡಿಮೆ ಎಲ್ಲ ಬೆಳಕಿನ ಆಕರಗಳೂ ಸ್ವಲ್ಪಮಟ್ಟಿಗೆ ಅತಿ ನೇರಿಳೆಯನ್ನು ವಿಸರಿಸುತ್ತವೆ. ಸಾಮಾನ್ಯವಾಗಿ ಉಷ್ಣತೆ ಹೆಚ್ಚಿದಷ್ಟು ಅಥವಾ ಉದ್ರಿಕ್ತತೆ ಹೆಚ್ಚು ತೀವ್ರವಾದಷ್ಟೂ ವಿಸ್ತರಣೆಯಾಗುವ ಅತಿನೇರಿಳೆಯ ತರಂಗದೂರ ಕಡಿಮೆಯಾಗತೊಡಗುವುದು. ಕ್ವಾಟ್ರ್ಸ್ ಆವರಣವುಳ್ಳ ಟಂಗ್‍ಸ್ಟನ್ ದೀಪ, ಸುಮಾರು ಅ ಸೆಂ.ಗ್ರೇ. ಉಷ್ಣತೆಯುಳ್ಳ ಇಂಗಾಲ ವಿದ್ಯುತ್‍ಚಾಪ (ಕಾರ್ಬನ್ ಆರ್ಕ್), ಅನಿಲಗಳ ಮುಖಾಂತರ ವಿದ್ಯುತ್ ವಿಸರ್ಜನೆ (ಡಿಸ್‍ಛಾರ್ಜ್)-ಇವೆಲ್ಲವೂ ಅತಿನೇರಿಳೆಯ ಉತ್ತಮ ಆಕರಗಳು. ಆದರೆ ಬಹಳ ಹೆಚ್ಚಾಗಿ ಉಪಯೋಗಿಸಲಾಗುವ ಆಕರವೆಂದರೆ ಕ್ವಾಟ್ರ್ಸ್-ಪಾದರಸದ ವಿದ್ಯುತ್‍ಚಾಪ (ಕ್ವಾಟ್ರ್ಸ್-ಮಕ್ರ್ಯುರಿ ಆರ್ಕ್), ಅತ್ಯಂತ ಕಡಿಮೆ ತರಂಗದೂರವುಳ್ಳ ಅತಿನೇರಿಳೆ ಬೇಕಾದಲ್ಲಿ ಅತ್ಯಂತ ಹೆಚ್ಚು ಉಷ್ಣತೆಯುಳ್ಳ ಆಕರಗಳು ಬೇಕಾಗುತ್ತವೆ. ಉದಾಹರಣೆಗೆ, ಜಿûೀಟಾ ಮತ್ತು ಥೀಟಾ ಪಿಂಚ್ ಎಂದು ಕರೆಯಲಾಗುವ ಸಾಧನದಿಂದ ಉತ್ಪತ್ತಿಯಾದ, ಕಾಂತೀಯವಾಗಿ ಸಂಪೀಡಿಸಲ್ಪಟ್ಟ (ಮ್ಯಾಗ್ನೆಟಿಕಲಿ ಕಂಪ್ರೆಸ್ಡ್) ಪ್ಲಾಸ್ಮ. ಇಲ್ಲಿ ಉಷ್ಣತೆ ಸುಮಾರು 5 ಲಕ್ಷ ಡಿಗ್ರಿ ಸೆಂ.ಗ್ರೇ. ನಷ್ಟಿರುತ್ತದೆ. ಆದರೆ ಹೆಚ್ಚು ತೀವ್ರತೆ ಮತ್ತು ಕಡಿಮೆ ತರಂಗದೂರದ ಅತಿನೇರಿಳೆಗೆ ಪರಮಾಣುಬಾಂಬನ್ನು ಸರಿಗಟ್ಟುವಂಥ ಬೇರೆ ಯಾವ ಮಾನವನಿರ್ಮಿತ ಆಕರವೂ ಇಲ್ಲ.

ಅಂಚು ವ್ಯಾಪಕತೆ

ಸ್ಟೋಕ್ ಎಂಬ ಭೌತಶಾಸ್ತ್ರ ವಿದ್ವಾಂಸ ಎರಡು ಅಲ್ಯುಮಿನಿಯಂ ವಿದ್ಯುತ್‍ದ್ವಾರಗಳ (ಎಲೆಕ್ಟ್ರೋಡ್) ನಡುವಿನ ಕಿಡಿವಿಸರ್ಜನೆಯನ್ನು (ಸ್ಪಾರ್ಕ್ ಡಿಸ್‍ಛಾರ್ಜ್) ಆಕರವನ್ನಾಗಿಯೂ ಪ್ರತಿದೀಪ್ತಿವರ್ಣಪ್ರಭಾವ ಪೊರೆಯನ್ನು (ಫ್ಲೂರೆಸೆಂಟ್ ಫಿಲ್ಮ) ಶೋಧಕವನ್ನಾಗಿಯೂ ಉಪಯೋಗಿಸಿಕೊಂಸು ಕ್ವಾಟ್ರ್ಸ್‍ನಿಂದ ಮಾಡಿದ ಶ್ರಗದ ಸಹಾಯದಿಂದ, ಅತಿನೇರಿಳೆ, ನೇರಿಳೆಕಿರಣದ ಅಂಚಿನಿಂದ ಸುಮಾರು 1830 ಆ.ವರೆಗೂ ವ್ಯಾಪಿಸಿದೆ ಎಂಬುದನ್ನು ಸಂಶೋಧಿಸಿದ (1862).

ವಿದ್ರಾವಣ್ಯಪರೆಗಳು

ಇದಲ್ಲದೆ ಇನ್ನೂ ಕೆಳಗೆ ಅಂದರೆ 1300 ಆ.ವರೆಗೆ ಸಂಶೋಧನೆಯನ್ನು ವಿಸ್ತರಿಸಿದವ ವಿಕ್ಟರ್ ಸ್ಕ್ಯೂಮನ್. ಜೆಲಟಿನ್ ಹೊಂದಿರುವ ವಿದ್ರಾವಣ್ಯಪರೆಗಳು (ಎಮಲ್ಷನ್ ಫಿಲ್ಮ್) ದೂರಾತಿನೇರಿಳೆಗೆ ಸಚೇತನವಾಗಿರುವುದಿಲ್ಲ ಮತ್ತು ಕ್ವಾಟ್ರ್ಸ್‍ನಿಂದ ಮಾಡಿದ ಅಶ್ರಗಗಳು ಮತ್ತು ಮಸೂರಗಳು ಕೂಡ ದೂರಾತಿನೇರಿಳೆಗೆ ಅಪಾರಕವಾಗಿವೆ ಎಂದು ಮೊದಲು ಮನಗಂಡವನು ಇವನೇ.

ಜೆಲಟಿನ್‍ರಹಿತ ವಿದ್ರಾವಣ್ಯಪೊರೆಯನ್ನು ತಯಾರಿಸಿದ್ದೇ ಅಲ್ಲದೆ ಈತ ಫ್ಲ್ಯೂರೈಟ್ ಸ್ಫಟಿಕದಿಂದ ಮಾಡಿದ ಅಶ್ರಗವನ್ನು ಹೊಂದಿರುವ ರೋಹಿತಮಾಪಕವನ್ನು (ಸ್ಪೆಕ್ಟ್ರೋಮೀಟರ್) ತನ್ನ ಸಂಶೋಧನೆಗೆ ಉಪಯೋಗಿಸಿಕೊಂಡ. ಜಲಜನಕದ ಮೂಲಭೂತ ಶ್ರೇಣಿಯಾಗಿದ್ದು 1300 ಆ. ಮಿತಿಯನ್ನು ಮೀರಿರುವ, ರಚನೆಯಲ್ಲಿ ಸರಳವಾಗಿದ್ದು ಹೆಚ್ಚು ಪ್ರಚಾರದಲ್ಲಿರುವ ಲೈಮನ್‍ಶ್ರೇಣಿಯನ್ನು ಸಂಶೋಧಿಸಿ ಈ ಕ್ಷೇತ್ರದಲ್ಲಿ ಶ್ಲಾಘನೀಯವಾದ ಕೆಲಸ ಮಾಡಿದವನು ಥಿಯೊಡರ್ ಲೈಮನ್. ಈತ ತನ್ನ ಸಂಶೋಧನೆಯನ್ನು ಲೈಮನ್‍ಶ್ರೇಣಿಯ ಪರಮಾವಧಿಯಾದ 911.7 ಆ.ಗಳಿಗಿಂತಲೂ ಕೆಳಕ್ಕೆ ವಿಸ್ತರಿಸಿದ. ಅಶ್ರಗ ಮತ್ತು ಮಸೂರಗಳ ಬದಲು ಈತ ವಿವರ್ತನ ಗ್ರೇಟಿಂಗ್ ಉಪಯೋಗಿಸಿದ. ಆರ್.ಎ.ಮಿಲಿಕನ್, ಓಸ್‍ಗುಡ್ ಮತ್ತು ಡಾವಿಲ್ಲಯರ್ ಮುಂತಾದವರು ಸಂಶೋಧನೆಯನ್ನು ಮುಂದುವರಿಸಿ ಸುಮಾರು 120 ಆ.ಗಳವರೆಗೆ ವಿಸ್ತರಿಸಿ ಮತ್ತೂ ಹೆಚ್ಚಿನ ಪ್ರಗತಿಯನ್ನು ಸಾಧಿಸಿದರು.

ಅತಿನೇರಿಳೆ ಉಪಕರಣ

ಅತಿನೇರಿಳೆ ಉಪಕರಣಗಳಿಗೆ ಬೇಕಾಗುವ ಮಸೂರ ಮತ್ತು ಅಶ್ರಗಗಳನ್ನು ತಯಾರಿಸಲು ಬೇಕಾದ ಅಮೂಲ್ಯವಾದ ಸಾಮಗ್ರಿಗಳೆಂದರೆ, ಸ್ಫಟಿಕರೂಪದಲ್ಲಿರುವ ಅಥವಾ ಕರಗಿಸಿ ಪುನಃ ಗಟ್ಟಿಮಾಡಿದ ಕ್ವಾಟ್ರ್ಸ್, ಲಿಥಿಯಂಫ್ಲೋರೈಡ್ ಮತ್ತು ಕ್ಯಾಲ್ಸಿಯಂ ಫ್ಲೋರೈಡ್. ಇವು ಅತಿನೇರಿಳೆಯ ಬಹುಭಾಗಕ್ಕೆ ಪಾರಕಗಳಾಗಿವೆ. ಬಹಳ ತೆಳುವಾದ ಪೊರೆಯ ರೂಪದಲ್ಲಿರುವ ಕೆಲವು ಘನವಸ್ತುಗಳು ಸ್ವಲ್ಪಮಟ್ಟಿಗೆ ದೂರಾತಿ ನೇರಿಳೆಯ ಪೂರ್ಣಭಾಗಕ್ಕೆ ಪಾರಕಗಳಾಗಿರುತ್ತವೆ. ಉದಾಹರಣೆಗೆ, ಬಹಳ ತೆಳುವಾದ ಅಲ್ಯುಮಿನಿಯಮ್ ಪೊರೆ ಮತ್ತು ಸುಮಾರು 300 ಆ.ಗಳಷ್ಟು ದಪ್ಪವಿರುವ ಅಸ್ಫಟಿಕದಂಥ (ಕಲಾಡಿಯನ್) ಪ್ಲಾಸ್ಟಿಕ್ ಪೊರೆ. ಇವು ಅತಿ ನೇರಿಳೆಯ ಸೋಸುಕಗಳಾಗಿ (ಫಿಲ್ಟರ್ಸ್) ಪ್ರಯೋಜನಕ್ಕೆ ಬರುತ್ತವೆ.

ಗಾಳಿಯಲ್ಲಿನ ಅನಿಲಗಳು ಅತಿನೇರಿಳೆ ಕಿರಣದಲ್ಲಿ ಬೇರೆ ಬೇರೆ ಶೋಷಣ (ಅಬ್ಸಾರ್ಪ್‍ಷನ್) ವೈಶಿಷ್ಟ್ಯಗಳನ್ನು ಹೊಂದಿವೆ. ಅಣುರೂಪದಲ್ಲಿರುವ ಆಮ್ಲಜನಕ ಗಾಳಿ 1850 ಆ.ಗಳಿಗಿಂತ ಕಡಿಮೆ ತರಂಗದೂರದ ಅತಿನೇರಿಳೆಗೆ ಪಾರಕ ರಹಿತವಾಗಿರುವುದಕ್ಕೆ ಕಾರಣವಾಗಿದೆ. ಹೀಗೆಯೇ ಗಾಳಿ ಅತಿನೇರಿಳೆಯ ಬೇರೆ ಬೇರೆ ಭಾಗಗಳಿಗೆ ಪಾರಕವಾಗಿಲ್ಲದಿರುವುದಕ್ಕೆ ಅಣುರೂಪದಲ್ಲಿರುವ ನೈಟ್ರೊಜನ್, ಹೈಡ್ರೊಜನ್, ಕಾರ್ಬನ್ ಡೈ ಆಕ್ಸೈಡ್, ನೈಟ್ರಿಕ್ ಆಕ್ಸೈಡ್, ನೀರಿನ ಹಬೆ ಮುಂತಾದವು ಕಾರಣವಾಗಿವೆ.

ಪ್ರತಿಫಲನ

ಗೋಚರರಷ್ಮಿಪುಂಜದಂತೆಯೆ ಅತಿನೇರಿಳೆಗೂ ಪ್ರತಿಫಲಿಸುವ ಗುಣವಿದೆ. ತರಂಗದೂರ ಕಡಿಮೆಯಾದಂತೆಲ್ಲ ಪ್ರತಿಫಲಿಸುವಿಕೆಯೂ ಕಡಿಮೆಯಾಗುತ್ತದೆ. ಆದರೆ ಈ ಗುಣ ಅತಿನೇರಿಳೆಯ ಕೆಲವು ಭಾಗಗಳಿಗೆ ಮಾತ್ರ ಸೀಮಿತವಾಗಿದೆ. ಇಲ್ಲಿ ಕೂಡ ವಿಶೇಷರೀತಿಯಲ್ಲಿ ತಯಾರುಮಾಡಿದ ಪ್ರತಿಫಲಕಗಳು ಅವಶ್ಯಕ.

ಪತ್ತೆ ಹಚ್ಚುವಿಕೆ

ಅತಿನೇರಿಳೆ ದೃಗ್ಗೋಚರವಲ್ಲದಿದ್ದರೂ ಅದರ ಇರುವಿಕೆಯನ್ನು ಬೇರೆ ಬೇರೆ ವಿಧಾನಗಳಿಂದ ಪತ್ತೆಹಚ್ಚಬಹುದು. ಇದಕ್ಕಾಗಿ ಅತಿನೇರಿಳೆರಶ್ಮಿ ಪದಾರ್ಥಗಳ ಮೇಲೆ ಬಿದ್ದಾಗ ಉಂಟಾಗುವ ಪರಿಣಾಮಗಳನ್ನೇ ಬಳಸಬಹುದು. ಅತಿನೇರಿಳೆಯ ಬೆಳಕಿನ ಕಣಗಳು (ಫೋಟಾನುಗಳು) ಗೋಚರಫೋಟಾನುಗಳಿಗಿಂತ ಸುಮಾರು 10 ಸಾವಿರದಷ್ಟು ಶಕ್ತಿಯುತವಾದ್ದರಿಂದ ಅವು ಉಂಟುಮಾಡುವ ಪರಿಣಾಮಗಳ ಅವಲೋಕನ ಸುಲಭಸಾಧ್ಯ.

ಅಯಾನೀಕರಣ

ಕೆಲವು ಪದಾರ್ಥಗಳ ಮೇಲೆ ರಶ್ಮಿ ಬಿದ್ದಾಗ ಉಂಟಾಗುವ ಪ್ರತಿದೀಪ್ತಿವರ್ಣ ಪ್ರಭಾವದಿಂದ, ಮತ್ತೆ ಕೆಲವು ಪದಾರ್ಥಗಳ ಮೇಲೆ ಬಿದ್ದಾಗ ಉಂಟಾಗುವ ರಾಸಾಯನಿಕಕ್ರಿಯೆಗಳಿಂದ, ಇನ್ನು ಕೆಲವು ಘನವಸ್ತುಗಳ ಮೇಲೆ ಬಿದ್ದಾಗ ಆಗುವ ವಿಘಟನೆಯಿಂದ ಅವುಗಳು ಅಯಾನೀಕೃತವಾಗುವುದರಿಂದ-ಹೀಗೆ ಬೇರೆ ಬೇರೆ ವಿಧಾನಗಳಿಮದ ಇದನ್ನು ಪತ್ತೆಹಚ್ಚಬಹುದು. ದೂರಾತಿನೇರಿಳೆಯನ್ನು ಪತ್ತೆ ಹಚ್ಚಲು ಇನ್ನೂ ಸುಲಭವಾದ ಮಾರ್ಗವೆಂದರೆ, ಕ್ಯಾಲ್ಸಿಯಂ ಟಂಗ್‍ಸ್ಟೇಟ್, ಸೋಡಿಯಂ ಸ್ಯಾಲಿಸಿಲೇಟ್ ಮುಂತಾದ ವಸ್ತುಗಳನ್ನುಪಯೋಗಿಸಿಕೊಂಡು ಪ್ರತಿದೀಪ್ತಿವಿಧಾನದಿಂದ ಹತ್ತಿರದ ಅತಿನೇರಿಳೆಯದನ್ನಾಗಿಯಾಗಲಿ ಅಥವಾ ಗೋಚರಕಿರಣವನ್ನಾಗಿಯಾಗಲಿ ಬದಲಾಯಿಸಬಹುದು. ಹೀಗೆ ಬದಲಾಯಿಸಿದ ಅನಂತರ ಅದನ್ನು ಛಾಯಾಗ್ರಹಿಸಬಹುದು ಅಥವಾ ರೂಢಿಯಲ್ಲಿರುವ ದ್ಯುತಿಗುಣಕಗಳ (ಫೋಟೋಮಲ್ಟಿಪ್ಲಯ್ಸರ್) ಸಹಾಯದಿಂದಲೂ ಅಳೆಯಬಹುದು. 2500 ಆ.ಗಳಿಗಿಂತಲೂ ಕೆಳಗಿನ ಅತಿನೇರಿಳೆಯನ್ನು ಛಾಯಾಗ್ರಹಿಸಲು ಜೆಲಟಿನ್‍ರಹಿತವಾದ ಮತ್ತು ಸೋಡಿಯಂ ಸ್ಯಾಲಿಸಿಲೇಟ್ ಅಥವಾ ಕೆಲವು ವಿಶೇಷ ರೀತಿಯ ಎಣ್ಣೆಗಳ ಲೇಪನಹೊಂದಿದ ಛಾಯಾಗ್ರಾಹಕ ತಟ್ಟೆಗಳು ಬೇಕಾಗುತ್ತವೆ. ಅತಿನೇರಿಳೆಯನ್ನು ಶಾಖವನ್ನಾಗಿ ಪರಿವರ್ತಿಸಿ ಶಾಖಯುಗ್ಮಗಳನ್ನು (ಥರ್ಮೋಕಪಲ್ಸ್) ಉಪಯೋಗಿಸಿಕೊಂಡು ಈ ಶಾಖವನ್ನಳೆದು ಕೂಡ ಪತ್ತೆಹಚ್ಚಬಹುದು. ಗೈಗರ್‍ಮುಲ್ಲರ್ ಗಣಕಗಳು (ಕೌಂಟರ್ಸ್) ಮತ್ತು ಅಯಾನೀಕರಣಸಂಪುಟ (ಅಯಾನೈಜೇಷನ್ ಛೇಂಬರ್) ಪ್ರಯೋಜನಕಾರಿಯಾದ ಅತಿನೇರಿಳೆಯ ಶೋಧಕಗಳ ಗುಂಪಿಗೆ ಸೇರಿವೆ.

ಅತಿನೇರಿಳೆರಶ್ಮಿ ಯಿಂದ ಹಾನಿ

ಅತಿನೇರಿಳೆರಶ್ಮಿ ಚರ್ಮದ ಮೇಲೆ ಕೆಲವು ಹಾನಿಕಾರಕ ಪರಿಣಾಮಗಳನ್ನುಂಟುಮಾಡಬಲ್ಲುದು. ಇದನ್ನು ಮೊದಲು ವಿವರಿಸಿದವ ಡೆನ್ಮಾರ್ಕಿನ ವಿe್ಞÁನಿ ನೈಸ್ರುಬರ್ಗ್ ಫಿನ್‍ಸನ್. ಕಡಿಮೆ ತರಂಗದೂರದ ಅತಿನೇರಿಳೆ ಚರ್ಮದ ಮೇಲೆ ಹೆಚ್ಚು ಹಾನಿಕಾರಕ ಪರಿಣಾಮವನ್ನುಂಟುಮಾಡುತ್ತದೆ. ಭೂಮಿಯ ಮೇಲ್ಮೈಯನ್ನು ತಲಪುವ ಸೂರ್ಯರಶ್ಮಿಯಲ್ಲಿ ಇದು ಬಹಳ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಇಲ್ಲಿ ಆಗುವ ಪರಿಣಾಮ ಅಷ್ಟು ಗಣನೀಯವಲ್ಲ. ಆದರೆ ಭೂಮಿಯಿಂದ ಮೇಲೆ ಬಹಳ ಎತ್ತರಕ್ಕೆ ಹೋದಾಗ ಆಗುವ ಪರಿಣಾಮ ಗಣನೀಯ. ಸೂರ್ಯನ ಬೆಳಕಿಗೆ ಅತಿಯಾಗಿ ಮೈಯೊಡ್ಡುವುದು ಚರ್ಮದ ಕ್ಯಾನ್ಸರ್ ರೋಗಕ್ಕೆ ಒಂದು ಕಾರಣವೆಂದೂ ಹೇಳುತ್ತಾರೆ. 3000 ಆ. ಗಳಿಗಿಂತ ಕಡಿಮೆ ತರಂಗದೂರದ ಅತಿನೇರಿಳೆಗೆ ಕಣ್ಣನ್ನು ಅತಿಯಾಗಿ ಒಡ್ಡುವುದೂ ಅಪಾಯಕಾರಿ. ಇದು ಕಣ್ಣುಗುಡ್ಡೆಯ ಮುಂಭಾಗದಿಂದ (ಕಾರ್ನಿಯಾ) ಹೀರಲ್ಪಟ್ಟು ಪ್ರತಿದೀಪ್ತಿಯುಂಟಾಗಿ ಆ ಭಾಗದ ಉರಿ (ಕಂಜಂಕ್ಟಿವೈಟಿಸ್) ಉಂಟಾಗಬಹುದು. ಈ ಕಾರಣದಿಂದಲೇ ತೀವ್ರವಾದ ಮಧ್ಯಾತಿನೇರಿಳೆ ರಷ್ಮಿಪುಂಜದ ಮುಂದೆ ಇದ್ದಾಗ ಬಿಸಿಲುಕನ್ನಡಕಗಳನ್ನು (ಗಾಗಲ್ಸ್) ಧರಿಸಿಕೊಳ್ಳುವುದು ಅವಶ್ಯಕ.

ಮತ್ತೊಂದು ಪರಿಣಾಮವೆಂದರೆ ಕೆಲವು ಸಂದರ್ಭಗಳಲ್ಲಿ ಸೂರ್ಯಾತಿನೇರಿಳೆ ಕಿರಣ ಕಣ್ಣಿನ ಮೇಲೂ ಮತ್ತು ಸಸ್ಯಗಳ ಮೇಲೂ ಹಾನಿಕಾರಕ ಪರಿಣಾಮವನ್ನುಂಟುಮಾಡಬಲ್ಲ ದಟ್ಟವಾದ ಧೂಮವನ್ನು ವಾತಾವರಣದಲ್ಲಿ ಉಂಟುಮಾಡಬಲ್ಲುದು. ಈಚೆಗೆ ಇದನ್ನು ಗುರುತಿಸಲಾಗಿದೆ. ಇದರ ವಿವರ ಬಹಳ ಜಟಿಲವಾದದ್ದು. ಇದರ ಸಂಬಂಧವಾಗಿ ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಾಗಿದೆ.

ಹಿಮದಿಂದಾವೃತವಾದ ಪ್ರದೇಶಗಳಲ್ಲಿ ಮತ್ತು ಹಿಮನದಿಗಳ ಮೇಲೆ ಸಂಚರಿಸುವಾಗ ಬಿಸಿಲುಕನ್ನಡಕವನ್ನು ಧರಿಸುವುದು ಅವಶ್ಯಕ. ಇಲ್ಲವಾದಲ್ಲಿ ಇಲ್ಲೂ ಕೂಡ ಅತಿನೇರಿಳೆ ಕಿರಣದ ಪ್ರಭಾವದಿಂದ ಹಿಮಾಂಧತೆ (ಸ್ನೋ ಬ್ಲೈಂಡ್‍ನೆಸ್) ಬರಬಹುದು.

ಅತಿನೇರಿಳೆಯ ಪ್ರಯೋಜನಗಳು

ಅತಿನೇರಿಳೆ ಕಿರಣವನ್ನು ಉಕ್ಕಿನ ಮುಖಾಂತರ ಹಾಯಿಸಿ ಹೊರಬಂದ ಕಿರಣವನ್ನು ದ್ಯುತಿಗುಣಕ ಮತ್ತು ವಿವಿಧಮಾರ್ಗದ (ಮಲ್ಟಿಛಾನಲ್) ರೋಹಿತಮಾಪಕಗಳ ಸಹಾಯದಿಂದ ವಿಶ್ಲೇಷಿಸಿ ಉಕ್ಕಿನ ಸಂಘಟನೆಯನ್ನು ಕೆಲವೇ ಮಿನಿಟುಗಳಲ್ಲಿ ತಿಳಿಯಬಹುದು. ತಾಂತ್ರಿಕ ಮತ್ತು ಕೈಗಾರಿಕಾಕ್ಷೇತ್ರಗಳಲ್ಲಿ ಅತಿನೇರಿಳೆಯಿಂದಾಗಿರುವ ಅನೇಕ ಉಪಯೋಗಗಳಲ್ಲಿ ಇದೂ ಒಂದು.
ಬೆಳಕನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುವ ಕ್ರಿಯೆಯನ್ನು ಇದರ ಸಹಾಯದಿಂದ ಇನ್ನೂ ಸಮರ್ಪಕವಾಗಿ ಮಾಡಬಹುದು.
ಜೀವಸಂಬಂಧಿ ಮತ್ತು ವೈದ್ಯಕೀಯಕ್ಷೇತ್ರಗಳಲ್ಲಿ ಇದರ ಪ್ರಯೋಜನ ಅಪಾರ. ಆಸ್ಪತ್ರೆಗಳಲ್ಲಿ ಬ್ಯಾಕ್ಟೀರಿಯ ಮತ್ತು ಫಂಗೈಗಳನ್ನು ಕೊಲ್ಲಲೂ ಅದರಲ್ಲೂ ಶಸ್ತ್ರಚಿಕೆತ್ಸೆಯ ಕೊಠಡಿಗಳಲ್ಲಿ ರಕ್ತನಾಳಗಳಲ್ಲಿನ ಯಕೃತ್ತುವಿಷಾಣುಗಳನ್ನು ಕೊಲ್ಲಲೂ ಆಹಾರವನ್ನು ಕ್ರಿಮಿ ಶುದ್ದಿಕರಿಸಲು (ಸ್ಟೆರಿಲೈಜೆóೀಶನ್) ಇದನ್ನು ಉಪಯೋಗಿಸುತ್ತಾರೆ. ಚರ್ಮವನ್ನು ಅತಿನೇರಿಳೆ ರಶ್ಮಿಪುಂಜಕ್ಕೆ ಒಡ್ಡಿದಾಗ ಡಿ-ಅನ್ನಾಂಗ ಉತ್ಪತ್ತಿಯಾಗುತ್ತದೆ ಎಂದು ಕಂಡುಹಿಡಿಯಲಾಗಿದೆ. ಇದಕ್ಕೆ ಅತಿನೇರಿಳೆ ಚಿಕಿತ್ಸೆ ಎಂದು ಹೆಸರು.
ಕ್ವಾಟ್ರ್ಸ್ ಮಸೂರಗಳನ್ನು ಹೊಂದಿರುವ ಅತಿನೇರಿಳೆ ಸೂಕ್ಷ್ಮದರ್ಶಕ ರೂಢಿಯಲ್ಲಿರುವ ಸೂಕ್ಷ್ಮ ದರ್ಶಕಗಳಿಗಿಂತಲೂ ಹೆಚ್ಚು ವಿಘಟನ ಸಾಮಥ್ರ್ಯ ಹೊಂದಿರುವುದರಿಂದ ಭೌತಿಕ, ವೈದ್ಯಕೀಯ ಮತ್ತು ಜೀವವೈe್ಞÁನಿಕವೇ ಮುಂತಾದ ಕ್ಷೇತ್ರಗಳಲ್ಲಿ ಬಹಳ ಪ್ರಯೋಜನಕಾರಿ.
ಸೂರ್ಯಾತಿನೇರಿಳೆ, ಅದರಲ್ಲೂ ಅಲ್ಲಿನ ದೂರಾತಿನೇರಿಳೆ ಕಿರಣ ವಾಯುಮಂಡಲದೊಡನೆ ವರ್ತಿಸಿ ಅನೇಕ ಅಯಾನುಮಂಡಲದ ಪದರಗಳನ್ನು ಉಂಟುಮಾಡುತ್ತದೆ. ವಾಯು ಮಂಡಲದಲ್ಲಿ ಏರ್ಪಟ್ಟ ಈ ಪದರಗಳು ರೇಡಿಯೋತರಂಗಗಳಿಗೆ ಒಳ್ಳೆಯ ಪ್ರತಿಫಲಕಗಳಾಗಿ ಕೆಲಸಮಾಡಿ ರೇಡಿಯೋಸಂದೇಶಗಳನ್ನು ಬಹಳ ದೂರದವರೆಗೂ ಕಳುಹಿಸಲು ಸಹಾಯಮಾಡುತ್ತವೆ.
ಅತಿನೇರಿಳೆಯ ಸೋಸಕವೊಂದನ್ನು ಇಂಗಾಲ ವಿದ್ಯುತ್ ಚಾಪಪ್ರಕ್ಷೇಪಕದ (ಪ್ರೊಜೆಕ್ಟರ್) ಮುಂದಿಟ್ಟು ಹೊರಬರುವ ತೀವ್ರಾತಿನೇರಿಳೆ ರಶ್ಮಿಪುಂಜವನ್ನು ಸೂಕ್ತವಾಗಿ ಅಳವಡಿಸಿರುವ ರಾಸಾಯನಿಕವಸ್ತುಗಳ ಮೇಲೆ ಬೀಳುವಂತೆ ಮಾಡಿದರೆ ಅವು ತಮ್ಮ ಅಣುಗಳ ರಚನೆಗನುಗುಣವಾಗಿ ವಿಧವಿಧವಾದ ಬಣ್ಣಗಳಿಂದ ಬೆಳಗುತ್ತವೆ. ಈ ಕ್ರಿಯೆಯನ್ನು ಚಲನಚಿತ್ರಮಂದಿರಗಳಲ್ಲಿ ಉಪಯೋಗಿಸಿಕೊಳ್ಳುತ್ತಾರೆ.
ಮಾನವನ ಉಳಿವು 2000 ಆ.-13000 ಆ.ಗಳವರೆಗೆ ವಿಸ್ತರಿಸಲ್ಪಟ್ಟ ಸೂರ್ಯಾತಿನೇರಿಳೆ ಕಿರಣವನ್ನು ಅವಲಂಬಿಸಿದೆ. ಈ ಕಿರಣ ವಾಯುಮಂಡಲದಲ್ಲಿನ ಆಮ್ಲಜನಕದ ಅಣುವಿನಿಂದ ಹೀರಲ್ಪಟ್ಟು ಆಮ್ಲಜನಕದ ಪರಮಾಣುವನ್ನು ಉತ್ಪತ್ತಿಮಾಡುತ್ತದೆ. ಇದು ಮತ್ತೆ ಆಮ್ಲಜನಕಅಣುವಿನೊಡನೆ ಸಂಯೋಗವಾಗಿ ವಾಯುಮಂಡಲದಲ್ಲಿ ಓಜೋನಿನ ಶಾಶ್ವತಪದರಗಳನ್ನು ಉತ್ಪತ್ತಿ ಮಾಡುತ್ತದೆ. ಓಜೋನ್ ಪದರ ಹಾನಿಕಾರಕ ಅತಿನೇರಿಳೆ ವಿಕಿರಣಗಳನ್ನು ಹೀರಿಕೊಂಡು ಜೀವ ಸಂಕುಲವನ್ನು ರಕ್ಷಿಸುತ್ತದೆ.



ಉಲ್ಲೇಖಗಳು