ಪಪ್ಪಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೩೮ ನೇ ಸಾಲು:
ಪಪ್ಪಾಯಿಯನ್ನು ಶುದ್ಧ ಬೆಳೆಯಾಗಿ ಬೆಳೆಯುವುದು ಅಪರೂಪ. ಸಾಧಾರಣವಾಗಿ ಇದನ್ನು ಇತರ ಮುಖ್ಯ ಬೆಳೆಗಳೊಂದಿಗೆ ಮಿಶ್ರ ಬೆಳೆಯಾಗಿ ಬೇಸಾಯ ಮಾಡುವುದಿದೆ. ಮಾವು, ನಿಂಬೆ, ಕಿತ್ತಲೆ, ತರಕಾರಿ, ಎಲೆ ತೋಟಗಳ ಸುತ್ತಲೂ ಇದನ್ನು ಬೆಳೆಸುವುದುಂಟು. ಚಪ್ಪರದವರೆಯನ್ನು ಪಪ್ಪಾಯಿ ಮರದ ಪಕ್ಕಕ್ಕೆ ಬೆಳೆಸಿ ಮರಕ್ಕೆ ಹಬ್ಬಿಸುವುದು ಕೆಲವು ಕಡೆಗಳಲ್ಲಿ ರೂಢಿಯಲ್ಲಿದೆ.
 
ಪಪ್ಪಾಯಿ ಸಸಿಗಳನ್ನು ಮುಂಗಾರು ಮಳೆ ಪ್ರಾರಂಭದಲ್ಲಿ ನೆಡುವುದು ವಾಡಿಕೆ. ಬೇಸಿಗೆ ಕಾಲದಲ್ಲಿ ನೆಟ್ಟ ಸಸಿಗಳು ಬಿಸಿಲಿನ ತಾಪವನ್ನು ತಾಳಲಾರದೆ ಸತ್ತು ಹೋಗುತ್ತವೆ. ಕರ್ನಾಟಕದಲ್ಲಿ ಜೂನ್ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ ನೆಡುವ ಕ್ರಮ ಇದೆ. ನೆಡುವ ಕಾಲ ಇಳುವರಿಯ ಮೇಲೆ ನೇರವಾದ ಪರಿಣಾಮವನ್ನು ಉಂಟುಮಾಡುತ್ತದೆ. ಜೂನ್ ತಿಂಗಳಲ್ಲಿ ನೆಟ್ಟ ಸಸಿಗಳು ತಮ್ಮ ಸಣ್ಣ ವಯಸ್ಸಿನಲ್ಲಿ ಯಥೇಚ್ಛವಾದ ಭೂಮಿಯ ತೇವಾಂಶ ಮತ್ತು ತಂಪಾದ ಹವಾಗುಣದ ಲಾಭವನ್ನು ಪಡೆದು ಶೀಘ್ರವಾಗಿ ಬೆಳೆದು ಫಲವನ್ನು ಕೊಡುತ್ತವೆ. ಈ ಕಾಲದಲ್ಲಿ ಲಭಿಸುವ ದೀರ್ಘಾವಧಿಯ ಭೂಮಿಯ ತೇವಾಂಶ ಮತ್ತು ತಂಪಾದ ಹವಾಗುಣ ಮರವನ್ನು ದಷ್ಟಪುಷ್ಟವಾಗಿ ಬೆಳೆಸುವುದರಿಂದ ಬೇಸಿಗೆ ಉರಿಬಿಸಿಲನ್ನು ಎದುರಿಸುವುದಲ್ಲಿ ಇವು ಯಶಸ್ವಿಯಾಗುತ್ತವೆ.<ref>http://edis.ifas.ufl.edu/fe913</ref>
 
ಪಪ್ಪಾಯಿ ಸಸಿಗಳನ್ನು ಸಾಲಿನಿಂದ ಸಾಲಿಗೆ ಗಿಡದಿಂದ ಗಿಡಕ್ಕೆ 2.5-3 ಮೀಟರ್ ಅಂತರವಿರುವಂತೆ 1 ( 1 ( 1 ಮೀಟರ್ ಗುಂಡಿಗಳಲ್ಲಿ ನಾಟಿ ಮಾಡಲಾಗುತ್ತದೆ. ನಾಟಿ ಮಾಡುವ ಮುನ್ನ ಗೊಬ್ಬರ ಮಿಶ್ರಿತ ಮಣ್ಣನ್ನು ತುಂಬಿ, ಮಣ್ಣನ್ನು ಸಡಿಲಿಸಲಾಗುತ್ತದೆ. ಸಸಿ ನೆಟ್ಟಗೆ ನಿಲ್ಲುವಂತೆ ನೋಡಿಕೊಳ್ಳುವುದಿದೆ.
"https://kn.wikipedia.org/wiki/ಪಪ್ಪಾಯಿ" ಇಂದ ಪಡೆಯಲ್ಪಟ್ಟಿದೆ