ನಂಜನಗೂಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೧ ನೇ ಸಾಲು:
ಈ ದೇವಾಲಯ ವರ್ಷವಿಡೀ ದೇಶದ ವಿವಿಧ ಭಾಗಗಳಿಂದ ಭಕ್ತರನ್ನು ಆಕರ್ಷಿಸುತ್ತದೆ. ಸೋಮವಾರ ಮತ್ತು ಹುಣ್ಣಿಮೆಯ ದಿನಗಳಲ್ಲಿ ವಿಶೇಷ. ಪ್ರತಿ ಹುಣ್ಣಿಮೆಯಂದು ರಾತ್ರಿ ರಥೋತ್ಸವವುಂಟು. ಅಲ್ಲದೆ ಇಲ್ಲಿ ಎರಡು ವಾರ್ಷಿಕ ಜಾತ್ರೆಗಳಾಗುತ್ತವೆ. ಅಕ್ಟೋಬರ್-ನವಂಬರ್‍ನಲ್ಲಿ ನಡೆಯುವುದು ತ್ರಿರಥ (ಚಿಕ್ಕ ಜಾತ್ರೆ); ಮಾರ್ಚ್-ಏಪ್ರಿಲ್‍ನಲ್ಲಿ ಜರುಗುವುದು ಪಂಚ ರಥ (ದೊಡ್ಡ ಜಾತ್ರೆ).
 
ಯಾತ್ರಾರ್ಥಿಗಳ ಉಪಯೋಗಕ್ಕಾಗಿ ಇಲ್ಲಿ ಅನೇಕ ಛತ್ರಗಳಿವೆ. ನಂಜನಗೂಡಿನ ನಂಜುಂಡೇಶ್ವರನನ್ನು ಅನೇಕ ಜನ ಕುಲದೈವವೆಂದು ಪರಿಗಣಿಸುತ್ತಾರೆ. ಈ ಸುತ್ತಿನ ಜನಪದದಲ್ಲಿ ನಂಜುಂಡನಿಗೆ ವಿಶೇಷ ಸ್ಥಾನವುಂಟು.<ref>http://nanjangudtemple.kar.nic.in/about.html</ref>
 
==ಇತರ ದೇವಾಲಯಗಳು==
ನಂಜನಗೂಡಿನಲ್ಲಿ ಶ್ರೀಕಂಠೇಶ್ವರ ದೇವಾಲಯವಲ್ಲದೆ ಪರಶುರಾಮ, ಚಾಮುಂಡೇಶ್ವರಿ, ಸತ್ಯನಾರಾಯಣ, ದತ್ತಾತ್ರೇಯ, ಗಣಪತಿ ಮೊದಲಾದ ದೇವಾಲಯಗಳೂ ಇವೆ. ಇಲ್ಲಿಯ ಪರಶುರಾಮ ದೇವಾಲಯದಲ್ಲಿ ಒಂದು ಶಾಸನಕಲ್ಲು ಪೂಜಾವಸ್ತು. ಈ ದೇವಾಲಯವನ್ನು ಸಂದರ್ಶಿಸದಿದ್ದಲ್ಲಿ ನಂಜನಗೂಡಿನ ಯಾತ್ರೆ ಅಪೂರ್ಣವಾಗುವುದೆಂಬ ನಂಬಿಕೆಯುಂಟು.
"https://kn.wikipedia.org/wiki/ನಂಜನಗೂಡು" ಇಂದ ಪಡೆಯಲ್ಪಟ್ಟಿದೆ