ನಂಜನಗೂಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೨ ನೇ ಸಾಲು:
'''ನಂಜನಗೂಡು''' [[ಕರ್ನಾಟಕ]] ರಾಜ್ಯದ [[ಮೈಸೂರು]] ಜಿಲ್ಲೆಯ ಒಂದು ತಾಲ್ಲೂಕು ಪಟ್ಟಣ. ಇದು ಮೈಸೂರಿನಿಂದ ಸುಮಾರು ೨೩ ಕಿ.ಮಿ. ಅಂತರದಲ್ಲಿದೆ. ನಂಜನಗೂಡು ಕಪಿಲ ನದಿಯ ದಂಡೆಯಲ್ಲಿರುವ ಒಂದು ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ ಪಟ್ಟಣ. ಇಲ್ಲಿರುವ ಶ್ರೀಕಂಠೇಶ್ವರ ದೇವಾಲಯವು ಒಂದು ಪ್ರಸಿದ್ಧ ಧಾರ್ಮಿಕ ಕೇಂದ್ರ. '''ನಂಜನಗೂಡು'''"ದಕ್ಷಿಣ ಕಾಶಿ" ಎಂದು ವಿಖ್ಯಾತಿ ಪಡೆದಿದೆ. ನಂಜನಗೂಡು ತಾಲ್ಲೂಕಿನ ಮುಖ್ಯ ಕಾರ್ಯಾಲಯ ಆಗಿರುವ ಈ ನಗರವು "Temple Town" ಎಂದು ಪ್ರಸಿದ್ಧ.
==ಭೌಗೋಳಿಕ ಸ್ಥಾನ==
ತಾಲ್ಲೂಕು ಜಿಲ್ಲೆಯ ಮಧ್ಯದಲ್ಲಿದೆ. ತಾಲ್ಲೂಕಿನ ಉತ್ತರದಲ್ಲಿ ಮೈಸೂರು, ಪೂರ್ವದಲ್ಲಿ ತಿರುಮಕೂಡ್ಲು ನರಸೀಪುರ ಮತ್ತು [[ಚಾಮರಾಜನಗರ]], ದಕ್ಷಿಣದಲ್ಲಿ ಚಾಮರಾಜನಗರ ಮತ್ತು ಗುಂಡ್ಲುಪೇಟೆ, ಪಶ್ಚಿಮದಲ್ಲಿ ಹೆಗ್ಗಡದೇವನಕೋಟೆ ತಾಲ್ಲೂಕುಗಳಿವೆ. ಇದರ ವಿಸ್ತೀರ್ಣ 982 ಚ.ಕಿ.ಮೀ., ತಾಲ್ಲೂಕು ಜನಸಂಖ್ಯೆ 3,58,415 (2001) ಹಾಗೂ ಪಟ್ಟಣದ ಜನಸಂಖ್ಯೆ ೫೦,೫೯೮ (೨೦೧೧). [[ಬಿಳಿಗೆರೆ]], ಚಿಕ್ಕಯ್ಯನ ಛತ್ರ, [[ಹುಲ್ಲಹಳ್ಳಿ]], ದೊಡ್ಡ ಕವಲಂದೆ, ನಂಜನಗೂಡು ಇವು ಈ ತಾಲ್ಲೂಕಿನ ಹೋಬಳಿಗಳು. ತಾಲ್ಲೂಕಿನಲ್ಲಿರುವ ಗ್ರಾಮಗಳ ಸಂಖ್ಯೆ 188.
 
==ಮೇಲ್ಮೈ ಲಕ್ಷಣಗಳು==
ತಾಲ್ಲೂಕಿನ ನೆಲ ಈಶಾನ್ಯದ ಕಡೆಗೆ ಇಳಿಜಾರಾಗಿದೆ. ಅಲ್ಲಲ್ಲಿ ಕೆಲವು ಗುಡ್ಡಗಳಿವೆ. ಒಟ್ಟಿನಲ್ಲಿ ಇದು ಮೈದಾನ ಪ್ರದೇಶ. ತಾಲ್ಲೂಕಿನ ಮುಖ್ಯ ನದಿ ಕಪಿಲಾ. ವಾಯುವ್ಯದಲ್ಲಿ ಹೆಗ್ಗಡದೇವನಕೋಟೆ ಮತ್ತು ನಂಜನಗೂಡು ತಾಲ್ಲೂಕುಗಳ ಗಡಿಯಾಗಿ ಹರಿಯುವ ಈ ನದಿ ಅನಂತರ ತಾಲ್ಲೂಕಿನ ಉತ್ತರ ಭಾಗದಲ್ಲಿ ಪೂರ್ವಾಭಿಮುಖವಾಗಿ ಹರಿಯುತ್ತದೆ. ನಂಜನಗೂಡು ಪಟ್ಟಣದ ಬಳಿ ಇದರ ಹರಿವು ಈಶಾನ್ಯ ದಿಕ್ಕಿಗೆ ಬದಲಾಗುತ್ತದೆ. ಮುಂದೆ ಈ ನದಿ ತಿರುಮಕೂಡ್ಲು ನರಸೀಪುರ ತಾಲ್ಲೂಕನ್ನು ಪ್ರವೇಶಿಸುತ್ತದೆ. ಗುಂಡ್ಲುಪೇಟೆ ತಾಲ್ಲೂಕಿನಿಂದ ಹರಿದು ಬರುವ ಗುಂಡ್ಲು ಹೊಳೆ ಈ ತಾಲ್ಲೂಕಿನ ನಡುವೆ ಉತ್ತರದ ಕಡೆಗೆ ಮುಂದುವರಿದು ನಂಜನಗೂಡು ಪಟ್ಟಣದಲ್ಲಿ ಕಪಿಲಾ ನದಿಯನ್ನು ಸೇರುತ್ತದೆ.
"https://kn.wikipedia.org/wiki/ನಂಜನಗೂಡು" ಇಂದ ಪಡೆಯಲ್ಪಟ್ಟಿದೆ