ಅರಬ್ಬೀ ಗಣರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಅರಬ್ಬೀ ಗಣರಾಜ್ಯ''' ಎಂದರೆ ಈಜಿಪ್ಟ್ ಮತ್ತು ಸಿರಿಯಗಳ ನಡುವಿನ ರಾಜಕೀಯ ಒ...
 
ಚು Bot: Migrating 1 interwiki links, now provided by Wikidata on d:Q39524
೧೨ ನೇ ಸಾಲು:
 
==ಒಡಕು==
ಐಕ್ಯ ಸಾಧನೆಗೆ ಪ್ರಥಮ ಹಂತವೆಂದು ಪರಿಗಣಿತವಾಗಿದ್ದ ಈ ಗಣರಾಜ್ಯ ವ್ಯವಸ್ಥೆಯಲ್ಲಿ ಒಡಕುಗಳು ಬಹುಬೇಗ ಕಂಡುಬಂದುವು. ಸರಕಾರದ ಉಚ್ಚಸ್ಥಾನಗಳಲ್ಲಿ ಕೇಂದ್ರ ಸರ್ಕಾರ ತನ್ನ ಅಧಿಕಾರ ಕ್ಷೇತ್ರವನ್ನು ಕೊಂಚಕೊಂಚವಾಗಿ ವಿಸ್ತರಿಸತೊಡಗಿತು. ಸಿರಿಯದಲ್ಲಿ ಕಳವಳ ಹೆಚ್ಚಿ ಸೈನಿಕ ಕ್ರಾಂತಿಯುಂಟಾಗಿ (1961) <ref>https://books.google.lv/books?id=vzZ71Eh5QvMC&pg=PA605&dq=1961+syrian+coup&hl=en&sa=X&ei=1DA1Vc_kOIzDPL3RgfAN&ved=0CCoQ6wEwAg#v=onepage&q=1961%20syrian%20coup&f=false</ref>ಆ ದೇಶ ಒಕ್ಕೂಟದಿಂದ ಹೊರಬಂತು. ಕೊಂಚಕಾಲದಲ್ಲೇ [[ಯೆಮೆನ್]] ಕೂಡ ಹೊರಬಂತು. ಆದರೆ, ಒಂದು ಕಡೆ ಸಾಮ್ರಾಜ್ಯವಾದಿಗಳು, ಇನ್ನೊಂದುಕಡೆ ಕಮ್ಯೂನಿಸ್ಟರು—ಇವರಿಬ್ಬರ ಪ್ರಭಾವಕ್ಕೂ ಬಗ್ಗದೆ ಅರಬ್ಬರ ಸ್ವಾತಂತ್ರ್ಯ, ಉತ್ಕರ್ಷಗಳಿಗಾಗಿ ಮಾತ್ರ ಶ್ರಮಿಸುತ್ತಿದ್ದ ನಾಸೆರನ[[en:Gamal_Abdel_Nasser]] ವಿಷಯದಲ್ಲಿ ಜನಾನುರಾಗ ಕುಗ್ಗಲಿಲ್ಲ; ಸಿರಿಯ, ಯೆಮೆನ್ ಬೇರೆಯಾದರೂ ಸಂಯುಕ್ತ ಗಣರಾಜ್ಯದ ಹೆಸರು ಮುಂದುವರಿಯಿತು. ನಸೆರ್ ಅರಬ್ಬೀಯರ ಸ್ವಾತಂತ್ರ್ಯ, ರಾಷ್ಟ್ರಗೌರವಗಳ ಪ್ರತೀಕವಾಗಿ ನಿಂತ. 1963ರಲ್ಲಿ ಪುನಃ ಸಂಯುಕ್ತ ಅರಬ್ ಗಣರಾಜ್ಯವೊಂದನ್ನು ಸ್ಥಾಪಿಸುವ ಪ್ರಯತ್ನಗಳು ನಡೆದುವು<ref>http://www.sav.sk/journals/uploads/092611431_Sorby.pdf</ref>. ಈ ಸಲ ಈಜಿಪ್ಟ್, ಸಿರಿಯ, [[ಇರಾಕ್‍]]ಗಳ ನಡುವೆ ತತ್ತ್ವಿಕವಾಗಿ ಒಮ್ಮತವೂ ಕಂಡುಬಂತು. ಆದರೆ ಸಂಯುಕ್ತ ರಾಜ್ಯಾಂಗದಲ್ಲಿ ಸದಸ್ಯರ ಸ್ವಾತಂತ್ರ್ಯವೆಷ್ಟಿರಬೇಕೆಂಬ ವಿಷಯದಲ್ಲಿ ಭಿನ್ನಭಿಪ್ರಾಯಗಳು ತಲೆದೋರಿ, ಆ ಯೋಜನೆ ಅಷ್ಟಕ್ಕೇ ನಿಂತಿತು. ಅರಬ್ಬೀಯರೆಲ್ಲ ಒಟ್ಟುಗೂಡಿ ಹೊರರಾಷ್ಟ್ರಗಳ ಒತ್ತಾಯಗಳಿಗೆಡೆಕೊಡದೆ ತಮ್ಮ ಉತ್ಕರ್ಷವನ್ನು ಸಾಧಿಸಿದಲ್ಲದೆ ಬೇರೆ ಮಾರ್ಗವೇ ಇಲ್ಲ ಎಂಬುದನ್ನು ನಂಬಿ ಅದಕ್ಕಾಗಿ ಶ್ರಮಿಸುತ್ತಿರುವ ಸಂಖ್ಯೆಯೇನೂ ಇನ್ನೂ ಕಡಿಮೆಯಾಗಿಲ್ಲ. 1967ರಲ್ಲಿ ಇಸ್ರೇಲ್‍ನೊಂದಿಗೆ ಮಿಂಚಿನವೇಗದಲ್ಲಿ ನಡೆದ ಯುದ್ಧ ಇದಕ್ಕೆ ಸಮರ್ಥನೆಯನ್ನೂ ಕೊಟ್ಟಿದೆ.
 
==ಉಲ್ಲೇಖಗಳು==
"https://kn.wikipedia.org/wiki/ಅರಬ್ಬೀ_ಗಣರಾಜ್ಯ" ಇಂದ ಪಡೆಯಲ್ಪಟ್ಟಿದೆ