ಕಾಂಗೊ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೩ ನೇ ಸಾಲು:
 
== ಮೇಗಣ ಕಾಂಗೋ ==
ಕಾಂಗೋ ನದಿಗೆ ಮೂಲವಾದಝಾಂಬೀಸಿ ಕರುಂಗ ನದಿಯನ್ನು ಕೂಡಿಕೊಂಡು ಫಲವತ್ತಾದ ಭೂಮಿಯಲ್ಲಿ ನೈಋತ್ಯಕ್ಕೆ ಹರಿದು ಬಂಗವ್ಯೂಲ ಸರೋವರಕ್ಕೆ ನೆರೆಯಲ್ಲಿರುವ ವಿಶಾಲ ಜೌಗು<ref>https://treaties.un.org/doc/Publication/UNTS/Volume%201956/v1956.pdf</ref> ಪ್ರದೇಶವನ್ನು ಸೇರುತ್ತದೆ. ಇಲ್ಲಿಂದ ಹೊರಡುವ ಲೂವಪೂಲ (ಲೂವೂವ) ನದಿಝಾಂಬೀಸಿ ನದಿಯ ಮುಂದುವರಿದ ಭಾಗ.  ಲೂವಪೂಲ ನದಿಗೆ ದೊಡ್ಡ ನದಿ ಎಂಬ ಹೆಸರೂ ಇದೆ. ಲೂವಪೂಲ ಜೌಗು ಪ್ರದೇಶವನ್ನು ಬಿಟ್ಟಮೇಲೆ ತನ್ನ ಗತಿಯಲ್ಲಿ ಪಶ್ಚಿಮಕ್ಕೆ ಬಾಗಿ ತರುವಾಯ ದಕ್ಷಿಣಾಭಿಮುಖವಾಗಿಝಾಂಬೀಸಿ ನದಿಯ ಜಲಾನಯವ ಭೂಮಿಯತ್ತ ಸಾಗಿ ಉತ್ತರಕ್ಕೆ ತಿರುಗಿ ಮುಂಬಟುಟ (ಮುಂಬರಿಯ) ಜಲಪಾತವಾಗಿ ಪರಿಣಮಿಸುತ್ತದೆ. ಇದರ ಭೋರ್ಗರೆತ ನೀರವ ರಾತ್ರಿಯಲ್ಲಿ ಸುಮಾರು 8-9 ಮೈಲಿಗಳ ದೂರ ಕೇಳಿಸುವುದುಂಟು. ಇಲ್ಲಿಂದ ಮುಂದೆ 100 ಮೈಲಿಗಳಷ್ಟು ದೂರ, ಜಾನ್‍ಸ್ಟನ್ ಜಲಪಾತವನ್ನು ಮುಟ್ಟುವವರೆಗೆ, ನದಿ ಜಲಸಂಚಾರಕ್ಕೆ ಯೋಗ್ಯವಾಗಿಲ್ಲ. ಅಲ್ಲಿಂದ ಮುಂದಕ್ಕೆ, ಮ್ವೇರೂ ಸರೋವರವನ್ನು ಸೇರುವುದಕ್ಕೆ ಮುಂಚೆ, ಲೂವಪೂಲ ಮತ್ತೊಮ್ಮೆ ನದೀಮುಖಜ ಭೂಮಿಯಂಥ ಜೌಗು ಪ್ರದೇಶವನ್ನು ಸೇರುತ್ತದೆ. ತರುವಾಯ ಅದು ಮ್ವೇರೂ ಸರೋವರದ ವಾಯವ್ಯ ಅಂಚಿನಿಂದ ಹೊರಬಂದು ಪಶ್ಚಿಮಾಭಿಮುಖವಾಗಿ ತಿರುಗಿ ಕೆಬಾರ ಮತ್ತು ಮುಗಿಲಾ ಪರ್ವತಶ್ರೇಣಿಗಳಿಗೆ ಅಡ್ಡಲಾಗಿ ಹರಿದು ಲೂವಲಾಬ <ref>https://www.worldwildlife.org/places/congo-basin</ref>(ಕೋಮೊಲೋಂಡೊ) ನದಿಯನ್ನು ಸೇರುತ್ತದೆ. ಕೆಲವರು ಕೋಮೊಲೋಂಡೊ ನದಿಯನ್ನೇ ಕಾಂಗೋ ನದಿಯ ಮೂಲವೆಂದು ತಿಳಿಯುತ್ತಾರೆ. ಲೂವಪೂಲ ಮತ್ತು ಲೂವಲಾಬ ನದಿಗಳ ಸಂಗಮವಾದ ಮೇಲೆ ಉತ್ತರಕ್ಕೆ ಹರಿಯುವ ನದೀಭಾಗಕ್ಕೆ ಲೂವಲಾಬ-ಕಾಂಗೋ ಎಂಬ ಹೆಸರುಂಟು. ಆ ಪ್ರದೇಶದಲ್ಲಿ ನದಿಯ ಅಗಲ 1/2 ಮೈಲಿ. ಅದು ಉತ್ತರ ಮತ್ತು ವಾಯವ್ಯ ದಿಕ್ಕುಗಳನ್ನನುಸರಿಸಿ ಭೂಮಧ್ಯರೇಖೆಯ ಕಡೆ ಹರಿಯುತ್ತದೆ. ನದಿಯ ಈ ಭಾಗದ ಹರಿವಿನಲ್ಲಿ ಡಿಯಾ ರಭಸದ ಇಳಿವುಗಳಿಂದ ಹಡಗಿನ ಸಂಚಾರಕ್ಕೆ ಮೊತ್ತಮೊದಲ ಅಡಚಣೆ ಕಾಣಿಸಿಕೊಳ್ಳುತ್ತದೆ. ಅಲ್ಲಿಂದ ಮುಂದಕ್ಕೆ ಲೂವಲಾಬ ಕಾಂಗೋ ಪೋರ್ಟಿ ದ ಎನ್‍ಫರ್ ಎಂಬ ಕಡಿದಾದ ಕಮರಿಗಳ ಮೂಲಕ ಪ್ರವಹಿಸುತ್ತದೆ. ಈ ಸ್ಥಳದಿಂದ ಮುಂದಕ್ಕೆ ಅನೇಕ ಜಲಪಾತಗಳಿಂದಲೂ ರಭಸಪ್ರವಾಹಗಳಿಂದಲೂ ಕೂಡಿ ಸಮತಲಭೂಮಿಯ ಅತಿರಮ್ಯ ಅರಣ್ಯಗಳ ನಡುವೆ ಬಲು ಠೀವಿಯಿಂದ ಹರಿಯುತ್ತದೆ. ಈ ಭಾಗದಲ್ಲಿ ನದಿಯ ಅಗಲ ಕೆಲವು ಕಡೆ 1 ಮೈಲಿ. ಈ ಭಾಗದಲ್ಲಿ ಸೇರುವ ಕೂಡುನದಿಗಳಲ್ಲಿ ಮುಖ್ಯವಾದ ಲೂಕೂಗ ನದಿ ಟಾಂಗನ್ಯೀಕ ಸರೋವರಕ್ಕೂ ಕಾಂಗೋ ನದಿಗೂ ಸಂಬಂಧ ಕಲ್ಪಿಸುತ್ತದೆ.
 
ಸಮಭಾಜಕಕ್ಕೆ ಕೆಲವು ಮೈಲಿಗಳ ಕೆಳಕ್ಕೆ ನದಿ ಸ್ಟ್ಯಾನ್ಲಿ ಜಲಪಾತವಾಗಿ, ಅಲ್ಲಿಂದ, ಮುಂದಕ್ಕೆ ತನ್ನ ಉತ್ತರಾಭಿಮುಖ ಪಥವನ್ನು ಬದಲಿಸಿ, ಸಮಭಾಜಕದ ಮಹಾಕಣಿವೆಗಳ ಮೂಲಕ ಪಶ್ಚಿಮ ದಿಕ್ಕಿನತ್ತ ಸಾಗುತ್ತದೆ. ಸ್ಟ್ಯಾನ್ಲಿ ಜಲಪಾತ ಪ್ರದೇಶದಲ್ಲಿ ನದಿ ಸುಮಾರು 60 ಮೈಲಿಗಳಷ್ಟು ದೂರ ರಭಸದ ಹಲವಾರು ಜಾರುಗಳಿಂದ ಕೂಡಿರುವುದರಿಂದ ಅಲ್ಲಿ ಹಡಗಿನ ಸಂಚಾರಕ್ಕೆ ಅನುಕೂಲವಿಲ್ಲ.
"https://kn.wikipedia.org/wiki/ಕಾಂಗೊ_ನದಿ" ಇಂದ ಪಡೆಯಲ್ಪಟ್ಟಿದೆ