ಕಾಂಗೊ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪೩ ನೇ ಸಾಲು:
ಕಾಂಗೋ ನದಿಯ ಮೂಲವನ್ನು ಕಂಡುಹಿಡಿಯುವ ಸಮಸ್ಯೆ ಅದರ ಉಗಮಸ್ಥಾನದ ಬಳಿಯ ಹಲವಾರು ನದಿಗಳ ಬಗ್ಗೆ ನಡೆಸಿದ ಪರಿಶೋಧನೆಗಳಿಂದ ಬಗೆಹರಿಯಿತು. 1868ರಲ್ಲಿ ಡೇವಿಡ್ ಲಿವಿಂಗ್‍ಸ್ಟನ್ಝಾಂಬೀಸಿ ನದಿ ಬಂಗವ್ಯೂಲು ಸರೋವರದಿಂದ ಹುಟ್ಟುತ್ತದೆ ಎಂಬುದನ್ನು ಕಂಡುಹಿಡಿದ. 1871ರಲ್ಲಿ ಆತ ಲೂವಲಾಬ ನದಿಯ ಅಂಚಿನಲ್ಲಿರುವ ನ್ಯಯಂಗ್ವೆ ಗ್ರಾಮವನ್ನು ಸೇರಿ, ಲೂವಲಾಬ ಯಾವ ನದಿಗೆ ಸೇರುತ್ತದೆ ಎಂಬುದನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ ರೋಗ ಪೀಡಿತನಾಗಿ 1873ರಲ್ಲಿ ಮೃತನಾದ. ಲೂವಲಾಬ ನದಿ ನೈಲ್ ನದಿಯನ್ನು ಸೇರುವುದೆಂಬುದು ಅವನ ಭಾವನೆಯಾಗಿತ್ತು. 1872ರ ಹೊತ್ತಿಗೆ ಭೂಗೋಳ ವಿಜ್ಞಾನಿಗಳು ಲಿವಿಂಗ್‍ಸ್ಟನನ ವರದಿಗಳ ಆಧಾರದ ಮೇಲೆಯೇ ಆತ ಕಂಡುಹಿಡಿದ ನದೀವ್ಯೂಹ ಕಾಂಗೋ ನದೀವ್ಯವಸ್ಥೆಗೆ ಸೇರಿದ್ದೇ ಹೊರತು ನೈಲ್ ನದೀ ವ್ಯವಸ್ಥೆಗೆ ಸಂಭಂಧಿಸಿದ್ದಲ್ಲವೆಂಬ ನಿರ್ಣಯಕ್ಕೆ  ಬಂದರು. ಆದರೂ ಮೂಲನದಿಯ ಗತಿಯ ಬಗ್ಗೆ ಆಗ ಯಾವ ತಿಳಿವಳಿಕೆಯೂ ಇರಲಿಲ್ಲ. ಲಿವಿಂಗ್‍ಸ್ಟನನ ಸಹಾಯಕ್ಕಾಗಿ ಅಮೆರಿಕದಿಂದ ಬಂದ ಎಚ್.ಎಂ.ಸ್ಟ್ಯಾನ್ಲಿ 1876ರ ಅಕ್ಟೋಬರಿನಲ್ಲಿಝಾಂಜಿûಬಾರಿನಿಂದ ಪ್ರಯಾಣ ಮಾಡಿ ನ್ಯಯಂಗ್ವೆ ಗ್ರಾಮ ಸೇರಿ ಅಲ್ಲಿಂದ ಲೂವಲಾಬ ನದಿಯ ಮೇಲುಭಾಗದಲ್ಲಿ 1,600 ಮೈಲಿ ಸಂಚರಿಸಿ ಕ್ಯಾಪ್ಟನ್ ಟಕ್ಕಿ ಬಂದ ಸ್ಥಳಕ್ಕೂ ಮುಂದೆ ಇರುವ ಇಸಂಗಿಲ ಗ್ರಾಮ ತಲಪಿದ. ಈ ಸಂಚಾರದಿಂದ ಆತ ಲೂವಲಾಬ ನದಿಯೂ ಪೋರ್ಚುಗೀಸರು ಜೈರಿ ಎಂದು ಕರೆದ ನದಿಯೂ ಒಂದೇ ಎಂದು ಪುಷ್ಟೀಕರಿಸಿದ. ಸ್ಟ್ಯಾನ್ಲಿಯ ಈ ಮಹತ್ತರ ಪ್ರಯಾಣ ರಾಜಕೀಯ, ಭೌಗೋಳಿಕ ಹಾಗೂ ವಾಣಿಜ್ಯ ದೃಷ್ಟಿಯಿಂದ ಆಫ್ರಿಕದ ಇತಿಹಾಸದಲ್ಲಿ ಬಹು ಮುಖ್ಯ ಘಟನೆಯಾಗಿದೆ. ಸ್ಟ್ಯಾನ್ಲಿ 1887ರಲ್ಲಿ ಕೈಗೊಂಡ ತನ್ನ ಕೊನೆಯ ಪ್ರವಾಸದಲ್ಲಿ ಆರುವೀಮಿ ನದಿಯನ್ನು ಭಾಗಶಃ ಪರಿಶೋಧಿಸಿದ.  ಅವನ ತರುವಾಯ ರೆವರೆಂಡ್ ಜಾರ್ಜ್ ಗ್ರೆನ್‍ಷೆಲ್ ಕಾಂಗೋ ನದಿ ಮತ್ತು ಅದರ ಉಪನದಿಗಳ ಬಗ್ಗೆ ಮಾಡಿದಷ್ಟು ಪರಿಶೋಧನೆಗಳನ್ನು ಮತ್ತಾವ ಪರಿಶೋಧಕನೂ ಮಾಡಿಲ್ಲ. 1913ರಲ್ಲಿ ಕ್ಯಾಪ್ಟನ್ ಆರ್.ವಾಕರ್ ಲೂವಪೂಲ ನದಿ ಬಂಗವ್ಯೂಲು ಸರೋವರದಿಂದ ಉದ್ಭವಿಸುವುದಿಲ್ಲವೆಂದೂ ಅದು ಝಾಂಬೀಸಿ ನದಿಯ ಮುಂದುವರಿಕೆಯೆಂದೂ ತೋರಿಸಿ ಕೊಟ್ಟ.  ಕಾಂಗೋ ನದಿ ಯಾವ ಭಾಗಗಳಲ್ಲಿ ಹಡಗಿನ ಸಂಚಾರಕ್ಕೆ ಅನುಕೂಲವಾಗಿಲ್ಲವೋ ಅಲ್ಲೆಲ್ಲ ರೈಲುಮಾರ್ಗಗಳನ್ನು ಹಾಕಿದ್ದಾರೆ. 
 
==ಉಲ್ಲೇಖಗಳು==
== ಬಾಹ್ಯ ಸಂಪರ್ಕಕೊಂಡಿಗಳು ==
* [http://www.ppl.nl/bibliographies/all/?bibliography=water Bibliography on Water Resources and International Law]
"https://kn.wikipedia.org/wiki/ಕಾಂಗೊ_ನದಿ" ಇಂದ ಪಡೆಯಲ್ಪಟ್ಟಿದೆ