ಕಾಂಗೊ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಕೀಕರಣ
No edit summary
೧ ನೇ ಸಾಲು:
[[ಚಿತ್ರ:Congo maluku.jpg |thumb|right|300px|ಮಲೂಕು ಬಳಿ ಲಾಂಗೊ ನದಿ]]
'''ಕಾಂಗೊ ನದಿ''' ಮಧ್ಯ [[ಆಫ್ರಿಕಾ]]ದ ಪಶ್ಚಿಮ ಪಾರ್ಶ್ವದಲ್ಲಿನ ಅತಿ ಉದ್ದವಾದ ನದಿ, ಆಫ್ರಿಕದ ಅತ್ಯಂತ ಉದ್ದನೆಯ ನದಿಗಳಲ್ಲಿ ಎರಡನೆಯದು(ಇದಕ್ಕಿಂತ ಉದ್ದವಾದ್ದು ನೈಲ್ ನದಿ ). . ಸುಮಾರು ೪,೭೦೦ ಕಿ.ಮೀ. ಉದ್ದಕ್ಕೆ ಹರಿಯುವ ಕಾಂಗೊ ನದಿಯು [[ನೈಲ್ ನದಿ]]ಯ ನಂತರ ಆಫ್ರಿಕದ ಎರಡನೆಯ ಅತಿ ದೊಡ್ಡ ನದಿಯಾಗಿದೆ. ಈ ನದಿ ಮತ್ತದರ ಉಪನದಿಗಳು ಜಗತ್ತಿನ ಎರಡನೆಯ ಅತಿ ವಿಸ್ತಾರವಾದ [[ಮಳೆಕಾಡು|ಮಳೆಕಾಡಿನ]] ಮೂಲಕ ಹರಿಯುತ್ತವೆ. ಅಲ್ಲದೆ ಪ್ರತಿ ಸೆಕೆಂಡಿಗೆ ೧೪,೭೬,೩೭೬ ಘನ ಅಡಿಗಳಷ್ಟು ನೀರನ್ನು ಸಾಗಿಸುವ ಕಾಂಗೊ ನದಿಯು [[ಅಮೆಜಾನ್ ನದಿ]]ಯ ನಂತರ ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣದ ಜಲರಾಶಿಯನ್ನು ಹೊಂದಿದೆ. [[ವಿಷುವದ್ರೇಖೆ]]ಯ ಆಸುಪಾಸಿನಲ್ಲಿ ಹರಿಯುವ ಕಾರಣದಿಂದಾಗಿ ಈ ಕಾಂಗೊ ನದಿಯಲ್ಲಿ ವರ್ಷದ ಎಲ್ಲಾ ಕಾಲದಲ್ಲಿಯೂ ಸರಿಸುಮಾರು ಸ್ಥಿರ ಮತ್ತು ಏಕಪ್ರಮಾಣದದ ಹರಿವನ್ನು ಹೊಂದಿದೆ. ನದಿಯ ಸಾಗರಮುಖದಲ್ಲಿ ಸ್ಥಾಪಿತವಾಗಿದ್ದ ಪ್ರಾಚೀನ ಕಾಂಗೊ ಅರಸೊತ್ತಿಗೆಯಿಂದ ನದಿಯು ತನ್ನ ಹೆಸರನ್ನು ಪಡೆದಿದೆ. ನದಿಯ ದಂಡೆಯಲ್ಲಿರುವ [[ಕಾಂಗೊ ಗಣರಾಜ್ಯ]] ಮತ್ತು [[ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯ]]ಗಳು ನದಿಯ ಹೆಸರನ್ನೇ ಇಟ್ಟುಕೊಂಡಿವೆ.
 
ಪೂರ್ವ ಆಫ್ರಿಕಾದ ಪರ್ವತಪ್ರಾಂತ್ಯ ಮತ್ತು ಎತ್ತರದ ಪ್ರದೇಶವು ಕಾಂಗೊ ನದಿಯ ಉಗಮಸ್ಥಾನ. ಹೊರತಾಗಿ ನದಿಗೆ ಗಣನೀಯ ಪ್ರಮಾಣದಲ್ಲಿ ನೀರು [[ಟಾಂಗನ್ಯೀಕಾ]] ಮತ್ತು [[ಎಮ್ವೇರು]] ಸರೋವರಗಳಿಂದ ಸಹ ಹರಿದು ಬರುವುದು. ಈ ಸರೋವರಗಳಿಂದ ಹೊರಹೊರಟ ನೀರಿನ ತೊರೆ ಲುವಾಲಾಬಾ ನದಿಯೆಂದು ಹೆಸರಾಗಿ ಮುಂದೆ ಬೊಯೋಮಾ ಜಲಪಾತದ ತಳದಿಂದ ಮುಂದಕ್ಕೆ ಕಾಂಗೊ ನದಿಯೆಂದು ಕರೆಯಿಸಿಕೊಳ್ಳುವುದು. [[ಜಾಂಬಿಯ]]ದ [[ಚಾಂಬೇಶಿ ನದಿ]]ಯು ಕೂಡ ಕಾಂಗೊ ನದಿಯ ಉಪನದಿಯೆಂದು ಪರಿಗಣಿಸಲ್ಪಡುವುದು.
"https://kn.wikipedia.org/wiki/ಕಾಂಗೊ_ನದಿ" ಇಂದ ಪಡೆಯಲ್ಪಟ್ಟಿದೆ